ಅಲ್ಲಮನ ಅನನ್ಯ ಪದಪ್ರಯೋಗಗಳು | ನಂದಿನಾಥ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಂದಿನಾಥ
ಅರಿವಿನ ಕುರುಹದೇನೋ,
ಒಳಗೆ ಅನಿಮಿಷ ನಂದಿನಾಥನಿರಲು?
ಪೂಜಿಸುವ ಭಕ್ತನಾರೊ?
ಪೂಜೆಗೊಂಬ ದೇವನಾರೊ?
ಮುಂದು ಹಿಂದು,
ಹಿಂದು ಮುಂದಾದರೆ,
ಗುಹೇಶ್ವರಾ, ನೀನು ನಾನು,
ನಾನು ನೀನಾದಡೆ?

- Advertisement -

ವಚನಾರ್ಥ:
ನಾನು ಅಂದರೆ ಭಕ್ತ. ನೀನು ಅಂದರೆ ದೇವರು. ಮುಂದು ಎಂದರೆ ಎದುರುಗಡೆ ಪೂಜೆಗೊಳ್ಳುವ ದೇವರು. ಹಿಂದು ಎಂದರೆ ಪೂಜೆ ಮಾಡುವ ಭಕ್ತ. ಸಾಂಪ್ರದಾಯಿಕ ಪೂಜೆಯಲ್ಲಿ ದೇವರ ಎದುರು ಭಕ್ತನಿರುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಈ ವಚನದಲ್ಲಿರುವ ಪ್ರಶ್ನೆ ಏನೆಂದರೆ ಭಕ್ತ ಎದುರು ಬಂದು ಮುಂದೆ ನಿಂತು ದೇವರು ಹಿಂದೆ ಇದ್ದಂತಹ ಸನ್ನಿವೇಶದಲ್ಲಿ ಏನಾಗುತ್ತದೆ ಎಂದು. ಮುಂದು ಹಿಂದಾಗದೆ ಹಿಂದು ಮುಂದಾದರೆ ಏನಾಗುತ್ತದೆ? ಅಲ್ಲಮನು ಗುಹೇಶ್ವರನಿಗೆ ಕೇಳುವ ಪ್ರಶ್ನೆ.  ಗುಹೇಶ್ವರಾ, ನೀನು ನಾನು, ನಾನು ನೀನಾದಡೆ? ಆಗ ಪೂಜಿಸುವ ಭಕ್ತನಾರೊ, ಪೂಜೆಗೊಳ್ಳುವ ದೇವನಾರೊ ಎಂದು ತಿಳಿಯಲಾರದ ಸ್ಥಿತಿ ಸೃಷ್ಟಿಯಾಗುತ್ತದೆ.

ಗುಹೇಶ್ವರನನ್ನು ಪೂಜಿಸುವ ಭಕ್ತ ಅಲ್ಲಮನೇ? ಅಥವಾ ಪೂಜಿಸಿಕೊಳ್ಳುವ ದೇವ ಗುಹೇಶ್ವರನೇ? ಶರಣನು ತನ್ನ ಅರಿವಿನಲ್ಲಿ ಬೆರೆತು ತನ್ನೊಳಗೆ ತಾನೇ ಅನಿಮಿಷ ನಂದಿನಾಥನಾದಾಗ ಅಲ್ಲಿ ಏಕೋಭಾವ ಉಂಟಾಗಿ ಪೂಜಕ ಮತ್ತು ಪೂಜ್ಯ ಎಂಬ ದ್ವಂದ್ವ ಭಾವಗಳು ಅಳಿಯುತ್ತವೆ. ನಾನು ಪೂಜಿಸುವವ, ನೀನು ಪೂಜ್ಯ ಎಂಬ ಎರಡು ಸಂಪೂರ್ಣ ಬೆರೆದು ಒಂದಾಗುತ್ತವೆ. ಇದು ಭಕ್ತನು ಶರಣನಾಗುವ ಪಥದಲ್ಲಿ ಪ್ರಾಣಲಿಂಗಿ ಎಂಬ ಸ್ಥಳದ ಮೈಲುಗಲ್ಲು.

ಪದ ಪ್ರಯೋಗಾರ್ಥ:
ನಮಗೆ ಮಂಜುನಾಥ ಅಂತ ಗೊತ್ತು. ವೃಷಭನಾಥ ಅಂತ ಗೊತ್ತು. ಆದರೆ ನಂದಿನಾಥ ಎಂಬುದು ಬಹಳ ವಿರಳವಾಗಿರುವ ಹೆಸರು. ಮೈಸೂರು ಜಿಲ್ಲೆಯಲ್ಲಿ ನಂದಿನಾಥಪುರ ಎಂಬ ಸ್ಥಳವಿದೆ ಎನ್ನುವುದನ್ನು ಬಿಟ್ಟರೆ ನಂದಿನಾಥ ಎಂಬ ಹೆಸರಿನ ವ್ಯಕ್ತಿಗಳಿರುವುದು ವಿರಳ. ಹಾಗಾಗಿ ನಂದಿನಾಥ ಈ ವಚನದಲ್ಲಿ ಪ್ರಯೋಗವಾಗಿರುವ ವಿರಳವಾದ ಅನನ್ಯ ಪದ. ನಂದಿನಾಥ ಎಂದರೆ ನಂದಿವಾಹನನಾದವನು. ಶಿವ. ಆ ನಂದಿಗೆ ಒಡೆಯನಾದವನು. ಆನಂದಿ ಎಂದರೆ ಸದಾ ಕಾಲ ಆನಂದವಾಗಿರುವವನು. ಸಚ್ಚಿದಾನಂದ ಸ್ವರೂಪಿ. ಶಿವಶಕ್ತಿಯ ಅಗಾಧವಾದ ಭಾರನನ್ನು ಹೊತ್ತು ಆನಂದದಿಂದ ಸಂಚರಿಸುವ ನಂದಿ ಸದಾ ಆನಂದಿ.

“ನಂದಿ ನಾನು, ಆನಂದಿ ನಾನು, ಆ ವೃಷಭ ಧ್ವಜ ಎತ್ತು, ಬಂದೆ ನಾ ಶಿವಶಕ್ತಿಯ ಹೊತ್ತು, ಈ ಹೊತ್ತು” ಎಂದು ಬೇಂದ್ರೆ ನಂದಿಯನ್ನು ವಂದಿಸಿದ್ದಾರೆ. ಅಲ್ಲಮನ ಅಂತರಂಗದ ಗುಹೆಯೊಳಗೆ ಅನಿಮಿಷಯ್ಯನಿದ್ದಾನೆ. ಅವನು ಶಿವಸ್ವರೂಪಿ. ನಂದಿವಾಹನನಾದ ನಂದಿನಾಥ.

ಅಲ್ಲಮನ ಇದೇ ಒಂದು ವಚನದಲ್ಲಿ ಮಾತ್ರ ಬಳಕೆಯಾಗಿರುವ “ನಂದಿನಾಥ” ಕನ್ನಡದ ಅನನ್ಯವಾದ ಪದ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಂಗಳ ಕರುಳ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

ಕೃಷಿರಂಗ | ಬರ ಪೀಡಿತ ಜಿಲ್ಲೆಗಳಿಗೆ ವರದಾನ- ಸಮಗ್ರ ಕೃಷಿ

ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ...