ಅಲ್ಲಮನ ಅನನ್ಯ ಪದಪ್ರಯೋಗಗಳು | ಸುಪ್ಪಾಣಿ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸುಪ್ಪಾಣಿ
ಹೊಸ ಮುತ್ತಿನ ಸುಪ್ಪಾಣಿಯಂತೆ
ಲಿಂಗೈಕ್ಯವು.
ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು.
ವಾಯುವಿನ ಸಂಚದ ಪರಿಮಳದ ನಿಲವಿನಂತೆ
ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.

- Advertisement -

ವಚನಾರ್ಥ:
ಶರಣ ಜೀವನ ಮಾರ್ಗದ ಆರು ಸೋಪಾನಗಳಾದ ಭಕ್ತಸ್ಥಲ, ಮಾಹೇಶ್ವರ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿ ಸ್ಥಲ, ಶರಣ ಸ್ಥಲ ಮತ್ತು ಐಕ್ಯ ಸ್ಥಲಗಳಲ್ಲಿ ಅಂತಿಮವಾಗಿ ಐಕ್ಯಸ್ಥಲದಲ್ಲಿ ನಿಂತು ಅಲ್ಲಮನು ಅವಲೋಕಿಸಿ ಬರೆದ ವಚನವಿದು. ಈ ವಚನದಲ್ಲಿ ಐಕ್ಯಸ್ಥಲದ ವ್ಯಾಖ್ಯಾನವಿದೆ. ಐಕ್ಯಸ್ಥಲದಲ್ಲಿ ನೆಲೆ ನಿಂತ ಶರಣನು ಅಂಗ ಲಿಂಗ ಸಂಬಂಧದಲ್ಲಿ ಲಿಂಗದಲ್ಲಿ ಐಕ್ಯನಾಗಿ ಒಂದಾಗುವಲ್ಲಿ ಉಂಟಾಗುವ ಪರಿಣಾಮವನ್ನು ಮೂರು ಉದಾಹರಣೆಗಳಲ್ಲಿ ಈ ವಚನ ತೆರೆದಿಡುತ್ತದೆ. ಹೊಚ್ಚ ಹೊಸ ಮುತ್ತು ಮತ್ತು ಅದರ ಹೊಳಪು, ಸ್ಫಟಿಕದ ತುದಿಯಿಂದ ಹೊಮ್ಮುವ ಪ್ರಭೆ, ಗಾಳಿ ಬೀಸುವಾಗ ಅದರೊಳಗೆ ಬೆರೆತು ಬರುವ ಪರಿಮಳ. ಈ ಮೂರೂ ಉದಾಹರಣೆಗಳಲ್ಲಿ ಕಂಡುಬರುವುದು ಅನ್ಯೋನ್ಯತೆ, ಬಿಡಿಸಲಾಗದ ಬೆಸುಗೆ, ಬೇರ್ಪಡಿಸಲಾಗದ ಬಂಧ. ಲಿಂಗೈಕ್ಯನಾಗುವ ಸ್ಥಿತಿಯಲ್ಲಿ ಲಿಂಗವು ಮುತ್ತಾದರೆ ಶರಣನು ಅದರ ಹೊಳಪು. ಅಂತಹ ಅನ್ಯೋನ್ಯತೆ. ಲಿಂಗವು ಸ್ಫಟಿಕದ ಘಟವಾದರೆ ಶರಣನು ಅದರ ಪ್ರಭೆ. ಬಿಡಿಸಲಾಗದ ಬೆಸುಗೆ. ಲಿಂಗವು ವಾಯುವಾದರೆ ಶರಣನು ಅದರೊಳಗಣ ಪರಿಮಳ. ಬೇರ್ಪಡಿಸಲಾಗದ ಬಂಧ. ಇದು ಲಿಂಗ ಮತ್ತು ಐಕ್ಯ ಸಂಬಂಧದ ಪರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಪದ ಪ್ರಯೋಗಾರ್ಥ:
ನುಣುಪಾದ, ಹೊಳೆಯುವ ಮತ್ತು ದೋಷವಿಲ್ಲದ ಮುತ್ತನ್ನು ಸುಪಾಣಿ ಅಥವಾ ಸುಪ್ಪಾಣಿ ಎಂದು ಕರೆಯಲಾಗುತ್ತದೆ. ಮುತ್ತು ಸಾಮಾನ್ಯವಾಗಿ ಶಂಖದ ಒಳಗೆ ರಚನೆ ಆಗುತ್ತದೆ. ನೈಸರ್ಗಿಕ ಮುತ್ತು ರೂಪುಗೊಳ್ಳಲು ಸಾಮಾನ್ಯವಾಗಿ 2–5 ವರ್ಷಗಳು ಬೇಕಾಗಬಹುದು. ಇಂದಿನ ದಿನಗಳಲ್ಲಿ ಸಿಗುವ ಮುತ್ತುಗಳು ಸಂಸ್ಕರಿಸಿದಂತವು. ಮಾನವ ನಿರ್ಮಿತ.  ಉದ್ದೇಶಪೂರ್ವಕವಾಗಿ ಕಣವನ್ನು ಶಂಖದೊಳಗೆ ಇಟ್ಟು ಬೆಳೆಸಿದವು. ಹೊಸ ಮುತ್ತಿನ ಸುಪ್ಪಾಣಿ ಎಂದು ಅಲ್ಲಮ ಬಳಸಿರುವ ಪದ ಆ ಕಾಲದ ನೈಸರ್ಗಿಕ ಮುತ್ತನ್ನು ಕುರಿತಾದದ್ದು. ನಾಲ್ಕೈದು ವರ್ಷ ದೀರ್ಘಾವಧಿಯಲ್ಲಿ ಅರಳಿದ ಹೊಸ ಮುತ್ತಿನ ಹೊಳಪನ್ನು ಲಿಂಗೈಕ್ಯ ಸ್ಥಿತಿಗೆ ಹೋಲಿಸಿ ಸುಪ್ಪಾಣಿ ಎಂಬ ಪದಪ್ರಯೋಗ ಮಾಡಿರುವುದು ಅನನ್ಯವಾಗಿದೆ. ಹೊಸ ಮುತ್ತಿಗೂ ಸುಪ್ಪಾಣಿಗೂ ಇರುವ ಅನ್ಯೋನ್ಯ ಸಂಬಂಧದಂತೆ ಲಿಂಗೈಕ್ಯ. ಶಂಖದ ಒಳಗೆ ನೀರಿನ ಬಿಂದುವೊಂದರಿಂದ ಮುತ್ತು ಆದ ನಂತರ ಆ ಮುತ್ತು ಮತ್ತೆ ನೀರಾಗುವ ಸಾಧ್ಯತೆಯೇ ಇರುವುದಿಲ್ಲ. ಅದರಂತೆ ಲಿಂಗೈಕ್ಯನಾದ ಶರಣ ಮತ್ತೆ ಹೊರಳಿ ಬರಲಾರ. ಹೊಸ ಮುತ್ತಿನ “ಸುಪ್ಪಾಣಿ” ಅಲ್ಲಮನ ಅನನ್ಯ ಪದಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ಡೊರೊಥಿ- ಸ್ವೀಕಾರದಾಚೆಗೆ, ಒಳಗೊಳ್ಳುವಿಕೆಯ ಕಡೆಗೆ…

ಇದೊಂದು ಪರಿಪೂರ್ಣ ಸಿನಿಮಾ ಅಲ್ಲ. ಕೆಲವು ತಿರುವುಗಳು ಸರಳವಾಗಿವೆ. ಕೆಲವು ಪಾತ್ರಗಳು...

ಅಲ್ಲಮನ ಅನನ್ಯ ಪದಪ್ರಯೋಗಗಳು | ತಂದೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಅವಳ ಕಣ್ಣೋಟ | ಲಿಪ್‌ಸ್ಟಿಕ್‌ನ ಬಣ್ಣದ ಕೆಳಗೆ ಹುದುಗಿದ ಕನಸುಗಳು

ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ...

ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…

ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವುದಕ್ಕಿಂತಲೂ...