ಈ ದಿನ ಸಂಪಾದಕೀಯ | ಅಪಾಯಕಾರಿ ಸುಳ್ಳು ಆರೋಪ: ತಪ್ಪು ಯತ್ನಾಳರದ್ದೋ, ಕಾಂಗ್ರೆಸ್ಸಿನವರದ್ದೋ?

Date:

ಆರೋಪ ಬಂದಿರುವುದು ಈ ರಾಜ್ಯದ ಮುಖ್ಯಮಂತ್ರಿಯ ಮೇಲೆ. ರಾಜ್ಯದ ಮುಖ್ಯಮಂತ್ರಿ ಭಯೋತ್ಪಾದಕ ಸಂಘಟನೆಗಳ ಜೊತೆಗಿರುವ ವ್ಯಕ್ತಿಯ ಹತ್ತಿರದ ಸಂಪರ್ಕದಲ್ಲಿರುವ ಆರೋಪವೆಂದರೆ ಅಷ್ಟೊಂದು ಸಲೀಸಾಗಿ ತೆಗೆದುಕೊಳ್ಳಬಹುದೇ? ಅಂತಹ ನಾಯಕ ಯಾವ ರೀತಿಯ ಭರವಸೆಯನ್ನು ರಾಜ್ಯದ ಜನರಿಗೆ ಕೊಡಬಹುದು ಎಂಬ ಪ್ರಶ್ನೆ ಸಲೀಸಾಗಿ ಏಳುತ್ತದೆ. ಯತ್ನಾಳರಂಥವರು ಸೃಷ್ಟಿಯಾಗಿರುವುದು ಬಿಜೆಪಿಯಂತಹ ಪಕ್ಷದ ಅಜೆಂಡಾದ ಕಾರಣದಿಂದ ಮಾತ್ರವಲ್ಲ, ಕಾಂಗ್ರೆಸ್ಸಿನಂತಹ ಪಕ್ಷದ ವೈಫಲ್ಯದಿಂದ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ರಾಜ್ಯದ ವಿರೋಧ ಪಕ್ಷದ ನಾಯಕ ಅಥವಾ ಅದರ ರಾಜ್ಯಾಧ್ಯಕ್ಷನಾಗಬಯಸಿದ್ದ ಕೇಂದ್ರ ಸರ್ಕಾರದ ಮಾಜಿ ಸಚಿವರೊಬ್ಬರು ಅತ್ಯಂತ ಕ್ಷುಲ್ಲಕ ರೀತಿಯಲ್ಲಿ ಅಪಾಯಕಾರಿ ಆರೋಪವೊಂದನ್ನು ಮಾಡಿದ್ದಾರೆ.

ಮೇಲ್ನೋಟಕ್ಕೇ ಸುಳ್ಳೆಂದು ಗೊತ್ತಾಗುತ್ತಿದ್ದ ಆ ಆರೋಪದ ಅಸಲೀಯತ್ತನ್ನು ಪರಿಶೀಲಿಸಲು ಈದಿನ.ಕಾಮ್‌ ಮುಂದಾಯಿತು. ಆಗ ಕಂಡುಬಂದಿದ್ದೆಂದರೆ ಯಾವ ವ್ಯಕ್ತಿ ‘ಐಸಿಸ್‌ ಉಗ್ರರ ಜೊತೆಗೆ ಸಂಬಂಧ ಹೊಂದಿದ್ದು’ ಅವರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆ ಹಂಚಿಕೊಂಡಿದ್ದಾರೆಂದು ಆರೋಪ ಮಾಡಲಾಗಿತ್ತೋ, ಅದೇ ವ್ಯಕ್ತಿಯ ಜೊತೆಗೆ ಕೇಂದ್ರ ಮಂತ್ರಿ ನಿತಿನ್‌ ಗಡ್ಕರಿ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೂ ಕಾಣಿಸಿಕೊಂಡಿದ್ದರು.

ಇಂತಹ ಆರೋಪಕ್ಕೂ ಕನ್ನಡದ ಮಾಧ್ಯಮಗಳು ಪ್ರಚಾರ ಕೊಡುತ್ತವೆ; ಆರೋಪ ಹಸೀ ಸುಳ್ಳು ಎಂದು ಬಟಾಬಯಲಾದ ನಂತರವೂ, ಆರೋಪ ಮಾಡಿದ ಯತ್ನಾಳ್‌ ‘ಅದರ ಕುರಿತು ತನಿಖೆ ನಡೆಸಿ’ ಎಂದು ಸವಾಲೆಸೆಯುತ್ತಾರೆ. ಅದನ್ನೂ ಕನ್ನಡದ ಮಾಧ್ಯಮಗಳು ಪ್ರಸಾರ ಮಾಡುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯತ್ನಾಳ್‌ ಅವರು ಕ್ರಿಮಿನಲ್‌ ಕೃತ್ಯವೆಸಗಿದ್ದಾರೆ; ಅದು ದೇಶದ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ. ಅವರು ಸಂವಿಧಾನದ ಮೇಲೆ ಆಣೆಯಿಟ್ಟು ಪ್ರಮಾಣವಚನ ತೆಗೆದುಕೊಂಡಿದ್ದಾರೆ. ವಾಸ್ತವದಲ್ಲಿ ಒಂದು ಕ್ಷಣವೂ ವಿಧಾನಸಭಾ ಸದಸ್ಯರಾಗಿ ಮುಂದುವರೆಯುವ ಅರ್ಹತೆ ಅವರಿಗಿಲ್ಲ. ಅದು ಕಾನೂನು ಮತ್ತು ಸಂವಿಧಾನದ ತತ್ವ. ನೈತಿಕತೆ ಹಾಗೂ ಮಾನವೀಯತೆ ದೃಷ್ಟಿಯಿಂದಲೂ ಇದು ಅತ್ಯಂತ ಖಂಡನಾರ್ಹ ಕೆಲಸ. ಕಾನೂನು, ಸಂವಿಧಾನಗಳು ಜಾರಿಯಲ್ಲಿದ್ದರೆ ಇಷ್ಟು ಹೊತ್ತಿಗೆ ಅವರು ಜೈಲಿನಲ್ಲಿರಬೇಕಿತ್ತು. ನೈತಿಕತೆ, ಮಾನವೀಯತೆಗಳು ಜಾರಿಯಲ್ಲಿದ್ದರೆ ಇಷ್ಟು ಹೊತ್ತಿಗೆ ಬಿಜೆಪಿಯು ಅವರನ್ನು ಉಚ್ಛಾಟನೆ ಮಾಡಿ, ರಾಜ್ಯದ ಜನತೆಯ ಕ್ಷಮೆ ಕೇಳಬೇಕಿತ್ತು. ಆ ರೀತಿಯಲ್ಲಿ ಒಂದು ಸುಳ್ಳನ್ನು ಬಹಿರಂಗವಾಗಿ ಮತ್ತೆ ಮತ್ತೆ ಹೇಳಿದ್ದಾರೆ.

ಆ ಸುಳ್ಳು ದುರುದ್ದೇಶಪೂರ್ವಕವಾದುದು; ಏಕೆಂದರೆ ಆಕಸ್ಮಿಕವಾಗಿ ಯಾರೋ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿರುವುದೂ ಅಲ್ಲ. ಸದರಿ ಮುಸ್ಲಿಂ ಧಾರ್ಮಿಕ ಗುರು ಸ್ವತಃ ಯತ್ನಾಳ್‌ ಅವರಿಗೆ ಪರಿಚಯವಿರುವ, ಅವರ ನೆರೆಹೊರೆಯವರು. ಪರಸ್ಪರ ಜೊತೆಯಾಗಿ ಓಡಾಡಿದ್ದಾರೆ; ರಾಜಕೀಯವಾಗಿ, ಸಾಮಾಜಿಕವಾಗಿ ಕಾದಾಡಿಯೂ ಇದ್ದಾರೆ. ಅಂದ ಮೇಲೆ ಇದು ಉದ್ದೇಶಪೂರ್ವಕವಾಗಿ ಸಮುದಾಯಗಳ ಮಧ್ಯೆ ದ್ವೇಷ ತಂದಿಡುವ, ಒಂದಿಡೀ ಸಮುದಾಯವನ್ನು ಖಳಗೊಳಿಸುವ ಮತ್ತು ರಾಜ್ಯದ ಮುಖ್ಯಮಂತ್ರಿಯ ಮೇಲೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೆ ತಳುಕು ಹಾಕುವ ಆರೋಪ.

ಆದರೆ, ಬಿಜೆಪಿಯಿಂದ ಅಂತಹ ಯಾವ ನೈತಿಕತೆಗಳನ್ನು ನಿರೀಕ್ಷಿಸುವ ಹಾಗೆಯೇ ಇಲ್ಲ. ಅಲ್ಲಿ ಬಹುಶಃ ಅಮಾನವೀಯತೆ ಮತ್ತು ಅನೈತಿಕತೆಗಳೇ ಅರ್ಹತೆ. ಹಾಗಿರುವುದರಿಂದಲೇ ಈ ಯತ್ನಾಳ್‌ ಏನು ಮಾತಾಡಿದರೂ ಅವರ ಮೇಲೆ ಯಾವ ಕ್ರಮವೂ ಇಲ್ಲ. ಬದಲಿಗೆ ಮತ್ತೆ ಟಿಕೆಟ್‌ ನೀಡಿ ಪುರಸ್ಕಾರ ಮಾಡಲಾಗಿದೆ.

ಇಲ್ಲಿ ಪ್ರಶ್ನೆ ಏಳುವುದು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ಕುರಿತು. ಅವರಿಗೆ ತಮ್ಮ ಮೇಲೆ ಆಗುತ್ತಿರುವ ರಾಜಕೀಯ ದಾಳಿಯ ಕುರಿತು ಆಸಕ್ತಿ ಇರದಿದ್ದರೆ ಅದು ಅವರ ಪಾಡು. ಈಗಾಗಲೇ ತಮ್ಮ ಪಕ್ಷದ ದಿವಂಗತ ನಾಯಕ ಪಂಡಿತ್‌ ನೆಹರೂ ಅವರ ಮೇಲೆ ಆದ ನಿರಂತರ ಅಪಪ್ರಚಾರವು ಅದಕ್ಕೆ ಮಾಡಿರುವ ಅಪಾಯದ ಬಗ್ಗೆಯಾಗಲೀ, ಸ್ವತಃ ಅದರ ಈಗಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ನಡೆದ ವ್ಯವಸ್ಥಿತ ಅಪಪ್ರಚಾರದ ಬಗ್ಗೆಯಾಗಲೀ ಅವರು ಅಷ್ಟು ತಲೆ ಕೆಡಿಸಿಕೊಂಡಂತಿಲ್ಲ. ತಮ್ಮ ಪಕ್ಷವು ಹೀಗೆಯೇ ನಶಿಸಿ ಹೋಗಬೇಕೆಂದು ಅವರು ತೀರ್ಮಾನಿಸಿಕೊಂಡಿದ್ದರೆ ಅವರಿಗೆ ಆ ಸ್ವಾತಂತ್ರ್ಯವಿದೆ.

ಆದರೆ, ಯತ್ನಾಳರ ಈ ಹೇಳಿಕೆಯು ಎರಡು ಅಪಾಯಗಳನ್ನು ತಂದೊಡ್ಡಿದೆ. ರಾಜ್ಯದ ದೊಡ್ಡ ಧಾರ್ಮಿಕ ಮುಖಂಡರಲ್ಲೊಬ್ಬರೂ, ಮುಸ್ಲಿಂ ಸಂಘಟನೆಯೊಂದರ ರಾಜ್ಯಾಧ್ಯಕ್ಷರೂ ಆದ ವ್ಯಕ್ತಿಯ ಕುರಿತು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಪರ್ಕವಿದೆ ಎಂಬ ಸುಳ್ಳು ಆರೋಪ ಜನರ ಮನಸ್ಸಿನಲ್ಲಿ ಯಾವ ಭಾವನೆಯನ್ನು ಮೂಡಿಸಬಹುದು. ಬಿಜೆಪಿ ಹಾಗೂ ಅದರ ಕೂಟದ ವಿವಿಧ ಸಂಘಟನೆಗಳ ಪ್ರಬಲ ಮಾಧ್ಯಮ ಯಂತ್ರಾಂಗವು ನಿಧಾನಕ್ಕೆ ಇಂತಹ ಸುಳ್ಳನ್ನು ಸಾಮಾನ್ಯ ಜ್ಞಾನವಾಗಿ ಪರಿವರ್ತಿಸುವುದರಿಂದ ಅದರಿಂದ ಉಂಟಾಗುವ ಪರಿಣಾಮವೇನು? ಇದನ್ನು ತಡೆಯುವುದು ಈ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಆಡಳಿತ ಪಕ್ಷವಾಗಿ ಅದರ ಜವಾಬ್ದಾರಿ. ಅಷ್ಟೇ ಅಲ್ಲದೇ ತಮ್ಮ ಪ್ರಣಾಳಿಕೆಯಲ್ಲಿ ಈ ರಾಜ್ಯವನ್ನು ʼಸರ್ವಜನಾಂಗದ ಶಾಂತಿಯ ತೋಟʼವಾಗಿಸುವ ಭರವಸೆಯನ್ನೂ ಅವರು ನೀಡಿದ್ದರು! ಅದನ್ನು ಈಡೇರಿಸುವ ಕರ್ತವ್ಯ ಅವರದ್ದಲ್ಲವೇ?

ಎರಡನೆಯ ಅಪಾಯ: ಆರೋಪ ಬಂದಿರುವುದು ಈ ರಾಜ್ಯದ ಮುಖ್ಯಮಂತ್ರಿಯ ಮೇಲೆ. ಅದಕ್ಕೆ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಒಂದು ಟ್ವೀಟ್‌ ಮತ್ತು ಒಂದು ಫೇಸ್‌ ಬುಕ್‌ ಪೋಸ್ಟ್‌ ಅಷ್ಟೇನಾ? ರಾಜ್ಯದ ಮುಖ್ಯಮಂತ್ರಿ ಭಯೋತ್ಪಾದಕ ಸಂಘಟನೆಗಳ ಜೊತೆಗಿರುವ ವ್ಯಕ್ತಿಯ ಹತ್ತಿರದ ಸಂಪರ್ಕದಲ್ಲಿರುವ ಆರೋಪವೆಂದರೆ ಅಷ್ಟೊಂದು ಸಲೀಸಾಗಿ ತೆಗೆದುಕೊಳ್ಳಬಹುದೇ? ಅಂತಹ ನಾಯಕ ಯಾವ ರೀತಿಯ ಭರವಸೆಯನ್ನು ರಾಜ್ಯದ ಜನರಿಗೆ ಕೊಡಬಹುದು ಎಂಬ ಪ್ರಶ್ನೆ ಸಲೀಸಾಗಿ ಏಳುತ್ತದೆ.

ಯತ್ನಾಳರಂಥವರು ಸೃಷ್ಟಿಯಾಗಿರುವುದು ಬಿಜೆಪಿಯಂತಹ ಪಕ್ಷದ ಅಜೆಂಡಾದ ಕಾರಣದಿಂದ ಮಾತ್ರವಲ್ಲ, ಕಾಂಗ್ರೆಸ್ಸಿನಂತಹ ಪಕ್ಷದ ವೈಫಲ್ಯದಿಂದ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ

ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ, ತನ್ನ ಆಡಳಿತವನ್ನು, ಅಭಿವೃದ್ಧಿಯನ್ನು ದೇಶದ...

ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ...