ಈ ದಿನ ಸಂಪಾದಕೀಯ | ’30 ದಿನದೊಳಗೆ ನೇರ ನೇಮಕಾತಿ’ -ಮಾತು ತಪ್ಪಿತೇ ಸರ್ಕಾರ?

Date:

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ. ಅವರ ಕಷ್ಟ, ಸಂಕಟ, ಹತಾಶೆಯನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕು. ಅನುಷ್ಠಾನದಲ್ಲಿ ವಿಳಂಬವಾದರೆ, ಅದು ಮತ್ತೊಂದು ಅಪೂರ್ಣ ಭರವಸೆಯಾಗಿ ಉಳಿಯುವ ಅಪಾಯವಿದೆ. ಯುವಜನತೆ ಈಗ ಘೋಷಣೆಗಳಿಗಿಂತ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಧಾರವಾಡದಲ್ಲೊಂದು ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತ್ತು. ಅಂದು ಉದ್ಯೋಗಾಕಾಂಕ್ಷಿ ಯುವಜನತೆ ಬೀದಿಗಿಳಿದು ಪ್ರತಿಭಟಿಸಿತ್ತು, ಹುದುಗಿಟ್ಟ ಆಕ್ರೋಶವನ್ನು ಹೊರಹಾಕಿತ್ತು. ಆ ಆಕ್ರೋಶಭರಿತ ಪ್ರತಿಭಟನೆಗೆ ಬೆಚ್ಚಿದ ರಾಜ್ಯ ಸರ್ಕಾರ, ಫೆಬ್ರವರಿ 26ರಂದು ಸಚಿವ ಸಂಪುಟ ಸಭೆ ಕರೆದು ”ಮುಂದಿನ 30 ದಿನದೊಳಗೆ ನೇರ ನೇಮಕಾತಿ ಪ್ರಕ್ರಿಯೆಯಡಿ 56,432 ಹುದ್ದೆಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ” ಎಂದು ತಿಳಿಸಿತು. ಅದು ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಯಿತು. ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆಯನ್ನೂ ಹುಟ್ಟಿಸಿತು. ಪ್ರತಿಭಟನೆಯೂ ತಣ್ಣಗಾಯಿತು.

- Advertisement -

ಈಗ, ಸರ್ಕಾರವೇ ಹೇಳಿದ್ದ 30 ದಿನಗಳ ಗಡುವು ಮುಗಿದು, 50 ದಿನಗಳತ್ತ ದಾಪುಗಾಲು ಹಾಕುತ್ತಿದೆ. ನೇರ ನೇಮಕಾತಿ ಎನ್ನುವುದು ಬರಿ ಮಾತಿನ ಭರವಸೆಗೆ, ಪತ್ರಿಕಾ ಪ್ರಚಾರಕ್ಕೆ ಸೀಮಿತವಾಯಿತೇ ಎಂಬ ಅನುಮಾನ ಉದ್ಯೋಗಾಕಾಂಕ್ಷಿಗಳನ್ನು ಕಾಡುತ್ತಿದೆ. ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಹೋರಾಟದ ಕೂಗಿಗೆ ಕಿವಿಯಾಗಿದ್ದ ಸರ್ಕಾರ ಈಗ ಕಿವುಡಾಗಿದೆ. ಯಾವುದೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದೆ ಕಾಲಹರಣ ಮಾಡುತ್ತಿದೆ. ಯುವಜನರ ವಯಸ್ಸು ಮೀರುತ್ತಿದ್ದು, ಆತಂಕ ಹೆಚ್ಚಾಗುತ್ತಿದೆ. ಬದುಕು ಕಟ್ಟಿಕೊಳ್ಳುವ ಕನಸುಗಳು ಕಮರಿಹೋಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಶಿಕ್ಷಣ ಪಡೆದ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿರುವ, ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಸರ್ಕಾರದ ಭರವಸೆ ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಉಂಟು ಮಾಡಿದೆ. ಇನ್ನು ಖಾಸಗಿ ವಲಯದತ್ತ ನೋಡಿದರೆ, ಕೆಲಸದ ಭದ್ರತೆಯಿಲ್ಲ, ದಿನಕ್ಕೆ 12 ಗಂಟೆ ದುಡಿದರೂ ಸಮಯಕ್ಕೆ ಸರಿಯಾಗಿ ಸಂಬಳ ಸಿಗುವುದಿಲ್ಲ, ದನಿ ಎತ್ತರಿಸಿದರೆ ಕೆಲಸವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisements

ಇದನ್ನು ಓದಿದ್ದೀರಾ?: ಆಟೋ ಚಾಲಕರ ಸಂಕಟಕ್ಕೆ ಸರ್ಕಾರ ಸ್ಪಂದಿಸಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಐದನೇ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಯನ್ನು ನಿರುದ್ಯೋಗಿಗಳಿಗಾಗಿಯೇ ರೂಪಿಸಿದೆ. ಉತ್ತಮ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿರುದ್ಯೋಗಿಗಳಿಗೆ ಕೊಡಮಾಡುವ ಭತ್ಯೆ, ನಿರುದ್ಯೋಗದ ನೋವನ್ನು ತಾತ್ಕಾಲಿಕವಾಗಿ ಮರೆಮಾಚುವ ಸಾಧನವೇ ಹೊರತು ಶಾಶ್ವತ ಪರಿಹಾರವಲ್ಲ. ಯುವಜನತೆಗೆ ಉದ್ಯೋಗ ಬೇಕು, ಅವಲಂಬನೆ ಅಲ್ಲ. ಏಕೆಂದರೆ ರಾಜಕಾರಣಿಗಳ ಮಕ್ಕಳು ಯಾರೂ ನಿರುದ್ಯೋಗಿಗಳಲ್ಲ, ನಿರುದ್ಯೋಗ ಅವರಿಗೆ ಸಮಸ್ಯೆಯೇ ಅಲ್ಲ. ಬಡ ಯುವಜನರ ಆತಂಕ, ಹತಾಶೆ ಮತ್ತು ಅನಿಶ್ಚಿತತೆ ಅವರಿಗೆ ಅರ್ಥವಾಗುವುದೂ ಇಲ್ಲ.

ಆದರೆ, ಆಳುವ ಸರ್ಕಾರದ ಸಚಿವರು, ಹೊಸ ಯೋಜನೆಗಳನ್ನು ಘೋಷಿಸುವಾಗ, ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಾಗ, ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ, ಶಂಕುಸ್ಥಾಪನೆ ನೆರವೇರಿಸುವಾಗ ‘ಉದ್ಯೋಗಾವಕಾಶಗಳು ಹೆಚ್ಚುತ್ತವೆ’ ಎಂದು ಹೇಳುವುದನ್ನು ಮರೆಯುವುದಿಲ್ಲ. ಅದು ಸುದ್ದಿಯಾಗಬಹುದು, ಪ್ರಚಾರ ಪಡೆಯಬಹುದು- ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ನಿರುದ್ಯೋಗವನ್ನು ರಾಜಕೀಯ ಘೋಷಣೆಗಳ ಅಂಗಳದಿಂದ ಹೊರತಂದು, ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಸ್ಥರು ಇಚ್ಛಾಶಕ್ತಿ ತೋರದಿದ್ದರೆ- ನಿರುದ್ಯೋಗ ಸಮಸ್ಯೆ ಭವಿಷ್ಯದಲ್ಲಿ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವುದರಲ್ಲಿ ಅನುಮಾನವೇ ಇಲ್ಲ.

ಏಕೆಂದರೆ, ಸರ್ಕಾರವೇ ನೇಮಿಸಿದ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣೆ ಆಯೋಗ, ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳಿದ್ದಾರೆ ಎಂದು ವರದಿ ನೀಡಿತ್ತು. ಈ ನಿರುದ್ಯೋಗಿಗಳು ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರಕಾರ ಹಂತ ಹಂತವಾಗಿ ಭರ್ತಿ ಮಾಡಬೇಕಿತ್ತು. ಅದಕ್ಕೆ ಪೂರಕವಾಗಿ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಭುಗಿಲೆದ್ದಿತ್ತು. ಬೆಚ್ಚಿಬಿದ್ದ ಸರ್ಕಾರ ’30 ದಿನದೊಳಗೆ ನೇರ ನೇಮಕಾತಿ’ ಎಂದಿತ್ತು. ಸರ್ಕಾರ ಆ ಹೇಳಿಕೆ ನೀಡುವ ಮುನ್ನ ವಿಭಾಗವಾರು ಹುದ್ದೆಗಳ ಸ್ಪಷ್ಟತೆ, ಹಣಕಾಸು ಇಲಾಖೆಯ ಅನುಮತಿ, ನೇಮಕಾತಿ ಸಂಸ್ಥೆಗಳಾದ ಕೆಪಿಎಸ್‌ಸಿ, ಕೆಇಎಗಳ ಸಿದ್ಧತೆ, ಈಗಾಗಲೇ ನಡೆದ ನೇಮಕಾತಿಗಳಲ್ಲಿನ ನ್ಯಾಯಾಂಗ ಪ್ರಕರಣಗಳು- ಇವುಗಳನ್ನೆಲ್ಲ ಪರಿಶೀಲಿಸಬೇಕಾಗಿತ್ತು, ಪರಿಹರಿಸಿಕೊಳ್ಳಬೇಕಾಗಿತ್ತು.

ಮುಖ್ಯವಾಗಿ, ಶಿಕ್ಷಣ ಮತ್ತು ಉದ್ಯೋಗ ಮಾರುಕಟ್ಟೆಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಕೇವಲ ಘೋಷಣೆಗಳಾಗಿ ಉಳಿಯದೆ, ಉದ್ಯೋಗಕ್ಕೆ ನೇರ ಸಂಪರ್ಕ ಹೊಂದಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಬೇಕು. ಇದರಿಂದ ನಗರಗಳಿಗೆ ಅತಿಯಾದ ವಲಸೆ ಕಡಿಮೆಯಾಗುತ್ತದೆ. ಇದು ನಗರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೈಗಾರಿಕೆಗಳ ಬೆಳವಣಿಗೆ, ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ- ಇವು ದೀರ್ಘಕಾಲಿಕ ಪರಿಹಾರಗಳಾಗಬೇಕು.

ಇದನ್ನು ಓದಿದ್ದೀರಾ?: ಮೋದಿ ಭಾರತದಲ್ಲಿ ಪತ್ರಿಕೋದ್ಯಮವನ್ನು ಜೀವಂತವಾಗಿಟ್ಟ ಜೀವಪರ ಧ್ವನಿಗಳು

ನಿರುದ್ಯೋಗ ನಿವಾರಣೆ ಎಂದರೆ ಕೇವಲ ಕೆಲಸ ಸಿಗುವುದು ಮಾತ್ರವಲ್ಲ; ಅದು ವ್ಯಕ್ತಿ, ಸಮಾಜ ಮತ್ತು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಬಹುಮಟ್ಟಿನ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉದ್ಯೋಗ ಹೆಚ್ಚಾದಂತೆ ಜನರ ಆದಾಯ ಹೆಚ್ಚುತ್ತದೆ. ಖರ್ಚು ಮಾಡುವ ಶಕ್ತಿ ಹೆಚ್ಚಾಗಿ ಮಾರುಕಟ್ಟೆ ಚಟುವಟಿಕೆಗಳು ಚುರುಕಾಗುತ್ತವೆ. ಇದರಿಂದ ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ. ಇದು ಕೇವಲ ಆರ್ಥಿಕ ಲಾಭವಲ್ಲ, ಸಮಾಜದ ಆರೋಗ್ಯಕರ ಮತ್ತು ಸಮತೋಲನಯುತ ಬೆಳವಣಿಗೆಯನ್ನು ಖಚಿತಪಡಿಸುತ್ತದೆ. ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿ ಸಮಾಜದಲ್ಲಿ ಶಾಂತಿ ಮತ್ತು ಸ್ಥಿರತೆ ಮೂಡುತ್ತದೆ.

ನಿರುದ್ಯೋಗ ಎನ್ನುವುದು ಸರಳ ಸಮಸ್ಯೆ ಅಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ. ನಿರುದ್ಯೋಗಿ ಯುವಜನರು ಶ್ರೀಮಂತರ ಮಕ್ಕಳಲ್ಲ. ಅವರ ಕಷ್ಟ, ಸಂಕಟ, ಹತಾಶೆಯನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕು. ಅನುಷ್ಠಾನದಲ್ಲಿ ವಿಳಂಬವಾದರೆ, ಅದು ಮತ್ತೊಂದು ಅಪೂರ್ಣ ಭರವಸೆಯಾಗಿ ಉಳಿಯುವ ಅಪಾಯವಿದೆ. ಯುವಜನತೆ ಈಗ ಘೋಷಣೆಗಳಿಗಿಂತ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ನೇರ ನೇಮಕಾತಿಗೆ ಚಾಲನೆ ನೀಡಬೇಕು. ಕೊಟ್ಟ ಮಾತನ್ನು ಉಳಿಸಿಕೊಂಡು, ಆನಂತರ ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಗ್ರಾಮೀಣ ಪ್ರತಿಭೆಯ ಅಂತಾರಾಷ್ಟ್ರೀಯ ಸಾಧನೆಗೆ ಎಂ.ಬಿ ಪಾಟೀಲ ಮೆಚ್ಚುಗೆ

ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ...

2027ರ ಚುನಾವಣೆ | ಬಿಜೆಪಿಯ ಲೂಟಿ ವಿರುದ್ಧ ಕಾಂಗ್ರೆಸ್ ಸಮರ: ‘ಸೇವ್ ಗೋವಾ’ ಅಭಿಯಾನದಲ್ಲಿ ರಾಹುಲ್ ಸಾಥ್

2027ರ ಗೋವಾ ವಿಧಾನಸಭೆ ಚುನಾವಣೆಗೆ ಭರ್ಜರಿ ತಳಹದಿ ನಿರ್ಮಿಸಲು ಮುಂದಾಗಿರುವ ಕಾಂಗ್ರೆಸ್,...

ಉತ್ತರ ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ವೇಗ ನೀಡಿ: ಉಮಾಶ್ರೀಗೆ ಕುತುಬುದ್ದೀನ್ ಕಾಜಿ ಮನವಿ

ಉತ್ತರ ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ವೇಗ ನೀಡುವುದು, ಬಾಕಿ ಉಳಿದಿರುವ ಕಾಮಗಾರಿಗಳನ್ನು...

ಮಧ್ಯಪ್ರದೇಶ | ಭೀಕರ ಅಪಘಾತ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ, 14 ಮಂದಿ ಸಾವು

ಭಕ್ತರ ಮೇಲೆ ಲಾರಿ ಹರಿದು 14ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿ, 28ಕ್ಕೂ...