ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

Date:

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ ಪ್ರಧಾನಿ ಮೋದಿಯವರು ಅಧಿಕಾರದ ಮದದಲ್ಲಿ, ಕಳೆದ ಹದಿಮೂರು ವರ್ಷಗಳಿಂದ ಕಾಂಗ್ರೆಸ್ ಮುಖಂಡರನ್ನು, ಮಹಿಳೆಯರನ್ನು ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದರು. ಈಗ, ಅವರಾಡಿದ ಮಾತುಗಳು ಅವರಿಗೇ ತಿರುಗುಬಾಣವಾಗುತ್ತಿವೆ. ಸಂಸ್ಕಾರ ಮತ್ತು ಸಭ್ಯತೆಯ ಪಾಠ ಮಾಡುತ್ತಿವೆ.

‘ಕೆಲವು ಕಾರ್ಯಕರ್ತರು ಮತ್ತು ಗೂಂಡಾಗಳಿಂದ ಸರಣಿ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಉತ್ತರ ಪ್ರದೇಶದ ನೋಯ್ಡಾ, ಲಕ್ನೋ ಮತ್ತು ಕಾನ್ಪುರ ನಗರಗಳಲ್ಲಿ ನಡೆಯಬೇಕಿದ್ದ ಮೂರು ಕಾಮಿಡಿ ಶೋಗಳನ್ನು ರದ್ದು ಮಾಡುತ್ತಿದ್ದೇನೆ’ ಎಂದು ಸ್ಟಾಂಡ್ ಅಪ್ ಕಾಮಿಡಿಯನ್ ಪುಲ್ಕಿತ್ ಮಣಿ ಕೊಂಚ ವಿಷಾದದಿಂದಲೇ ಹೇಳಿದ್ದಾರೆ.

- Advertisement -

ಇದಕ್ಕೆ ಕಾರಣ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೆ. 19ರಂದು ಕಾಂಗ್ರೆಸ್ ಆಯೋಜಿಸಿದ್ದ ‘ಛಾತ್ರೋನ್ ಕೀ ಗೂಂಜ್‘ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನೇತೃತ್ವದ ಆ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಯುವಜನರು ಸೇರಿದ್ದರು. ಆ ಕಾರ್ಯಕ್ರಮದ ವೇದಿಕೆಯಲ್ಲಿ ರಾಹುಲ್ ಸಮ್ಮುಖದಲ್ಲಿ ಸ್ಟಾಂಡ್ ಅಪ್ ಕಾಮಿಡಿಯನ್ ಪುಲ್ಕಿತ್, ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ಶೈಲಿ ಹಾಗೂ ಅವರ ಭಾಷಣದ ಹಾವಭಾವಗಳನ್ನು ಅನುಕರಿಸಿದ್ದರು. ಅಷ್ಟೇ ಅಲ್ಲ, ಪ್ರಧಾನಿ ಮೋದಿಯವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ವಯಸ್ಸಾದ ಮಹಿಳೆಗೆ ಕುರ್ಚಿ ನೀಡಲು ಹೇಳಿದ್ದ ಘಟನೆಯನ್ನು ಉಲ್ಲೇಖಿಸಿ, ಪ್ರೇಕ್ಷಕರ ಕಡೆಗೆ ಕೈ ತೋರಿಸುತ್ತಾ ‘ಮಾ ಕೋ ಕುರ್ಸಿ ದೋ, ಮಾ’ ಎಂದು ಹಾಸ್ಯ ಮಾಡಿದ್ದರು. ಅದನ್ನು ಕಂಡು ರಾಹುಲ್ ಗಾಂಧಿ ನಕ್ಕಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ರಾಹುಲ್ ಗಾಂಧಿ ನಕ್ಕಿದ್ದು ಈಗ ಘನಘೋರ ಕೃತ್ಯವಾಗಿದೆ. ದೇಶದ ಪ್ರಧಾನಿಯವರ ದಿವಂಗತ ತಾಯಿಯನ್ನು ಅಪಹಾಸ್ಯ ಮಾಡಿದ್ದು ಮಹಾಪರಾಧವಾಗಿದೆ. ಕಾಮಿಡಿಯನ್ ಪುಲ್ಕಿತ್‌ಗೆ ಕೊಲೆ ಬೆದರಿಕೆ ಹಾಕಿದರೆ; ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಸಾರ್ವಜನಿಕ ಸಭ್ಯತೆಯ ಪಾಠ ಮಾಡಲಾಗುತ್ತಿದೆ. ಬಿಜೆಪಿ ಭಕ್ತರಿಗೆ, ಸಂಘದ ಕಾರ್ಯಕರ್ತರಿಗೆ, ನಾಯಕರಿಗೆ ಈಗ ಸಂಸ್ಕಾರ, ಸನ್ನಡತೆ, ಸಭ್ಯತೆ, ನೈತಿಕತೆ ನೆನಪಾಗಿದೆ.

ಇದನ್ನು ಓದಿದ್ದೀರಾ:? ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಅಸಲಿಗೆ, ಪುಲ್ಕಿತ್ ಅವರ ಮಿಮಿಕ್ರಿಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿರಲಿಲ್ಲ, ಯಾರ ಧ್ವನಿಯನ್ನೂ ಅನುಕರಣೆ ಮಾಡಿರಲಿಲ್ಲ, ಯಾರಂತೆಯೂ ಮೇಕಪ್ ಮಾಡಿಕೊಂಡಿರಲಿಲ್ಲ. ಮಿಮಿಕ್ರಿ ಮಾಡಿ ನಗಾಡಿದ್ದರು. ಹಾಗಿದ್ದರೂ, ಅದು ಮೋದಿಯವರ ಕುರಿತು ಮಾಡಿದ ಗೇಲಿ ಎಂದು ಬಿಜೆಪಿಗರು ಯಾಕೆ ಅಂದುಕೊಂಡಿದ್ದಾರೆ? ಅಥವಾ ರಾಹುಲ್‌ ಗಾಂಧಿಯವರ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ಸೃಷ್ಟಿಸುತ್ತಿರುವ ಸಂಚಲನಕ್ಕೆ ಸಂಘಪರಿವಾರ, ಬಿಜೆಪಿ ಮತ್ತು ಮೋದಿ ವಿಚಲಿತರಾಗಿದ್ದಾರೆಯೇ?

ಸತ್ಯವನ್ನು ಸರಿಯಾದ ಸಮಯಕ್ಕೆ ಗುರುತಿಸಿ ದೇಶದ ಹಿತಕ್ಕಾಗಿ ದನಿ ಎತ್ತುವ ನಾಯಕತ್ವವನ್ನು ಬೆಂಬಲಿಸುವುದು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ರಾಹುಲ್ ಅವರ ಛಾತ್ರೋನ್ ಕೀ ಗೂಂಜ್ ಕಾರ್ಯಕ್ರಮ ಮತ್ತು ಪುಲ್ಕಿತ್ ಅವರ ಸ್ಟಾಂಡ್ ಅಪ್ ಕಾಮಿಡಿ ಅಪರಾಧವೂ ಅಲ್ಲ, ಅಸಭ್ಯವೂ ಅಲ್ಲ.

ಒಂದು ವೇಳೆ, ಪುಲ್ಕಿತ್ ಮಾಡಿದ ವಿಡಂಬನೆಗೆ ರಾಹುಲ್ ಗಾಂಧಿ ಸಾರ್ವಜನಿಕವಾಗಿ ನಕ್ಕಿದ್ದು ತಪ್ಪು ಎಂದಾದರೆ, ಇದೇ ರಾಹುಲ್ ಗಾಂಧಿಯವರ ವಿಡಿಯೋ-ಫೋಟೋಗಳನ್ನು ನಕಲಿಸಿ-ಸಂಕಲಿಸಿ ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ‘ಪಪ್ಪು’ ಎಂದು ಕರೆದು ಹೀಯಾಳಿಸಿದ್ದು ತಪ್ಪಲ್ಲವೇ?

ಹಾಗೆಯೇ ಮೋದಿಯವರ ದಿವಂಗತ ತಾಯಿಯನ್ನು ಅಪಹಾಸ್ಯ ಮಾಡಿದ್ದು ಮಹಾಪರಾಧ ಎಂದರೆ, ರಾಹುಲ್ ಗಾಂಧಿಯವರ ವಯೋವೃದ್ಧ ತಾಯಿಯನ್ನು ಜರ್ಸಿ ಹಸು, ಕಾಂಗ್ರೆಸ್ ವಿಧವೆ ಎಂದು ಸ್ವತಃ ಪ್ರಧಾನಿ ಮೋದಿಯವರೇ ಸಾರ್ವಜನಿಕವಾಗಿ ಗೇಲಿ ಮಾಡುವಾಗ ಎಲ್ಲಿತ್ತು ಬಿಜೆಪಿಗರ ನೈತಿಕತೆ? ಸೋನಿಯಾ ಗಾಂಧಿಯವರ ಫೋಟೋ-ವಿಡಿಯೋಗಳನ್ನು ಎಐ ಬಳಸಿ ಅಸಭ್ಯ-ಅಶ್ಲೀಲವಾಗಿ ಚಿತ್ರಿಸಿ, ಟ್ರೋಲ್‌ಗೆ ಬಳಸಿ ಗೇಲಿ ಮಾಡುತ್ತಿದ್ದಾಗ ಎಲ್ಲಿಗೆ ಹೋಗಿತ್ತು, ಬಿಜೆಪಿ ಭಕ್ತರ ಸಂಸ್ಕಾರ ಮತ್ತು ಸಭ್ಯತೆ?

ವಿರೋಧ ಪಕ್ಷದ ನಾಯಕರನ್ನು ನಿರಂತರವಾಗಿ ಅವಹೇಳನ ಮಾಡಿ ರಾಜಕೀಯ ಲಾಭ ಪಡೆದವರು, ಈಗ ತಮ್ಮ ವಿರುದ್ಧ ಸಣ್ಣ ವಿಡಂಬನೆ ಬಂದ ತಕ್ಷಣ ತಾಯಿಯನ್ನು ಎಳೆದು ತರುವುದು, ಸಂಸ್ಕಾರದ ಮಾತುಗಳನ್ನಾಡುವುದು- ರಾಜಕೀಯ ನಾಟಕವಲ್ಲವೇ? ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಐಟಿ ಸೆಲ್ ನಡೆಸಿದ ದುಷ್ಟ ಅಶ್ಲೀಲ ಅಸಭ್ಯ ಪ್ರಚಾರವನ್ನು ದೇಶದ ಜನತೆ ನೋಡಿಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಸ್ಥ ನಾಯಕರನ್ನು ಮತ್ತು ಅವರ ಪ್ರಚಾರ ವೈಖರಿಯನ್ನು ಹಾಸ್ಯ ವಿಡಂಬನೆಯ ಮೂಲಕ ಪ್ರಶ್ನೆ ಮಾಡುವುದು ಸಹಜ. ಅದು ಸಂವಿಧಾನ ಕಲ್ಪಿಸಿಕೊಟ್ಟಿರುವ ರಾಜಕೀಯ ಹಕ್ಕು. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಪಂಡಿತ್ ನೆಹರೂ ಮತ್ತು ವ್ಯಂಗ್ಯಚಿತ್ರಕಾರ ಶಂಕರ್ ಅವರ ಪ್ರಸಂಗವನ್ನು ನೆನಪು ಮಾಡಿಕೊಳ್ಳಬಹುದು.

ಭಾರತದ ರಾಜಕೀಯ ವ್ಯಂಗ್ಯಚಿತ್ರ ರಂಗದ ಪಿತಾಮಹ ಎಂದು ಕರೆಯಲ್ಪಡುವ ಶಂಕರ್, ಪ್ರಧಾನಿ ನೆಹರೂ ಅವರ ನೀತಿಗಳನ್ನು ತೀಕ್ಷ್ಣವಾಗಿ ಟೀಕಿಸಿ ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಟೂನ್‌ಗಳನ್ನು ಬಿಡಿಸಿದ್ದರು. ಆದರೆ ನೆಹರೂ ಅವರು ಆ ಟೀಕೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದರು. ಅಷ್ಟೇ ಅಲ್ಲ, ‘ಶಂಕರ್ಸ್ ವೀಕ್ಲಿ’ ಪತ್ರಿಕೆಯ ಉದ್ಘಾಟನಾ ಸಮಾರಂಭಕ್ಕೆ ಬಂದು, ‘ನನ್ನನ್ನು ಬಿಡಬೇಡ ಶಂಕರ್, ನನ್ನ ಮೇಲೂ ವ್ಯಂಗ್ಯಚಿತ್ರ ಬಿಡಿಸು’ ಎಂದು ಬಹಿರಂಗವಾಗಿ ಬೆನ್ನು ತಟ್ಟಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಹಾಗೆಯೇ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಅನುಕರಿಸುವ ರಾಜಕೀಯ ಅಣಕು ಪ್ರಹಸನವು ರಾಷ್ಟ್ರೀಯ ಕಿರುತೆರೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿತ್ತು. ಅಂದು ಪ್ರಧಾನಿಯಾಗಿದ್ದವರನ್ನೇ ಬಹಿರಂಗವಾಗಿ ಹಾಸ್ಯ ಮಾಡಿದರೂ ಯಾವೊಬ್ಬ ಕಾಂಗ್ರೆಸ್ ನಾಯಕನೂ ಆ ಕಲಾವಿದರ ಮೇಲೆ ಮುಗಿಬೀಳಲಿಲ್ಲ, ಚಾನೆಲ್ ಮೇಲೆ ಕೇಸ್‌ ಹಾಕಲಿಲ್ಲ, ಕಲಾವಿದರಿಗೆ ಬೆದರಿಕೆ ಹಾಕಲಿಲ್ಲ. ಅಂದು ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಜಕೀಯ ಅಣಕುಗಳನ್ನು ಗೌರವಿಸುವ ಹಾಗೂ ಸಹಿಸಿಕೊಳ್ಳುವ ಕನಿಷ್ಠ ಸೌಜನ್ಯವಿತ್ತು. ಆದರೆ ಇಂದು ದೇಶದಲ್ಲಾಗುತ್ತಿರುವುದೇನು ಎಂಬ ಪ್ರಶ್ನೆ ಪ್ರತಿಯೊಬ್ಬ ನಾಗರಿಕನನ್ನೂ ಕಾಡುತ್ತಿದೆ.

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ ಪ್ರಧಾನಿ ಮೋದಿಯವರು ಅಧಿಕಾರದ ಮದದಲ್ಲಿ, ಕಳೆದ ಹದಿಮೂರು ವರ್ಷಗಳಿಂದ ಕಾಂಗ್ರೆಸ್ ಮುಖಂಡರನ್ನು, ಮಹಿಳೆಯರನ್ನು ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದರು. ಮೋದಿಯವರ ಮಾತಿಗೆ ಮರುಳಾದ, ಮೆದುಳನ್ನು ಮಾರಿಕೊಂಡ, ಪ್ರಶ್ನಿಸುವ ಕೆಚ್ಚನ್ನೇ ಕಳೆದುಕೊಂಡ ಭಕ್ತರು ಆನಂದಿಸಿದರು. ಈಗ, ಕಾಲ ಚಕ್ರ ಉರುಳಿದಂತೆ, ಅವರಾಡಿದ ಮಾತುಗಳು ಅವರಿಗೇ ತಿರುಗುಬಾಣವಾಗುತ್ತಿವೆ. ಸಂಸ್ಕಾರ ಮತ್ತು ಸಭ್ಯತೆಯ ಪಾಠ ಮಾಡುತ್ತಿವೆ.

ಮೋದಿಯವರೇನೋ ಮಾಡಿದ್ದನ್ನು ಉಣ್ಣುತ್ತಿದ್ದಾರೆ, ಮೋದಿಯವರನ್ನು ಕಣ್ಣುಮುಚ್ಚಿ ಬೆಂಬಲಿಸಿದ ಭಕ್ತರ ಕತೆಯೇನು?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಭೇಟಿಯ ನಿರೀಕ್ಷೆ ಏನು?

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ 11 ವರ್ಷಗಳ ಬಳಿಕ ಅಮೆರಿಕಕ್ಕೆ ಅಧಿಕೃತ...

ಆಕೃತಿ ಚೌಧರಿ ಪ್ರಕರಣ: IAS ಅಧಿಕಾರಿ ಮೇಧಾರೂಪಂ ವೇತನದಿಂದ 5 ಲಕ್ಷ ರೂ. ದಂಡ ವಸೂಲಿಗೆ ಸುಪ್ರೀಂ ತಡೆಯಾಜ್ಞೆ

ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿದ್ಯಾರ್ಥಿನಿ ಮತ್ತು ಹೋರಾಟಗಾರ್ತಿ ಆಕೃತಿ ಚೌಧರಿ...

CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್: ಸುಪ್ರೀಂ ವಕೀಲರಿಂದ ‘AG’ಗೆ ಪತ್ರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್ ವಿರುದ್ಧ ಉಳಿದಿಬ್ಬರು ಆಯುಕ್ತರು...