ಈ ದಿನ ಸಂಪಾದಕೀಯ | ಸತ್ಯವಾಯಿತು ಈದಿನದ ಸಮೀಕ್ಷೆ; ಇದು ಜನರ ಗೆಲುವು

Date:

ಫಲಿತಾಂಶ ಹೊರಬಂದಿರುವ ಈ ಹೊತ್ತಿನಲ್ಲಿ... ನಮ್ಮ ಸಮೀಕ್ಷೆ ನೂರಕ್ಕೆ ನೂರರಷ್ಟು ನಿಜವಾಗಿದೆ. ನಾವು ಜನರನ್ನು ನಂಬಿದೆವು, ಜನರ ನಾಡಿಮಿಡಿತವನ್ನು ನಾಡಿನ ಮುಂದಿಟ್ಟೆವು. ಆ ನಾಡಿಮಿಡಿತವೇ ಫಲಿತಾಂಶವಾಗಿರುವುದರಿಂದ ಇದು ಈದಿನ.ಕಾಂ ಗೆಲುವು; ಹಾಗೂ ಕರ್ನಾಟಕದ ಸಮಸ್ತ ಜನತೆಯ ಗೆಲುವು.

ಸಾರ್ವತ್ರಿಕ ಚುನಾವಣೆ ಎಂದಾಕ್ಷಣ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಮೈ ಕೊಡವಿಕೊಂಡು ಎದ್ದು ನಿಲ್ಲುವ ಕಾಲ. ಅವರೊಂದಿಗೆ ಸುದ್ದಿ ಮಾಧ್ಯಮಗಳು ಸದ್ದು ಮಾಡುವ ಕಾಲ. ಮತ ಚಲಾಯಿಸುವ ಹಕ್ಕು ಹೊಂದಿರುವ ಸಾಮಾನ್ಯ ಪ್ರಜೆ ಪ್ರಭುವಾಗುವ ಕಾಲ. ಇಡೀ ನಾಡು ಪ್ರಜಾಪ್ರಭುತ್ವದ ಹಬ್ಬಕ್ಕೆ ಸಜ್ಜಾಗುವ ಸುಗ್ಗಿ ಕಾಲ. 

ಕಳೆದ ಮೂರು ತಿಂಗಳಿಂದ ಕರ್ನಾಟಕ ಕೂಡ ಅಂತಹ ಸುಗ್ಗಿಯ ಸಂಭ್ರಮದಲ್ಲಿತ್ತು. ಆ ಸಂಭ್ರಮದ ಸವಿ-ಸಾರ ಯಾವ ಪಕ್ಷದ ಪರವಾಗಿದೆ, ಯಾವ ಅಭ್ಯರ್ಥಿಯ ಗೆಲುವಿನಲ್ಲಿ ಅದು ಕಾಣಲಿದೆ ಎಂಬುದನ್ನು ತಿಳಿಯುವ ಕೆಲಸವನ್ನು ಸಾಮಾನ್ಯವಾಗಿ ಓದುಗರನ್ನು/ವೀಕ್ಷಕರನ್ನು ನೆಚ್ಚಿದ ಸುದ್ದಿಸಂಸ್ಥೆಗಳು- ಚುನಾವಣಾಪೂರ್ವ ಸಮೀಕ್ಷೆಗಳ ಮೂಲಕ ಮಾಡುತ್ತಾ ಬಂದಿವೆ. ಅದಕ್ಕೊಂದು ಬಹಳ ದೊಡ್ಡ ಪರಂಪರೆಯೇ ಇದೆ. ಈ ಬಾರಿಯೂ ಹಲವು ಸುದ್ದಿ ಸಂಸ್ಥೆಗಳು ಇಂತಹ ಚುನಾವಣಾಪೂರ್ವ ಸಮೀಕ್ಷೆಗಳನ್ನು ಮಾಡಿವೆ. ಕೆಲವು ಸುದ್ದಿ ಸಂಸ್ಥೆಗಳು ಸಮೀಕ್ಷೆ ಮಾಡುವ ಜವಾಬ್ದಾರಿಯಿಂದ ನುಣುಚಿಕೊಂಡಿವೆ. 

ಹೀಗೆ ನುಣುಚಿಕೊಳ್ಳಲು ಕಾರಣ ಹುಡುಕಿದರೆ- ಸುದ್ದಿ ಸಂಸ್ಥೆಗಳು ಕಾರ್ಪೊರೇಟ್ ಕುಳಗಳ ಕೈವಶವಾಗಿರುವುದು; ಅವರಿಗೆ ತತ್ವ-ಸಿದ್ಧಾಂತಗಳಿಗಿಂತ ಲಾಭವೇ ಮುಖ್ಯವಾಗಿರುವುದು; ಇಂತಹ ಸಂಸ್ಥೆಗಳಲ್ಲಿರುವ ಪತ್ರಕರ್ತರು ಬದುಕುವ ದಾರಿ ಹುಡುಕಿಕೊಂಡು ಪ್ರಭುತ್ವದ ಪುಸಲಾವಣೆಗಿಳಿದಿರುವುದು ಎದ್ದು ಕಾಣುತ್ತದೆ. ಅಂದರೆ ಇವತ್ತಿನ ಮಾಧ್ಯಮ ಜಗತ್ತು ಜನರನ್ನು ನಿರ್ಲಕ್ಷಿಸಿವೆ. ನಿರ್ಲಕ್ಷಿಸುವ ಮೂಲಕ ವಿಶ್ವಾಸವನ್ನೇ ಕಳೆದುಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮತ್ತೊಂದು ಮುಖ್ಯ ಕಾರಣವೆಂದರೆ, 2014ರ ನಂತರ ದೇಶದ ಬಲಪಂಥೀಯ ಸಿದ್ಧಾಂತವನ್ನು ಬಿತ್ತುವ ಬಿಜೆಪಿ ಅಧಿಕಾರಕ್ಕೇರಿದ್ದು. ಅದು ದೇಶದ ಪತ್ರಿಕೋದ್ಯಮವನ್ನು ನಿರ್ವೀರ್ಯಗೊಳಿಸಿದ್ದು. ಪ್ರಶ್ನಿಸುವ ಪತ್ರಕರ್ತರ ಕತ್ತು ಹಿಸುಕಿದ್ದು.

ಇಂತಹ ಸಂಕಷ್ಟದ ಸಂದರ್ಭದಲ್ಲಿ, ಕರ್ನಾಟಕದ ಸಾರ್ವತ್ರಿಕ ಚುನಾವಣೆ ಎದುರಾದ ಗಳಿಗೆಯಲ್ಲಿ ಈದಿನ.ಕಾಂ ಎಂಬ ಜನರಿಂದಲೇ ಕಟ್ಟಲ್ಪಟ್ಟ ಪುಟ್ಟ ಸುದ್ದಿ ಸಂಸ್ಥೆ; ಕೇವಲ ಒಂದು ವರ್ಷ ಪ್ರಾಯದ ಸುದ್ದಿ ಸಂಸ್ಥೆ- ಚುನಾವಣಾಪೂರ್ವ ಸಮೀಕ್ಷೆಯಂತಹ ಬಹಳ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಡಿ ಇಟ್ಟಿತ್ತು. ಹಣಕಾಸಿನ ಬೆಂಬಲವಿಲ್ಲ, ಪತ್ರಿಕೋದ್ಯಮದಲ್ಲಿ ಪಳಗಿದ ಪತ್ರಕರ್ತರ ದಂಡೂ ಇಲ್ಲ. ಆದರೂ ಈದಿನ.ಕಾಂ ಈ ಸಮೀಕ್ಷೆಯ ಸವಾಲನ್ನು ಸ್ವೀಕರಿಸಿತ್ತು.      

ಈ ಚುನಾವಣಾಪೂರ್ವ ಸಮೀಕ್ಷೆಯನ್ನು ರಾಜ್ಯದ 204 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗಿದ್ದು, 1,521 ಮತಗಟ್ಟೆಗಳ 41,169 ಮತದಾರರನ್ನು ಖುದ್ದಾಗಿ ಭೇಟಿ ಮಾಡಿತ್ತು. ಮತದಾರರ ನಾಡಿಮಿಡಿತವನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ತಂಡದ್ದಾಗಿತ್ತು. ಈ ಸಮೀಕ್ಷೆಗಾಗಿ ಸುಮಾರು ಒಂದು ಸಾವಿರ ನಾಗರಿಕ ಪತ್ರಕರ್ತರು, ಸ್ನಾತಕೋತ್ತರ ಪದವೀಧರರು ಹಾಗೂ ಸಾಮಾಜಿಕ ಕಾರ್ಯಕರ್ತರು ಕೈಜೋಡಿಸಿದ್ದರು. ಮಾರ್ಚ್ 3ರಿಂದ ಎಪ್ರಿಲ್ 21 ರವರೆಗೆ, ರಾಜ್ಯದಾದ್ಯಂತ ಸುತ್ತಾಡಿ ಜನರನ್ನು ಮುಟ್ಟಿ ಮಾತನಾಡಿಸಿ ಬಂದಿದ್ದರು. ನೆಲಮಟ್ಟದಿಂದ ಎತ್ತಿಕೊಂಡು ಬಂದ ಮಾಹಿತಿಯನ್ನು ತಟ್ಟಿ ನೋಡಿದ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ಕೊಂಚ ಸಂಶಯಾತ್ಮಕ ಎನಿಸಿದ ಮಾಹಿತಿಯನ್ನು ನಿರ್ದಾಕ್ಷಿಣ್ಯವಾಗಿ ಕಸದ ಬುಟ್ಟಿಗೆಸೆದು, 41 ಸಾವಿರ ಸ್ಯಾಂಪಲ್ ಸರ್ವೇಯನ್ನು ಅಂತಿಮಗೊಳಿಸಿದರು. ಅದನ್ನು ಅವರು ವೈಜ್ಞಾನಿಕವಾಗಿ ವಿಂಗಡಿಸಿ, ಸಮೀಕ್ಷೆಯ ರೀತಿ ರಿವಾಜುಗಳಿಗೊಳಪಡಿಸಿ, ಸಮೀಕ್ಷೆಗೊಂದು ಅಂತಿಮ ರೂಪ ಕೊಟ್ಟರು. ಸಮೀಕ್ಷೆಯನ್ನು ವಿಜ್ಞಾನವೆಂದು ಕರೆದರು.

ಯೋಗೇಂದ್ರ ಯಾದವ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ ಇದೆ ಎನ್ನುವುದು ಮೇಲ್ನೋಟಕ್ಕೇ ಗೋಚರಿಸುತ್ತಿತ್ತು. ಅದನ್ನವರು ಅಷ್ಟೇ ವೈಜ್ಞಾನಿಕವಾಗಿ ವಿಂಗಡಿಸಿ- ನಮ್ಮ ಕೆಲಸವನ್ನು ನಾವು ತುಂಬಾ ಪ್ರಾಮಾಣಿಕತೆಯಿಂದ ಮಾಡಿದ್ದೇವೆ, ಆ ಪ್ರಾಮಾಣಿಕತೆಯೇ ನಮ್ಮ ಬೆನ್ನಿಗೆ ನಿಂತು ನಮಗೆ ಧೈರ್ಯ ತುಂಬಲಿದೆ, ಜನಬೆಂಬಲ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಆ ನಮ್ಮ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಪಕ್ಷ 132ರಿಂದ 140, ಬಿಜೆಪಿ 57ರಿಂದ 65, ಜೆಡಿಎಸ್ 19ರಿಂದ 25 ಮತ್ತು ಪಕ್ಷೇತರರು 1ರಿಂದ 5 ಸ್ಥಾನಗಳನ್ನು ಗಳಿಸಲಿದ್ದಾರೆ ಎಂದು ಹೇಳಲಾಗಿತ್ತು. ಹಾಗೆಯೇ ಪಕ್ಷಗಳ ಮತ ಹಂಚಿಕೆಯ ಪ್ರಮಾಣ- ಕಾಂಗ್ರೆಸ್ 43%, ಬಿಜೆಪಿ 33%, ಜೆಡಿಎಸ್ 16% ಹಾಗೂ ಪಕ್ಷೇತರರು 8% ಎಂದು ಅಷ್ಟೇ ನಿಖರವಾಗಿ ದಾಖಲಿಸಿತ್ತು. ಮತ್ತು ಅದನ್ನು ಈದಿನ.ಕಾಂನಲ್ಲಿ ಪದೆ ಪದೇ ಪ್ರಕಟಿಸುವ ಮೂಲಕ ಬಹಳ ದೊಡ್ಡ ಸವಾಲಿಗೆ ಸಿದ್ಧವಾಗಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯ- ಎದೆ ಸೆಟೆಸಿ ಸೆಣಸುವುದೊಂದೇ ದಾರಿ

ಈದಿನ.ಕಾಂ ಸುದ್ದಿ ಸಂಸ್ಥೆಯ ಈ ಮಾಹಿತಿಯನ್ನು ನಾಡಿನ ಮುಂದಿಡುವಾಗ, ಕೊಂಚ ಅಳುಕಿದ್ದುದು ನಿಜ. ಏಕೆಂದರೆ, ಇಡೀ ದೇಶವೇ ಬಲಕ್ಕೆ ವಾಲಿದೆ, ಮೋದಿ ಭಜನೆಯಲ್ಲಿ ನಿರತವಾಗಿದೆ. ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಜನಾಭಿಪ್ರಾಯವನ್ನು ತಿರುಚುವುದೇ ಸಮೀಕ್ಷೆಯಾಗಿದೆ. ಅದನ್ನು ಒಂದು ಪಕ್ಷದ ಪರವಾದ ಅಲೆಯನ್ನಾಗಿ ಬಿಂಬಿಸುವುದೇ ಮಾಧ್ಯಮಗಳ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಮೀಕ್ಷೆ ಕಾಂಗ್ರೆಸ್ ಅಲೆ ಇದೆ ಎಂದು ಹೇಳಿದರೆ, ನಮ್ಮ ಮಾಧ್ಯಮ ಸಂಸ್ಥೆಯನ್ನು ಕಾಂಗ್ರೆಸ್ ಪ್ರಾಯೋಜಿತ ಸಮೀಕ್ಷೆ ಎನ್ನುವ ಅನುಮಾನವೂ ಇತ್ತು.  

ಸಂಕಟದ, ಕ್ಷೋಭೆಯ ಕ್ಷಣಗಳಲ್ಲಿ ಸತ್ಯ ಹೇಳುವುದು ಸುಲಭ ಸಾಧ್ಯವಲ್ಲ. ಅದಕ್ಕೆ ಅಸೀಮ ಧೈರ್ಯ ಬೇಕು. ಅಂಥ ಆತ್ಮಸ್ಥೈರ್ಯವನ್ನು ಈದಿನ.ಕಾಂ ಪ್ರಕಟಿಸಿತು. ಅದಕ್ಕೆ ಹಲವರ ತೀವ್ರ ಟೀಕೆ ವ್ಯಕ್ತವಾಯಿತು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ ಎಲ್ ಸಂತೋಷ್‌ರಿಂದ ಹಿಡಿದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವರೆಗೆ ಹಲವರು ತೀವ್ರವಾಗಿ ಟೀಕಿಸಿದರು. ಅವರಿಗೆಲ್ಲ ಈಗ ಚುನಾವಣಾ ಫಲಿತಾಂಶವೇ ಉತ್ತರ ನೀಡುತ್ತಿದೆ.

ಫಲಿತಾಂಶ ಹೊರಬಂದಿರುವ ಈ ಹೊತ್ತಿನಲ್ಲಿ ಹಿಂತಿರುಗಿ ನೋಡಿದರೆ, ನಮ್ಮ ಸಮೀಕ್ಷೆ ನೂರಕ್ಕೆ ನೂರರಷ್ಟು ನಿಜವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಶ್ರಮ ಮತ್ತು ಸ್ವಾರ್ಥರಹಿತ ಸೇವೆ ಸಾರ್ಥಕವಾಗಿದೆ. ಅವರಿಗೆ ನಮ್ಮ ತುಂಬುಹೃದಯದ ಕೃತಜ್ಞತೆಗಳು.

ಜನಸಾಮಾನ್ಯನ ಮೂಕ ಅಳಲಿನಲ್ಲಿ ಸಾಮ್ರಾಜ್ಯಗಳ ಬೀಳಿಸುವ ತಪಃಶಕ್ತಿ ಇದೆ ಎಂದು ಲಂಕೇಶರು ಹೇಳಿದ್ದರು. ನಾವು ಜನರನ್ನು ನಂಬಿದೆವು, ಜನರ ನಾಡಿಮಿಡಿತವನ್ನು ನಾಡಿನ ಮುಂದಿಟ್ಟೆವು. ಆ ನಾಡಿಮಿಡಿತವೇ ಫಲಿತಾಂಶವಾಗಿರುವುದರಿಂದ ಇದು ಈದಿನ.ಕಾಂ ಗೆಲುವು; ಹಾಗೂ ಕರ್ನಾಟಕದ ಸಮಸ್ತ ಜನತೆಯ ಗೆಲುವು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. editorial is a authoritative ,spring of truth representing society and what is missing in society, your paper is a social necessity,
    i could not type in Kannada as my key board abilities are inadequate.
    buying capacity-kolluva samarthya -plays an important role in creating a rumbling in a deprived person-either rich or poor
    which culminates into a- NOT AN UNDER CURRENT – as a invisible one, which becomes cause of action for a wave against a system
    buying capacity is equivalent to ,availability-requirement = if it is surplus wich inculdes money -social health-preethi vishvasa
    samarasya , there is a appreciation to the ruling disposition- here there was a appreciation in anticipation-which failed-again there is a appreciation based on memories -please caution the present disposition, through your mpaper on and on-not on and off.
    include commerce,commercial related matters

    good paper good delivering of thoughts.

    thank you
    R.G.M.

    • ಮೊದಲಿಗೆ ಈದಿನ ಪತ್ರಿಕೆಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಒಂದು ನಿರ್ಭಿಡೆಯ ಪತ್ರಿಕೋದ್ಯಮಕ್ಕಾಗಿ ಮತ್ತೊಂದು ನಿಖರವಾದ ಚುನಾವಣಾ ಫಲಿತಾಂಶ ಸಮೀಕ್ಷೆಗಾಗಿ. ಇವತ್ತು ಶಸ್ತ್ರತ್ಯಾಗ ಮಾಡಿರುವ ಪತ್ರಿಕಾ ಸಮೂಹಗಳು ಮತ್ತು ಕುನ್ನಿ ದೃಶ್ಯ ಮಾಧ್ಯಮಗಳ ಕರ್ಕಶ ಭಜನೆ ಳಗಳ ನಡುವೆ ಈದಿನ ದ ಪರಿಣಾಮಕಾರಿ ಮತ್ತು ನಿರ್ಭೀತ ವರದಿಗಾರಿಕೆಯ ಪ್ರಯತ್ನ ಇನ್ನೂ ಬಹುದೂರ ಸಾಗಲೆಂದು ಹಾರೈಸುತ್ತೇನೆ. ಈದಿನ ಪತ್ರಿಕೆಯ ಕರ್ನಾಟಕ ಚುನಾವಣಾ ಫಲಿತಾಂಶ ಸಮೀಕ್ಷೆಯ ನಿಖರತೆ ಇಂದು ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಗೊಳಗಾಗುತ್ತಿದೆ, ಪ್ರಶಂಸೆಗೊಳಗಾಗುತ್ತಿದೆ. ಆದರೆ ಬೇಸರದ ಸಂಗತಿಯೆಂದರೆ ನಮ್ಮ ಕನ್ನಡ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಈದಿನ ದ ಸಾಧನೆಯನ್ನು ಪ್ರಶಂಸಿಸುವಲ್ಲಿ ಒಂದು ರೀತಿಯ ಉದಾಸೀನತೆ, ಹಿಂಜರಿಕೆಯನ್ನು ತೋರುತ್ತಿದ್ದಾರೆ. ಆದರೂ ಓದುಗ ಸಮೂಹ ಈದಿನ ತಂಡದೊಂದಿಗೆ ಎಂದೆಂದಿಗೂ ಇರುವುದೆಂದು ಹೇಳಬಯಸುತ್ತೇನೆ.

      ಮಧು ಬಿ.ಎನ್.
      ಬೋಕಾರೋ
      ಜಾರ್ಖಂಡ್

      • ನಿಮ್ಮ ಪ್ರೀತಿಗೆ, ಕಾಳಜಿಗೆ, ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು

  2. ಮೊದಲಿಗೆ ಈದಿನ ಪತ್ರಿಕೆಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಒಂದು ನಿರ್ಭಿಡೆಯ ಪತ್ರಿಕೋದ್ಯಮಕ್ಕಾಗಿ ಮತ್ತೊಂದು ನಿಖರವಾದ ಚುನಾವಣಾ ಫಲಿತಾಂಶ ಸಮೀಕ್ಷೆಗಾಗಿ. ಇವತ್ತು ಶಸ್ತ್ರತ್ಯಾಗ ಮಾಡಿರುವ ಪತ್ರಿಕಾ ಸಮೂಹಗಳು ಮತ್ತು ಕುನ್ನಿ ದೃಶ್ಯ ಮಾಧ್ಯಮಗಳ ಕರ್ಕಶ ಭಜನೆ ಳಗಳ ನಡುವೆ ಈದಿನ ದ ಪರಿಣಾಮಕಾರಿ ಮತ್ತು ನಿರ್ಭೀತ ವರದಿಗಾರಿಕೆಯ ಪ್ರಯತ್ನ ಇನ್ನೂ ಬಹುದೂರ ಸಾಗಲೆಂದು ಹಾರೈಸುತ್ತೇನೆ. ಈದಿನ ಪತ್ರಿಕೆಯ ಕರ್ನಾಟಕ ಚುನಾವಣಾ ಫಲಿತಾಂಶ ಸಮೀಕ್ಷೆಯ ನಿಖರತೆ ಇಂದು ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಗೊಳಗಾಗುತ್ತಿದೆ, ಪ್ರಶಂಸೆಗೊಳಗಾಗುತ್ತಿದೆ. ಆದರೆ ಬೇಸರದ ಸಂಗತಿಯೆಂದರೆ ನಮ್ಮ ಕನ್ನಡ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಈದಿನ ದ ಸಾಧನೆಯನ್ನು ಪ್ರಶಂಸಿಸುವಲ್ಲಿ ಒಂದು ರೀತಿಯ ಉದಾಸೀನತೆ, ಹಿಂಜರಿಕೆಯನ್ನು ತೋರುತ್ತಿದ್ದಾರೆ. ಆದರೂ ಓದುಗ ಸಮೂಹ ಈದಿನ ತಂಡದೊಂದಿಗೆ ಎಂದೆಂದಿಗೂ ಇರುವುದೆಂದು ಹೇಳಬಯಸುತ್ತೇನೆ.

    ಮಧು ಬಿ.ಎನ್.
    ಬೋಕಾರೋ
    ಜಾರ್ಖಂಡ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...