ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ, ನೊಬೆಲ್ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ ನಿಧನ

Date:

ಅಮೆರಿಕಾ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಹಾಗೂ ಗೆರಾಲ್ಡ್ ಫೋರ್ಡ್ ಅವಧಿಯಲ್ಲಿ ಅಮೆರಿಕಾದ ವಿದೇಶಾಂಗ ನೀತಿಗೆ ಒಂದು ರೂಪು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರು ಕನೆಕ್ಟಿಕಟ್‌ನ ತಮ್ಮ ನಿವಾಸದಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು.

ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ಹೆನ್ರಿ ಅವರ ಸಾವಿನ ಕುರಿತು ಪ್ರಕಟಿಸಿದೆಯಾದರೂ, ಸಾವಿನ ಕಾರಣವನ್ನು ಬಹಿರಂಗಪಡಿಸಿಲ್ಲ.

ಕಿಸ್ಸಿಂಜರ್ ಅವರು ಏಕಕಾಲಕ್ಕೆ ಶ್ವೇತ ಭವನದ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಗಳನ್ನು ನಿರ್ವಹಿಸಿದ ಏಕೈಕ ವ್ಯಕ್ತಿ ಆಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತರ ವಿಯೆಟ್ನಾಂನೊಂದಿಗಿನ ಪ್ಯಾರಿಸ್ ಶಾಂತಿ ಒಪ್ಪಂದ, ಅರಬ್ ದೇಶಗಳೊಂದಿಗಿನ ಇಸ್ರೇಲ್ ಸಂಬಂಧ ವಿಸ್ತರಣೆ, ಅಮೆರಿಕಾ-ರಷ್ಯಾ ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆ ಹಾಗೂ 1970ರ ದಶಕದಲ್ಲಿ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳ ಪ್ರಾರಂಭ, ವಿಯೆಟ್ನಾಂ ಯುದ್ಧ ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳಲ್ಲಿ ಕಿಸ್ಸಿಂಜರ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಈ ಸುದ್ದಿ ಓದಿದ್ದೀರಾ? ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ

ವಿಯೆಟ್ನಾಂ ಯುದ್ಧದ ನಂತರ ಕಾಂಬೋಡಿಯಾ ಕುರಿತ ಅವರ ನೀತಿಗಳು ಮಾನವ ಹಕ್ಕುಗಳಿಗಿಂತ ಅಮೆರಿಕಾದ ವ್ಯೂಹಾತ್ಮಕ ಹಿತಾಸಕ್ತಿಗೆ ಒತ್ತು ನೀಡಿವೆ ಎಂಬ ಟೀಕೆ ವ್ಯಕ್ತವಾಗಿತ್ತು.

1973ರಲ್ಲಿ ವಿಯೆಟ್ನಾಂ ಕದನ ವಿರಾಮಕ್ಕೆ ಜಂಟಿಯಾಗಿ ಸಂಧಾನ ನಡೆಸಿದರು ಎಂಬ ಕಾರಣಕ್ಕೆ ಕಿಸ್ಸಿಂಜರ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಕುರಿತು ನೊಬೆಲ್ ಪ್ರಶಸ್ತಿ ಸಮಿತಿಗೆ ಪತ್ರ ಬರೆದಿದ್ದ ಕಿಸ್ಸಿಂಜರ್, ಈ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದರು. ಆದರೆ, ಅವರೊಂದಿಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ವಿಯೆಟ್ನಾಂನ ಮುಖ್ಯ ಸಂಧಾನಕಾರ ಲೀ ಡಕ್ ತೊ, ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು.

ಕಿಸ್ಸಿಂಜರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡುವುದನ್ನು ಪ್ರತಿಭಟಿಸಿ, ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸದಸ್ಯರು ಆಯ್ಕೆ ಸಮಿತಿಯಿಂದ ಹೊರ ಬಂದಿದ್ದರು. ಹೀಗಾಗಿ ಆ ಸಾಲಿನ ನೊಬೆಲ್ ಪ್ರಶಸ್ತಿ ಘೋಷಣೆ ಇಂದಿಗೂ ವಿವಾದಾತ್ಮಕವಾಗಿ  ಉಳಿದುಕೊಂಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೀನಾ | 100ಕ್ಕೂ ಹೆಚ್ಚು ಕಾರುಗಳ ನಡುವೆ ಸರಣಿ ಅಪಘಾತ

ಚೀನಾದ ಸುಝೌ ನಗರದ ಹಿಮಾವೃತ ಎಕ್ಸ್‌ಪ್ರೆಸ್‌ವೇನಲ್ಲಿ 100ಕ್ಕೂ ಹೆಚ್ಚು ಕಾರುಗಳು ಪರಸ್ಪರ...

‘ಹೇರ್‌ ಸ್ಟೈಲ್’ ಕಾರಣಕ್ಕೆ ಶಾಲೆಯಲ್ಲಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಶಿಕ್ಷೆ; ಶಾಲೆಯ ನಡೆ ಎತ್ತಿಹಿಡಿದ ಕೋರ್ಟ್‌

ತನ್ನ ಕೂದಲು ವಿನ್ಯಾಸದ ಕಾರಣಕ್ಕಾಗಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಹೈಸ್ಕೂಲ್‌ನಲ್ಲಿ ಶಿಕ್ಷಿಸಿರುವ...

ಯುಎಇ | ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ...

ಅಮೆರಿಕ | ಭಾರತ ಮೂಲದ ದಂಪತಿ, ಇಬ್ಬರು ಅವಳಿ ಮಕ್ಕಳು ಅನುಮಾನಾಸ್ಪದ ಸಾವು

ಭಾರತೀಯ ಮೂಲದ ಕೇರಳದಿಂದ ವಲಸೆ ಹೋಗಿದ್ದ ದಂಪತಿ ಹಾಗೂ ಅವರ ಇಬ್ಬರು...