ಬಾಂಗ್ಲಾದೇಶದಲ್ಲಿ ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಬ್ಯಾನ್ ಮಾಡಲಾಗಿದೆ.
ಆಗಸ್ಟ್ 2ರಂದು ಈ ನಿರ್ಧಾರ ಘೋಷಿಸಲಾಗಿದೆ ಎಂದು ಗ್ಲೋಬಲ್ ಐಸ್ ನ್ಯೂಸ್ ತನ್ನ ಎಕ್ಸ್ ಖಾತೆಯಲ್ಲಿ ವರದಿ ಮಾಡಿದೆ. ಶುಕ್ರವಾರದಿಂದ ಈ ಸಾಮಾಜಿಕ ಜಾಲತಾಣಗಳನ್ನು ಬಾಂಗ್ಲಾದೇಶದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.
ಬಾಂಗ್ಲಾದೇಶ ತನ್ನ ಈ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಟರ್ಕಿಯು ಇದೇ ರೀತಿಯ ಆದೇಶವನ್ನು ಪ್ರಕಟಿಸಿದೆ. ಟರ್ಕಿಯಲ್ಲಿ ಇನ್‌ಸ್ಟಾಗ್ರಾಂ ಅನ್ನು ನಿಷೇಧಿಸಲಾಗಿದೆ.
ಇದನ್ನು ಓದಿದ್ದೀರಾ? ಭಾರತದಲ್ಲಿ ಫೇಸ್‌ಬುಕ್ ‘ಬ್ಯಾನ್’ ಮಾಡುತ್ತೇವೆ: ಹೈಕೋರ್ಟ್ ಎಚ್ಚರಿಕೆ
ವರದಿಗಳ ಪ್ರಕಾರ, ಜುಲೈನಲ್ಲಿ ಮೆಟಾದ ಪ್ಲ್ಯಾಟ್‌ಫಾರ್ಮ್‌ಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಅನ್ನು ನಿರ್ಬಂಧಿಸಿದ ಬೆನ್ನಲ್ಲೆ ಈಗ ಪ್ಲ್ಯಾಟ್‌ಫಾರ್ಮ್‌ಗಳನ್ನು ಕೂಡಾ ನಿಷೇಧಿಸಲಾಗಿದೆ.
2024 ಬಾಂಗ್ಲಾದೇಶ ಕೋಟಾ ಸುಧಾರಣೆ ಚಳುವಳಿಯ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಆಗಸ್ಟ್ 2ರಂದು ಮಧ್ಯಾಹ್ನ 12:15 ರ ಸುಮಾರಿನಿಂದ ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ಮೆಟಾದ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತಿಲ್ಲ ಎಂದು ವರದಿಯಾಗಿದೆ.
BREAKING:
— Globe Eye News (@GlobeEyeNews) August 2, 2024
Bangladesh bans Instagram, TikTok, WhatsApp, and YouTube in the country. pic.twitter.com/v2T47KR42L
ಜುಲೈ 21ರಂದು, ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ ನಾಗರಿಕ ಸೇವಾ ಉದ್ಯೋಗಿಗಳ ನೇಮಕಾತಿಗೆ ಸಂಬಂಧಿಸಿದ ವಿವಾದಾತ್ಮಕ ಕಾನೂನುಗಳಲ್ಲಿ ಬದಲಾವಣೆ ತಂದಿತು. ಆದರೆ ಇದಾದ ಬಳಿಕ ವಿವಾದಾತ್ಮಕ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಈ ಬದಲಾವಣೆಯು ಸಮಾಧಾನ ಮೂಡಿಸಿಲ್ಲ.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ 150ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.