ಈ ದಿನ ಸಂಪಾದಕೀಯ | SIR ನೆಪದಲ್ಲಿ ‘ಮತಾಧಿಕಾರದ ರಕ್ಷಕ’ ಮಾಡುತ್ತಿರುವುದು ಇದೇನಾ?

Date:

ಮೊದಲ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಹಾಕಿಕೊಟ್ಟ ಹಾದಿ, ಇಂದಿನ ಆಯೋಗಕ್ಕೆ ಮಾದರಿಯಾಗಬೇಕಿತ್ತು. ಈ ದೇಶದ ದುರಂತವೋ, ಜನರ ಹಣೆಬರಹವೋ, ಅಂದಿಗೂ ಇಂದಿಗೂ ಅಜಗಜಾಂತರ ಕಂದಕ. ಅಂದು ಅನಕ್ಷರಸ್ಥ ಜನರಿಗಾಗಿ ಚಿಹ್ನೆಗಳನ್ನು ವಿನ್ಯಾಸಗೊಳಿಸಿದ ಆಯೋಗದ ದೂರದೃಷ್ಟಿ ಎಲ್ಲಿ? ತಾಂತ್ರಿಕತೆಯ ನೆಪದಲ್ಲಿ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುತ್ತಿರುವ ಇಂದಿನ ಆಯೋಗದ ಧೋರಣೆ ಎಲ್ಲಿ?

ಮತಾಧಿಕಾರ ಪ್ರಜಾಪ್ರಭುತ್ವದ ಅಸ್ತ್ರ. ಈ ಅಸ್ತ್ರವನ್ನು ಮಸೆದು ಪ್ರತಿಯೊಬ್ಬ ನಾಗರಿಕನ ಕೈಗೂ ತಲುಪಿಸಬೇಕಾದ ಕೆಲಸ ಚುನಾವಣಾ ಆಯೋಗದ್ದು. ಆ ಅಸ್ತ್ರವನ್ನೇ ಕಸಿದುಕೊಳ್ಳುವುದು ಈ ವ್ಯವಸ್ಥೆಯ ಕೊಲೆಗೆ ಸಮಾನ. ಮತದಾರರ ಹಕ್ಕುಗಳನ್ನ ಕಾಯುವ ಹೊಣೆ ಹೊತ್ತಿರುವ ಚುನಾವಣಾ ಆಯೋಗವೇ, SIR ಹೆಸರಿನ ಮತದಾರರ ಪಟ್ಟಿಯ ಕತ್ತರಿ ಪ್ರಯೋಗಕ್ಕೆ ಮುಂದಾಗಿದೆ. ಸರ್ಕಾರದ ದರ್ಬಾರಿಗೆ ಕುರ್ಚಿ ಸರಿಹೊಂದಿಸುತ್ತಿರುವ ಆಯೋಗದ ನಡೆ, ಪ್ರಜಾಪ್ರಭುತ್ವದ ಕಾವಲುಗಾರನೊಬ್ಬ ಗುಲಾಮಗಿರಿಯ ಸರಪಳಿಯಲ್ಲಿ ಸಿಲುಕಿದನೇ ಎನಿಸುವಂತೆ ಮಾಡಿದೆ.

- Advertisement -

ದೇಶದ ಪ್ರಥಮ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರನ್ನು ಇಂದು ನೆನಪಿಸಿಕೊಳ್ಳಲೇಬೇಕು. ಅಂದು ಅನಕ್ಷರತೆ ತಾಂಡವವಾಡುತ್ತಿದ್ದ, ದಾರಿದ್ರ್ಯದ ಬೇಗೆಯಲ್ಲಿ ಬೆಂದಿದ್ದ, ಬೀದಿಪಾಲಾದವರು, ಬಯಲಿನಲ್ಲಿ ಬದುಕುವ ಅಸಂಖ್ಯಾತರು, ದೀನ-ದಲಿತರು ಮತದಾನದ ಪ್ರಕ್ರಿಯೆಯಿಂದ ದೂರವಿರಬಾರದು ಎಂದು ಅಂದು ಆಯೋಗ ಶ್ರಮಿಸಿತ್ತು. ಅಂತಹ ನಿರ್ಗತಿಕರನ್ನು ಹುಡುಕಿ ಹುಡುಕಿ ಮತದಾರರ ಪಟ್ಟಿಗೆ ಸೇರಿಸಿತ್ತು. ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯವಿದೆ ಎಂಬ ನಿಲುವಿನೊಂದಿಗೆ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆಯೇ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

1951-52ರಲ್ಲಿ, 36 ಕೋಟಿ ಜನಸಂಖ್ಯೆ ಇದ್ದ ಭಾರತದಲ್ಲಿ, 17 ಕೋಟಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಸುಕುಮಾರ್ ಸೇನ್ ಅವರ ಮುಂದಿದ್ದ ಅಸಾಧ್ಯವಾದ ಸವಾಲಾಗಿತ್ತು. ಅಂದು ಶೇ. 85ರಷ್ಟು ಜನರಿಗೆ ಅಕ್ಷರ ಜ್ಞಾನವಿರಲಿಲ್ಲ. 4 ತಿಂಗಳ ಕಾಲ ಸುದೀರ್ಘ ಅವಧಿಯಲ್ಲಿ ಚುನಾವಣೆ ನಡೆಸಿ, ಜಗತ್ತಿಗೆ ಭಾರತ ಒಂದು ಪ್ರಜಾಪ್ರಭುತ್ವದ ನೆಲೆ ಎಂಬುದನ್ನು ಅಂದಿನ ಆಯೋಗ ಸಾಬೀತುಪಡಿಸಿತ್ತು. ಅಂದು ಆಹಾರದ ಕೊರತೆ, ಬಡತನ ಮತ್ತು ಭೌಗೋಳಿಕ ಸವಾಲುಗಳಿದ್ದರೂ, ಅಧಿಕಾರಿಗಳು ಪರಿಹಾರ ಕಾರ್ಯಗಳ ನಡುವೆಯೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಿದ್ದರು. ಸುಕುಮಾರ್‌ ಸೇನ್‌ ಅವರು ಹಾಕಿಕೊಟ್ಟ ಹಾದಿ, ಇಂದಿನ ಆಯೋಗಕ್ಕೆ ಮಾದರಿಯಾಗಬೇಕಿತ್ತು. ಈ ದೇಶದ ದುರಂತವೋ, ಜನರ ಹಣೆಬರಹವೋ, ಅಂದಿಗೂ ಇಂದಿಗೂ ಅಜಗಜಾಂತರ ಕಂದಕ. ಅಂದು ಅನಕ್ಷರಸ್ಥ ಜನರಿಗಾಗಿ ಚಿಹ್ನೆಗಳನ್ನು ವಿನ್ಯಾಸಗೊಳಿಸಿದ ಆಯೋಗದ ದೂರದೃಷ್ಟಿ ಎಲ್ಲಿ? ತಾಂತ್ರಿಕತೆಯ ನೆಪದಲ್ಲಿ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುತ್ತಿರುವ ಇಂದಿನ ಆಯೋಗದ ಧೋರಣೆ ಎಲ್ಲಿ?

ಇದನ್ನು ಓದಿದ್ದೀರಾ?: ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಬಿಜೆಪಿ ಭಂಡರು

ಮತದಾರರ ಪಟ್ಟಿ ಪರಿಷ್ಕರಿಸುವ ನೆಪದಲ್ಲಿ ಅನೇಕರ ಹೆಸರನ್ನು ಕೈಬಿಡಲಾಗುತ್ತಿದೆ. ಚುನಾವಣಾ ಆಯೋಗ ಇದಕ್ಕೆ ನೀಡುತ್ತಿರುವ ಸಮರ್ಥನೆ ‘ಅಕ್ರಮ ನುಸುಳುಕೋರರ ಪತ್ತೆ’. ಆದರೆ, ಈ ನೆಪ ಎಷ್ಟರಮಟ್ಟಿಗೆ ವಾಸ್ತವ ಮತ್ತು ಎಷ್ಟರಮಟ್ಟಿಗೆ ಬೂಟಾಟಿಕೆ ಎಂಬುದೇ ದೊಡ್ಡ ಪ್ರಶ್ನೆ. ಈಗಾಗಲೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಸೇರಿದಂತೆ (ಪ್ರಸ್ತುತ ಕರ್ನಾಟಕ ದೆಹಲಿ, ಮಹಾರಾಷ್ಟ್ರ, ಮೇಘಾಲಯ, ಜಾರ್ಖಂಡ್) ವಿವಿಧ ರಾಜ್ಯಗಳಲ್ಲಿ ಕೈಗೊಂಡ ಎಸ್‌ಐಆರ್‌ ಪ್ರಕ್ರಿಯೆ ಯಶಸ್ವಿಯಾಗೇನೋ ನಡೆದಿದೆ. ಮೊದಲ ಹಂತದ 12 ರಾಜ್ಯಗಳು ಮತ್ತು ಕೇಂದ್ರೀಯ ಪ್ರದೇಶಗಳಲ್ಲಿ ಮತದಾರರ ಪಟ್ಟಿಗಳು ಸರಾಸರಿ 10.2% (5.18 ಕೋಟಿಗೂ ಹೆಚ್ಚು) ರಷ್ಟು ಕಡಿತಗೊಂಡಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 16.6%, ಉತ್ತರ ಪ್ರದೇಶ 13.2%, ಗುಜರಾತ್ 13.1%, ಛತ್ತೀಸ್‌ಗಢ 11.3%, ಪಶ್ಚಿಮ ಬಂಗಾಳ 10.9%, ತಮಿಳುನಾಡು 10.6%, ಗೋವಾ 10.2% ರಷ್ಟು ಮಂದಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಸುಮಾರು 6.6 ಕೋಟಿ ಮೃತ ಮತದಾರರ ಹೆಸರುಗಳನ್ನು ಮತ್ತು ಆಕ್ಷೇಪಣೆಗಳ ನಂತರ 63 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ.

ಹೀಗೆ ಹೇಳಿಕೊಟ್ಟಿದ್ದನ್ನು ಸಾಧಿಸುತ್ತಿರುವ ಆಯೋಗ, ಪರಿಷ್ಕರಣೆಗಳ ನಂತರ ಎಷ್ಟು ಮಂದಿ ನುಸುಳುಕೋರರು ನಿಜಕ್ಕೂ ಪತ್ತೆಯಾದರು ಎಂಬ ಸ್ಪಷ್ಟ ಮಾಹಿತಿಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಪಾರದರ್ಶಕತೆಯ ಅಡಿಪಾಯದ ಮೇಲೆ ನಿಲ್ಲಬೇಕಾದ ಸಂಸ್ಥೆಯೊಂದು, ಅಂಕಿಅಂಶಗಳನ್ನು ಮರೆಮಾಚುವ ಮೂಲಕ ಯಾರನ್ನು ರಕ್ಷಿಸಲು ಹೊರಟಿದೆ? ನುಸುಳುಕೋರರ ಪತ್ತೆಯ ನೆಪದಲ್ಲಿ ಅರ್ಹ ಭಾರತೀಯ ನಾಗರಿಕರನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆಯಲ್ಲವೇ? ಈ ಸಂಶಯಕ್ಕೆ ಆಯೋಗದ ನಿಗೂಢ ಧೋರಣೆಯೇ ಕಾರಣ. ತಾನು ಸಂವಿಧಾನದ ಆಶಯಗಳಿಗೆ ಬದ್ಧವಾಗಿ, ಪ್ರಜಾಪ್ರಭುತ್ವವನ್ನು ರಕ್ಷಿಸುವ ಕಾವಲುಗಾರನ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದೇ ಆದಲ್ಲಿ, ಎಸ್‌ಐಆರ್‌ಗೆ ಕೊಟ್ಟ ಕಾರಣಗಳನ್ನು ಸಾಬೀತುಪಡಿಸಲಿ. ಮತದಾನದ ಹಕ್ಕನ್ನು ಕಳೆದುಕೊಂಡಿರುವ ಲಕ್ಷಾಂತರ ಮಂದಿ ಭಾರತೀಯರು ನುಸುಳುಕೋರರೇ ಆಗಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ಭಾರತೀಯರ ಮುಂದಿಡಲಿ. ಅದಾಗದಿದ್ದರೆ, ತಾನು ಯಾರ ಬಾಲ ಹಿಡಿದು ಕುಣಿಯುತ್ತಿದ್ದೇನೆ, ಯಾರ ಬೇಳೆ ಬೇಯಿಸಲು ಒಲೆ ಹೊತ್ತಿಸಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯ ತೋರಲಿ. ಮುಂದಿನದನ್ನು ನಿಜ ಭಾರತೀಯರೇ ನಿರ್ಧರಿಸಲಿ.

ವ್ಯವಸ್ಥೆ ಎಷ್ಟು ಅಧ್ವಾನವಾಗಿದೆ ಎಂದರೆ, ಅದರ ಅನಗತ್ಯ ಬಿಗಿಹಿಡಿತದಿಂದ ಇಂದು ಈ ದೇಶದ ಬಡವನಿಗೆ, ಕೂಲಿ ಕಾರ್ಮಿಕನಿಗೆ ತನ್ನ ಮತಾಧಿಕಾರವನ್ನ ಚಲಾಯಿಸುವುದು ಸವಾಲಾಗಿದೆ. ಚುನಾವಣಾ ಆಯೋಗವು ಜನರನ್ನು ವ್ಯವಸ್ಥೆಯೊಳಗೆ ಸೇರಿಸುವ ಬದಲು, ಹೊರಹಾಕುವ ದುಷ್ಕೃತ್ಯಕ್ಕೆ ಮುಂದಾಗಿ ತನ್ನ ನೈತಿಕತೆಗೆ ತಿಲಾಂಜಲಿ ಇಟ್ಟಿದೆ. ಸರ್ಕಾರಗಳು ಬರಬಹುದು ಹೋಗಬಹುದು, ಆದರೆ ಚುನಾವಣಾ ಆಯೋಗ ಮಾತ್ರ ಎತ್ತಲೂ ವಾಲದೆ ಅಚಲವಾಗಿರಬೇಕು. ಮತಾಧಿಕಾರ ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆಯೋಗವು ತನ್ನ ಕರ್ತವ್ಯ ನಿರ್ವಹಿಸಲಿ. ಒಂದು ವೇಳೆ ಆಯೋಗ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ಸರ್ಕಾರದ ಧ್ವನಿಯಾಗಿ ಬದಲಾದರೆ, ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಅತಂತ್ರವಾಗುತ್ತದೆ.

ಇದನ್ನೂ ಓದಿ: ಆರ್‌ಟಿಐನಿಂದ ಬಯಲಾಯ್ತು ಮೋದಿ ಮತ್ತು ಗೋದಿ ಮೀಡಿಯಾದ ಅಸಲಿ ಬಣ್ಣ!

ಪ್ರಜಾಪ್ರಭುತ್ವ ಎನ್ನುವುದು ಸರ್ಕಾರಗಳಿಗೋ ಅಥವಾ ಆಯೋಗಗಳಿಗೋ ಸೇರಿದ ಆಸ್ತಿಯಲ್ಲ. ಅದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಜೀವನಾಡಿ. ಮತಾಧಿಕಾರವನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಕಂಡು ಸುಮ್ಮನೆ ಕುಳಿತುಕೊಳ್ಳುವುದು ಪ್ರಜಾಪ್ರಭುತ್ವದ ಅಧೋಗತಿಗೆ ನಾಂದಿ ಹಾಡುತ್ತದೆ. ನಮ್ಮ ಮತದಾನದ ಹಕ್ಕಿನ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಈ ದೇಶದ ಪ್ರತಿಯೊಬ್ಬ ನಾಗರಿಕನೂ ಕಾರ್ಯಪ್ರವೃತ್ತನಾಗಬೇಕಿದೆ.

ನಾವು ನೆನಪಿನಲ್ಲಿಡಬೇಕಾದ ಅಂಶವೊಂದಿದೆ… ಸುಕುಮಾರ್ ಸೇನ್ ಅವರಂತಹವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಆಯೋಗದ ಧರ್ಮವಾದರೆ, ಆ ದಾರಿ ಸರಿಯಾಗಿದೆಯೇ ಎಂದು ಪ್ರಶ್ನಿಸುವುದು ಮತ್ತು ಹಾದಿ ತಪ್ಪಿದಾಗ ಎಚ್ಚರಿಸುವುದು ಪ್ರಜೆಗಳ ಕರ್ತವ್ಯ. ಅಕ್ರಮಗಳ ನೆಪದಲ್ಲಿ ಅರ್ಹರ ಹಕ್ಕುಗಳನ್ನು ಕಸಿಯುತ್ತಿರುವ ಇಂದಿನ ಧೋರಣೆಗಳ ವಿರುದ್ಧ ಜನರೇ ದನಿಯಾಗಬೇಕು. ಮತಾಧಿಕಾರ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ, ಪ್ರಜಾಪ್ರಭುತ್ವ ಉಳಿದರೆ ಮಾತ್ರ ಸಂವಿಧಾನದ ಆಶಯ, ಕನಸುಗಳು ಜೀವಂತವಾಗಿರುತ್ತವೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ವಿಸರ್ಜನೆ ಮುಗಿಯಿತು, ಇನ್ನು ಸಿಇಸಿ ಗ್ಯಾನೇಶ್ ಕುಮಾರ್ ವಿಸರ್ಜನೆ ಬಾಕಿ: ನಟ ಪ್ರಕಾಶ್ ರಾಜ್

ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ...

ಜಿಎಸ್‌ಟಿ ದಸ್ತಗಿರಿ ಅಧಿಕಾರ ಹಿಂಪಡೆಯುವ ಪ್ರಸ್ತಾಪ: ಆಡಂಬರದ ಜಾರಿಯೂ ಇಂದಿನ ಭ್ರಮನಿರಸನವೂ….

2017ರ ಜೂನ್ 30ರ ಮಧ್ಯರಾತ್ರಿ ಭಾರತದ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆಯಾಗಿತ್ತು....

SIR ಅಕ್ರಮ ಆರೋಪ: ಎಸ್‌ಐಟಿ ತನಿಖೆಗೆ ಎಸ್‌ಡಿಪಿಐ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...