ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾತಿನ ಮಾಲೆ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಮಾತಿನ ಮಾಲೆ
ಕಣ್ಗೆ ಕಾಬಡೆ ರೂಪಲ್ಲ
ಕೈಗೆ ಸಿಲುಕವಡೆ ದೇಹಿಯಲ್ಲ
ನಡೆವಡೆ ಗಮನಿಯಲ್ಲ
ನುಡಿವಡೆ ವಾಚಾಳನಲ್ಲ
ನಿಂದಿಸಿದಡೆ ಹಗೆಯಲ್ಲ
ಹೊಗಳಿದವರಿಗೆ ಕೆಳೆಯಲ್ಲ
ಗುಹೇಶ್ವರನ ನಿಲುವು
ಮಾತಿನ ಮಾಲೆಗೆ ಸಿಲುಕುವುದೆ? ಸಿದ್ಧರಾಮಯ್ಯ
ನೀನು ಮರುಳಾದೆಯಲ್ಲಾ!

- Advertisement -

ವಚನಾರ್ಥ:
ಅಲ್ಲಮ ಮತ್ತು ಸಿದ್ಧರಾಮರ ನಡುವೆ ನಡೆದ ಸಂಭಾಷಣೆಯಲ್ಲಿ ಮೂಡಿಬಂದ ವಚನವಿದು. ಸಿದ್ಧರಾಮನ ಆಧ್ಯಾತ್ಮಿಕ ಬದುಕಿಗೆ ಗಮನಾರ್ಹ ತಿರುವು ನೀಡಿ ಸಿದ್ದರಾಮನನ್ನು ಶರಣ ಪರಂಪರೆಯ ಮುಂಚೂಣಿಯಲ್ಲಿರಿಸಲು ಮಾರ್ಗದರ್ಶನ ಮಾಡಿದ್ದು ಅಲ್ಲಮಪ್ರಭು. ಅಲ್ಲಮನ ಪ್ರಕಾರ ಭಕ್ತಿಯಿಂದ ಹೊಗಳಿದ ಮಾತ್ರಕ್ಕೆ ದೈವವಸ್ತು ಸಾಕ್ಷಾತ್ಕಾರ ಆಗುವುದಿಲ್ಲ. ದೈವ ನಿಂದನೆ ಮಾಡಿದ ಮಾತ್ರಕ್ಕೆ ಭಕ್ತನ ಮೇಲೆ ಹಗೆ ಸಾಧಿಸುವುದಿಲ್ಲ. ಹೊಗಳಿ ಗೆಳೆತನವ ಹಂಗಿಸಿ ಹಗೆತನವ ಸಂಪಾದಿಸಲಾಗದು. “ನಂಬಿದನು ಪ್ರಹ್ಲಾದ ನಂಬದಿರ್ದನು ತಂದೆ” ಎಂಬ ಕಗ್ಗ ನುಡಿಯಿದೆ. ವಂದಿಸಿದ ಪ್ರಹ್ಲಾದ ನಿಂದಿಸಿದ ಹಿರಣ್ಯಕಶಿಪು ಇಬ್ಬರೂ ವಿಭಿನ್ನ ಮಾರ್ಗದಲ್ಲಿ ಮೋಕ್ಷ ಹೊಂದಿದರು. ದೈವ ಪರವಸ್ತು ಕಣ್ಣಿಗೆ ಕಾಣುವ ರೂಪ ಹೊಂದಿಲ್ಲ. ನಿರಾಕಾರ. ಕೈಗೆ ಸಿಲುಕುವಂತಹ ದೇಹಧಾರಿಯಲ್ಲ. ಕಾಲಿದ್ದು ನಡೆವವನಲ್ಲ. ನಾಲಗೆಯಿದ್ದು ನುಡಿವವನಲ್ಲ. ಆಂತಹ ನಿರಾಕಾರ ದಿವ್ಯಸ್ವರೂಪವನ್ನು ಮಾತಿನ ಮಾಲೆ ಕಟ್ಟಿ ಹೊಗಳಿದ ಮಾತ್ರಕ್ಕೆ ಮರುಳು ಮಾಡಲಾದೀತೇ ಎಂದು ಸಿದ್ಧರಾಮನನ್ನು ಪ್ರಶ್ನಿಸುತ್ತಾ ಅಂತಹ ವಿಚಾರಗಳಿಗೆ ಮರುಳಾಗಬೇಡ ಎಂದು ಅಲ್ಲಮನು  ಸಿದ್ದರಾಮನಿಗೆ ನೀಡುವ ನಿರ್ದೇಶನ ಇಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಪದಪ್ರಯೋಗಾರ್ಥ:
ಮಾತಿನ ಮಾಲೆ ಕಟ್ಟುವುದು ಅಂದರೆ ಸ್ತುತಿಸುವುದು, ಹೊಗಳುವುದು, ನಿರಂತರವಾಗಿ ಮಾತಾಡುತ್ತಿರುವುದು ಎಂದರ್ಥ. ಸ್ತುತಿಸಿ ಹೊಗಳಿ ಸಂತೋಷಪಡಿಸಿದ ಮಾತ್ರಕ್ಕೆ ದೇವರನ್ನು ಒಲಿಸಿಕೊಳ್ಳಲಾಗದು ಎಂಬುದು ಅಲ್ಲಮನ ಅಭಿಪ್ರಾಯ. ಗುಹೇಶ್ವರನು ಮಾತಿನ ಮಾಲೆಯ ಬಲೆಗೆ ಸಿಲುಕುವವನಲ್ಲ. ದೇವರ ಕೃಪೆಯಾಗುವುದು ಮಾತಿನ ಮಾಲೆಗಾರನಿಗಲ್ಲ. ತನ್ನ ಮಾತಿನಂತೆ ತಾನು ನಡೆದುಕೊಳ್ಳುವವಂಗೆ. ನುಡಿ ಮತ್ತು ನಡೆ ಒಂದಾದವಂಗೆ ಸಮಾಜದಲ್ಲಿ ಜನಮನ್ನಣೆ ದೊರೆಯುತ್ತದೆ. ನುಡಿದಂತೆ ನಡೆದು ಜನಮನ್ನಣೆ ಗಳಿಸಿ ಜೀವಿಸುವ ವ್ಯಕ್ತಿಯನ್ನು ದೇವರು ಮೆಚ್ಚುತ್ತಾನೆ. ಬಗೆ ಬಗೆಯ ಸ್ತೋತ್ರಗಳನ್ನು ಪಠಿಸಿ ಮಂತ್ರ ಘೋಷಗಳನ್ನು ಮಾಡಿ ದೇವರನ್ನು ಕುರಿತು ತಪವಗೈದ ಭಕ್ತನ ಹೊಗಳಿಕೆಗೆ ಪ್ರಸನ್ನನಾಗಿ ದೇವರು ಪ್ರತ್ಯಕ್ಷ ಎದುರು ಬಂದು ಕೇಳಿದ ವರಗಳ ಮಳೆಗರೆಯುವುದು ಪುರಾಣ ಪುಣ್ಯ ಕಥೆಗಳಲ್ಲಿ ಅಷ್ಟೇ. ನಿಜ ಜೀವನದಲ್ಲಲ್ಲ. ಮಾತಿನ ಮಾಲೆ ಕಟ್ಟುವುದಕ್ಕೆ ಇಂದಿನ ಆಧುನಿಕ ಆಡುಭಾಷೆಯಲ್ಲಿ ರೈಲು ಬಿಡುವುದು ಎಂದು ವ್ಯಂಗ್ಯ ಮಾಡುತ್ತಾರೆ. ಅರ್ಥವಿಲ್ಲದೆ ಬರೀ ಮಾತಾಡುವವರನ್ನು ಮಾತಿನ ಮಹಂತರು ಎಂದು ಅಲ್ಲಮನು ಟೀಕೆ ಮಾಡಿದ ವಚನವಿದೆ. ಕಾಬಡೆ, ಸಿಲುಕವಡೆ, ನಡೆವಡೆ, ನುಡಿವಡೆ, ನಿಂದಿಸಿದಡೆ ಎಂಬ ಪದಮಾಲೆಯಿರುವ ಈ ವಚನದಲ್ಲಿ “ಮಾತಿನ ಮಾಲೆ” ಅನನ್ಯವಾದ ಪದಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಂಗಳ ಕರುಳ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

ಕೃಷಿರಂಗ | ಬರ ಪೀಡಿತ ಜಿಲ್ಲೆಗಳಿಗೆ ವರದಾನ- ಸಮಗ್ರ ಕೃಷಿ

ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ...