ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕಾಯಕಲ್ಪಕ್ಕೆ ಇದು ಸಕಾಲ

Date:

ಸದ್ಯ ದೇಶದ ಯುವಜನತೆ ಕೇಂದ್ರ ಸರ್ಕಾರವನ್ನು ಮಣಿಸಿದ ಹುಮ್ಮಸ್ಸಿನಲ್ಲಿದೆ. ಇದೇ ಸಂದರ್ಭದಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಧ್ವಾನಗಳಿಂದ ಹತಾಶಗೊಂಡ ಉದ್ಯೋಗಾಕಾಂಕ್ಷಿಗಳ ತಲೆಯಲ್ಲಿ ಹೋರಾಟ ಹರಳುಗಟ್ಟುತ್ತಿದೆ. ಅದು ಇನ್ನೊಂದು ಜಂತರ್ ಮಂತರ್ ಜನಾಂದೋಲನವಾಗುವ, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಕೆಪಿಎಸ್‌ಸಿ ಕಾಯಕಲ್ಪಕ್ಕೆ ಕೈಹಾಕಬೇಕಿದೆ.

ಪ್ರಶ್ನೆಪತ್ರಿಕೆ ಸೋರಿಕೆ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ವಿದ್ಯಾರ್ಥಿಗಳು ದೇಶದಾದ್ಯಂತ ಹೋರಾಟಕ್ಕಿಳಿದರು. ಅವರ ಹೋರಾಟದ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟರು. ಬೀದಿಗಿಳಿದು ಹೋರಾಟ ಕಟ್ಟಿದ್ದು ದೇಶದ ಹೊಸ ತಲೆಮಾರಿನ ವಿದ್ಯಾರ್ಥಿಗಳು. ಆ ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಆ ಗೆಲುವಿನಲ್ಲಿ ಗಾಂಧಿಯ ಅಹಿಂಸೆ ಇದೆ, ಅಂಬೇಡ್ಕರ್ ಸಂವಿಧಾನವಿದೆ, ಬಹುತ್ವದ ಬೆರಗಿದೆ. ಪ್ರಜಾಪ್ರಭುತ್ವ ಜೀವಂತವಾಗಿದೆ.

- Advertisement -

ಅಧಿಕಾರಸ್ಥರ ಸುಳ್ಳು ಭರವಸೆಗಳನ್ನು, ಪೊಳ್ಳು ಆಶ್ವಾಸನೆಗಳನ್ನು ಕೇಳಿಸಿಕೊಂಡು ಕೂರುವ ಕಾಲ ಮುಗಿದಿದೆ. ಅಕ್ರಮ, ಅನ್ಯಾಯಗಳನ್ನು ಕಂಡಲ್ಲಿ ಪ್ರಶ್ನಿಸುವ, ಪ್ರತಿಭಟಿಸುವ ಹೊಸ ತಲೆಮಾರು ತಯಾರಾಗಿದೆ. ದೇಶದ ಯುವಜನತೆ, ಆಳುವ ಸರ್ಕಾರಗಳಿಂದ ಉತ್ತರ ಬಯಸುತ್ತಿದೆ. ದೆಹಲಿಯ ಜಂತರ್ ಮಂತರ್ ಹೋರಾಟದ ಗೆಲುವನ್ನು ಸಂಭ್ರಮಿಸಲು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿದ್ದ ಯುವಜನರಲ್ಲಿ ಸಹಜವಾಗಿಯೇ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಬಗ್ಗೆ ಚರ್ಚೆಯಾಗುತ್ತಿತ್ತು. ಅದಕ್ಕೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮದ ಆಡಿಯೋ ಪುರಾವೆವೊದಗಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಸಂಬಂಧಿಕರಿಗೆ ಹಾಗೂ ಹಣ ನೀಡಿದವರಿಗೆ ಹುದ್ದೆ ನೀಡಲಾಗುತ್ತಿದೆ ಎಂದು ಆರೋಪಿಸಿ ಚನ್ನರಾಯಪಟ್ಟಣದ ಪಶು ವೈದ್ಯ ಮಂಜುನಾಥ ಎಂಬುವರು ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಎಸ್. ಶಿವಶಂಕರಪ್ಪ ಸಾಹುಕಾರ್, ಮಾಜಿ ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳು ಮತ್ತು ಆಯ್ಕೆಯಾದ 29 ಅಭ್ಯರ್ಥಿಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜು. 24ರಂದು ದೂರು ದಾಖಲಿಸಿದ್ದರು. ಹುದ್ದೆ ಗಿಟ್ಟಿಸಿಕೊಡಲು ಮಧ್ಯವರ್ತಿಗಳು ಸುಮಾರು 80 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಮತ್ತು ಆಡಿಯೋ ದಾಖಲೆಗಳನ್ನು ಹಾಜರುಪಡಿಸುವುದಾಗಿ ಹೇಳಿದ್ದರು.

ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿತ್ತು. ಅದರ ಬೆನ್ನಲ್ಲೆ ಭಾನುವಾರ ತುರ್ತು ಸಭೆ ನಡೆಸಿದ ಕೆಪಿಎಸ್‌ಸಿ, ಪ್ರಕರಣದ ಆಂತರಿಕ ವಿಚಾರಣೆಗೆ ಉಪಸಮಿತಿ ರಚಿಸಿತು. ಅಷ್ಟೇ ಅಲ್ಲ, ಉಪ ಸಮಿತಿಯು ವರದಿ ಸಲ್ಲಿಸುವವರೆಗೆ ಜುಲೈ 17ರಂದು ಪ್ರಕಟಿಸಿರುವ ಪಶು ವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯಿತು.

ಇದನ್ನು ಓದಿದ್ದೀರಾ?: ಪ್ರಶ್ನೆಗಳ ಮುಖಕ್ಕೆ ಕೋಮು ಹಣೆಪಟ್ಟಿ ತರವಲ್ಲ!

ಸೋಜಿಗದ ಸಂಗತಿ ಎಂದರೆ, ಕೇವಲ ಒಂದು ವಾರದ ಹಿಂದೆ ಇದೇ ಕೆಪಿಎಸ್‌ಸಿ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸುವ ಸಲುವಾಗಿ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ಹಾಕಲು ಸಹಕರಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಆದೇಶ ಹೊರಡಿಸಿದ್ದೂ ಆಗಿತ್ತು.

ಕರ್ನಾಟಕ ಲೋಕಸೇವಾ ಆಯೋಗಕ್ಕೆ 75 ವರ್ಷಗಳ ಭವ್ಯ ಇತಿಹಾಸವಿದೆ. ಇಲ್ಲಿಯವರೆಗೆ 13 ಅಧ್ಯಕ್ಷರು ಮತ್ತು 67 ಸದಸ್ಯರನ್ನು ಕಂಡಿದೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ, ರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಗೊಳಿಸಿದ ಹಿರಿಮೆ ಇದೆ. ಅದಕ್ಕಿಂತ ಹೆಚ್ಚಾಗಿ ಬಡ-ಪ್ರತಿಭಾವಂತರಿಗೆ ಉದ್ಯೋಗ ನೀಡಿ, ಅವರ ಆರ್ಥಿಕ-ಸಾಮಾಜಿಕ ಬದುಕನ್ನು ಬದಲಿಸಿದ ಗೌರವಕ್ಕ ಪಾತ್ರವಾಗಿದೆ. ಅಂತಹ ಒಂದು ಸ್ವಾಯತ್ತ ಸಂಸ್ಥೆಯ ಅಧ್ಯಕ್ಷರನ್ನು ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ನಕಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಯತ್ನಿಸಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಅಮಾನತು ಮಾಡುತ್ತಾರೆಂದರೆ- ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಗೇ, ಜನರಿಟ್ಟ ನಂಬಿಕೆಗೇ ಕೊಳ್ಳಿ ಇಟ್ಟಂತಲ್ಲವೇ?

ಇದೇನು ಹೊಸದಲ್ಲ, ಕಳೆದ 25 ವರ್ಷಗಳಿಂದ ಈ ರೀತಿಯ ಅಧ್ವಾನ ಮತ್ತು ಅನಾಹುತಗಳು ಕೆಪಿಎಸ್‌ಸಿಯಲ್ಲಿ ನಡೆಯುತ್ತಲೇ ಬಂದಿವೆ. ಹಣವುಳ್ಳವರು, ಅಧಿಕಾರಸ್ಥರು, ಪ್ರಭಾವಿಗಳು ಸರ್ಕಾರಿ ಉದ್ಯೋಗ ಗಿಟ್ಟಿಸುತ್ತ, ಬಡ ಮತ್ತು ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುತ್ತಲೇ ಬಂದಿದ್ದಾರೆ.

ಕೆಪಿಎಸ್‌ಸಿ ಪಾರದರ್ಶಕವಾಗಿರಬೇಕು ಎಂದು ಬಯಸುವುದು ನಾಗರಿಕರ ಹಕ್ಕು. ಹಾಗೆಯೇ ಹುದ್ದೆಗಳ ಕನಸು ಕಾಣುವ ರಾಜ್ಯದ ಲಕ್ಷಾಂತರ ಯುವಜನರ ವಿಶ್ವಾಸ ಉಳಿಸಿಕೊಳ್ಳುವುದು ಮತ್ತು ನೇಮಕಾತಿಯು ನ್ಯಾಯಯುತವಾಗಿ ನಡೆಯುತ್ತದೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸುವುದು ಆಯೋಗ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ ಕೂಡ. ಆದರೆ ಜಾತಿ, ಹಣ, ಲಾಬಿಗಳ ಮೂಲಕ ಕೆಪಿಎಸ್‌ಸಿ ಸೇರಿದ ಅಧಿಕಾರಿಗಳ ಮತ್ತು ಅಧ್ಯಕ್ಷ-ಸದಸ್ಯರ ಭ್ರಷ್ಟತೆ, ಅದಕ್ಷತೆ, ಹೊಣೆಹೇಡಿತನ, ಕನ್ನಡ ದ್ರೋಹ, ವೃತ್ತಿಪರವಲ್ಲದ ನಡವಳಿಕೆಗಳಿಂದ ಕೆಪಿಎಸ್‌ಸಿ ಕೊಳೆತು ನಾರುತ್ತಿದೆ.

ಕೆಪಿಎಸ್‌ಸಿ ಈ ಹಂತಕ್ಕೆ ತಲುಪಲು ಎಲ್ಲ ಪಕ್ಷಗಳ ರಾಜಕೀಯ ಧುರೀಣರ ಪಾತ್ರವೂ ಇದೆ. ಬಹಳ ಹಿಂದಿನಿಂದಲೂ ಹಣದಾಸೆಗೆ, ಸ್ವಜನಪಕ್ಷಪಾತಕ್ಕೆ, ಪುಢಾರಿಗಳ ಪುನರ್ವಸತಿಗೆ ಅಧಿಕಾರಸ್ಥ ರಾಜಕಾರಣಿಗಳು ಅನರ್ಹರನ್ನು-ಅಯೋಗ್ಯರನ್ನು ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಎಚ್.ಡಿ.ದೇವೇಗೌಡ ಮತ್ತು ಎಸ್.ಎಂ.ಕೃಷ್ಣರಿಂದ ಡಾ. ಕೃಷ್ಣ, ಸಿದ್ದರಾಮಯ್ಯನವರಿಂದ ಶ್ಯಾಂಭಟ್ಟ, ಯಡಿಯೂರಪ್ಪನವರಿಂದ ಶಿವಶಂಕರಪ್ಪ ಸಾಹುಕಾರ್ ಅಧ್ಯಕ್ಷರಾಗಿ ನೇಮಕವಾದರು. ಇವರ ಅವಧಿಯಲ್ಲಾದ ಪರೀಕ್ಷಾ ಅಕ್ರಮಗಳು, ನೇಮಕಾತಿ ಅಧ್ವಾನಗಳಿಂದ ರಾಜ್ಯದ ಆಡಳಿತಯಂತ್ರ ಭ್ರಷ್ಟಗೊಂಡಿದೆ, ಲೋಕಾಯುಕ್ತ ದಾಳಿಗಳು ನಾಡಿನ ಜನರನ್ನು ಬೆಚ್ಚಿಬೀಳಿಸುತ್ತಿವೆ, ಸರ್ಕಾರಿ ಕಚೇರಿಗಳತ್ತ ಸಾಮಾನ್ಯರು ಕಾಲಿಡದಂತಾಗಿದೆ.

ಇದನ್ನು ಓದಿದ್ದೀರಾ?: ಥ್ಯಾಂಕ್ಯೂ ಪ್ರಧಾನ್, ದಯವಿಟ್ಟು ರಾಜೀನಾಮೆ ನೀಡಬೇಡಿ! 

ಸಾಂವಿಧಾನಿಕ ಸಂಸ್ಥೆಯೊಂದು ಈ ಪರಿ ಕೆಟ್ಟುಹೋಗಿದ್ದನ್ನು ಕಂಡ ಹೈಕೋರ್ಟ್, ‘ನೇಮಕಾತಿ ಪರೀಕ್ಷೆಗಳ ಪರಿಶುದ್ಧತೆಯನ್ನು ಮರಳಿ ತರಬೇಕಾದರೆ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ‍ಪುನರ್‌ ರಚಿಸಬೇಕು, ಗರಿಷ್ಠ ಬದ್ಧತೆ ಉಳ್ಳವರನ್ನು ನೇಮಿಸಬೇಕು. ಲೋಪಗಳನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ, ಕೆಪಿಎಸ್‌ಸಿಯನ್ನು ರದ್ದು ಮಾಡಬೇಕು’ ಎಂದು ಸರ್ಕಾರಕ್ಕೆ ಕಟುವಾಗಿ ಎಚ್ಚರಿಸಿದ್ದೂ ಇದೆ.

ಸದ್ಯ ದೇಶದ ಯುವಜನತೆ ಕೇಂದ್ರ ಸರ್ಕಾರವನ್ನು ಮಣಿಸಿದ ಹುಮ್ಮಸ್ಸಿನಲ್ಲಿದೆ. ಇದೇ ಸಂದರ್ಭದಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಧ್ವಾನಗಳಿಂದ ಹತಾಶಗೊಂಡ ಉದ್ಯೋಗಾಕಾಂಕ್ಷಿಗಳ ತಲೆಯಲ್ಲಿ ಹೋರಾಟ ಹರಳುಗಟ್ಟುತ್ತಿದೆ. ಅದು ಇನ್ನೊಂದು ಜಂತರ್ ಮಂತರ್ ಜನಾಂದೋಲನವಾಗುವ, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಕೆಪಿಎಸ್‌ಸಿ ಕಾಯಕಲ್ಪಕ್ಕೆ ಕೈಹಾಕಬೇಕಿದೆ. ಏಕೆಂದರೆ ಕೆಪಿಎಸ್‌ಸಿಗೆ ಭ್ರಷ್ಟ, ಅದಕ್ಷ, ಅಯೋಗ್ಯರನ್ನು ತುಂಬಿದವರೇ ರಾಜಕಾರಣಿಗಳು. ಕೊಳೆತು ನಾರುತ್ತಿದೆ ಎಂದು ದೂರುತ್ತಿರುವವರು ಕೂಡ ರಾಜಕಾರಣಿಗಳು. ಹಾಗಾಗಿ ಕೆಪಿಎಸ್‌ಸಿಯನ್ನು ಮತ್ತೆ ಜನರ ವಿಶ್ವಾಸಾರ್ಹ ಸಂಸ್ಥೆಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ಆಡಳಿತ ಮತ್ತು ವಿರೋಧ ಪಕ್ಷಗಳದೇ ಆಗಿದೆ. ಆ ನಿಟ್ಟಿನಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು, ಕೊಂಚ ಉದಾರ ಮನಸ್ಸಿನಿಂದ ಕೈ ಜೋಡಿಸಿದರೆ, ಕೆಪಿಎಸ್‌ಸಿ ಉಳಿಯುತ್ತದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...

SIR | ಬೀದರ್ ಜಿಲ್ಲೆಯ 2.15 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ!

ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ...

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...