ಈ ದಿನ ಸಂಪಾದಕೀಯ | RSSಗೆ ಹೊಣೆಗಾರಿಕೆಯ ಭಯವೇ?

Date:

ಒಂದು ಸಂಘಟನೆಯು ದೇಶಪ್ರೇಮ, ಸಂಸ್ಕೃತಿ ಮತ್ತು ಸಮಾಜ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡಿದೆ ಎಂದಾದರೆ, ಅದು ಕಾನೂನಿನ ಚೌಕಟ್ಟಿಗೆ ಒಳಪಡಲು ಹಿಂಜರಿಯುವುದೇಕೆ? ನೋಂದಣಿಯಾಗುವುದರಿಂದ ಸಂಘಟನೆಯ ಸಿದ್ಧಾಂತಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ, ಬದಲಾಗಿ ಅದರ ಸಾರ್ವಜನಿಕ ನಂಬಿಕೆ ಹೆಚ್ಚುತ್ತದೆ.

RSS ಮತ್ತು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತಾರಕಕ್ಕೇರಿರುವ “ನೋಂದಣಿ” ಬಂಡಾಯವು, ದೇಶದ ಅತಿ ದೊಡ್ಡ ಸಾಂಸ್ಕೃತಿಕ ಸಂಘಟನೆಯೊಂದರ ಉತ್ತರದಾಯಿತ್ವ, ಹೊಣೆಗಾರಿಕೆ, ಸಂವಿಧಾನಬದ್ಧತೆ ಮತ್ತು ಕಾನೂನಾತ್ಮಕ ಚೌಕಟ್ಟಿನ ಕುರಿತಾದ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

- Advertisement -

ನೂರು ವರ್ಷಗಳ ಇತಿಹಾಸವಿರುವ, ದೇಶದ ಸಾರ್ವಭೌಮ ರಾಜಕಾರಣವನ್ನು ನಿಯಂತ್ರಿಸುವ ಶಕ್ತಿಯಾಗಿ ಬೆಳೆದಿರುವ ಸಂಘಟನೆಯೊಂದು ಇಂದಿಗೂ ಅಧಿಕೃತವಾಗಿ ನೋಂದಣಿಯಾಗದೆ ಉಳಿದಿರುವುದು ಸಂವಿಧಾನಬದ್ಧವೇ? ಇದರ ಹಿಂದೆ ಕೇವಲ ಸೈದ್ಧಾಂತಿಕ ಕಾರಣಗಳಿವೆಯೇ ಅಥವಾ ಕಾನೂನಿನ ಕಣ್ಣಿಗೆ ಸಿಲುಕುವ ಭಯವಿದೆಯೇ ಎಂಬ ಪ್ರಶ್ನೆಗಳು ಪ್ರಸ್ತುತ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಭಾರತದ ಸಂವಿಧಾನದ ವಿಧಿ 19(1)(c) ಪ್ರಕಾರ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂಘ-ಸಂಸ್ಥೆಗಳನ್ನು (Associations or Unions) ಸ್ಥಾಪಿಸುವ ಮೂಲಭೂತ ಹಕ್ಕಿದೆ. ಕಾನೂನಿನ ಪ್ರಕಾರ, ಯಾವುದೇ ಒಂದು ಸಾರ್ವಜನಿಕ ಸಂಸ್ಥೆ ಅಥವಾ ಸಂಘಟನೆಯು ಅಧಿಕೃತವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್ ಖಾತೆಗಳನ್ನು ಸಂಸ್ಥೆಯ ಹೆಸರಲ್ಲೇ ನಿರ್ವಹಿಸಲು ಅಥವಾ ಆಸ್ತಿ ಖರೀದಿಸಲು ‘ಸೊಸೈಟಿ ನೋಂದಣಿ ಕಾಯ್ದೆ-1860’ರ ಅಡಿಯಲ್ಲಿ ನೋಂದಣಿಯಾಗುವುದು ಕಡ್ಡಾಯ. ಆದರೆ RSS ನೋಂದಣಿಯಾಗಿಲ್ಲ. ಇದೇ ವಿಧಿ 19(4)ರ ಅಡಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ ಸರ್ಕಾರಗಳು ಇವುಗಳ ಮೇಲೆ ನಿರ್ಬಂಧ ಹೇರಬಹುದು.

ಆದರೆ, ಕೇವಲ ಒಂದು ವೈಚಾರಿಕ ಸಿದ್ಧಾಂತದ ಅಡಿಯಲ್ಲಿ ಜನರು ಒಟ್ಟುಗೂಡಿ ಒಟ್ಟಿಗೆ ಕೆಲಸ ಮಾಡಲು ನೋಂದಣಿ ಕಡ್ಡಾಯವಲ್ಲ. RSS ತನ್ನನ್ನು ತಾನು “ನೋಂದಣಿಯಾಗದ ಸ್ವಯಂಪ್ರೇರಿತ ಸಾಂಸ್ಕೃತಿಕ ಸಂಘಟನೆ” ಎಂದು ಕರೆದುಕೊಳ್ಳುತ್ತದೆ. ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಪಕ್ಷದ ಮಾತೃಸಂಸ್ಥೆಯಾಗಿ, ಇಡೀ ದೇಶದ ನೀತಿ-ನಿಯಮಗಳನ್ನು ಪ್ರಭಾವಿಸುವ ಸಂಘಟನೆಯೊಂದು “ನಾವು ಸರ್ಕಾರದ ನಿಯಮಗಳಿಗೆ ಒಳಪಡುವುದಿಲ್ಲ” ಎಂದು ನಿಲ್ಲುವುದು ನೈತಿಕವಾಗಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ದೃಷ್ಟಿಯಿಂದ ಸರಿಯಲ್ಲ.

1948ರಲ್ಲಿ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲರು RSS ಅನ್ನು ನಿಷೇಧಿಸಿದ್ದರು. ಆಗ ನಿಷೇಧ ಹಿಂಪಡೆಯಲು ಪಟೇಲರು ವಿಧಿಸಿದ ಷರತ್ತು, “ಸಂಘಕ್ಕೊಂದು ಲಿಖಿತ ಸಂವಿಧಾನ ಇರಬೇಕು” ಎನ್ನುವುದು. ಅದರಂತೆ RSS ಸಂವಿಧಾನವನ್ನು ಬರೆದುಕೊಂಡಿತಾದರೂ, ಅದನ್ನು ಕಾನೂನಿನಡಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಸಲಿಲ್ಲ. ಸಂವಿಧಾನವನ್ನು ಬರೆದುಕೊಂಡ ತಕ್ಷಣ ಒಂದು ಸಂಸ್ಥೆ ಕಾನೂನಾತ್ಮಕವಾಗಿ ನೋಂದಣಿಯಾಗಿದೆ ಎಂದರ್ಥವಲ್ಲ.

ಒಂದು ವೇಳೆ RSS ಅಧಿಕೃತವಾಗಿ ನೋಂದಣಿಯಾಗಿಬಿಟ್ಟರೆ ಏನಾಗಬಹುದು? ಮೊದಲನೆಯದಾಗಿ, ಅದು ತನ್ನ ಅಂಗರಚನೆ (Bylaws), ಪದಾಧಿಕಾರಿಗಳ ವಿವರ, ವಾರ್ಷಿಕ ಲೆಕ್ಕಪತ್ರ ಮತ್ತು ಆಡಿಟ್ ವರದಿಗಳನ್ನು ಪ್ರತಿವರ್ಷ ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಸಾರ್ವಜನಿಕವಾಗಿ RSS ಹೆಸರಿನಲ್ಲಿ ಬರುವ ಹಣದ ಪ್ರತಿ ಪೈಸೆಗೂ ಲೆಕ್ಕ ಕೊಡಬೇಕಾಗುತ್ತದೆ.

ಸಂಘವು ನೋಂದಣಿಯಾಗಲು ಹಿಂಜರಿಯುವುದಕ್ಕೆ ಮುಖ್ಯ ಕಾರಣ ತನ್ನ “ಆಂತರಿಕ ನಿಯಂತ್ರಣ”ವನ್ನು ಕಳೆದುಕೊಳ್ಳುವ ಭಯ. ನೋಂದಣಿಯಾದರೆ ಸರ್ಕಾರದ ತನಿಖಾ ಸಂಸ್ಥೆಗಳು ಅಥವಾ ನ್ಯಾಯಾಲಯಗಳು ಸಂಘದ ಆಂತರಿಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲದೆ, ವರ್ಷಗಳಿಂದ ಸಂಘಟನೆಯ ಸುತ್ತ ಹೆಣೆಯಲಾಗಿರುವ ಹಣಕಾಸಿನ ನೆಟ್‌ವರ್ಕ್ ಮತ್ತು ನಿರ್ಧಾರಗಳ ರಹಸ್ಯಗಳು ಬಯಲಾಗಬಹುದು ಎಂಬ ಆತಂಕವೂ ಇದರ ಹಿಂದಿರಬಹುದು. ಜೊತೆಗೆ “ಕೇಂದ್ರದಲ್ಲಿ RSSನ ರಾಜಕೀಯ ಮುಖವಾದ ಬಿಜೆಪಿಯೇ ಅಧಿಕಾರದಲ್ಲಿದೆ. ಒಮ್ಮೆ ರಿಜಿಸ್ಟರ್‌ ಮಾಡಿಬಿಡೋಣ, ಆಮೇಲೆ ಬಂದಿದ್ದು ಬರಲಿ”, ಎನ್ನುವುದನ್ನೂ ಸಂಘ ಪರಿಗಣಿಸಬಹುದು! ಆದರೆ, ಪರಿಗಣಿಸಲಿಕ್ಕಿಲ್ಲ.

ಇದನ್ನೂ ಓದಿ: ‘ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್‌ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!

ಸಂಘದ ಹೆಸರಿನಲ್ಲಿಯೇ ಅಧಿಕೃತವಾಗಿ ಹಣಕಾಸು ವ್ಯವಹಾರ ನಡೆಸಿದರೆ ಏನಾಗಬಹುದು ಎಂಬುದು RSSಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ಅದು (RSS) ನೇರವಾಗಿ ತನ್ನ ಹೆಸರಿನಲ್ಲಿ ಆಸ್ತಿಗಳನ್ನಾಗಲಿ, ಬ್ಯಾಂಕ್ ಖಾತೆಗಳನ್ನಾಗಲಿ ನಿರ್ವಹಿಸುವುದಿಲ್ಲ. ಆದರೆ, ಅದರ ಸೈದ್ಧಾಂತಿಕ ಛತ್ರಿಯಡಿಯಲ್ಲಿ ಕೆಲಸ ಮಾಡುವ ವಿದ್ಯಾಭಾರತಿ (RSSನ ಶೈಕ್ಷಣಿಕ ವಿಭಾಗ), ವನವಾಸಿ ಕಲ್ಯಾಣ ಆಶ್ರಮ, ಸ್ವದೇಶಿ ಜಾಗರಣ ಮಂಚ್ (RSSನ ಆರ್ಥಿಕ ಮತ್ತು ಸಾರ್ವಜನಿಕ ನೀತಿ ವಿಭಾಗ), ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಮಜ್ದೂರ್ ಸಂಘಗಳಂತಹ ನೂರಾರು ಅಂಗಸಂಸ್ಥೆಗಳು ನೋಂದಣಿಯಾಗಿವೆ. ಪ್ರತಿವರ್ಷ ಗುರುಪೂರ್ಣಿಮೆಯ ದಿನ ಸ್ವಯಂಸೇವಕರು ಜ್ಞಾನದ ಸಂಕೇತವಾಗಿ ಭಗವಾಧ್ವಜಕ್ಕೆ ಅರ್ಪಿಸುವ “ಗುರುದಕ್ಷಿಣೆ”ಯ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ ಹರಿದುಬರುತ್ತದೆ. ಈ ನಗದು ವಹಿವಾಟು, ಅದರ ವರ್ಗಾವಣೆ ಮತ್ತು ಸಂಗ್ರಹಣೆಗೆ ಯಾವುದೇ ಸರ್ಕಾರಿ ಆಡಿಟಿಂಗ್ ಇರುವುದಿಲ್ಲ. ಒಂದು ಕಡೆ ದೇಶದ ಸಣ್ಣ ಪುಟ್ಟ ಎನ್‌ಜಿಒ(NGO)ಗಳ ಆರ್ಥಿಕ ಮೂಲಗಳನ್ನು ಜಾಲಾಡಲಾಗುತ್ತದೆ. ಆದರೆ RSS ಮಾತ್ರ ಇವುಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದೆ.

ಯಾವಾಗ ಒಂದು ಸಂಸ್ಥೆಗೆ ಸ್ಪಷ್ಟ ಕಾನೂನಾತ್ಮಕ ಚೌಕಟ್ಟು ಇರುವುದಿಲ್ಲವೋ, ಆಗ ಅಲ್ಲಿ ಪಾರದರ್ಶಕತೆ ಮರೆಯಾಗುತ್ತದೆ. ದೇಶದ ಒಳಗೆ ಮತ್ತು ವಿದೇಶಗಳಿಂದ ಬರುವ ದೇಣಿಗೆಗಳು ಹೇಗೆ ಬಳಕೆಯಾಗುತ್ತಿವೆ? ಅವುಗಳಿಗೆ ಆದಾಯ ತೇರಿಗೆ ವಿನಾಯಿತಿ ಇದೆಯೇ? ಒಂದು ವೇಳೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ಈ ಹಣ ಬರುತ್ತಿದ್ದರೆ, ಅದರ ಸಂಪೂರ್ಣ ಆಡಿಟ್ ವರದಿ ಎಲ್ಲಿದೆ? ನೋಂದಣಿಯಾಗದ ಸಂಸ್ಥೆಯೊಂದರ ಹಣಕಾಸಿನ ಮೂಲಗಳು ಯಾವುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ವತಃ RSS ಮುಂದೆ ಬಂದು ಉತ್ತರಿಸಬೇಕಿದೆ.

ಇಂದು RSSಗೆ ಸುಮಾರು 60,000ಕ್ಕೂ ಹೆಚ್ಚು ದೈನಂದಿನ ಶಾಖೆಗಳಿದ್ದರೆ, ಜಗತ್ತಿನಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ಇದರ ಜಾಲ ಹರಡಿದೆ. ವಿದೇಶಗಳಲ್ಲಿ ಇದನ್ನು ‘ಹಿಂದೂ ಸ್ವಯಂಸೇವಕ ಸಂಘ’ (HSS) ಎಂಬ ಹೆಸರಿನಲ್ಲಿ ನಡೆಸಲಾಗುತ್ತದೆ. ಅಮೆರಿಕ (USA), ಬ್ರಿಟನ್ (UK), ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ HSS ಅತ್ಯಂತ ಬಲಿಷ್ಠವಾಗಿದೆ. ಭಾರತದಲ್ಲಿ ನೋಂದಣಿಯಾಗದ ಈ ಸಂಘಟನೆಯು ವಿದೇಶಗಳಲ್ಲಿ ಅಲ್ಲಿನ ಕಾನೂನಿನ ಒಳಗೆ ‘ಚಾರಿಟೇಬಲ್ ಮತ್ತು ಸಾಂಸ್ಕೃತಿಕ ಸಂಸ್ಥೆ’ಯಾಗಿ ಅಧಿಕೃತವಾಗಿ ನೋಂದಣಿ ಮಾಡಿಸಿಕೊಂಡಿರುವುದು ಪರಮಾಶ್ಚರ್ಯ!

ಈ ವಿದೇಶಿ ಶಾಖೆಗಳ ಮೂಲಕ ಅನಿವಾಸಿ ಭಾರತೀಯರಿಂದ (NRIs) ಕೋಟ್ಯಂತರ ಡಾಲರ್ ನಿಧಿ ಸಂಗ್ರಹವಾಗುತ್ತದೆ. ಈ ಹಣವು ವಿವಿಧ ಚಾರಿಟಿಗಳ ಹೆಸರಿನಲ್ಲಿ ಭಾರತದಲ್ಲಿರುವ ಸಂಘದ ಅಂಗಸಂಸ್ಥೆಗಳಿಗೆ ತಲುಪುತ್ತದೆ. ಆದರೆ ಭಾರತದಲ್ಲಿರುವ ಮೂಲ ಸಂಸ್ಥೆಯೇ (RSS) ನೋಂದಣಿಯಾಗದ ಕಾರಣ, ಈ ನಿಧಿಯ ಅಂತಿಮ ಬಳಕೆ ಮತ್ತು ಇದರ ರಾಜಕೀಯ ಪ್ರಭಾವದ ಮೇಲಿನ ನಿಗಾ ಸದಾ ಸಂಶಯ ಹುಟ್ಟಿಸುತ್ತಲೇ ಇರುತ್ತದೆ.

ಪ್ರಿಯಾಂಕ್ ಖರ್ಗೆಯವರು RSS ನೋಂದಣಿ ಪ್ರಶ್ನೆ ಎತ್ತಿದ ಪ್ರತಿ ಬಾರಿಯೂ ಸಂಘ ಪರಿವಾರದ ಬೆಂಬಲಿಗರು ಮತ್ತು ಬಿಜೆಪಿ ನಾಯಕರು, ಕೇಳುವುದು ಒಂದು, ಹೇಳುವುದು ಇನ್ನೊಂದು ಎನ್ನುವಂತೆ, ‘ಹಾಗಾದರೆ ಮದರಸಾಗಳನ್ನು ಬ್ಯಾನ್ ಮಾಡಿʼ ಎನ್ನುತ್ತಾರೆ. ಆದರಿದು ಗಮನ ತಿರುಗಿಸುವ, ಸತ್ಯ ಹೇಳುವುದರಿಂದ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವಷ್ಟೇ!

ವಾಸ್ತವ ಏನೆಂದರೆ, ದೇಶದ ಬಹುತೇಕ ಮದರಸಾಗಳು ಆಯಾ ರಾಜ್ಯಗಳ ‘ಮದರಸಾ ಬೋರ್ಡ್’ ಅಥವಾ ವಕ್ಫ್ ಕಾಯ್ದೆಯಡಿ ನೋಂದಣಿಯಾಗಿರುತ್ತವೆ. ಅವುಗಳ ಮೇಲೆ ಸದಾ ಸರ್ಕಾರದ ಕಣ್ಣಿರುತ್ತದೆ ಮತ್ತು ಇತ್ತೀಚಿನ ದಿನಗಳಲ್ಲಿ ಅವುಗಳ ಆಡಿಟಿಂಗ್ ಕೂಡ ಕಡ್ಡಾಯವಾಗುತ್ತಿದೆ. ಆದರೆ, ಇಡೀ ದೇಶದ ರಾಜಕಾರಣವನ್ನು ನಿಯಂತ್ರಿಸುವ ಶಕ್ತಿ ಹೊಂದಿರುವ RSS ಅನ್ನು ಸಾಮಾನ್ಯ ಧಾರ್ಮಿಕ ಶಾಲೆಗಳಿಗೆ ಹೋಲಿಸುವುದು ಹಾಸ್ಯಾಸ್ಪದ. ಕಾನೂನು ಎಲ್ಲರಿಗೂ ಒಂದೇ ಆಗಿರುವಾಗ, ಒಂದು ನಿರ್ದಿಷ್ಟ ಸಂಘಟನೆಗೆ ಮಾತ್ರ ನೋಂದಣಿಯಿಂದ ವಿನಾಯಿತಿ ಏಕೆ ಎಂಬ ಪ್ರಶ್ನೆಗೆ ಮದರಸಾಗಳ ಹೆಸರಿನಲ್ಲಿ ಉತ್ತರಿಸುವುದು ಬೌದ್ಧಿಕ ದಿವಾಳಿತನ.

ಇದನ್ನೂ ಓದಿ: RSS ಸಂವಿಧಾನ ಏನು ಹೇಳುತ್ತದೆ? ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಏನು ಹೇಳುತ್ತಾರೆ?

ಒಂದು ಸಂಘಟನೆಯು ದೇಶಪ್ರೇಮ, ಸಂಸ್ಕೃತಿ ಮತ್ತು ಸಮಾಜ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡಿದೆ ಎಂದಾದರೆ, ಅದು ಕಾನೂನಿನ ಚೌಕಟ್ಟಿಗೆ ಒಳಪಡಲು ಹಿಂಜರಿಯುವುದೇಕೆ? ನೋಂದಣಿಯಾಗುವುದರಿಂದ ಸಂಘಟನೆಯ ಸಿದ್ಧಾಂತಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ, ಬದಲಾಗಿ ಅದರ ಸಾರ್ವಜನಿಕ ನಂಬಿಕೆ ಹೆಚ್ಚುತ್ತದೆ.

ಭಾರತವು ಸಂವಿಧಾನದ ಆಧಾರದ ಮೇಲೆ ನಡೆಯುತ್ತಿರುವ ದೇಶವೇ ಹೊರತು ಯಾವುದೇ ಸಂಘಟನೆಯ ಮೌಖಿಕ ಆದೇಶಗಳ ಮೇಲಲ್ಲ. RSS ನಿಜವಾಗಿಯೂ ಯಾವುದೇ ತಪ್ಪು ಮಾಡಿಲ್ಲ ಮತ್ತು ಅದರ ಹಣಕಾಸು ವ್ಯವಹಾರಗಳು ಶುದ್ಧವಾಗಿವೆ ಎಂದಾದರೆ, ಅದು ಸ್ವಯಂಪ್ರೇರಿತವಾಗಿ ನೋಂದಣಿಯಾಗಿ, ಇಡೀ ದೇಶಕ್ಕೆ ಪಾರದರ್ಶಕತೆಯ ಮಾದರಿಯಾಗಬೇಕಿದೆ. ಅದನ್ನು ಬಿಟ್ಟು, ಪ್ರಶ್ನಿಸಿದವರನ್ನು ದೇಶದ್ರೋಹಿಗಳು, ಧರ್ಮವಿರೋಧಿಗಳು, ಬೇರೆ ಧರ್ಮದವರನ್ನ ಯಾಕೆ ಪ್ರಶ್ನಿಸಲ್ಲ ಎಂದು ವಿತಂಡ ಮಾಡುವುದು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಇದು ಸಂಘಕ್ಕೂ ಶೋಭೆ ತರುವುದಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ...

ಬರಗಾಲದಿಂದ ನಾಡಿಗೆ ಮುಕ್ತಿ ಸಿಗಲಿ: ಗಾಣಗಾಪುರ ದತ್ತಾತ್ರೇಯನ ಮೊರೆ ಹೋದ ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಜನತೆಗೆ ಶೀಘ್ರವೇ ಮುಕ್ತಿ ಸಿಗಲಿ ಹಾಗೂ...

ಕಾನೂನುಬಾಹಿರ ನೇಮಕದ ಆರೋಪ: ಚಂದ್ರಶೇಖರನ್ ಬೆನ್ನಿಗೆ ನಿಂತ ಮಂಡಳಿ, ವಿರೋಧಿಸಿದ ನೊಯೆಲ್ ಟಾಟಾ

ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ ರೈತರ ಒತ್ತಾಯ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು...