ಈ ದಿನ ಸಂಪಾದಕೀಯ | ಘೋರಿ ಘಜ್ನಿಗೂ ಶ್ರೀರಾಮನ ಸಂಪತ್ತು ಲೂಟಿ ಹೊಡೆದಿರುವವರಿಗೂ ವ್ಯತ್ಯಾಸ ಏನುಳಿಯಿತು?

Date:

ಮೊಘಲರು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿ ಸಂಪತ್ತು ದೋಚುತ್ತಿದ್ದರು. ಇದೀಗ ಹಿಂದೂಗಳ ದೇವಸ್ಥಾನವನ್ನು ಹಿಂದೂಗಳೇ ಲೂಟಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ದೇಣಿಗೆ ನೀಡದವರು, ಮಂದಿರಕ್ಕೆ ಭೇಟಿ ಕೊಡದವರಿಗೆ ಆರೋಪ ಮಾಡುವ ಹಕ್ಕಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಇದು ಕೋಟ್ಯಂತರ ರಾಮ ಭಕ್ತರ, ಹಿಂದೂಗಳ ನಂಬಿಕೆಯ ಪ್ರಶ್ನೆ. ದೇವರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಕೆ ಮಾಡಿಕೊಂಡವರು ಇದಕ್ಕೆ ಉತ್ತರಿಸಲೇಬೇಕಿದೆ.

- Advertisement -

ರಾಮ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂಬ ಪ್ರತಿಜ್ಞೆಯೊಂದಿಗೆ ದೇಶಾದ್ಯಂತ ರಥಯಾತ್ರೆ, ಇಟ್ಟಿಗೆ ಸಂಗ್ರಹ, ದೇಣಿಗೆ ಸಂಗ್ರಹ ಅಭಿಯಾನ ನಡೆಸುತ್ತಾ ಸಂಘ ಪರಿವಾರ ಅಂತಿಮವಾಗಿ ದೇಶದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದಕ್ಕಾಗಿ ದೇಶದೆಲ್ಲೆಡೆ ನಡೆದ ಕೋಮುಗಲಭೆ, ನರಹತ್ಯೆಗಳಿಗೆ ಲೆಕ್ಕವಿಲ್ಲ, ನೆಲಸಮವಾದ ಮಸೀದಿಗಳಿಗೆ ಬರವಿಲ್ಲ. ಹೀಗೆ ಕೋಮು ಧ್ರುವೀಕರಣದ ಮೂಲಕ ಭಾರತೀಯ ಜನತಾ ಪಕ್ಷವನ್ನು ಕಟ್ಟಿದ ಆರೆಸ್ಸೆಸ್‌ ಪರಿವಾರದ ಅಡ್ವಾಣಿ, ವಾಜಪೇಯಿ, ಮುರಳೀ ಮನೋಹರ ಜೋಶಿ, ಉಮಾಭಾರತಿ ಮುಂತಾದ ಮೊದಲ ಸಾಲಿನ ನಾಯಕರೆಲ್ಲ ಈಗ ತೆರೆ ಮರೆಗೆ ಸರಿದಿದ್ದಾರೆ. ಅದರ ಲಾಭ ಪಡೆದ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಅನುಭವಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಮೋದಿಯವರು ಪ್ರಧಾನಿಯಾಗಿ ಮೊದಲ ಅವಧಿ ಮುಗಿಯುವವರೆಗೂ ರಾಮ ಜನ್ಮಭೂಮಿ ಪ್ರಕರಣ ಇತ್ಯರ್ಥವಾಗಿರಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ರಾಮಮಂದಿರ ಪರವಾಗಿ ತೀರ್ಪು ಬರುತ್ತಿದ್ದಂತೆ ಮಂದಿರ ನಿರ್ಮಾಣ ಕಾರ್ಯ ಶುರುವಾಗಿತ್ತು. ೨೦೨೪ರ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿತ್ತು. ಆದರೆ, ಜನವರಿಯಲ್ಲಿ ಇನ್ನೂ ಪೂರ್ಣಗೊಳ್ಳದ ರಾಮ ಮಂದಿರಲ್ಲಿ ಜಾತ್ಯತೀತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಮ ಲಲ್ಲಾನ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಿ ಲೋಕಸಭಾ ಚುನಾವಣೆಯ ಪ್ರಚಾರ ಶುರು ಮಾಡಿದ್ದರು. ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಶ್ರೀರಾಮನನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ಪಕ್ಷ ಬಿಜೆಪಿ. ಸಂಸತ್ತಿನೊಳಗೂ, ಹೊರಗೂ ಶ್ರೀರಾಮನ ಜಪ ಮಾಡುವ ಬಿಜೆಪಿಗರು ಈಗ ರಾಮ ಮಂದಿರದ ಅವ್ಯವಹಾರ, ಒಳಗಿದ್ದವರೇ ನಡೆಸಿದ ದರೋಡೆ ಬಗ್ಗೆ ಆರೋಪ ಮಾಡುವ ವಿಪಕ್ಷಗಳ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ತಮಾಷೆಯಾಗಿದೆ.

ಐನೂರು ವರ್ಷಗಳ ಹಿಂದೂಗಳ ಹೋರಾಟ, ರಾಮ ಮಂದಿರ ನಿರ್ಮಾಣದ ಕನಸನ್ನು ಮೋದಿಜಿ ನನಸಾಗಿಸಿದ್ದಾರೆ ಎಂದು ಹೇಳುವ ಮೋದಿ ಭಕ್ತರಿಗೆ ಈಗ ಪೀಕಲಾಟ ಶುರುವಾಗಿದೆ. ನಿಜವಾದ ಕೋಟ್ಯಂತರ ರಾಮ ಭಕ್ತರ ಭಾವನೆಗಳಿಗೆ ಈಗ ನಿಜಕ್ಕೂ ನೋವಾಗಿದೆ. ‘ಹಿಂದೂ ಖತ್ರೆ ಮೇ ಹೈ’ ಎಂದು ಹೇಳುತ್ತ ರಾಜಕೀಯ ಬೇಳೆ ಬೇಯಿಸಿಕೊಂಡ ಬಿಜೆಪಿಯ ಆಡಳಿತದಲ್ಲಿ ಸಾಕ್ಷಾತ್‌ ಶ್ರೀರಾಮ ಚಂದ್ರ ತನ್ನ‌ ಮಂದಿರದಲ್ಲೂ ಸುರಕ್ಷಿತನಾಗಿಲ್ಲ. ಒಂದು ಕಡೆ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳ ಯುವಕರು ಸಮಾಜಘಾತಕ ಕೆಲಸ ಮಾಡುವಾಗ ರಾಮನ ಹೆಸರು ಹೇಳುತ್ತಿದ್ದಾರೆ. ಮುಸ್ಲಿಮರ ಮೇಲೆ ಹಲ್ಲೆ ಮಾಡುವಾಗ, ಮಸೀದಿಗೆ ಕಲ್ಲು ಹೊಡೆಯುವಾಗ, ಗೋರಕ್ಷಣೆಯ ಹೆಸರಿನಲ್ಲಿ ದಾಂಧಲೆ ನಡೆಸುವಾಗ, ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು ಕೆಣಕಲು ಜೈ ಶ್ರೀರಾಮ್‌ ಘೋಷಣೆ ಕೂಗುವ ಮೂಲ ಶ್ರೀರಾಮನಿಗೆ ಅವಮಾನ ಮಾಡುತ್ತಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೂ ಮೊದಲೇ ದೇಣಿಗೆ ಹಣದ ದುರುಪಯೋಗದ ಬಗ್ಗೆ ಆರೋಪಗಳು ಕೇಳಿ ಬಂದಿತ್ತು. ಆರೆಸ್ಸೆಸ್‌ನಿಂದ ಹೊರ ಬಂದ ಹಲವರು ರಾಮ ಮಂದಿರದ ದೇಣಿಗೆಗೆ, ಬೆಳ್ಳಿ ಬಂಗಾರದ ಇಟ್ಟಿಗೆಗಳಿಗೆ, ವಜ್ರ ವೈಢೂರ್ಯಗಳಿಗೆ ರಸೀದಿ ಕೊಡದಿರುವುದನ್ನು ಬಯಲು ಮಾಡಿದ್ದಾರೆ. ಪ್ರಕರಣ ಕೋರ್ಟ್ ನಲ್ಲಿದ್ದಾಗಲೇ ಕೆತ್ತನೆಯ ಕೆಲಸಗಳು ಆರಂಭಗೊಂಡಿತ್ತು. ತೀರ್ಪು ಬರುತ್ತಿದ್ದಂತೆ ಮೋದಿಯವರು ಅದರ ಲಾಭವನ್ನು ಪಡೆಯಲು ಯತ್ನಿಸಿದ್ದರ ಫಲವಾಗಿ ಎರಡೇ ವರ್ಷಗಳಲ್ಲಿ ರಾಮಮಂದಿರ ಉದ್ಘಾಟನೆ ಆಗುವಂತಾಗಿತ್ತು. ನಿರ್ಮಾಣ ಕಾಮಗಾರಿಯನ್ನು ತನ್ನ ರಾಜಕೀಯ ಮಹತ್ವಾಕಾಂಕ್ಷೆಗೆ ಬಿಜೆಪಿ ಬಳಸಿಕೊಂಡಿತ್ತು. ಅಪೂರ್ಣ ಮಂದಿರವನ್ನು ೨೦೨೪ರ ಜನವರಿಯಲ್ಲಿ ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದರು. ಚುನಾವಣೆಗೆ ಮೂರು ತಿಂಗಳಿರುವಾಗ ಮಂದಿರ ಉದ್ಘಾಟನೆ ಮಾಡಿ ಅದರ ಕ್ರೆಡಿಟ್‌ ಪಡೆಯಲು ಯತ್ನಿಸಿದ್ದರೂ ಅದು ಫಲ ನೀಡಲಿಲ್ಲ, ಅಯೋಧ್ಯೆ ಕ್ಷೇತ್ರದಲ್ಲಿಯೇ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದರು. ಈ ಬಾರಿ ನಾನೂರಕ್ಕೂ ಹೆಚ್ಚು ಸೀಟು ಪಡೆಯುವ ಅತ್ಯುತ್ಸಾಹದಲ್ಲಿದ್ದ ಬಿಜೆಪಿಗೆ ಫಲಿತಾಂಶ ಬಂದಾಗ ಆಘಾತ ಆಗಿತ್ತು. ಹಿಂದಿನ ಸಲಕ್ಕಿಂತ ಕಡಿಮೆ ಸೀಟು ಗಳಿಸಿತ್ತು. ಮಿತ್ರ ಪಕ್ಷಗಳ ಎನ್‌ಡಿಎ ಕೂಟದ ಸರ್ಕಾರ ರಚನೆ ಅನಿವಾರ್ಯವಾಗಿತ್ತು. ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಖಂಡಿತವಾಗಿ ಇದು ವಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿದೆ.

ಕಳೆದ ಮಳೆಗಾಲದಲ್ಲಿ ರಾಮಮಂದಿರದೊಳಗೆ ಮಳೆ ನೀರು ಸೋರಿಕೆಯಾಗಿ ಕಳಪೆ ಕಾಮಗಾರಿಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಒಬ್ಬ ವ್ಯಕ್ತಿಯ ಹಿತಾಸಕ್ತಿಗೆ ಎಲ್ಲವನ್ನೂ ಧಾರೆ ಎರೆಯಲು ಸಿದ್ದರಾಗಿದ್ದ ಬಹುಸಂಖ್ಯಾತ ಹಿಂದೂಗಳು ಈಗ ನಿಜಕ್ಕೂ ‘ಅಪಾಯಕ್ಕೆ’ ಸಿಲುಕಿದ್ದಾರೆ. ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ದೇಶವಿದೇಶದ ಭಕ್ತರು ನೀಡಿದ ಹಣ, ಚಿನ್ನ, ಬೆಳ್ಳಿಯ ವಸ್ತುಗಳು, ಆಭರಣಗಳು, ಹುಂಡಿಗೆ ಹಾಕಿದ ಹಣ ಹೀಗೆ ಸಾವಿರಾರು ಕೋಟಿ ಹಣವನ್ನು ಟ್ರಸ್ಟ್‌ ಮುಖ್ಯಸ್ಥರು, ಸಿಬ್ಬಂದಿ ಎಲ್ಲರೂ ಸೇರಿ ದೋಚಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯೋಗಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಈ ಮಧ್ಯೆ ಆಪ್‌ ಮುಖಂಡ ಅರವಿಂದ ಕೇಜ್ರಿವಾಲ್‌ ಇಂದು ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಯೋಗಿ ಆದಿತ್ಯನಾಥ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ‘ರಾಮ ಭಕ್ತರನ್ನು ಪರೀಕ್ಷಿಸಬೇಡಿ, ಸಾಕ್ಷ್ಯಗಳಿದ್ದರೆ ಎಸ್‌ಐಟಿ ಮುಂದೆ ಸಲ್ಲಿಸಿ’ ಎಂದು ಯೋಗಿ ಆದಿತ್ಯನಾಥ ಉಗ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಡೀ ಟ್ರಸ್ಟ್‌ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಈಗ ಹೊಣೆ ಹೊರಬೇಕಿರುವವರೂ ಅವರೇ ಅಲ್ಲವೇ?

ಆರೋಪ ಕೇಳಿ ಬಂದ ಬೆನ್ನಲ್ಲೇ ಸಿಂಧಿ ಸಮುದಾಯ ಸಂಘಟನೆಯ ಮುಖ್ಯಸ್ಥರು ತಾವು ದೇಣಿಗೆಯಾಗಿ ಕೊಟ್ಟ ೨೦೦ ಕೇಜಿ ಬೆಳ್ಳಿಯ ಬಗ್ಗೆ ಟ್ರಸ್ಟ್‌ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶಿವಸೇನಾ ಮುಖ್ಯಸ್ಥರು ತಾವು ನೀಡಿರುವ ದಾನಕ್ಕೆ ರಸೀದಿಯನ್ನೇ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಮಹಿಳೆಯೊಬ್ಬರು ತಾನು ಬೆಳ್ಳಿಯ ಕಾಗೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಶ್ರೀರಾಮನಿಗೆ ನೀಡಿರುವ ಆಭರಣದಲ್ಲಿದ್ದ ವಜ್ರದ ಹರಳುಗಳು ಕೂಡ ಕಾಣೆಯಾಗಿದೆ ಎಂದು ವರದಿಯಾಗಿದೆ.

ಈ ಲೂಟಿಯಲ್ಲಿ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೆಸರೂ ಕೇಳಿ ಬಂದಿದೆ. ಜೂ. ೨೬ರಂದು ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಎಸ್‌ಐಟಿ ಪ್ರಾಥಮಿಕ ವರದಿ ಆಧರಿಸಿ ಶಂಕಿತ ಆರೋಪಿಗಳ ಪೈಕಿ ಎಂಟು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಒಂದು ದಿನದ ನಂತರ ಅವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಆಪ್ತ ಕೂಡ ಇದ್ದಾನೆ. ಆದರೆ ಚಂಪತ್‌ ರಾಯ್‌ ಅವರನ್ನು ಬಂಧಿಸಿಲ್ಲ. ಇದು ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರ ಎಂಬ ಆರೋಪವೂ ಬಂದಿದೆ. ಈ ಮಧ್ಯೆ ಅಪರಾಧಿಗಳನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ವಿಎಚ್‌ಪಿ ಮುಖಂಡ ಪ್ರವೀಣ್‌ ತೊಗಾಡಿಯಾ ಹೇಳಿದ್ದಾರೆ.

ರಾಮನ ಹೆಸರಿನಲ್ಲಿ ಮತ ಪಡೆದು ದೇಶವನ್ನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸಿ, ಬಹುತ್ವದ ದೇಶವನ್ನು ಹಿಂದೂ ರಾಷ್ಟ್ರ ಮಾಡುವತ್ತ ಕೊಂಡೊಯ್ಯುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಮಮಂದಿರದ ಲೂಟಿಯ ಹೊಣೆ ಹೊರಬೇಕಲ್ಲದೇ ವಿಪಕ್ಷಗಳು ಹೊರಲು ಸಾಧ್ಯವೇ? ಮೊಘಲರು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿ ಸಂಪತ್ತು ದೋಚುತ್ತಿದ್ದರು. ಇದೀಗ ಹಿಂದೂಗಳ ದೇವಸ್ಥಾನವನ್ನು ಹಿಂದೂಗಳೇ ಲೂಟಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ದೇಣಿಗೆ ನೀಡದವರು, ಮಂದಿರಕ್ಕೆ ಭೇಟಿ ಕೊಡದವರಿಗೆ ಆರೋಪ ಮಾಡುವ ಹಕ್ಕಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಇದು ಕೋಟ್ಯಂತರ ರಾಮ ಭಕ್ತರ, ಹಿಂದೂಗಳ ನಂಬಿಕೆಯ ಪ್ರಶ್ನೆ. ದೇವರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಕೆ ಮಾಡಿಕೊಂಡವರು ಇದಕ್ಕೆ ಉತ್ತರಿಸಲೇಬೇಕಿದೆ. ಮಂದಿರಕ್ಕೆ ಶಿಲಾನ್ಯಾಸ ಮಾಡಿದವರು ಪ್ರಧಾನಿ ಮೋದಿ. ರಾಮ ಲಲ್ಲಾನ ಪ್ರತಿಷ್ಠಾಪನೆ ಮಾಡಿದವರೂ ಪ್ರಧಾನಿ ಮೋದಿ. ಈಗ ಮೌನ ವಹಿಸುವುದು ಶ್ರೀರಾಮ ದ್ರೋಹ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...