ಬೆಂಗಳೂರು | ಪತ್ನಿಯ ನಂಬರ್ ಕೇಳಿದ ಸ್ನೇಹಿತನಿಗೆ ಥಳಿಸಿದ ರೌಡಿಶೀಟರ್‌; 10 ಮಂದಿಯಿಂದ ಮನೆಗೆ ದಾಳಿ

Date:

ಪತ್ನಿಯ ನಂಬರ್ ಕೇಳಿದ ಸ್ನೇಹಿತನಿಗೆ ರೌಡಿಶೀಟರ್‌ನೊಬ್ಬ ಧಳಿಸಿದ್ದು, ಬಳಿಕ ಹಲ್ಲೆಗೊಳಗಾದ ವ್ಯಕ್ತಿ 10 ಮಂದಿ ಗುಂಪಿನೊಂದಿಗೆ ರೌಡಿಶೀಟರ್ ಮನೆಗೆ ತೆರಳಿ ದಾಳಿ ನಡೆಸಿದ ಘಟನೆ ಬೆಂಗಳೂರಿನ ಹೊಯ್ಸಳ ನಗರದಲ್ಲಿ ನಡೆದಿದೆ.

ಬೆಂಗಳೂರಿನ ಚಂದ್ರಾಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಮತ್ತು ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ ಇಬ್ಬರು ಸ್ನೇಹಿತರು.

ರಮೇಶ್ ಮತ್ತು ರೌಡಿಶೀಟರ್ ಕೆಂಪ ಇಬ್ಬರು ಬಾರ್‌ಗೆ ತೆರಳಿ ಮಧ್ಯ ಸೇವನೆ ಮಾಡಿದ್ದರು. ಕುಡಿದ ಮತ್ತಿನಲ್ಲಿದ್ದ ರಮೇಶ್, ರೌಡಿಶೀಟರ್ ಕೆಂಪನಿಗೆ ಆತನ ಹೆಂಡತಿಯ ನಂಬರ್ ಕೊಡುವಂತೆ ಕೇಳಿದ್ದಾನೆ. ರೌಡಿಶೀಟರ್ ಕೆಂಪ ಇದಕ್ಕೆ ಕೋಪಗೊಂಡು ರಮೇಶ್‌ಗೆ ಥಳಿಸಿದ್ದಾನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಘಟನೆ ಬಳಿಕ ರೌಡಿಶೀಟರ್ ಕೆಂಪ ಮನೆಗೆ ಬಂದಿದ್ದಾನೆ. ಕೆಂಪನ ಮೇಲೆ ದ್ವೇ‍ಷಕ್ಕೆ ಬಿದ್ದ ರಮೇಶ್ ತನ್ನ ಸಹಚರರಾದ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯೊಂದಿಗೆ ಹೊಯ್ಸಳ ನಗರದಲ್ಲಿರುವ ಕೆಂಪನ ಮನೆಗೆ ತೆರಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ | ಟಿಕೆಟ್‌ ಪಡೆಯದೆ ಪ್ರಯಾಣ ಬೆಳೆಸಿದ್ದ 3208 ಪ್ರಯಾಣಿಕರಿಗೆ ದಂಡ

ರಮೇಶ್ ನನ್ನನ್ನು ಯಾಕೆ ಹೊಡೆದೆ ಎಂದು ಕೆಂಪನನ್ನು ಪ್ರಶ್ನಿಸಿದ್ದಾನೆ. ಈ ವೇಳೆ, ಕೆಂಪನ ಮನೆಯ ಮುಂದೆ ಗಲಾಟೆ ಆರಂಭವಾಗಿದೆ. ಗಲಾಟೆ ಸಮಯದಲ್ಲಿ ರಮೇಶ್ ಮತ್ತಿತರ ಮೇಲೆ ಕೆಂಪ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.

ರಮೇಶ್ ಮತ್ತು ಆತನ ಸಹಚರರು ಕೆಂಪನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ಪರಿಣಾಮ ಮನೆಯ ಕಿಟಕಿ ಗಾಜುಗಳು ಪುಡಿ‌ಪುಡಿಯಾಗಿವೆ. ಮನೆಯ ಬಾಗಿಲು ಮುರಿದಿದೆ.

ಘಟನೆ ಸಂಬಂಧ ಚಂದ್ರಾಲೇಔಟ್ ಠಾಣಾ ಪೊಲೀಸರು ರೌಡಿಶೀಟರ್ ಕೆಂಪನನ್ನು ಬಂಧಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲಿನ್ಯ ನಿಯಂತ್ರಣ ಅಲ್ಲ; ಪೋಸ್ಟ್ ಮನ್ ಮಂಡಳಿ: ಹೆಸರು ಬದಲಿಸಿಯೆಂದು ರೈತರ ಪಟ್ಟು

ಮಂಡ್ಯ ಜಿಲ್ಲೆಯ ಮಾಕವಳ್ಳಿಯಲ್ಲಿರುವ ಕೋರಂಡಲ್ ಸಕ್ಕರೆ ಕಾರ್ಖಾನೆಯು ಪರಿಸರಕ್ಕೆ ಮತ್ತು ಪಕ್ಕದಲ್ಲಿರುವ...

ಬೆಂಗಳೂರು | ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ : ಹಲವರಿಗೆ ಗಾಯ

ಬೆಂಗಳೂರಿನ ವೈಟ್ ಫೀಲ್ಡ್ ಕುಂದಲಹಳ್ಳಿ ಬಳಿಯ ಪ್ರಸಿದ್ಧ ಹೋಟೆಲ್‌ ರಾಮೇಶ್ವರಂ ಕೆಫೆಯಲ್ಲಿ...

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ : ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ಜನರ ಆಕ್ರೋಶ

ಕಾಸ್ಮೋಪಾಲಿಟನ್ ನಗರದಲ್ಲಿ ಇದೀಗ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಈ ವರ್ಷ...

ಚುನಾವಣಾ ಖರ್ಚಿಗಾಗಿ ಬಿಬಿಎಂಪಿ ಬಜೆಟ್ ಮಂಡನೆ; ಮೋಹನ್ ದಾಸರಿ ಆರೋಪ

"ಕಳೆದ ನಾಲ್ಕು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರಿಲ್ಲದೇ...