ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಸೋಲಾರ್ ಸ್ಫೋಟಕ ಕಂಪನಿಯಲ್ಲಿ ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ನಾಗ್ಪುರದ ಬಜಾರ್‌ಗಾಂವ್ ಗ್ರಾಮದ ಬಳಿಯಲ್ಲಿರುವ ಸೋಲಾರ್ ಎಕ್ಸ್‌ಪ್ಲೋಸಿವ್ ಇಂಡಿಯಾ ಎಂಬ ಸ್ಫೋಟಕ ತಯಾರಿಕಾ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಕಗಳ ತಯಾರಿಕಾ ಕಂಪನಿಯ ಕಾಸ್ಟ್ ಬೂಸ್ಟರ್ ಪ್ಲಾಂಟ್‌ನಲ್ಲಿ ಪ್ಯಾಕಿಂಗ್ ಮಾಡುವಾಗ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
9 dead, 3 injured in blast at Solar explosive company in Maharashtra’s Nagpur
Read @ANI Story | https://t.co/RfNYU6d2b4#Maharashtra #Nagpur pic.twitter.com/GFLxfBy2vr
— ANI Digital (@ani_digital) December 17, 2023
“ಸ್ಫೋಟ ಸಂಭವಿಸಿದಾಗ ಕಂಪನಿಯ ಘಟಕದೊಳಗೆ ಒಟ್ಟು 12 ಕಾರ್ಮಿಕರು ಇದ್ದರು. ಸ್ಫೋಟಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಪ್ಯಾಕಿಂಗ್ ಮಾಡುವ ಸಮಯದಲ್ಲಿ ಘಟನೆ ಸಂಭವಿಸಿದೆ” ಎಂದು ನಾಗ್ಪುರ ಗ್ರಾಮೀಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಪೊದ್ದಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.