ಅಲ್ಲಮನ ಅನನ್ಯ ಪದಪ್ರಯೋಗಗಳು | ಸುಮನ ಸುಜ್ಞಾನ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸುಮನ ಸುಜ್ಞಾನ
ಗ್ರಾಮ ಮಧ್ಯದ ಮೇಲಣ ಮಾಮರ
ಸೋಮಸೂರ್ಯರ ನುಂಗಿತ್ತಲ್ಲಾ!
ಅಮರಗಣಂಗಳ ನೇಮದ ಮಂತ್ರ
ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ!
ಸುಮನ ಸುಜ್ಞಾನದಲಾಡುವ ಮಹಾಮಹಿಮಂಗೆ
ನಿರ್ಮಳವಾಯಿತ್ತು ಗುಹೇಶ್ವರಾ!

- Advertisement -

ಪದಾರ್ಥ:
ಗ್ರಾಮ = ಪುರ, ದೇಹ
ಗ್ರಾಮಮಧ್ಯ = ದೇಹಾಂತರಂಗ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ವಚನಾರ್ಥ:
ಆಧ್ಯಾತ್ಮಿಕ ಚಿಂತನೆಯಲ್ಲಿ ಮನುಷ್ಯ ದೇಹವನ್ನು ಪುರ ಎಂಬ ಅರ್ಥದಲ್ಲಿ ಗುರುತಿಸಿದ ಸಂದರ್ಭವಿದೆ. ಪುರ ಅಂದರೆ ಊರು, ಹಳ್ಳಿ, ಗ್ರಾಮ. ಈ ವಚನದಲ್ಲಿ ಗ್ರಾಮ ಎಂಬ ಪದವನ್ನು ಪುರ ಎಂಬ ಪದಕ್ಕೆ ಸಮಾನಾರ್ಥವಾಗಿ ಬಳಸಿ ಅದನ್ನು ಮನುಷ್ಯ ದೇಹಕ್ಕೆ ಸಮೀಕರಿಸಿ ಮನುಷ್ಯನ ಮನಸ್ಸನ್ನು ಗ್ರಾಮದ ಮಧ್ಯದ ಮಾವಿನ ಮರಕ್ಕೆ ಹೋಲಿಸಲಾಗಿದೆ. ತನ್ನ ದೇಹದ ಅಂತರಂಗದಲ್ಲಿ ಶರಣನು ಒಳಕ್ಕಿಳಿದಾಗ ಅವನಿಗೆ ದೊರೆವುದು ಲಿಂಗಾಂಗ ಸಾಮರಸ್ಯ. ಅಲ್ಲಿ ಸೂರ್ಯ ಚಂದ್ರರ ಹಂಗಿಲ್ಲ. ಹಗಲು ರಾತ್ರಿಗಳ ಹವಣಿಕೆಯಿಲ್ಲ. ಎಲ್ಲವೂ ಪ್ರಶಾಂತ.

ಆ ಪ್ರಶಾಂತತೆಯಲ್ಲಿ ಶರಣನ ಅನುಭವಕ್ಕೆ ಬರುವುದು ಓಂಕಾರ ಮಂತ್ರ ಮಾತ್ರ. ಅದು ದಾಸರು ಹಾಡಿದ ಹಾಗೆ ಧರ್ಮವೇ ಜಯವೆಂಬ ದಿವ್ಯ ಮಂತ್ರ. ಅದು ಅಮರಗಣಂಗಳ ನೇಮದ ಮಂತ್ರವಾಗಿ ಬ್ರಹ್ಮಾಂಡಕೋಟಿಯ ಮೀರಿರುತ್ತದೆ. ಅಂತಹ ಶರಣನ ಮನಸ್ಸು ಸುಮನ. ಪ್ರಶಾಂತ ಮನ. ಅವನ ಜ್ಞಾನ ಸುಜ್ಞಾನ, ದಿವ್ಯ ಜ್ಞಾನ. ಸುಮನ ಸುಜ್ಞಾನದಲಾಡುವ ಮಹಾಮಹಿಮನವ. ಅವನು ನಿರ್ಮಲ, ನಿಷ್ಕಲಂಕ, ನಿಶ್ಚಿಂತ.

ಪದ ಪ್ರಯೋಗಾರ್ಥ:
ಗ್ರಾಮ ಮಧ್ಯದ ಮೇಲಣ ಮಾಮರ ಮತ್ತು ಸುಮನ ಸುಜ್ಞಾನ ಇವು ಈ ವಚನದಲ್ಲಿ ಮೂಡಿಬಂದಿರುವ ಅನನ್ಯ ಪದ ಪ್ರಯೋಗಗಳು. ನಮ್ಮ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಇಂದಿಗೂ ಕಂಡು ಬರುವ ಸಾಮಾನ್ಯ ದೃಶ್ಯ. ಗ್ರಾಮದ ಮಧ್ಯದಲ್ಲಿ ಒಂದು ಮರ. ಅರಳಿಯೋ, ಆಲವೋ, ಮಾವಿನ ಮರವೋ ಆಗಿರಬಹುದು. ಮರದ ಬುಡದಲ್ಲಿ ಸುತ್ತ ಕಟ್ಟಿದ ಕಟ್ಟೆ. ಅಲ್ಲಿ ಕಟ್ಟೆಯ ಮೇಲೆ ಕುಳಿತ ಊರಿನ ಜನ. ಅಂತಹ ಸಾಮಾನ್ಯ ಸಂಗತಿಯನ್ನು ದೇಹ ಮತ್ತು ದೇಹದೊಳಗಿನ ಅಂತರಂಗಕ್ಕೆ ಸಮೀಕರಿಸಿ ಗ್ರಾಮ ಮಧ್ಯದ ಮೇಲಣ ಮಾಮರ ಎಂಬ ದೃಶ್ಯವನ್ನು ವಚನದಲ್ಲಿ ತಂದಿರುವುದು ವಿಸ್ಮಯಗೊಳಿಸುತ್ತದೆ. ಹಾಗೆಯೇ ಮುಂದುವರಿದು ಶರಣ ವ್ಯಕ್ತಿತ್ವದ ಘನತೆಯನ್ನು ಪ್ರತಿಪಾದಿಸಲು ಬಳಸಿರುವ ಪದ ಸುಮನ ಸುಜ್ಞಾನ. ಶರಣನ ಮನಸ್ಸು ಎಂತದು? ಸು ಮನ. ಸುಮದಂತ ಮನಸ್ಸು. ಹೂವಿನ ಮನಸ್ಸು. ಶರಣನ ಮನಸ್ಸಿನಲ್ಲಿ ಕೋಮಲತೆಯಿದೆ. ಅದು ನಿರ್ಮಲವಾಗಿದೆ. ಅಲ್ಲಿ ಜ್ಞಾನವೆಂಬ ಪರಿಮಳ ಸೂಸುತ್ತಿದೆ. ಶರಣನ ಸುಮನದಲ್ಲಿ ಸುಜ್ಞಾನವಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....