- ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ; ಟೀಕೆ
- ಏ.1ರಿಂದ ಅಗತ್ಯ ಔಷಧಿಗಳ ಬೆಲೆ ಏರಿಕೆ – ಬಡವರಿಗೆ ಮತ್ತೊಂದು ಹೊರೆ
850 ಅನುಸೂಚಿತ ಔಷಧಿಗಳಲ್ಲಿ 650 ಔಷಧಿಗಳ ದರ ಸರಾಸರಿ ಶೇ.6.73ರಷ್ಟು ಕಡಿಮೆಯಾಗಿವೆ ಎಂದು ರಾಷ್ಟ್ರೀಯ ಔಷಧಿಗಳ ದರ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎನ್‌ಪಿಪಿಎ, “ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ (ಎನ್‌ಎಲ್‌ಇಎಂ) 870 ಅನುಸೂಚಿತ ಔಷಧಿಗಳ ಪೈಕಿ, ಈವರೆಗೆ 651 ಔಷಧಿಗಳ ಗರಿಷ್ಠ ದರಗಳ ಮೇಲೆ ಮಿತಿ ಹೇರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ” ಎಂದೂ ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎನ್‌ಎಲ್‌ಇಎಂ ಅನ್ನು ತಿದ್ದುಪಡಿ ಮಾಡಿತ್ತು.
ಕೇಂದ್ರ ಸರ್ಕಾರವು ದರ ಹೆಚ್ಚಳಕ್ಕೆ ಸಂಬಂಧಿಸಿ, ಮಿತಿ ಹೇರಿದ್ದರಿಂದಾಗಿ ಅವುಗಳ ಬೆಲೆ ಏಪ್ರಿಲ್ 1ರಿಂದ ಶೇ.6.73ರಷ್ಟು ಕಡಿಮೆಯಾಗಿವೆ ಎಂದು ಎನ್‌ಪಿಪಿಎ ಹೇಳಿದೆ.
ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಔಷಧಿಗಳ ದರಗಳಲ್ಲಿ ವಾರ್ಷಿಕ ಶೇ.12.12ರಷ್ಟು ಹೆಚ್ಚಳವಾಗಬೇಕಿತ್ತು. ಆದರೆ, ದರಗಳಲ್ಲಿನ ಈ ಕಡಿತದಿಂದಾಗಿ ಗ್ರಾಹಕರಿಗೆ ಲಾಭವಾಗಲಿದೆ ಎಂದು ಎನ್‌ಪಿಪಿಎ ಹೇಳಿಕೊಂಡಿದೆ.
ಕಳೆದ ಮಾ. 25 ರಂದು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಎನ್‌ಪಿಪಿಎ, 2022ಕ್ಕೆ ಸಂಬಂಧಿಸಿ ಸಗಟು ದರ ಸೂಚ್ಯಂಕವು (ಡಬ್ಲ್ಯುಪಿಐ) ಶೇ.12.12ರಷ್ಟಿತ್ತು ಎಂದು ಹೇಳಿತ್ತು.
ಈ ಸುದ್ದಿ ಓದಿದ್ದೀರಾ?: ಆರೋಗ್ಯ ಹಕ್ಕು ಮಸೂದೆ ವಿರುದ್ಧ ರಾಜಸ್ಥಾನದ ವೈದ್ಯರೇಕೆ ತಿರುಗಿ ಬಿದ್ದಿದ್ದಾರೆ?
ಏ.1ರಿಂದ ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, “ಇತ್ತೀಚೆಗೆ ಅಗತ್ಯ ಔಷಧಿಗಳ ದರ ಏರಿಕೆಯ ಬಗ್ಗೆ ಮಾತನಾಡಿದ ಅವರು ಮೋದಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುವಂತಹ ಕೆಲಸ ಮಾಡುತ್ತಿದೆ” ಎಂದು ಟೀಕೆ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಸಮರ್ಥನೆಯ ನೀಡಿದ್ದು, “651 ಅಗತ್ಯ ಔಷಧಿಗಳ ಬೆಲೆ ಏಪ್ರಿಲ್‌ನಿಂದ ಸರಾಸರಿ ಶೇ.6.73 ರಷ್ಟು ಕಡಿಮೆಯಾಗಿದೆ. ಎನ್‌ಎಲ್‌ಇಎಂನಲ್ಲಿರುವ ಔಷಧಿಗಳ ಪೈಕಿ 651 ಅಗತ್ಯ ಔಷಧಿಗಳು ಅಗ್ಗವಾಗಿದ್ದು, ಈ ಸಂಬಂಧ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ. ಈ ಕ್ರಮದಿಂದಾಗಿ, ಗ್ರಾಹಕರ ಜೇಬಿಗೆ ಹೊರೆ ಕಡಿಮೆಯಾಗಿ, ವಾರ್ಷಿಕ ಅಂದಾಜು ₹3,500 ಕೋಟಿಯಷ್ಟು ಉಳಿತಾಯವಾಗಲಿದೆ” ಎಂದು ಹೇಳಿದ್ದಾರೆ.