ಬೇಡಿಕೆ ಮೇರೆಗೆ ಕೇರಳದ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ

Date:

  • ಈ ವಿಶೇಷ ರೈಲುಗಳು 20 ಬೋಗಿಗಳನ್ನು ಹೊಂದಿದ್ದು, ಹತ್ತು ಟ್ರಿಪ್‌ಗಳಲ್ಲಿ ಸಂಚಾರ
  • ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ ಕೆಲ ರೈಲುಗಳು ರದ್ದಾಗಿವೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಮತ್ತು ಬೇಡಿಕೆ ಮೇರೆಗೆ ಕೇರಳದ ಕೊಚುವೇಲಿ ಇಂದ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದೆ.

ಏ. 25ರಿಂದ ಜೂನ್ 27 ರವರೆಗೆ ಪ್ರತಿ ಮಂಗಳವಾರ (ರೈಲು ಸಂಖ್ಯೆ 06083) ಕೊಚುವೇಲಿಯಿಂದ ಸಂಜೆ 06:05 ಗಂಟೆಗೆ ರೈಲು ಹೊರಡಲಿದೆ. ಮರುದಿನ ಬೆಳಿಗ್ಗೆ 10:55 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ವಿಶೇಷ ರೈಲು ಆಗಮಿಸಲಿದೆ.

ಈ ರೈಲು ಮಾರ್ಗದಲ್ಲಿ ಕೊಲ್ಲಂ, ಕಾಯಂಕುಲಂ, ಮಾವೇಲಿಕರ, ಚೆಂಗನ್ನೂರ್, ತಿರುವಳ್ಳ, ಚೆಂಗನಸೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಅಲುವಾ, ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರ್, ಈರೋಡ್, ಸೇಲಂ, ತಿರುಪತ್ತೂರ್, ಬಂಗಾರಪೇಟೆ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಿಗೆ ವಿಶೇಷ ರೈಲು ಆಗಮಿಸಿ/ನಿರ್ಗಮಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಏಪ್ರಿಲ್ 26 ರಿಂದ ಜೂನ್ 28 ರವರೆಗೆ ಪ್ರತಿ ಬುಧವಾರ (ರೈಲು ಸಂಖ್ಯೆ-06084) ಬೆಂಗಳೂರಿನಿಂದ ಮಧ್ಯಾಹ್ನ 12:45 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಡುವ ವಿಶೇಷ ರೈಲು, ಮರುದಿನ ಬೆಳಗ್ಗೆ 6 ಗಂಟೆಗೆ ಕೊಚುವೇಲಿ ನಿಲ್ದಾಣ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತ್ತೂರ್, ಸೇಲಂ, ಈರೋಡ್, ತಿರುಪ್ಪೂರ್-, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚೆಂಗನಸೇರಿ, ತಿರುವಳ್ಳ, ಚೆಂಗನ್ನೂರ, ಮಾವೇಲಿಕರ, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಈ ವಿಶೇಷ ರೈಲುಗಳು 20 ಬೋಗಿಗಳನ್ನು ಹೊಂದಿರಲಿದೆ.

ಈ ಸುದ್ದಿ ಓದಿದ್ದೀರಾ? ಯುವ ಪೀಳಿಗೆ ಮನಸ್ಸು ಮಾಡಿದರೆ ಯಾವುದೇ ರಂಗದಲ್ಲಿ ಬದಲಾವಣೆ ತರಲು ಸಾಧ್ಯ: ತುಷಾರ್ ಗಿರಿನಾಥ್

ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ ಕೆಲ ರೈಲುಗಳು ರದ್ದು

ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ದಕ್ಷಿಣ ರೈಲ್ವೆ ವಲಯದ ಕೆಲ ರೈಲುಗಳು ಹಳಿಗಳ ಕಾರಿಡಾರ್ ಬ್ಲಾಕ್​ಗಳ ನಿರ್ವಹಣೆ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಏಪ್ರಿಲ್ ತಿಂಗಳಲ್ಲಿ​ ರೈಲುಗಳು ರದ್ದಾಗಿವೆ.

ಭಾಗಶಃ ರದ್ದಾದ ರೈಲುಗಳು

  • (ರೈಲು ಸಂಖ್ಯೆ 12678) ಏಪ್ರಿಲ್​​ 27 ರಂದು ಕೇರಳದ ಎರನಾಕುಲಂನಿಂದ ಹೊರಟು ಕೆಎಸ್​ಆರ್​​ ಬೆಂಗಳೂರು ತಲುಪಲಿದ್ದ ಡೈಲಿ ಸೂಪರ್​​​​ಫಾಸ್ಟ್​ ಎಕ್ಸಪ್ರೆಸ್​ ​ರದ್ದಾ​ಗಿದೆ.
  • (ರೈಲು ಸಂಖ್ಯೆ 12677) ಏಪ್ರಿಲ್​​ 28 ರಂದು ಕೆಎಸ್​ಆರ್​ ಬೆಂಗಳೂರು-ಎರನಾಕುಲಂ ಮಧ್ಯೆ ಸಂಪರ್ಕ ಕಲ್ಪಿಸಲಿರುವ ಡೈಲಿ ಸೂಪರ್​​​​ಫಾಸ್ಟ್ ಎಕ್ಸಪ್ರೆಸ್​ ರದ್ದಾಗಿದೆ.
  • (ರೈಲು ಸಂಖ್ಯೆ 12677) ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಏಪ್ರಿಲ್ 26 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದ್ದು, ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆ ಇಲ್ಲ. ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಿಗ್ಗೆ 6.10 ಕ್ಕೆ ಹೊರಟಿದೆ.
  • (ರೈಲು ಸಂಖ್ಯೆ 01772): ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು, ಏಪ್ರಿಲ್ 26 ರಂದು ಮಾರಿಕುಪ್ಪಂನಿಂದ ಹೊರಡಲಿದ್ದು, ಬೆಂಗಳೂರು ಕಂಟೋನ್ಮೆಂಟ್‌ ಕೊನೆ ನಿಲ್ದಾಣವಾಗಿದೆ.
  • (ರೈಲು ಸಂಖ್ಯೆ 06396): ಕೆಎಸ್​ಆರ್​ ಬೆಂಗಳೂರು-ಮಾರಿಕುಪ್ಪಂ ಎಮ್​ಇಎಮ್​ಯು ವಿಶೇಷ ರೈಲು, ಏಪ್ರಿಲ್ 26 ರಂದು ನಿಗದಿತ ಸಮಯದಲ್ಲಿ ಕಂಟೋನ್ಮೆಂಟ್‌ನಿಂದ ಹೊರಡಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕಾ.ತ. ಚಿಕ್ಕಣ್ಣನವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ

"ಅರವತ್ತು ವರ್ಷ ಮೀರಿದವರಿಗೆ ಕಾ.ತ. ಚಿಕ್ಕಣ್ಣ ನೆನಪಾಗುವುದು ಕನ್ನಡ- ಸಂಸ್ಕೃತಿ ಇಲಾಖೆಯ...

ಬೆಂ.ಗ್ರಾಮಾಂತರ | ಲಂಚ ಸ್ವೀಕಾರ; ಬೆಸ್ಕಾಂ ಎಇಇ, ಎಸ್‌ಒ ಲೋಕಾಯುಕ್ತ ಬಲೆಗೆ

ನೂತನ ಬಡಾವಣೆಗೆ ವಿದ್ಯುತ್‌ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ...

ಬೆಂಗಳೂರು | ಲಿಫ್ಟ್‌ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಸಾವು

ಲಿಫ್ಟ್‌ಗೆಂದು ತೆಗೆದಿದ್ದ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ...

ಬೆಂಗಳೂರು | ಕಸ ಸುರಿವ ‘ತೊಟ್ಟಿ’ಯಾದ ಚಿಕ್ಕಪೇಟೆ ಮುಖ್ಯ ರಸ್ತೆ!

ಬೆಂಗಳೂರಿನ ಅತಿ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಒಂದಾದ, ವ್ಯಾಪಾರ ಚಟುವಟಿಕೆ ತಾಣವಾಗಿರುವ...