30 ವರ್ಷಗಳ ನಂತರ ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಿಮಪಾತ: ಕಾರಣವೇನು?

Date:

ಸೌದಿ ಅರೇಬಿಯಾ ಎಂದ ತಕ್ಷಣ ನೆನಪಾಗುವುದು ಸುಡು ಬಿಸಿಲು ಹಾಗೂ ಮರುಭೂಮಿ. ಆದರೆ, ಕಳೆದ ಕೆಲವು ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಹವಾಮಾನ ಬದಲಾಗುತ್ತಿದ್ದು, ಉತ್ತರ ಭಾಗದ ಮರುಭೂಮಿಯಲ್ಲಿ 30 ವರ್ಷಗಳ ನಂತರ ಮೊದಲ ಬಾರಿಗೆ ಭಾರೀ ಹಿಮಪಾತವಾಗಿದೆ.

- Advertisement -

ಉತ್ತರ ಸೌದಿ ಅರೇಬಿಯಾದಲ್ಲಿ ಬೀಸಿದ ತಂಪಾದ ಗಾಳಿಯ ಪರಿಣಾಮವಾಗಿ, ಮಳೆ, ಬಿರುಗಾಳಿ ಮತ್ತು ದಾಖಲೆಯಷ್ಟು ಕಡಿಮೆ ತಾಪಮಾನ ಕಂಡುಬಂದಿದೆ. ಇದು ಹಿಮಪಾತಕ್ಕೆ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ. ಸುಮಾರು 2,600 ಮೀಟರ್ ಎತ್ತರದಲ್ಲಿರುವ ಜಬಲ್ ಅಲ್ ಜೌಫ್ ಮತ್ತು ಟ್ರೋಜೇನಾ ಪರ್ವತ ಪ್ರದೇಶಗಳಲ್ಲಿ ತಾಪಮಾನವು ಸುಮಾರು -4°C ಗೆ ಕುಸಿದಿದೆ. ಈ ಅಪರೂಪದ ದೃಶ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಭಾರೀ ಹಿಮಪಾತದ ನಂತರ ಸೌದಿ ಅರೇಬಿಯಾದ ಉತ್ತರ ಮರುಭೂಮಿಯ ಹಳದಿ ಭಾಗಗಳು ಬಿಳಿ ಬಣ್ಣಕ್ಕೆ ತಿರುಗಿದೆ. ತಬೂಕ್ ಮತ್ತು ಅಲ್-ಜೌಫ್‌ನಂತಹ ಪ್ರದೇಶಗಳಲ್ಲಿ, ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮರಳಿನ ದಿಬ್ಬಗಳಲ್ಲಿ ದಟ್ಟವಾದ ಹಿಮವು ಆವೃತವಾಗಿದೆ. ಹಿಮದಿಂದ ಆವೃತವಾದ ಮರುಭೂಮಿಯ ನಡುವೆಯೇ ಒಂಟೆಗಳು ನಡೆದಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಸೌದಿ ಅರೇಬಿಯಾದ ಉತ್ತರ ಭಾಗಗಳಲ್ಲಿ ಹಿಮಪಾತ ಸಂಭವಿಸುವುದು ಅಪರೂಪವಾದರೂ ಅದು ಸಂಭವಿಸದ ಸಂಗತಿ ಏನೂ ಅಲ್ಲ. ಆದರೆ, ತಬೂಕ್ ಪ್ರಾಂತ್ಯದಂತಹ ಎತ್ತರದ ಭಾಗಗಳಲ್ಲಿ ಹಿಮಪಾತವಾಗುತ್ತಿರುವುದು ವಿಶೇಷವಾಗಿದೆ.

ಸೌದಿ ಅರೇಬಿಯಾದಲ್ಲಿ ದಾಖಲಾದ ಅತ್ಯಂತ ತೀವ್ರವಾದ ಶೀತ ಅಲೆ 1992ರಲ್ಲಿ ಸಂಭವಿಸಿತ್ತು ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1992ರ ಜನವರಿಯಲ್ಲಿ ತಾಪಮಾನವು ದಾಖಲೆಯ ಕನಿಷ್ಠ ಮಟ್ಟ -9.3°C ಗೆ ಇಳಿದಿತ್ತು. 1973ರ ಜನವರಿಯಲ್ಲಿ ಸೈಬೀರಿಯಾದಿಂದ ಬೀಸಿದ್ದ ಹಿಮಗಾಳಿಯಿಂದಾಗಿ ರಿಯಾದ್‌ನಲ್ಲಿ ಸುಮಾರು 20 ಸೆಂ.ಮೀ ಎತ್ತರದಷ್ಟು ಹಿಮಪಾತ ಉಂಟಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ಮೆಡಿಟರೇನಿಯನ್, ಯುರೋಪ್ ಅಥವಾ ಮಧ್ಯ ಏಷ್ಯಾದಿಂದ ಬರುವ ಪ್ರಬಲವಾದ ಶೀತ ಗಾಳಿಯ ಮುಂಭಾಗಗಳು ದಕ್ಷಿಣದ ಕಡೆಗೆ ಅರೇಬಿಯಾದ ಕಡೆಗೆ ಚಲಿಸುತ್ತವೆ. ಈ ತಂಪಾದ ಮಾರುತಗಳು ಶೂನ್ಯ ಡಿಗ್ರಿ ಉಷ್ಣಾಂಶ ಹೊಂದಿದ್ದು, ಈ ಮಾರುತಗಳು ಸತತವಾಗಿ ಬೀಸುತ್ತಿರುವುದರಿಂದ, ಸೌದಿಯ ವಾತಾವರಣ ತಂಪಾಗಿ, ಹಿಮ ಸುರಿಯಲಾರಂಭಿಸಿದೆ.

ಸಾಮಾನ್ಯವಾಗಿ ಸೌದಿಯ ಉತ್ತರದ ಎತ್ತರದ ಬೆಟ್ಟಗಳಲ್ಲಿ (2,500 ಮೀಟರ್‌ಗಿಂತ ಮೇಲೆ) ಮಾತ್ರ ಚಳಿಗಾಲದಲ್ಲಿ ಕೆಲವೊಮ್ಮೆ ಹಿಮಪಾತವಾಗುತ್ತದೆ. ಆದರೆ ಈ ಬಾರಿ ಶೀತ ವಾಯುಗುಂಪು ದಕ್ಷಿಣಕ್ಕೆ ಆಳವಾಗಿ ಇಳಿದಿದ್ದರಿಂದ ಮರುಭೂಮಿಯ ದೊಡ್ಡ ಪ್ರದೇಶಗಳನ್ನು ಆವರಿಸಿದೆ. ಕೆಲವು ವರದಿಗಳು ಹವಾಮಾನ ಬದಲಾವಣೆಯಿಂದಾಗಿ ಇಂತಹ ಅಸಹಜ ಹವಾಮಾನ ಬೆಳವಣಿಗೆಗಳು ಹೆಚ್ಚುತ್ತಿವೆ. ಇದು ಭವಿಷ್ಯವನ್ನು ಆತಂಕಕ್ಕೆ ದೂಡಲಿವೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಉಷ್ಣಾಂಶ -4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದು, ಮಳೆಯು ಹಿಮವಾಗಿ ಬೀಳುತ್ತಿದೆ. ಕಳೆದ 30 ವರ್ಷಗಳಲ್ಲಿ ಮೊದಲ ಬಾರಿಗೆ ಮರುಭೂಮಿಯ ಸಮತಟ್ಟಾದ ಭಾಗಗಳಲ್ಲಿಯೂ ಸಹ ಇಷ್ಟೊಂದು ವ್ಯಾಪಕವಾಗಿ ಹಿಮಪಾತ ಸಂಭವಿಸಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಮಪಾತದ ನಡುವೆಯೇ ಸ್ಥಳೀಯ ನಿವಾಸಿಗಳು ಮರುಭೂಮಿಯಲ್ಲಿ ಬಿದ್ದಿರುವ ಹಿಮಗಳಲ್ಲಿ ಖುಷಿಯಿಂದ ಆಟವಾಡುತ್ತಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವೀಡಿಯೊಗಳಲ್ಲಿ, ನಿವಾಸಿಗಳು ಹಿಮದೊಂದಿಗೆ ಆಟವಾಡುವುದನ್ನು ಮತ್ತು ಖುಷಿಯಿಂದ ಗುಂಪು ನೃತ್ಯ ಮಾಡುವುದನ್ನು ಕಾಣಬಹುದು. ಹಿಮದಿಂದ ಆವೃತವಾದ ಮರುಭೂಮಿಯ ಬಯಲುಗಳಲ್ಲಿ ಒಂಟೆಗಳು ಓಡಾಡುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಿವೆ.

ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಿಮಪಾತದ ಸುದ್ದಿಗಳು ಹರಡುತ್ತಿದ್ದಂತೆಯೇ ನಗರ ಪ್ರದೇಶದ ನಿವಾಸಿಗಳು ಅಪರೂಪಕ್ಕೆ ಕಾಣಸಿಗುವ ಹಿಮಪಾತವನ್ನು ಕಣ್ತುಂಬಿಕೊಳ್ಳಲು ತಬೂಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಸೌದಿಯ ಮಾಧ್ಯಮಗಳು ವರದಿ ಮಾಡಿದೆ.

eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಭೇಟಿಯ ನಿರೀಕ್ಷೆ ಏನು?

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ 11 ವರ್ಷಗಳ ಬಳಿಕ ಅಮೆರಿಕಕ್ಕೆ ಅಧಿಕೃತ...

ಶರಣಾಗುವ ಪ್ರಶ್ನೆಯೇ ಇಲ್ಲ; ಟ್ರಂಪ್‌ನ ‘ಸರ್ವನಾಶ’ದ ಬೆದರಿಕೆಗೆ ಜಗ್ಗದೆ ಎದೆ ಸೆಟೆಸಿದ ಇರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಇರಾನ್ ಅನ್ನು ಸಂಪೂರ್ಣವಾಗಿ ಸರ್ವನಾಶ ಮಾಡುತ್ತೇವೆ"...

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾತರ ಮತ್ತು ನೇಪಾಳದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಇಂದು ಸಂಜೆ ತಡವಾಗಿ ಉತ್ತರ...