ಲೈಂಗಿಕ ಅಪರಾಧಿ ‘ಎಪ್ಸ್ಟೀನ್‌’ನದ್ದು ಆತ್ಮಹತ್ಯೆಯಲ್ಲ, ಕೊಲೆ: ವೈದ್ಯರೊಬ್ಬರ ಹೇಳಿಕೆ

Date:

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೈಲಿನಲ್ಲಿದ್ದಾಗ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಘೋಷಿಸಲಾಗಿತ್ತು. ಆದರೆ, ಆತನ ಸಾವಿನ ಕುರಿತಾದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಆತನ ಜೈಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಹೇಳಲಾಗಿತ್ತು. ಈಗ, ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನ ಕತ್ತು ಹಿಸುಕಲಾಗಿದೆ ಎಂದು ಎಪ್ಸ್ಟೀನ್‌ನ ಮರಣೋತ್ತರ ಪರೀಕ್ಷೆಯನ್ನು ವೀಕ್ಷಿಸಿದ್ದ ವೈದ್ಯರೊಬ್ಬರು ಹೇಳಿಕೆ ನೀಡಿದ್ದಾರೆ.

- Advertisement -

ಬಾಲಕಿಯರು ಸೇರಿದಂತೆ ಹಲವಾರು ಮಹಿಳೆಯರನ್ನು ತನ್ನ ಲೈಂಗಿಕ ಕೃತ್ಯಗಳಿಗೆ ಬಳಸಿಕೊಂಡಿದ್ದ ಮತ್ತು ಪ್ರಭಾವಿ ನಾಯಕರ ಲೈಂಗಿಕ ತೃಷೆಗಾಗಿ ಹೆಣ್ಣುಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಲೈಂಗಿಕ ಅಪರಾಧಿ ಎಪ್ಸ್ಟೀನ್‌ನನ್ನು ಅಮೆರಿಕ ಪೊಲೀಸರು ಬಂಧಿಸಿದ್ದರು. ಆತನಿಗೆ, 2017ರಲ್ಲಿ ಶಿಕ್ಷೆ ವಿಧಿಸಿ, ನ್ಯೂಯಾರ್ಕ್‌ನಲ್ಲಿ ಇರಿಸಲಾಗಿತ್ತು. ಆತ, 2019ರ ಆಗಸ್ಟ್‌ 10ರಂದು ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಇತ್ತೀಚೆಗೆ, ಎಪ್ಸ್ಟೀನ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅಮೆರಿಕ ನ್ಯಾಯ ಮಂಡಳಿ ಬಿಡುಗಡೆ ಮಾಡಿದೆ. ಅದರಲ್ಲಿ, ಪ್ರಧಾನಿ ಮೋದಿ ಸೇರಿದಂತೆ ಕೆಲ ರಾಷ್ಟ್ರಗಳ ಪ್ರಮುಖ ನಾಯಕರ ಹೆಸರುಗಳು ಕೇಳಿಬಂದಿವೆ. ಇದೇ ಹೊತ್ತಿನಲ್ಲಿ ಅತನ ಸಾವಿನ ಕುರಿತಾದ ಚರ್ಚೆಯೂ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಎಪ್ಸ್ಟೀನ್‌ನ ಮರಣೋತ್ತರ ಪರೀಕ್ಷೆಯನ್ನು ಆತನ ಕುಟುಂಬದ ಪರವಾಗಿ ವೀಕ್ಷಿಸಿದ್ದ ವಿಧಿವಿಜ್ಞಾನ ರೋಗಶಾಸ್ತ್ರಜ್ಞ ಡಾ. ಮೈಕೆಲ್ ಬಾಡೆನ್ ಅವರು ದಿ ಟೆಲಿಗ್ರಾಫ್ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ, ಎಪ್ಸ್ಟೀನ್‌ ಆತ್ಮಹತ್ಯೆ ವರದಿಯ ಬಗ್ಗೆ ಅನುಮಾನವನ್ನು ಪುನರುಚ್ಚರಿಸಿದ್ದಾರೆ. “ಎಪ್ಸ್ಟೀನ್ ನೇಣು ಹಾಕಿಕೊಂಡು ಮೃತಪಟ್ಟಿಲ್ಲ. ಆತನ ಕತ್ತು ಹಿಸುಕಿದ ಪರಿಣಾಮ ಸಾವನ್ನಪ್ಪಿದ್ದಾನೆ. ಈಗ ಲಭ್ಯವಿರುವ ಎಲ್ಲ ವಿವರಗಳನ್ನು ಸಮಗ್ರವಾಗಿ ಪರಿಗಣಿಸಿ, ಪರಿಶೀಲಿಸಿ ಆತನ ಸಾವಿನ ನಿಖರ ಕಾರಣದ ಕುರಿತು ಇನ್ನಷ್ಟು ಆಳವಾದ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು” ಎಂದು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಚುನಾವಣಾ ಟ್ರಸ್ಟ್‌ಗಳಿಂದ BJPಗೆ ಭಾರೀ ದೇಣಿಗೆ; ದಾನಿಗಳ ಹೆಸರು-ವಿಳಾಸವೇ ಇಲ್ಲ!

2019ರಲ್ಲಿಯೂ ಬಾಡೆನ್‌ ಅವರು ಪರೀಕ್ಷೆಯ ವರದಿಗಳು ಮತ್ತು ಸಾಕ್ಷ್ಯಗಳು ಇದು ಆತ್ಮಹತ್ಯೆಗಿಂತ ಕೊಲೆಯೆಂದು ಸೂಚಿಸುತ್ತದೆ ಎಂದೇ ಹೇಳಿದ್ದರು. ಆರಂಭಿಕ ಪರೀಕ್ಷೆ ವೇಳೆ ಇನ್ನೂ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಮರಣೋತ್ತರ ಪರೀಕ್ಷೆಯನ್ನು ಬಾಕಿ ಇಡಲಾಗಿತ್ತು. ಆದರೆ, ಕೇವಲ ಐದು ದಿನಗಳಲ್ಲಿಯೇ ಅಂದಿನ ಮುಖ್ಯ ವೈದ್ಯಕೀಯ ಪರೀಕ್ಷಕ ಡಾ. ಬಾರ್ಬರಾ ಸ್ಯಾಂಪ್ಸನ್ ಅವರು ಮರಣ ಪ್ರಮಾಣಪತ್ರದಲ್ಲಿ ಆತ್ಮಹತ್ಯೆ ಎಂದು ದಾಖಲಿಸಿದ್ದರು. ಸ್ಯಾಂಪ್ಸನ್ ಅವರು ಸಂಪೂರ್ಣ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಆ ಸಮಯದಲ್ಲಿ ತಾವು ಹಾಜರಿರಲಿಲ್ಲವೆಂದು ಬಾಡೆನ್‌ ಈಗ ಹೇಳಿದ್ದಾರೆ.

“ಅಧಿಕೃತ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಎಪ್ಸ್ಟೀನ್‌ನ ಕುತ್ತಿಗೆಯಲ್ಲಿ ಮೂರು ಮುರಿತಗಳು ದಾಖಲಾಗಿದ್ದವು. ಥೈರಾಯ್ಡ್ ಕಾರ್ಟಿಲೇಜ್ ಮೇಲೆ ಎರಡು ಮುರಿತ ಕಂಡು ಬಂದಿತ್ತು. ನನ್ನ 50 ವರ್ಷದ ವೃತ್ತಿಜೀವನದಲ್ಲಿ ನ್ಯೂಯಾರ್ಕ್ ಜೈಲಿನ ಖೈದಿಗಳನ್ನು ಸೇರಿದಂತೆ, ನೇಣು ಬಿಗಿದುಕೊಂಡ ಆತ್ಮಹತ್ಯೆ ಪ್ರಕರಣದಲ್ಲಿ ಮೂರು ಕುತ್ತಿಗೆ ಮುರಿತಗಳನ್ನು ಎಂದಿಗೂ ನೋಡಿಲ್ಲ” ಎಂದು ಬಾಡೆನ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

ಅಮೆರಿಕದ ಮತದಾರರಿಗೆ ‘ಎಚ್ಚೆತ್ತುಕೊಳ್ಳಿ’ ಎಂದ ಇರಾನ್: ಟ್ರಂಪ್‌ರನ್ನು ತಿರಸ್ಕರಿಸುವಂತೆ 25 ಪುಟಗಳ ಪತ್ರ ಬಿಡುಗಡೆ

ಅಮೆರಿಕದ ಮಧ್ಯಂತರ ಚುನಾವಣೆಗಳು (Midterm Elections) ಸಮೀಪಿಸುತ್ತಿರುವಂತೆಯೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...