ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ತನಿಖೆಯ ಭರವಸೆ ನೀಡಿದ ಸಚಿವರು

Date:

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಟ್ವೀಟ್‌ನಲ್ಲಿ ಟ್ವಿಟರ್ ಎಂಜಿನಿಯರ್ ದಾಬಿರಿ ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ಆರೋಪಿಸಿದ್ದಾರೆ. ಇದು ಗೂಗಲ್ ಸಮಸ್ಯೆಯೆಂದು ವಾಟ್ಸ್‌ಆ್ಯಪ್‌ ಕಂಪನಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ

- Advertisement -

ಹೊಸ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ ಸಿದ್ಧವಾಗುತ್ತಿದ್ದರೂ ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ತಕ್ಷಣವೇ ಗಮನಹರಿಸುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಫೋನ್ ಬಳಕೆಯಲ್ಲಿ ಇಲ್ಲದೆ ಇದ್ದಾಗಲೂ ವಾಟ್ಸ್‌ಆ್ಯಪ್‌ ಸ್ಮಾರ್ಟ್‌ಫೋನ್ ಬಳಕೆದಾರರ ಮೈಕ್ರೋಫೋನ್ ಬಳಸಿಕೊಂಡಿದೆ ಎನ್ನುವ ಆರೋಪದ ವಿರುದ್ಧ ತನಿಖೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ. ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮತ್ತು ಟ್ವಿಟರ್ ಎಂಜಿನಿಯರ್ ಫೋಡ್ ದಾಬಿರಿ ಅವರು ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಮಾಡಿರುವ ಟ್ವೀಟ್‌ಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಭರವಸೆ ನೀಡಿದೆ.

“ವಾಟ್ಸ್‌ಆ್ಯಪ್‌ ನಾನು ಮಲಗಿರುವಾಗ ಮತ್ತು ಏಳುವ ಮೊದಲೇ ಬೆಳಿಗ್ಗೆ 6 ಗಂಟೆಯೊಳಗೂ ಹಿನ್ನೆಲೆಯಲ್ಲಿ ನನ್ನ ಮೈಕ್ರೋಫೋನ್ ಬಳಸುತ್ತಿದೆ “ ಎಂದು ಟ್ವಿಟರ್‌ನ ಎಂಜಿನಿಯರಿಂಗ್ ನಿರ್ದೇಶಕ ಫೋಡ್‌ ದಾಬಿರಿ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, “ಇದು ಒಪ್ಪಲಾಗದ ಖಾಸಗಿತನದ ಉಲ್ಲಂಘನೆ. ನಾವು ಈ ಬಗ್ಗೆ ತಕ್ಷಣವೇ ಪರಿಶೀಲಿಸುತ್ತೇವೆ ಮತ್ತು ಹೊಸ ದತ್ತಾಂಶ ರಕ್ಷಣೆ ಮಸೂದೆ ಸಿದ್ಧವಾಗುತ್ತಿದ್ದರೂ, ಈ ಖಾಸಗಿ ಹಕ್ಕಿನ ಉಲ್ಲಂಘನೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ದಾಬಿರಿ ಟ್ವೀಟ್ ವೈರಲ್ ಆಗಿದ್ದು, 65 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ಪ್ರಕರಣದ ಬಗ್ಗೆ ದಾಬಿರಿ ಜೊತೆಗೆ ಸಂಪರ್ಕದಲ್ಲಿರುವುದಾಗಿ ವಾಟ್ಸ್‌ಆ್ಯಪ್‌ ಕಂಪನಿ ಹೇಳಿದೆ. “ದಾಬಿರಿ ಪಿಕ್ಸಲ್ ಫೋನ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ. ಇದು ಆಂಡ್ರಾಯ್ಡ್ ಫೋನ್ ಸಮಸ್ಯೆಯಾಗಿರುವುದರಿಂದ ಗೂಗಲ್‌ಗೆ ಈ ಬಗ್ಗೆ ತನಿಖೆ ನಡೆಸಿ ಪರಿಹಾರ ಕಂಡುಕೊಳ್ಳಲು ಹೇಳಲಾಗಿದೆ” ಎಂದು ವಾಟ್ಸ್‌ಆ್ಯಪ್‌ ಟ್ವೀಟ್ ಮೂಲಕ ಹೇಳಿದೆ.

ಮೈಕ್ ಸೆಟ್ಟಿಂಗ್ ಮೇಲೆ ಬಳಕೆದಾರರಿಗೆ ಪೂರ್ಣ ನಿಯಂತ್ರಣವಿದೆ ಎಂದು ಕಂಪನಿ ಹೇಳಿದೆ. “ಒಮ್ಮೆ ಪರವಾನಗಿ ನೀಡಿದಲ್ಲಿ ಬಳಕೆದಾರರು  ಕರೆ ಮಾಡುವಾಗ, ಧ್ವನಿ ಸಂದೇಶ ಅಥವಾ ವಿಡಿಯೋ ಕಳುಹಿಸುವಾಗ ಮಾತ್ರವೇ ವಾಟ್ಸ್‌ಆ್ಯಪ್‌ ಮೈಕ್ರೋಫೋನ್ ಬಳಕೆಯಾಗುತ್ತದೆ. ಸಂವಹನವು ಎನ್‌ಕ್ರಿಪ್ಟ್ ಆಗಿರುವುದರಿಂದ ವಾಟ್ಸ್‌ಆ್ಯಪ್‌ ಅದನ್ನು ಕೇಳಲಾಗದು” ಎಂದು ಕಂಪನಿ ಹೇಳಿದೆ.

ಆದರೆ ದಾಬಿರಿ ಅವರು ತಾವು ಮಲಗಿರುವಾಗ ವಿವಿಧ ಸಮಯದಲ್ಲಿ ವಾಟ್ಸ್‌ಆ್ಯಪ್‌ ಮೈಕ್ರೋಫೋನ್ ಬಳಸಿರುವ ಸ್ಕ್ರೀನ್‌ ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...