ಇರ್ಫಾನ್‌ ಖಾನ್‌ ಸ್ಮರಣಾರ್ಥ ತೆರೆಗೆ ಸಜ್ಜಾದ ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ

Date:

ಸಿನಿ ರಸಿಕರ ಗಮನ ಸೆಳೆಯುತ್ತಿದೆ ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಟ್ರೈಲರ್‌

- Advertisement -

ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ಚಿತ್ರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಬಾಲಿವುಡ್‌ನ ಖ್ಯಾತ ನಟ ಇರ್ಫಾನ್‌ ಖಾನ್‌ ನಮ್ಮನ್ನಗಲಿ ಮೂರು ವರ್ಷಗಳು ಕಳೆದಿವೆ. ಆದರೆ, ಅಭಿಮಾನಿಗಳ ಮನಸ್ಸಿನಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ. ಇರ್ಫಾನ್‌ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರು ನಟಿಸಿದ್ದ ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಬುಧವಾರ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ರಾಜಸ್ತಾನದ ಮರುಭೂಮಿಗೆ ಹೊಂದಿಕೊಂಡಿರುವ ಬುಡಕಟ್ಟು ಜನರ ಬದುಕಿನ ಸುತ್ತ ಚಿತ್ರದ ಕಥೆಯನ್ನು ಭಾವನಾತ್ಮಕವಾಗಿ ಹೆಣೆಯಲಾಗಿದೆ. ಇರ್ಫಾನ್‌ ಖಾನ್‌ ಹಳ್ಳಿಗನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಹಾಲಿವುಡ್‌ನ ಖ್ಯಾತ ನಟಿ ಗೋಲ್ಶಿಫ್ತೆ ಫರಹಾನಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟಿ ವಹಿದಾ ರೆಹಮಾನ್‌, ಶಶಾಂಕ್‌ ಅರೋರಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಖ್ಯಾತ ನಿರ್ದೇಶಕ ಅನುಪ್‌ ಸಿಂಗ್‌ ನಿರ್ದೇಶನದ ಈ ಚಿತ್ರ 2017ರ ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಇದೇ ಏಪ್ರಿಲ್‌ 29ಕ್ಕೆ ಇರ್ಫಾನ್‌ ಖಾನ್‌ ನಮ್ಮನ್ನಗಲಿ 3 ವರ್ಷ ಕಳೆಯಲಿದೆ. ಈ ಹಿನ್ನೆಲೆ ಅವರ ಸ್ಮರಣಾರ್ಥ ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಚಿತ್ರವನ್ನು ಏ. 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಇರ್ಫಾನ್‌ ಖಾನ್‌ ಸಾವನ್ನಪ್ಪುವ ಒಂದು ತಿಂಗಳು ಮುನ್ನ ಅಂದರೆ 2020ರ ಮಾರ್ಚ್‌ 13ರಂದು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ʼಅಂಗ್ರೇಜಿ ಮೀಡಿಯಂʼ ಚಿತ್ರ ತೆರೆಕಂಡಿತ್ತು. ಇದು ಅವರು ಕೊನೆಯದಾಗಿ ನಟಿಸಿದ್ದ ಚಿತ್ರವಾಗಿತ್ತು. ಆದರೆ, ʼದಿ ಸಾಂಗ್‌ ಆಫ್‌ ಸ್ಕಾರ್ಪಿಯನ್ಸ್‌ʼ ಸಿನಿಮಾ, ಚಲನಚಿತ್ರೋತ್ಸವವನ್ನು ಹೊರತುಪಡಿಸಿ ಯಾವುದೇ ಚಿತ್ರಮಂದಿರಗಳಲ್ಲಿ ಈವರೆಗೆ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಇದೀಗ ಇರ್ಫಾನ್‌ ಅವರ ಸ್ಮರಣಾರ್ಥ ಈ ಚಿತ್ರ ತೆರೆಗೆ ಬರುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ತಬ್ಧ ಚಿತ್ರ ಮಾತಾಡಿದಂತೆ, ಶಬ್ದ ಕಣ್ಣಿಗೆ ಕಾಣಿಸುವಂತೆ- ಸಿನೆಮಾದ ತೆರೆಮರೆಯ ತಾತ್ವಿಕತೆ

ಆಫ್-ಸ್ಕ್ರೀನ್ ಶಬ್ದ ಸಿನೆಮಾದ ಕೇವಲ ತಾಂತ್ರಿಕ ಕುಶಲತೆಯಾಗಿರದೆ, ಅದರ ತಾತ್ವಿಕ ದೃಷ್ಟಿಕೋನವನ್ನೇ...

ಆಟೋಕರೆಕ್ಟ್ ಎಡವಟ್ಟು: ‘ಆತ್ಮಹತ್ಯೆ’ ಪೋಸ್ಟ್ ಹಾಕಿ ಮುಂಬೈ ಪೊಲೀಸರ ಬೆವರಿಳಿಸಿದ ಮರಾಠಿ ನಟ!

ಮರಾಠಿ ಚಿತ್ರರಂಗದ ಜನಪ್ರಿಯ ನಟ ವಿಕಾಸ್ ಸಮುದ್ರೆ ಅವರು ಸಾಮಾಜಿಕ ಜಾಲತಾಣದಲ್ಲಿ...

ನಟ ಶಿವರಾಜ್‌ಕುಮಾರ್ ಜನ ಪರವಾಗಿ ನಿಲ್ಲಬೇಕು; ನಟ ಪ್ರಕಾಶ್‌ ರಾಜ್ ಕರೆ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು...

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ತಾತ್ಕಾಲಿಕ ರಿಲೀಫ್, ‘ಮಾಫಿ ಸಾಕ್ಷಿ’ ಆದೇಶ ವಜಾ

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ...