ಈ ದಿನ ಸಂಪಾದಕೀಯ | ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಪಾತ್ರಧಾರಿ, ಆರ್‌ಎಸ್‌ಎಸ್‌ ಸೂತ್ರಧಾರಿ!

Date:

ಧರ್ಮೇಂದ್ರ ಪ್ರಧಾನ್‌ಗಿಂತ ಪ್ರಲ್ಹಾದ್ ಜೋಶಿ ಯಾವುದೇ ರೀತಿಯಲ್ಲೂ ಭಿನ್ನರಲ್ಲ. ಇಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಇಬ್ಬರೂ ಪಾತ್ರಧಾರಿಗಳಷ್ಟೆ, ಸೂತ್ರಧಾರಿಗಳು ಆರ್‌ಎಸ್‌ಎಸ್‌. ಅವರು ಹೇಳಿದಂತೆಯೇ ಎಲ್ಲವೂ- ಶಿಕ್ಷಣ ಕ್ಷೇತ್ರವೂ ನಡೆಯಲಿದೆ. 

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ತಕ್ಷಣವೇ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸಂಸದರೊಬ್ಬರನ್ನು ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಿತು.

- Advertisement -

ಕರ್ನಾಟಕದ ಸಂಸದರೊಬ್ಬರು ಕೇಂದ್ರ ಶಿಕ್ಷಣ ಸಚಿವರಾಗಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಬೇಕಿತ್ತು. ಅಧ್ವಾನಗಳ ಆಗರವಾಗಿದ್ದ ಶಿಕ್ಷಣ ಖಾತೆಯನ್ನು ಸರಿದಾರಿಗೆ ತರಲು, ಕೇಂದ್ರ ಸರ್ಕಾರ ಕನ್ನಡಿಗ ಸಂಸದರಿಗೆ ಜವಾಬ್ದಾರಿ ವಹಿಸತಲ್ಲ ಎಂದು ಇಡೀ ಕನ್ನಡನಾಡು ಸಂಭ್ರಮಿಸಬೇಕಾಗಿತ್ತು. ಆದರೆ, ಕನ್ನಡಿಗರಲ್ಲಿ ಅಂತಹ ಉತ್ಸಾಹವೇನೂ ಕಾಣುತ್ತಿಲ್ಲ. ಬದಲಿಗೆ ಪ್ರಲ್ಹಾದ್ ಜೋಶಿಯವರಿಗೆ ಶಿಕ್ಷಣ ಖಾತೆ ದೊರಕಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅದಕ್ಕೆ ಉತ್ತರವಾಗಿ ಆರ್‌ಎಸ್‌ಎಸ್‌, ಪೇಶ್ವೆ ಬ್ರಾಹ್ಮಣ ಮುನ್ನಲೆಗೆ ಬರುತ್ತಿದೆ. ಅದೇ ಅರ್ಹತೆ, ಯೋಗ್ಯತೆಯಾಗಿ ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಒಂದು ಕಾಲದಲ್ಲಿ, ಹುಬ್ಬಳ್ಳಿಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ನೌಕರರಾಗಿದ್ದ ವೆಂಕಟೇಶ್ ಜೋಶಿಯವರು ಗಿರಿಣಿಚಾಳ್ ಪಕ್ಕದ ರೈಲ್ವೆ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು. ಅವರ ಕುಟುಂಬಕ್ಕೆ ರೈಲ್ವೆ ಪಗಾರವೇ ಆಧಾರವಾಗಿತ್ತು. ಅವರ ಮೂರನೇ ಪುತ್ರ ಪ್ರಲ್ಹಾದ್ ಜೋಶಿ ಪದವಿ ಮುಗಿಸಿ ಕೆಲಸವಿಲ್ಲದೆ, ದೇಶಪಾಂಡೆ ನಗರದಲ್ಲಿ ಫೆನಾಯಿಲ್ ಅಂಗಡಿ ತೆರೆದಿದ್ದರು. ಸಾಲದೆಂದು ವಿಆರ್‍ಎಲ್ ಕಚೇರಿಯಲ್ಲಿ ಪಾರ್ಟ್ ಟೈಂ ಕೆಲಸಕ್ಕೂ ಸೇರಿದ್ದರು. ರೈಲ್ವೆ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಪಕ್ಕದ ಮನೆಯ ರೈಲ್ವೆ ನೌಕರನ ಮಗನಾಗಿದ್ದ ಅನಂತಕುಮಾರ್ ಜೊತೆ ಸೇರಿ ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿದ್ದರು. 1993-94ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಆರ್‌ಎಸ್‌ಎಸ್‌ ಧ್ವಜ ಹಾರಿಸುವ ಮೂಲಕ ಬಿಜೆಪಿಗೆ ಬಂದರು.

ಇದನ್ನು ಓದಿದ್ದೀರಾ?: ಸುಪ್ರೀಂ ಮಧ್ಯಂತರ ಆದೇಶ: ವಿದ್ಯಾರ್ಥಿಗಳಿಗೆ ರಕ್ಷಣೆಯೋ? FIRಗಳಿಗೆ ಹಸಿರು ನಿಶಾನೆಯೋ?

ಆರ್‌ಎಸ್‌ಎಸ್‌ ಚೆಡ್ಡಿ ತೊಟ್ಟು ಲಾಠಿ ಬೀಸಿದ್ದೇ ದೇಶಸೇವೆಯಂತೆ ಕಂಡು, ಅನಂತಕುಮಾರ್ ಕೃಪೆಯಿಂದ 2004ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾದರು. ವಾಜಪೇಯಿ ಅಲೆಯಲ್ಲಿ ಗೆದ್ದು ಸಂಸದರಾದರು. 2009 ಮತ್ತು 2014ರಲ್ಲೂ ಗೆದ್ದರು. ಅವರ ಅದೃಷ್ಟಕ್ಕೆ ಟಿಕೆಟ್‌ ಕೊಟ್ಟು ಗೆಲ್ಲಿಸಿದ ಗೆಳೆಯ ಅನಂತಕುಮಾರ್‌ 2019ರಲ್ಲಿ ನಿಧನರಾದರು. ಅಲ್ಲಿಗೆ ಮೂರು ಬಾರಿ ಗೆದ್ದು ಸೀನಿಯಾರಿಟಿ ಸ್ಥಾನಕ್ಕೇರಿದ್ದ, ಪೇಶ್ವೆ ಬ್ರಾಹ್ಮಣ ಜಾತಿ ಮತ್ತು ಸಂಘದ ಬಲವಿದ್ದ ಜೋಶಿಯವರು, ಮೋದಿ ಸಂಪುಟದಲ್ಲಿ ಕಲ್ಲಿದ್ದಲು ಖಾತೆ ಸಚಿವರಾದರು. ಮೋದಿಯವರ ಆಪ್ತ ಉದ್ಯಮಿ ಗೌತಮ್ ಅದಾನಿಯವರಿಗೆ ಕಲ್ಲಿದ್ದಲು ಸರಬರಾಜು ಗುತ್ತಿಗೆ ಕೊಡಿಸುವಲ್ಲಿ- ಹೊರದೇಶದಿಂದ ಕಲ್ಲಿದ್ದಲನ್ನು ಟನ್‌ಗೆ 3,500ರಂತೆ ಖರೀದಿಸಿ, ಕೇಂದ್ರ ಸರ್ಕಾರಕ್ಕೆ ಟನ್‌ಗೆ 6 ಸಾವಿರಕ್ಕೆ ಮಾರುವಲ್ಲಿ- ಅನುಕೂಲ ಮಾಡಿಕೊಟ್ಟರು. ಅದಾನಿ ಪಕ್ಷಕ್ಕೆ ದೇಣಿಗೆ ಕೊಟ್ಟರು. ಜೋಶಿ ಪಕ್ಷಕ್ಕೆ ಬೇಕಾದರು, ಪಕ್ಷ ಜೋಶಿಯವರನ್ನು 2024ರಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರನ್ನಾಗಿಸಿತು. ಪಕ್ಷ ಬಯಸುವ 370ನೇ ವಿಧಿ ರದ್ದತಿ, ಪೌರತ್ವ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್‌ಎಸ್‌ಎಸ್‌ ಈಗ ಕೇಂದ್ರ ಶಿಕ್ಷಣ ಸಚಿವರನ್ನಾಗಿಸಿದೆ, ಅವರು ಶಿಕ್ಷಣ ಕ್ಷೇತ್ರವನ್ನು ಕೇಸರಿಮಯ ಮಾಡಿದರೆ, ಅಲ್ಲಿಗೆ ಜೋಶಿ ಜೀವನ ಪಾವನ.

2004ರಿಂದ ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಲ್ಹಾದ್ ಜೋಶಿಯವರು, ಮೋದಿಯವರ ಆಪ್ತರಾದರೂ, ಮಹತ್ವದ ಖಾತೆಗಳ ಸಚಿವರಾಗಿದ್ದರೂ, ಐದು ಬಾರಿ ಗೆಲ್ಲಿಸಿದ ಧಾರವಾಡ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾದ ಮಹದಾಯಿ ಯೋಜನೆಯನ್ನು ಕಾರ್ಯಗತಗೊಳಿಸಲಿಲ್ಲ. ಕೇಂದ್ರದಿಂದ ಕರ್ನಾಟಕಕ್ಕೆ ಒಂದೇ ಒಂದು ಜನೋಪಯೋಗಿ ಯೋಜನೆ ತರಲಿಲ್ಲ. ಕೊನೆಪಕ್ಷ ಮಹಿಳೆ-ಮಕ್ಕಳ ಬಗೆಗಾದರೂ ಕಾಳಜಿ-ಕಳಕಳಿ ಇದೆಯೇ ಎಂದರೆ, ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಅದನ್ನೂ ಉಳಿಸಿಕೊಳ್ಳಲಿಲ್ಲ.

ಆ ಕಾರಣಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಪ್ರಲ್ಹಾದ್ ಜೋಶಿ ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ’ ಎಂದಿರುವುದು. ಇದು ದೇಶದ ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳ ಭವಿಷ್ಯ ಕುರಿತು ಚಿಂತಿಸುವಂತೆ ಮಾಡಿದೆ.

ಸಿದ್ದರಾಮಯ್ಯನವರು ಹಿರಿಯ ನಾಯಕರು, ಎರಡು ಸಲ ಮುಖ್ಯಮಂತ್ರಿಯಾಗಿದ್ದವರು. ಅವರು ಸಾಕ್ಷಿ ಇಲ್ಲದೆ ಕೇಂದ್ರ ಶಿಕ್ಷಣ ಸಚಿವರ ಕುರಿತು ಅಷ್ಟು ಹಗುರವಾಗಿ ಮಾತನಾಡುವವರಲ್ಲ. ಅದಕ್ಕೆ ಅವರು, 2022ರಲ್ಲಿ ಪ್ರಲ್ಹಾದ್‌ ಜೋಶಿ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡು ಎನ್‌ಡಿಟಿವಿಯ ಪತ್ರಕರ್ತ ಶ್ರೀನಿವಾಸನ್‌ ಜೈನ್‌ ಅವರ ಪ್ರಶ್ನೆಗೆ ಉತ್ತರಿಸಿರುವ ವಿಡಿಯೋ ಸಾಕ್ಷಿಯನ್ನು ದೇಶದ ಜನತೆಯ ಮುಂದಿಟ್ಟಿದ್ದಾರೆ.

2002ರ ಗುಜರಾತ್‌ ಗಲಭೆ ವೇಳೆ ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಮಂದಿ ಆರೋಪಿಗಳನ್ನು ಗುಜರಾತ್‌ ಸರಕಾರ ಸನ್ನಡತೆಯ ಆಧಾರದಲ್ಲಿ 2022ರಲ್ಲಿ ಬಿಡುಗಡೆಗೊಳಿಸಿತ್ತು. ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಬಾರದು ಎಂಬ ಕೇಂದ್ರದ ನಿಯಮವಿದ್ದರೂ, ಉಲ್ಲಂಘಿಸಲಾಗಿತ್ತು. ಅಷ್ಟೇ ಅಲ್ಲ, ಆರೋಪಿಗಳನ್ನು ಹಾರ ಹಾಕಿ ಸ್ವಾಗತಿಸಲಾಗಿತ್ತು. ಸಿಹಿ ಹಂಚಿ ಸಂಭ್ರಮಿಸಲಾಗಿತ್ತು.  

ಆಗ ಬಿಲ್ಕಿಸ್‌ ಬಾನು ಕುಟುಂಬ ಆಘಾತದಿಂದ ತತ್ತರಿಸಿಹೋಗಿತ್ತು. ಅನೇಕ ವರ್ಷಗಳ ಕಾಲ ನಡೆಸಿದ ನಮ್ಮ ಹೋರಾಟ ಒಂದು ಗಳಿಗೆಯಲ್ಲಿ ಮಣ್ಣುಪಾಲಾಗಿದೆ ಎಂದು ಕಣ್ಣೀರು ಹಾಕಿತ್ತು. ಅದು ಸಹಜವಾಗಿಯೇ ದೇಶದ ಜನತೆಯನ್ನು ಕೆರಳಿಸಿ, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿತ್ತು. ಆ ಸಂದರ್ಭದಲ್ಲಿ ಪ್ರಲ್ಹಾದ್‌ ಜೋಶಿ ಅವರು ಅತ್ಯಾಚಾರಿ ಆರೋಪಿಗಳನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು. ಆ ವಿಡಿಯೋ ಈಗ ವೈರಲ್‌ ಆಗುತ್ತಿದೆ.

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಲ್ಹಾದ್ ಜೋಶಿ ಅವರು ಯಾವುದೇ ರೀತಿಯಲ್ಲೂ ಭಿನ್ನರಲ್ಲ. ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ – ಕ್ರಿಶ್ಚಿಯನ್ನರ ಬಗ್ಗೆ ಆರ್‌ಎಸ್‌ಎಸ್‌ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್‌ಎಸ್‌ಎಸ್‌ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ಹವಾಮಾನ ಬದಲಾಗುತ್ತಿದೆ; ಭಾರತ ಎಚ್ಚೆತ್ತುಕೊಳ್ಳಬೇಕಿದೆ!

ಇದಕ್ಕೆ ಪೂರಕವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಕೇಂದ್ರ ಶಿಕ್ಷಣ ಸಚಿವಾಲಯವನ್ನು ಧರ್ಮೇಂದ್ರ ಪ್ರಧಾನ್ ನಡೆಸುತ್ತಿರಲಿಲ್ಲ; ಅದನ್ನು ಆರ್‌ಎಸ್‌ಎಸ್ ನಡೆಸುತ್ತಿತ್ತು. ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿದ್ದ ಒಬ್ಬ ವಿಶೇಷ ಕರ್ತವ್ಯಾಧಿಕಾರಿ ಅದನ್ನು ನಡೆಸುತ್ತಿದ್ದರು. ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು ಆರ್‌ಎಸ್‌ಎಸ್‌ನವರೇ. ಆರ್‌ಎಸ್‌ಎಸ್‌ಗೆ ಬೇಕಿರುವುದು ವಿದ್ಯಾರ್ಥಿಗಳಲ್ಲ, ಅಂಧಭಕ್ತರು ಮಾತ್ರ’ ಎಂದಿರುವುದು ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದ ಮೇಲಿಟ್ಟ ‘ಪ್ರೀತಿ’ಯನ್ನು ಬಯಲುಗೊಳಿಸುತ್ತದೆ.

ವಸ್ತುಸ್ಥಿತಿ ಹೀಗಿರುವಾಗ, ಪ್ರಲ್ಹಾದ್ ಜೋಶಿ ಶಿಕ್ಷಣ ಸಚಿವರಾದದ್ದನ್ನು ಕನ್ನಡಿಗರು ಸಂಭ್ರಮಿಸಲು ಸಾಧ್ಯವೇ? 2004ರಿಂದ ನಿರಂತರವಾಗಿ ಐದು ಸಲ ಗೆಲ್ಲಿಸಿದ ಧಾರವಾಡದ ಜನರ ನೀರಿನ ದಾಹವನ್ನೇ ನೀಗಿಸದವರು, ದೇಶದ ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುತ್ತಾರೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...