ಬೀದರ್‌ | ‘ಮಿಯಾಝಕಿ’ ಮಾವು ಕೆಜಿಗೆ ₹2.5 ಲಕ್ಷ : ಜಗತ್ತಿನ ದುಬಾರಿ ಬೆಲೆಯ ಬೆಳೆ ಬೆಳೆದು ಮಾದರಿಯಾದ ರೈತ

Date:

ಮಿಯಾಝಕಿ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್‌ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭಾರೀ ಬೇಡಿಕೆ ಇದ್ದು, ಕೆಲವೆಡೆ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತಿದೆ. 

ಜಪಾನ್ ಮೂಲದ ಮಿಯಾಝಕಿ ಮಾವಿನಹಣ್ಣು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ತಳಿಗಳಲ್ಲಿ ಒಂದಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಪ್ರತಿ ಕೆಜಿಗೆ ₹2.5 ಲಕ್ಷ ರೂಪಾಯಿಗಳವರೆಗೆ ತಲುಪುತ್ತದೆ ಎಂದು ಹೇಳಲಾಗುತ್ತದೆ. ಇಂತಹ ದುಬಾರಿ ದರದ ಮಾವು ತಳಿಯನ್ನು ಬೆಳೆದಿರುವ ರೈತರೊಬ್ಬರು ಯಶಸ್ವಿಯಾಗಿ ಉತ್ತಮ ಫಸಲು ಪಡೆಯುತ್ತಿದ್ದು, ಗಮನಸೆಳೆದಿದ್ದಾರೆ.

- Advertisement -

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಹಿರಿಯ ರೈತ ಹಣಮಂತರಾವ್ ಶ್ರೀಮಾಳೆ ಅವರು ತಮ್ಮ ಮನೆಯಂಗಳದ ತೋಟದಲ್ಲಿ ಪ್ರಾಯೋಗಿಕವಾಗಿ 4-5 ಮಿಯಾಜಾಕಿ ಗಿಡಗಳನ್ನು ಬೆಳೆದಿದ್ದಾರೆ. ಈ ಮಾವು ಗಾಢ ಕಡುಕೆಂಪು ಬಣ್ಣ ಹೊಂದಿದ್ದು, ನೋಡಲು ಆಕರ್ಷವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ರೈತ ಹಣಮಂತರಾವ್ ಶ್ರೀಮಾಳೆ ಅವರ ಓರ್ವ ಪುತ್ರ ಬೆಂಗಳೂರಿನಲ್ಲಿ ಹಣ್ಣಿನ ಉದ್ಯಮದಲ್ಲಿ ತೊಡಗಿದ್ದಾರೆ. ಅವರು ಮೂರು ವರ್ಷಗಳ ಹಿಂದೆ ಜಪಾನ್‌‌ ನಿಂದ ₹2,500ಕ್ಕೆ ಒಂದರಂತೆ ಮಿಯಾಝಕಿ ಐದು ಸಸಿಯನ್ನು ಖರೀದಿಸಿ ತಂದು ತಮ್ಮ ಊರಿನ ತೋಟದಲ್ಲಿ ನಾಟಿ ಮಾಡಿದ್ದರು. ಈ ವರ್ಷ ಮಾವಿನ ಗಿಡಗಳು‌ ಹಣ್ಣುಗಳಿಂದ ಕಂಗೊಳಿಸುತ್ತಿವೆ.

WhatsApp Image 2026 05 25 at 11.41.35 AM

ಈ ಮಾವು ಹೆಚ್ಚಿನ ಸಿಹಿ ಹಾಗೂ ವಿಶೇಷ ರುಚಿಯಿಂದ ಪ್ರಸಿದ್ಧಿಯಾಗಿದೆ. ಹೊರದೇಶದ ತಳಿ ಎಂದು ಹೇಳಲಾಗುವ ಮಿಯಾಝಕಿ ಇದೀಗ ರಾಜ್ಯದ ಗಡಿ ಜಿಲ್ಲೆಯ ರೈತರು ಬೆಳೆದು ಗಮನ ಸೆಳೆದಿದ್ದಾರೆ. ಹಣಮಂತರಾವ್ ಶ್ರೀಮಾಳೆ ಅವರಿಗೆ ಗ್ರಾಮದ ಹೊರವಲಯದ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸುಂದರವಾದ ಮನೆ ಕಟ್ಟಿಸಿ, ಮನೆ ಎದುರು ತೆಂಗು, ಪಪ್ಪಾಯಿ, ಬಾಳೆ, ಕಿತ್ತಳೆ, ಮಾವು ಸೇರಿದಂತೆ ನೂರಕ್ಕೂ ಅಧಿಕ ಹಣ್ಣಿನ ಗಿಡಗಳ ತೋಟ ನಿರ್ಮಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

“ಮೂರು ವರ್ಷಗಳ ಹಿಂದೆ ನಾಟಿ ಮಾಡಿದ ಮಿಯಾಝಕಿ ಗಿಡ ಈಗ ಉತ್ತಮ ಫಸಲು ನೀಡಿದೆ. ಒಂದು ಕಾಯಿ ಅಂದಾಜು 250-300 ಗ್ರಾಂ ತೂಕ ಇದೆ. ಒಂದು ಗಿಡಕ್ಕೆ 25-30 ಕಾಯಿ ಬಂದಿದೆ. ಹವ್ಯಾಸಕ್ಕಾಗಿ ಬೆಳೆದಿದ್ದೇನೆ, ಸದ್ಯಕ್ಕೆ ಮಾರಾಟ ಮಾಡಿಲ್ಲ. ಮುಂದಿನ ದಿನಗಳಲ್ಲಿ ಒಂದೆರೆಡು ಎಕರೆಯಲ್ಲಿ ಮಿಯಾಝಕಿ ಕಸಿ ಮಾಡಿಸಿದ ಸಸಿಗಳು ನೆಟ್ಟು ಬೆಳೆಯುವ ಗುರಿ ಇದೆ” ಎಂದು ಹಣಮಂತರಾವ್‌ ಅವರ ಪುತ್ರ ಸಂತೋಷ ಶ್ರೀಮಾಳೆ ಹೇಳುತ್ತಾರೆ.

ಹಣಮಂತರಾವ್ ಶ್ರೀಮಾಳೆ ಅವರಂತಹ ರೈತರ ಯಶಸ್ಸು ಭಾರತದ ರೈತರಿಗೆ ಹೊಸ ಆದಾಯದ ಮಾರ್ಗವನ್ನು ತೆರೆಯುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಈ ಅಪರೂಪದ ವಿದೇಶಿ ತಳಿಯನ್ನು ಸ್ಥಳೀಯವಾಗಿ ಬೆಳೆಸುವ ಮೂಲಕ ರೈತರು ಉತ್ತಮ ಲಾಭ ಗಳಿಸುವ ದಿನಗಳು ಬಹುದೂರವಿಲ್ಲ ಎಂಬುದನ್ನು ತೋರುತ್ತಿದೆ.

ಮಿಯಾಝಕಿ ಮಾವು ತಳಿಯನ್ನು, ಜಪಾನ್‌ನಲ್ಲಿ ʼಸೂರ್ಯನ ಮೊಟ್ಟೆʼ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಇದು ಮೂಲತಃ ಅಮೆರಿಕದ ಫ್ಲೋರಿಡಾದ Irwin ತಳಿಯಿಂದ ಉದ್ಭವವಾಗಿದೆ. 1980ರ ದಶಕದಿಂದ ಜಪಾನ್‌ನಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆರಂಭವಾಯಿತು. ಜಪಾನ್ ರೈತರು ಪ್ರತಿ ಹಣ್ಣಿಗೆ ವಿಶೇಷ ಆರೈಕೆ ನೀಡುತ್ತಾರೆ. ಹಣ್ಣುಗಳ ಕೆಳಗೆ ರಿಫ್ಲೆಕ್ಟರ್ ಶೀಟ್‌ಗಳನ್ನು ಇರಿಸಿ ಸೂರ್ಯನ ಬೆಳಕು ಸಮಾನವಾಗಿ ಬೀಳುವಂತೆ ಮಾಡುವುದರಿಂದ ಹಣ್ಣುಗಳು ಆಕರ್ಷಕ ಕೆಂಪು-ನೇರಳೆ ಬಣ್ಣವನ್ನು ಪಡೆಯುತ್ತವೆ.

ಪ್ರತಿ ಹಣ್ಣು ಸುಮಾರು 350 ರಿಂದ 500 ಗ್ರಾಂ ತೂಕವಿರುತ್ತದೆ. ಹಣ್ಣಿನ ತಿರುಳು ನಾರುರಹಿತ, ಮೃದುವಾಗಿದ್ದು, ಬಾಯಲ್ಲಿಟ್ಟರೆ ಕರಗುವಂತಿರುತ್ತದೆ. ಇದರಲ್ಲಿ ಸಕ್ಕರೆಯ ಪ್ರಮಾಣ ಶೇ.16-18ರಷ್ಟಿದ್ದು, ಸಾಮಾನ್ಯ ಮಾವುಗಳಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಇದಕ್ಕೆ ಟ್ರಾಪಿಕಲ್ ಫ್ರೂಟ್‌ಗಳಂತಹ ವಿಶೇಷ ಸುವಾಸನೆಯೂ ಇದೆ.

“ಮಿಯಾಝಕಿ ಮಾವಿನ ತಳಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಪ್ರೋತ್ಸಾಹ ಧನ ಇಲ್ಲ. ರಾಜ್ಯದಲ್ಲಿ ಬೆಳೆದ ಮಿಯಾಝಕಿಗೆ ಇಲ್ಲಿಯವರೆಗೆ ದುಬಾರಿ ಹಣ ಕೊಟ್ಟು ಎಲ್ಲಿಯೂ ಖರೀದಿಯಾದ ಉದಾಹರಣೆ ಇಲ್ಲ. ಈ ತಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೂ ಇಲ್ಲ. ಭಾರತವೇ ಮಾವಿನ ಹಣ್ಣುಗಳ ಮೂಲ. ಇಲ್ಲಿಯ ಒಂದು ಸಾವಿರಕ್ಕೂ ಅಧಿಕ ಮಾವಿನ ತಳಿಗಳಿವೆ, ಅತ್ಯಂತ ವೈವಿದ್ಯತೆಯೂ ಇದೆ” ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವಿಶ್ವನಾಥ್ ಜಿಳ್ಳೆ ಹೇಳಿದರು

ಮಿಯಾಝಕಿ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್‌ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭಾರೀ ಬೇಡಿಕೆ ಇದ್ದು, ಕೆಲವೆಡೆ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತಿದೆ.

ಇದನ್ನೂ ಓದಿದ್ದೀರಾ? ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಕಾಯ್ದೆಗೆ ಬಿಡಿಗಾಸಿನ ಬೆಲೆ ನೀಡದ ಸರ್ಕಾರದ ನಡೆ ಖಂಡನೀಯ

ಭಾರತದಲ್ಲಿ ಮಿಯಾಜಾಕಿ ಮಾವು ಬೆಳೆಯುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ಪುಣೆಯಲ್ಲಿ ಫಾರೂಕ್ ಇನಾಮದಾರ್ ಅವರು ಅರ್ಧ ಎಕರೆಯಲ್ಲಿ 120 ಗಿಡಗಳನ್ನು ಬೆಳೆಸುತ್ತಿದ್ದಾರೆ. ಕರ್ನಾಟಕದ ಉಡುಪಿಯಲ್ಲಿ ಜೋಸೆಫ್ ಲೋಬೋ ಅವರು ಮನೆ ಟೆರೇಸ್‌ನಲ್ಲೇ ಯಶಸ್ವಿಯಾಗಿ ಬೆಳೆಸಿದ್ದಾರೆ. ಕೊಪ್ಪಳದಲ್ಲಿ ರೈತರೊಬ್ಬರು ಬೆಳೆದಿದ್ದಾರೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಈ ತಳಿಯತ್ತ ಆಸಕ್ತಿ ತೋರುತ್ತಿದ್ದಾರೆ. ಭಾರತದ ಉಷ್ಣ ಹವಾಮಾನದಲ್ಲಿ ಈ ತಳಿ ಬೆಳೆಯುವುದು ಸಾಧ್ಯವಿದ್ದರೂ, ಜಪಾನ್‌ನಷ್ಟು ತೀವ್ರ ಕೆಂಪು ಬಣ್ಣ ಮತ್ತು ಗುಣಮಟ್ಟವನ್ನು ನಿರ್ವಹಿಸುವುದು ಸವಾಲಾಗಿದೆ.

WhatsApp Image 2025 07 12 at 17.38.34 e1752322718567
+ posts
WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...