ದಾವಣಗೆರೆ | ವಿಬಿಜಿ ರಾಮ್ ಜಿ ಪ್ರತಿ ಸುಟ್ಟು ಸಂಯುಕ್ತ ಹೋರಾಟ ಕರ್ನಾಟಕ ಪ್ರತಿಭಟನೆ

Date:

ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾದಿಂದ ತೆಗೆದುಹಾಕಿ ಯೋಜನೆಯ ಮೂಲ ಆಶಯ, ಸ್ವರೂಪವನ್ನು ಜನವಿರೋಧಿಯಾಗಿ ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿವಾದಿತ ವಿಬಿ ಜಿ ರಾಮ್ ಜಿ, ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ರೈತ ವಿರೋಧಿ ನೀತಿಗಳ ವಿರುದ್ಧ ವಿವಿಧ ಸಂಘಟನೆಗಳ ಪ್ರಗತಿಪರ ಸಂಘಟನೆಗಳ ಎಡಪಕ್ಷಗಳ ಒಕ್ಕೂಟವಾದ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜನ ವಿರೋಧಿ ಕಾಯ್ದೆ ಮತ್ತು ಮಸೂದೆಗಳನ್ನು ಹಿಂಪಡೆಯಲು ಒತ್ತಾಯಿಸಿ ವಿಬಿ ಜಿ ರಾಮ್ ಜಿ ಮಸೂದೆಯ ಪ್ರತಿಗಳನ್ನು ಸುಟ್ಟು ಒತ್ತಾಯಿಸಿತು.

- Advertisement -
1003352953

ಪ್ರತಿಭಟನೆಯಲ್ಲಿ ಮಾತನಾಡಿದ ಎಐಕೆಕೆಎಂಎಸ್ ಮುಖಂಡ ಮಧು ತೊಗಲೇರಿ “ಕೇಂದ್ರ ಸರ್ಕಾರ ಕೃಷಿ ವಿರೋಧಿ ನೀತಿಗಳು, ಕಾರ್ಮಿಕ ವಿರೋಧಿ ನಾಲ್ಕು ನೀತಿ ಸಂಹಿತೆಗಳು, ಗ್ರಾಮೀಣ ಕೂಲಿಕಾರ್ಮಿಕರಿಗೆ ಉದ್ಯೋಗ ನಿರಾಕರಿಸಿರುವ ನರೇಗಾ ತಿದ್ದುಪಡಿಯನ್ನು ಸೇರಿದಂತೆ ಹಲವು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದ್ದಾರೆ. ಎಲ್ಲ ನೀತಿಗಳನ್ನು ಕಾರ್ಪೊರೇಟ್ ಪರವಾಗಿ ಜಾರಿಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎಬಿ ರಾಮಚಂದ್ರಪ್ಪ ಮಾತನಾಡಿ “ಅಭಿವೃದ್ಧಿ ಹೆಸರಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಮಾರುತ್ತಿದೆ. ಶಾಂತಿ, ಸೌಹಾರ್ದತೆ ಹೆಸರಿನಲ್ಲಿ ಕೋಮುವಾದ, ಜಾತಿವಾದವನ್ನ ಬಿತ್ತುತಿದೆ. ಗಾಂಧಿ ಚಿಂತನೆಗಳಿಂದ ಪ್ರಾರಂಭಗೊಂಡ ಅನೇಕ ಯೋಜನೆಗಳನ್ನು ಮೋದಿ ಸರ್ಕಾರ ರದ್ದು ಮಾಡುತ್ತಿದೆ. ಅದರ ಬದಲಿಗೆ ರಾಮನ ಜಪವನ್ನು ಮಾಡುತ್ತಿದೆ. ಗಾಂಧಿಯನ್ನು ನೇರವಾಗಿ ಕೊಂದಿದ್ದಲ್ಲದೆ ಪ್ರತಿನಿತ್ಯ ಗಾಂಧಿಯನ್ನು ಕೊಲ್ಲುತ್ತಿದೆ. ನರೇಗಾ ಯೋಜನೆಯನ್ನು ಮುಚ್ಚುವ ಮೂಲಕ ಗ್ರಾಮೀಣ ಬದುಕಿನ ಜನರ ಅನ್ನವನ್ನು ಕಸಿಯುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜನರ ಹಕ್ಕುಗಳನ್ನು, ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಬಾರದು. ಕೇಂದ್ರ ಸರ್ಕಾರದ ಈ ದೌರ್ಜನ್ಯ ಹೆಚ್ಚು ದಿನ ನಡೆಯುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ಸಾಮಾನ್ಯ ಜನತೆ ನೀಡುತ್ತಾರೆ” ಎಂದು ಅಭಿಪ್ರಾಯಪಟ್ಟರು.

1003352951

ಸಿಪಿಐ ಕಾರ್ಮಿಕ ಮುಖಂಡ ಉಮೇಶ್ ಆವರ್ಗೆರೆ ಮಾತನಾಡಿ “ರಾಮನ ಜಪ ಮಾಡುವ ಮೂಲಕ ಬ್ರಾಹ್ಮಣ್ಯದ ವರ್ಗಕ್ಕೆ, ಮೇಲ್ವರ್ಗದ ಮನೆ ಬಾಗಿಲಿಗೆ ಸುಲಭವಾಗಿ ಆರೋಗ್ಯ ಶಿಕ್ಷಣ, ಸೌಲಭ್ಯಗಳು ದೊರಕುವಂತೆ ಮಾಡುವುದೇ ಕೇಂದ್ರದ ಹುನ್ನಾರವಾಗಿದೆ. ದೇಶದ ಸಂಪತ್ತನ್ನು ಕೊಳ್ಳೆಹೊಡೆಯುವವರ ವಿರುದ್ಧ, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ವಹಿಸಿದ ಮಹಾತ್ಮ ಗಾಂಧೀಜಿಯವರನ್ನು ಪ್ರಪಂಚವೇ ಒಪ್ಪಿಕೊಂಡಿದೆ. ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ಜಗತ್ತೇ ಅಪ್ಪಿಕೊಂಡಿದೆ. ಬ್ರಾಹ್ಮಣರಾಗಿದ್ದರೆ ಇವರನ್ನು ಬಂಗಾರದ ತೊಟ್ಟಿಲಲ್ಲಿ ಇಟ್ಟು ಪೂಜಿಸುತ್ತಿದ್ದಿರಿ. ಆದರೆ ಪರಿಶಿಷ್ಟ ಜಾತಿಗೆ, ತಳ ಸಮುದಾಯ ವರ್ಗಕ್ಕೆ ಸೇರಿದವರೆಂದು ಅವರನ್ನು ,ಅವರ ಕೆಲಸಗಳನ್ನು ತುಳಿಯುತ್ತಿದ್ದೀರಿ. ಅವರು ಕಷ್ಟಪಟ್ಟು ಭಾರತಕ್ಕೆ ನೀಡಿದ ಸಂವಿಧಾನದ ಪ್ರತಿಯನ್ನು ಸುಡುವ ಕೆಲಸ ಮಾಡಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

1003352952

“ಗ್ರಾಮೀಣ ಭಾಗದ ಸಣ್ಣ ರೈತರಿಗೆ, ಕೃಷಿ ಕೂಲಿಕಾರರಿಗೆ ಎಲ್ಲರಿಗೂ ಸಾಮಾಜಿಕ ನ್ಯಾಯ ಮತ್ತು ಆಹಾರ ಭದ್ರತೆ ನೀಡುವ ಸಲುವಾಗಿ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿದ್ದು, ನೀವು ಅದನ್ನು ಇಲ್ಲವಾಗಿಸುವ ಕೆಲಸ ಮಾಡುತ್ತಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ “ಪ್ರತಿನಿತ್ಯ ರಾಮನ ಜಪ ಮಾಡುವ ರೀತಿಯಲ್ಲಿ ನಿಯಮ ಬದಲಿಸಿ ನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ಬದಲಾಯಿಸಿದ್ದೀರಿ. ಸಣ್ಣ ರೈತರು, ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಲಕ್ಷಾಂತರ ಕಾರ್ಮಿಕರು ಹೋರಾಟ ಮಾಡಿದಾಗಲೂ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯುತ್ತೇವೆ ಎಂದಿದ್ದ ನೀವು ಇದುವರೆಗೂ ವಾಪಸ್ ಪಡೆಯುವ ಕೆಲಸ ಮಾಡಿಲ್ಲ. ಇಂತಹ ಸಮಯದಲ್ಲಿ ಕೂಡ ಯಾವುದೇ ಚರ್ಚೆ ಇಲ್ಲದೆ ನರೇಗಾವನ್ನು ವಿಬಿಜಿ ರಾಮಜಿ ಎಂದು ಬದಲಾಯಿಸುವ ಕೆಲಸ ಮಾಡಿ ನರೇಗಾ ಯೋಜನೆಯ ಆಶಯಗಳನ್ನು ಮುಚ್ಚುವ ಸಂಚು ನಡೆಸಿ ಹೊಸ ಹೊಸ ಕಾನೂನುಗಳನ್ನು ತಂದು, ಗ್ರಾಮೀಣ ಭಾಗದ ಜನತೆಗೆ ವಂಚಿಸುತ್ತಿದ್ದೀರಿ. ಕಾನೂನು ಜಾರಿಗೆ ತಂದಿದ್ದರೂ ಕೂಡ ಇದನ್ನು ಕೂಡಲೇ ಹಿಂಪಡೆಯಬೇಕು” ಎಂದು ಎಚ್ಚರಿಸಿದರು.‌

1003352943

ಎಐಯುಟಿಯುಸಿ ಮುಖಂಡ ಮಂಜುನಾಥ್ ಕೈದಾಳೆ ಮಾತನಾಡಿ “ನಾವು ನರೇಗಾದಲ್ಲಿ ಕೇವಲ ಮಹಾತ್ಮ ಗಾಂಧಿ ಹೆಸರನ್ನು ಕೈ ಬಿಡುತ್ತಾರೆ ಎಂದು ಹೋರಾಟ ಮಾಡುತ್ತಿಲ್ಲ. ಗ್ರಾಮೀಣ ಮಟ್ಟದಲ್ಲಿ ನರೇಗಾ ಯೋಜನೆ ಉದ್ಯೋಗ ಸೃಷ್ಟಿಯ, ಬಡತನ ನಿವಾರಣೆಯ ಹಸಿದವರಿಗೆ ಅನ್ನ ನೀಡುವ ಸರ್ಕಾರದ ಆಶಯ ಮತ್ತು ಕಾರ್ಯಕ್ರಮವಾಗಿತ್ತು. ಇದರ ಮೂಲ ಸ್ವರೂಪವನ್ನು ಬದಲಾಯಿಸಿ ರಾಜ್ಯಗಳಿಗೆ ಪಾಲನ್ನು ಭರಿಸುವಂತೆ ಹೇಳುವ ಮೂಲಕ ಯೋಜನೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಆಗಲೇ ಹಲವು ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದ ಹೆಗಲಿಗೆ ಹಾಕಿ ಕೈ ತೊಳೆದುಕೊಂಡಿದೆ. ಇದರಿಂದ ಎಷ್ಟೋ ಒಳ್ಳೆಯ ಯೋಜನೆಗಳು ಹಳ್ಳ ಹಿಡಿದಿವೆ.‌ ಈ ರೀತಿಯ ಬಹುದೊಡ್ಡ ಸಂಚು ಇದರಲ್ಲಿ ಅಡಗಿದೆ” ಎಂದು ಅಭಿಪ್ರಾಯಪಟ್ಟರು.

1003352946

“ಕೇಂದ್ರ ಸರ್ಕಾರ ಈಗಾಗಲೇ ದೇಶದ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿ ಕೊಟ್ಟಿದ್ದಾರೆ. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಂದು ಕಾರ್ಮಿಕ ವರ್ಗವನ್ನು ಅತಂತ್ರವಾಗಿಸಿದ್ದಾರೆ.‌ ಎಪಿಎಂಸಿ ಕಾಯ್ದೆ, ವಿದ್ಯುತ್ ಬಿಲ್ ಸೇರಿದಂತೆ ಈ ರೀತಿಯ ಹಲವು ಕಾಯ್ದೆಗಳ ಮೂಲಕ ರೈತರನ್ನು ಕೂಡ ದಿವಾಳಿಯ ಅಂಚಿಗೆ ತಂದಿಡುತ್ತಿದೆ. ಇವು ಜನಸಾಮಾನ್ಯರಿಗೆ ಮಾರಕವಾಗಿವೆ. ಇಂಥ ಸಮಯದಲ್ಲಿ ಕೂಡ ರಾಷ್ಟ್ರಾದ್ಯಂತ ತನ್ನ ನೆಲೆ, ಸಂಘಟನೆ, ಕಾರ್ಯಕರ್ತರನ್ನು ಹೊಂದಿರುವ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಕೂಡ ಇದನ್ನು ನೆಪಮಾತ್ರಕ್ಕೆ ಮಾತ್ರ ವಿರೋಧಿಸುತ್ತಿದೆ. ಸಂಘಟಿತ, ತೀವ್ರತರ ಹೋರಾಟವನ್ನು ಮಾಡುತ್ತಿಲ್ಲ. ಅಣಕು ಹೋರಾಟವನ್ನು ಮಾತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಕೂಡ ಈ ದೇಶದ ಬಂಡವಾಳಶಾಹಿಗಳ ಪರವಾಗಿವೆ” ಎಂದು ಆರೋಪಿಸಿದರು.‌

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾ ತಿದ್ದುಪಡಿ ವಿಬಿರಾಮ್ ಜಿ ವಿರೋಧಿಸಿ ಸಂಸದರ ಕಚೇರಿ ಮುಂದೆ ಗ್ರಾಕೂಸ್ ಧರಣಿ

ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ಅವರ್ಗೆರೆ ಚಂದ್ರು, ಆನಂದ ರಾಜು, ಮಂಜುನಾಥ್ ಕುಕ್ಕುವಾಡ, ಭಾರತಿ, ಆದಿಲ್ ಖಾನ್, ಐರಣಿ ಚಂದ್ರು, ಡಾ.ಸುನಿತ್ ಕುಮಾರ್, ಮರುಳಸಿದ್ದಯ್ಯ, ಪವಿತ್ರ ಅರವಿಂದ್, ಸತೀಶ್, ರಮೇಶ್ ದಾಸರ್, ಸೈಯದ್ ಅಶ್ಫಾಕ್, ರವೀಂದ್ರ, ಕೆ ವೈ ಚಂದ್ರಶೇಖರ್, ಜಾಫರ್, ಸಮೀರ್,ಸರೋಜಾ, ನಾಜಿರಾಬಾನು, ತಿಪ್ಪೇಸ್ವಾಮಿ, ದಾನಪ್ಪ ಸೇರಿದಂತೆ ಜನಶಕ್ತಿ, ಸಿಪಿಐ, ಸಿಪಿಐಎಂ, ಸಿಐಟಿಯು, ರೈತ ಸಂಘ, ಮಾನವ ಬಂಧುತ್ವ ವೇದಿಕೆ, ಶ್ರಮಿಕ ಶಕ್ತಿ, ದಲಿತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್: ಮರು ಸೇರ್ಪಡೆಗೆ ಕೇವಲ 7.7 ಲಕ್ಷ ಅರ್ಜಿ

ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ...

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...