“ಯುದ್ಧವನ್ನು ಇರಾನ್ ಎಂದಿಗೂ ಬಯಸಿಲ್ಲ. ನಮ್ಮ ಮೇಲೆ ಯುದ್ಧವನ್ನು ಹೇರಲಾಗಿದೆ. ಎಪ್‌ಸ್ಟೀನ್ ಫೈಲ್ಸ್‌ನಿಂದ ಗಮನವನ್ನು ಬೇರೆಡೆ ಸೆಳೆಯಲು ಯುದ್ಧ ಮಾಡಲಾಗಿದೆ” ಎಂದು ಮಾಜಿ ಸರ್ವೋಚ್ಚ ನಾಯಕ ದಿವಂಗತ ಅಯತೊಲ್ಲಾ ಖಮೇನಿ ಅವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ಅವರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸಿದ ಮತ್ತು ತೈಲ ಬೆಲೆ ಹೆಚ್ಚಾಗಲು ಕಾರಣವಾದ ಇರಾನ್- ಇಸ್ರೇಲ್ ಯುದ್ಧಕ್ಕೆ 60 ದಿನಗಳಿಗೂ ಹೆಚ್ಚು ಸಮಯ ಕಳೆದಿದೆ. ಈ ಯುದ್ಧ ಶೀಘ್ರವೇ ಕೊನೆಯಾಗುವ ಯಾವುದೇ ಲಕ್ಷಣಗಳಿಲ್ಲ.
ಇದನ್ನು ಓದಿದ್ದೀರಾ? ಇರಾನ್-ಅಮೆರಿಕ-ಇಸ್ರೇಲ್ ಯುದ್ಧ ಗೆದ್ದವರಾರು? ಲಾಭ ಪಡೆದವರಾರು?
“ಯುದ್ಧ ಮೂರು ದಿನಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಅವರು (ಯುಎಸ್ ಮತ್ತು ಇಸ್ರೇಲ್) ಭಾವಿಸಿದ್ದರು. ಇರಾನ್ ಮಣಿಯುತ್ತದೆ ಮತ್ತು ಇರಾನ್ ಅನ್ನು ಐದು ದೇಶಗಳಾಗಿ ವಿಭಜಿಸಬಹುದು ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿಯೂ ಅದು ಸಂಭವಿಸಲ್ಲ. ಇರಾನಿಯನ್ನರು ತಮ್ಮ ರಕ್ತವನ್ನು ಚೆಲ್ಲುತ್ತಾರೆ. ಆದರೆ ಇರಾನ್ ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ” ಎಂದು ಹೇಳಿದರು.
“ಇದು ದೇಶಗಳ ನಡುವಿನ ಯುದ್ಧವಲ್ಲ; ಅದು ಇರಾನ್ ಮತ್ತು ಯುಎಸ್ ನಡುವೆ ಇರಲಿ ಅಥವಾ ಇರಾನ್ ಮತ್ತು ಝಿಯೋನಿಸ್ಟ್ ಆಡಳಿತದ ನಡುವೆ ನಡೆಯುವುದು ಆಗಲಿ. ಯುದ್ಧದ ವೆಚ್ಚವನ್ನು ಜಗತ್ತು ಭರಿಸಬೇಕಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಆದರೂ ಜೆಫ್ರಿ ಎಪ್‌ಸ್ಟೀನ್ ಫೈಲ್ಸ್‌ನಿಂದ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಇರಾನ್ ಮೇಲೆ ದಾಳಿ ನಡೆಸಿದರು” ಎಂದು ಹೇಳಿದರು.




