ವಚನ ಕಲ್ಯಾಣ | ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?

Date:

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯಾ.

- Advertisement -

ಬಸವಣ್ಣನವರ ಸಮಕಾಲೀನ ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಅಮರೇಶ್ವರ ಗ್ರಾಮದವರು ಎಂಬುದು ಸಂಶೋಧಕರಿಂದ ತಿಳಿದುಬರುತ್ತದೆ. ಆಯ್ದಕ್ಕಿ ಲಕ್ಕಮ್ಮಳು ವಚನಕಾರ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿ. ಶಿವಶರಣರ ಅಂಗಳದಲ್ಲಿ ಚೆಲ್ಲಿದ ಅಕ್ಕಿಯನ್ನು ಆಯ್ದು ತಂದು ದಾಸೋಹ ಸೇವೆ ಮಾಡುವುದು ದಂಪತಿಯ ಶ್ರೇಷ್ಠ ಕಾಯಕವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬದುಕಿನಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದರ ಜತೆಗೆ ದಾಸೋಹ ಸೇವೆಗೈಯುತ್ತ ಶರಣ ಸಂಕುಲದ ಮನ ಗೆದ್ದವರು. ಸಮ ಸಮಾಜದ ಪರಿಕಲ್ಪನೆಯ ಚಳವಳಿ ನಡೆಯುತ್ತಿರುವ ವಿಚಾರ ಕೇಳಿ ಕಲ್ಯಾಣಕ್ಕೆ ಬಂದ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ದಂಪತಿ ಕಾಯಕ, ದಾಸೋಹ ಸೇವೆಯ ತತ್ವಕ್ಕೆ ಹೆಸರಾದವರು, ಅಲ್ಲದೆ ಶ್ರೇಷ್ಠ ವಚನಕಾರರಾಗಿಯೂ ಕಾಣಿಸುತ್ತಾರೆ.

“ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ, ಮಾಡುವುದೇನು? ನೀಡುವುದೇನು ? ಮನೆ ಧನ ಸಕಲಸಂಪದಸೌಖ್ಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು, ಎನ್ನೊಡಲ ಹೊರೆವೆನಾಗಿ, ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ”

ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ. ಒಂದು ಆಸೆ ಈಡೇರಿದ ಬಳಿಕ ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತದೆ. ಎಲ್ಲವೂ ತನಗೆ ಬೇಕು-ಬೇಕು ಎಂಬ ಹಪಾಹಪಿಯಲ್ಲಿ ತನ್ನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಬದುಕಿನಲ್ಲಿ ಆಸೆ ಇರಬೇಕು; ಆದರೆ ಅತಿಯಾದ ಆಸೆ ಇರಬಾರದು. ಈ ಹಿಂದೆಯೇ ʼಆಸೆಯೇ ದುಃಖಕ್ಕೆ ಮೂಲ ಕಾರಣʼ ಎಂಬ ಭಗವಾನ್ ಬುದ್ಧರ ಮಾತು ವಚನಕಾರರು ಮತ್ತೊಮ್ಮೆ ಸ್ಮರಿಸುತ್ತಾರೆ.

ಮನುಷ್ಯನು ಈ ಲೋಕಕ್ಕೆ ಬರಿಗೈಯಲ್ಲಿ ಬರುತ್ತಾನೆ; ಇಲ್ಲಿಂದ ಮರಳುವಾಗಲೂ ಏನನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ. ಈ ಸತ್ಯ ತಿಳಿದಿದ್ದರೂ, ಜೀವನದುದ್ದಕ್ಕೂ ‘ಇದು ಬೇಕು, ಅದು ಬೇಕು, ಇದು ಇಲ್ಲ, ಅದು ಇಲ್ಲ’ ಎಂದು ಕೊರಗುತ್ತಲೇ ಅನೇಕರು ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ವಚನಕಾರರು ಮನಮುಟ್ಟುವಂತೆ ತಿಳಿಸಿದ್ದಾರೆ.

ಆಯ್ದಕ್ಕಿ ಮಾರಯ್ಯನವರ ಬದುಕು ಇದಕ್ಕೆ ವಿರುದ್ಧವಾದ ದಾರಿ ತೋರಿಸುತ್ತದೆ. ಮನೆ, ಧನ, ಸಂಪತ್ತು ಇಲ್ಲವೆಂದು ಅವರು ಕೊರಗಲಿಲ್ಲ. ಸಜ್ಜನ ಶರಣರ ಸಂಗ, ನಿಷ್ಠೆಯ ಕಾಯಕ ಮತ್ತು ದಾಸೋಹದ ಮೂಲಕ ಬದುಕಿನ ಸಾರ್ಥಕತೆ ಕಂಡುಕೊಂಡವರು. ಕೆಲಸದಲ್ಲಿ ಪ್ರಾಮಾಣಿಕತೆ, ಸಂತೃಪ್ತಿ ಮತ್ತು ಸಮಾಜದ ಬಗ್ಗೆ ಕಾಳಜಿ ಇದ್ದಾಗ ಜೀವನಕ್ಕೆ ನಿಜವಾದ ಅರ್ಥ ದೊರೆಯುತ್ತದೆ ಎಂದು ತೋರಿಸಿಕೊಟ್ಟರು. ನನಗೆ ಮನೆ, ಮಠದ ಅಗತ್ಯವಿಲ್ಲ. ಎಲ್ಲ ಸಂಪತ್ತು ಇರುವ ಶರಣರ ಮನೆಯಂಗಳದಲ್ಲಿ ಅಕ್ಕಿ ಆಯ್ದು ತಂದು ಹೊಟ್ಟೆ ತುಂಬಿಸಿಕೊಳ್ಳುವೆ. ಅಷ್ಟೇ ಅಲ್ಲದೆ ದೇವರಿಗೆ ಧನ-ಧಾನ್ಯ ಅರ್ಪಿಸುವ ಬಯಕೆಯೂ ನನಗಿಲ್ಲ ಎನ್ನುವ ಮಾರಯ್ಯ ಕಾಯಕಕ್ಕೆ ಪ್ರಥಮಾದ್ಯತೆ ನೀಡಿರುವುದು ಕಾಣಬಹುದು.

ಮನುಷ್ಯನ ದುರಾಸೆ ಎಷ್ಟಿದೆ ಎಂದರೆ ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖ ಪಡುತ್ತಾನೆ. ಆಸ್ತಿ, ಅಂತಸ್ತು, ಸಂಪತ್ತು, ಅಧಿಕಾರ ಸೇರಿದಂತೆ ಸಕಲ ಐಶ್ವರ್ಯ ತನಗೆ ದಕ್ಕಬೇಕೆಂಬ ಹಪಾಹಪಿಯಲ್ಲಿ ಬದುಕಿನ ನೆಮ್ಮದಿಯನ್ನು ಕಳೆದುಕೊಂಡು ಮಾನವೀಯತೆ ಮರೆಯುತ್ತಿದ್ದಾನೆ. “ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು” ಎಂಬ ಲಕ್ಕಮ್ಮಳ ವಚನ ಸಾಲು ಕಾಯಕ ನಿಷ್ಠೆ ಎತ್ತಿ ಹಿಡಿಯುತ್ತದೆ. ಜಮೀನ್ದಾರರು, ಬಂಡವಾಳಶಾಹಿಗಳಿಗೆ, ಅಧಿಕಾರಸ್ಥರಿಗೆ ಅಧಿಕ ಸಂಪತ್ತಿನ ಆಸೆಯಿರುತ್ತದೆ. ಅವರು ಕಾಯಕಜೀವಿಗಳನ್ನು ಶೋಷಣೆ ಮಾಡಿಯೇ ತಮ್ಮ ಸಂಪತ್ತಿನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಾರೆ. ಅದರಿಂದ ಕಾಯಕ ಜೀವಿಗಳ ಬದುಕು ದುರ್ಬರವಾಗುತ್ತದೆ.

ಲಕ್ಕಮ್ಮಳ ಗಂಡ ಮಾರಯ್ಯ ಅಗತ್ಯಕ್ಕಿಂತ ಹೆಚ್ಚು ಅಕ್ಕಿಯನ್ನು ಆಯ್ದು ತಂದ ಕಾರಣಕ್ಕೆ ಪ್ರಶ್ನಿಸಿ ಆಸೆಯ ಹಂಗು ತೊರೆಯುತ್ತಾಳೆ. ಅತಿಯಾದ ಆಸೆ ಮತ್ತು ಸಂಪತ್ತಿನ ಹಂಬಲ ಶರಣರ ಬದುಕಿನ ಮಾರ್ಗವಲ್ಲ. ಆಸೆಯೆಂಬುದು ರಾಜ ಮಹಾರಾಜರ ಸೊತ್ತು, ಶಿವಭಕ್ತರಿಗೆ ಅದರ ಹಂಗು ಇರಬಾರದು ಎಂದು ಕೋಪದಿಂದ ಹೇಳುವ ಲಕ್ಕಮ್ಮ, ಇಷ್ಟೊಂದು ಅಕ್ಕಿ ಯಾಕೆ ಬೇಕು? ಇದು ದೇವರಿಗೆ ಸಲ್ಲದು. ಅಲ್ಲಿಯೇ ಸುರಿದು ಬನ್ನಿ ಎಂದು ಗಂಡನಿಗೆ ಎಚ್ಚರಿಸುತ್ತಾಳೆ. ಶರಣರು ಸಂಪತ್ತು ಸಂಗ್ರಹ ಸಿದ್ದಾಂತವನ್ನು ವಿರೋಧಿಸಿದರು ಎಂಬುದುಕ್ಕೆ ಲಕ್ಕಮ್ಮಳ ವಚನವೇ ಸಾಕ್ಕಿಯಾಗಿದೆ.

ಆಯ್ದಕ್ಕಿ ಮಾರಯ್ಯ ಬರೆದಿರುವ 32 ವಚನ ಹಾಗೂ ಆಯ್ದಕ್ಕಿ ಲಕ್ಕಮ್ಮ ರಚಿಸಿರುವ 25 ವಚನಗಳಲ್ಲಿ ಬಹುತೇಕ ಕಾಯಕ, ಭಕ್ತಿ ಹಾಗೂ ದಾಸೋಹ ಕುರಿತಾಗಿ ಇವೆ. ʼಕಾಯಕವೇ ಕೈಲಾಸʼ ಎಂಬ ಪ್ರಸಿದ್ಧ ವಚನ ಸಾಲು ಆಯ್ದಕ್ಕಿ ಮಾರಯ್ಯನವರ ವಚನಗಳಲ್ಲಿ ಸಿಗುತ್ತದೆ. ಇನ್ನೊಂದು ವಿಶೇಷವೆಂದರೆ ಗುರುದರ್ಶನಕ್ಕಿಂತ ಕಾಯಕ್ಕೆ ಹೆಚ್ಚು ಆದ್ಯತೆ ನೀಡಿರುವುದು ಈ ಇಬ್ಬರು ವಚನಕಾರರಲ್ಲಿ ಕಾಣುತ್ತೇವೆ.

“ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು; ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ” ಎಂದು ನಿಷ್ಠೆಯ ಭಕ್ತಿ ಬಗ್ಗೆ ಹೇಳುವ ಲಕ್ಕಮ್ಮ “ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ. ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ, ಬೇಗ ಹೋಗು ಮಾರಯ್ಯಾ” ಎಂದು ಗಂಡ ಮಾರಯ್ಯನಿಗೆ ಸೂಚಿಸುತ್ತಾಳೆ. ʼದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ ಕೈಲಾಸವೆಂಬ ಆಸೆ ಬೇಡ” ಎಂದು ಲಕ್ಕಮ್ಮ ಕೈಲಾಸಕ್ಕಿಂತ ಶರಣ ಸಂಕುಲಕ್ಕೆ ದಾಸೋಹ ಸೇವೆಯೇ ಶ್ರೇಷ್ಠ ಎಂಬ ತತ್ವ ವಿವರಿಸುತ್ತಾಳೆ.

ʼಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗುʼ ಎಂದು ಹೇಳುವ ಮಾರಯ್ಯ ಗುರುದರ್ಶನಗಿಂತ ಕಾಯಕವೇ ಮೇಲು, ಕೆಲಸದಲ್ಲಿ ನಿರತರಾದವರು ಗುರುದರ್ಶನ, ಲಿಂಗ ಪೂಜೆಯೂ ಮರೆಯಬೇಕು. ಕೈಲಾಸ ಎಂಬುವುದು ಬೇರೆಯಿಲ್ಲ, ಅದು ಕಾಯಕದೊಳಗೆ ಕಾಣುವಂತಾಗು ಎಂದು ಒತ್ತಿ ಹೇಳುತ್ತಾರೆ ಶರಣ ಮಾರಯ್ಯ.

ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಅವರ ಬದುಕು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾದ ಸಂದೇಶವನ್ನು ನೀಡುತ್ತದೆ. ಅತಿಯಾದ ಆಸೆ ಮನುಷ್ಯನನ್ನು ತಪ್ಪು ದಾರಿಗೆ ಕೊಂಡೊಯ್ಯಬಹುದು. ದುರಾಸೆಯಿಂದ ಅನೇಕರು ಕಾನೂನುಬಾಹಿರ ಚಟುವಟಿಕೆಗಳಿಗೆ ಇಳಿಯುತ್ತಾರೆ; ದ್ವೇಷ, ಅಸೂಯೆ ಮತ್ತು ಸಂಘರ್ಷಗಳಿಗೆ ಕಾರಣವಾಗುತ್ತಾರೆ.

ಈಚೆಗೆ ಆಸ್ತಿ, ಅಧಿಕಾರಕ್ಕಾಗಿ ಸಂಬಂಧ ಕಳೆದುಕೊಳ್ಳುವುದು ಅಷ್ಟೇ ಅಲ್ಲದೆ ಕ್ರೌರ್ಯ ಘಟನೆಗಳು ನಡೆಯುತ್ತಿರುವುದು ನಿತ್ಯದ ಬದುಕಿನಲ್ಲಿ ಕಾಣುತ್ತಿದ್ದೇವೆ. ಬದುಕಿಗಾಗಿ ಹಣ ಬೇಕು; ಆದರೆ ಹಣ ಗಳಿಸುವುದಕ್ಕಾಗಿಯೇ ಬದುಕಬಾರದು. ಹಣ ಮತ್ತು ಆಸ್ತಿ ನಮ್ಮ ಬದುಕಿನ ಸಾಧನಗಳಾಗಬೇಕೇ ಹೊರತು, ಬದುಕಿನ ಗುರಿಯಾಗಬಾರದು. ಬದುಕೇ ನಮ್ಮ ನಿಜವಾದ ಆಸ್ತಿ ಎಂಬ ಅರಿವಿನಿಂದ ಸೌಹಾರ್ದತೆ, ತೃಪ್ತಿ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ಜೀವನ ನಡೆಸಬೇಕು.

WhatsApp Image 2026 08 14 at 11.58.13 AM 2
ಜಾಹೀರಾತು

ಇದನ್ನೂ ಓದಿ : ವಚನ ಕಲ್ಯಾಣ | ಈ ವಿಕಾರದ ಹಿಂಡ ಬಿಡಿಸಿ, ನಿಜ ನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು!

ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ಅವರ ಕಾಯಕನಿಷ್ಠೆಯ ಬದುಕು ನಮಗೆ ಇದೇ ಪಾಠ ಕಲಿಸುತ್ತದೆ. ದುರಾಸೆಯನ್ನು ತೊರೆದು, ಪ್ರಾಮಾಣಿಕ ಕಾಯಕವನ್ನು ಗೌರವಿಸಿ, ಇದ್ದುದರಲ್ಲಿ ತೃಪ್ತಿ ಕಂಡುಕೊಂಡು, ಗಳಿಸಿದ್ದರಲ್ಲಿ ಅಗತ್ಯವಿರುವವರಿಗೆ ಹಂಚುತ್ತಾ, ದಾಸೋಹ ಮನೋಭಾವದಿಂದ ಬದುಕಿದಾಗ ಮಾತ್ರ ನಿಜವಾದ ಕಲ್ಯಾಣ ಜೀವನ ಸಾಧ್ಯ. ನಿಜ ಜೀವನದಲ್ಲಿ “ಕಾಯಕವೇ ಕೈಲಾಸ” ಎಂಬ ತತ್ವದೊಂದಿಗೆ ದುಡಿದು, “ಸಾಕು” ಎಂಬ ತೃಪ್ತಿಯೊಂದಿಗೆ ಬದುಕಿ, ಜಾತಿ, ಮತ, ಲಿಂಗ ಭೇದವಿಲ್ಲದ ಸೌಹಾರ್ದತೆಯ ಸಮಾಜ ಕಟ್ಟೋಣ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಪ್ರತಿದಿನ ವಿಶೇಷ ಬರಹ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...