ಟ್ರಂಪ್ ‘ಯೂಟರ್ನ್’ : ನ್ಯೂಯಾರ್ಕ್ ಮೇಯರ್ ಮಮ್ದಾನಿಯ ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ

Date:

ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಝೋಹ್ರಾನ್ ಮಮ್ದಾನಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮೊದಲ ಬಾರಿಗೆ ಶ್ವೇತಭವನದಲ್ಲಿ ಸಭೆ ನಡೆಸಿದ್ದಾರೆ. ಈ ಹಿಂದೆ ಮಮ್ದಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಟ್ರಂಪ್ ಈಗ ಯೂಟರ್ನ್ ಹೊಡೆದಿದ್ದು, ಮಮ್ದಾನಿಯನ್ನು ಹಾಡಿ ಹೊಗಳಿದ್ದಾರೆ.

- Advertisement -

ಸಭೆಯ ಬಳಿಕ ಮಾತನಾಡಿದ ಟ್ರಂಪ್, “ಅವರು(ಮಮ್ದಾನಿ) ಉತ್ತಮ ಕೆಲಸ ಮಾಡಬಲ್ಲರು ಎಂಬ ವಿಶ್ವಾಸ ನನಗಿದೆ. ವಾಸ್ತವವಾಗಿ ಅವರು ಕೆಲವು ಸಂಪ್ರದಾಯವಾದಿ ಜನರನ್ನು ಅಚ್ಚರಿಗೊಳಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | ಭಾರತೀಯ ಮೂಲದ ಯುವಕ ನ್ಯೂಯಾರ್ಕ್‌ ಮೇಯರ್; ಯಾರು ಈ ಮಮ್ದಾನಿ?

ಮಮ್ದಾನಿ ತಮ್ಮ ಈ ಭೇಟಿಯು ‘ಉತ್ಪಾದಕ’ವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ನ್ಯೂಯಾರ್ಕ್‌ನ ಜನರ ಜೀವನವನ್ನು ಸುಧಾರಿಸಲು ಅಧ್ಯಕ್ಷರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಹಾಗೆಯೇ ಟ್ರಂಪ್, “ನಾನು ಭಾವಿಸಿದ್ದಕ್ಕಿಂತ ಹೆಚ್ಚಿನದನ್ನು ನಾವು ಪರಸ್ಪರ ಒಪ್ಪಿಕೊಳ್ಳುತ್ತೇವೆ” ಎಂದು ಹೇಳಿದ್ದರು.

ಇನ್ನು ಈ ಹಿಂದೆ ಟ್ರಂಪ್ ಮಿತ್ರ, ನ್ಯೂಯಾರ್ಕ್‌ನ ಸಂಪ್ರದಾಯವಾದಿ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಎಲಿಸ್ ಸ್ಟೆಫಾನಿಕ್‌ ಮಮ್ದಾನಿಯನ್ನು “ಜಿಹಾದಿ ಭಯೋತ್ಪಾದಕ ಸಹಾನುಭೂತಿ ಹೊಂದಿರುವವರು” ಎಂದು ಕರೆದಿದ್ದರು. ಆದರೆ ಟ್ರಂಪ್ ತಮ್ಮ ಮಿತ್ರನ ಈ ನಿಲುವನ್ನು ತಿರಸ್ಕರಿಸಿದ್ದು, ಮಮ್ದಾನಿ ಒಬ್ಬ “ತರ್ಕಬದ್ಧ ವ್ಯಕ್ತಿ” ಎಂದು ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಒಬ್ಬ ನರಹಂತಕ. ಗುಜರಾತ್‌ನಲ್ಲಿ ಮುಸ್ಲಿಮರನ್ನು ಕೊಲ್ಲಲು ಸಹಾಯ ಮಾಡಿದವರು ಎಂದು ಈ ಹಿಂದೆ ಧೈರ್ಯದಿಂದ ಹೇಳಿದ್ದ ಭಾರತೀಯ ಮೂಲದ ಯುವಕ ಝೋಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಮೊದಲ ಮುಸ್ಲಿಂ, ಮಿಲೇನಿಯಲ್ ಜನರೇಷನ್‌ನ ಮೇಯರ್ ಆಗಿದ್ದಾರೆ. ಈ ಹಿಂದೆ ಹಲವು ಬಾರಿ ಟ್ರಂಪ್ ಮತ್ತು ಮಮ್ದಾನಿ ವಾಕ್ಸಮರ ನಡೆಸಿದ್ದಾರೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಮ್ದಾನಿಯನ್ನು ‘ಶೇ.100ರಷ್ಟು ಕಮ್ಯೂನಿಸ್ಟ್‌ ಹುಚ್ಚ’ ಎಂದು ಟೀಕಿಸಿದ್ದರು. “ಹೌದು ನಾನು ಕಮ್ಯೂನಿಸ್ಟ್. ಅಂದರೆ ಜನರ ಪರವೇ ಹೊರತು ನಿಮ್ಮಂತೆ ಕಾರ್ಪೋರೇಟ್‌ಗಳ ಪರವಲ್ಲ” ಎಂದು ಮಮ್ದಾನಿ ತಿರುಗೇಟು ನೀಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಂಗಳೊಳಗೆ ಜಾರಿಯಾಗಲಿದೆ ಭಾರತ–ನ್ಯೂಜಿಲೆಂಡ್ FTA: ಏನಿದು ‘ಫ್ರೀ ಟ್ರೇಡ್ ಅಗ್ರಿಮೆಂಟ್‌’?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ‘ಮುಕ್ತ ವ್ಯಾಪಾರ ಒಪ್ಪಂದ’ (Free Trade...

ರಷ್ಯಾ ಮೇಲಿನ ನಿರ್ಬಂಧ ಮಸೂದೆಗೆ ಟ್ರಂಪ್ ಸಹಿ: ಭಾರತಕ್ಕೆ ಶೇ. 100ರಷ್ಟು ಸುಂಕದ ಭೀತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಮೇಲಿನ ನೂತನ ನಿರ್ಬಂಧ...

ಪಾಕಿಸ್ತಾನದ ಮಸೀದಿಯಲ್ಲಿ ಭೀಕರ ಆತ್ಮಾಹುತಿ ದಾಳಿ: 16 ಮಂದಿ ಸಾವು

ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೊಹಾಟ್ ಜಿಲ್ಲೆಯ ಹಳೆಯ ಪೊಲೀಸ್...

ಲಕ್ಷ ಶತಾಯುಷಿಗಳ ದೇಶ ಜಪಾನ್! ದೀರ್ಘಾಯಸ್ಸಿನ ಗುಟ್ಟೇನು?

ಬದುಕಿನ ಇಳಿಜಾರಿನಲ್ಲೂ ಯೌವನದ ಉತ್ಸಾಹ, ನೂರು ವರ್ಷವಾದರೂ ಕುಗ್ಗದ ಆರೋಗ್ಯ... ಇದು...