ಮೈಸೂರು: ದೇವಸ್ಥಾನದಲ್ಲಿ ಡೋಲು ಬಾರಿಸಲು ನಿರಾಕರಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

Date:

ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ನಿರಾಕರಿಸಿದ 65 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್‌ ಎಂ ಶ್ರೀಧರ್‌ ಅವರ ಪ್ರಕಾರ ”ದಲಿತ ಸಮುದಾಯದ ಪರಮಯ್ಯ ಎಂಬುವವರು ಅನಾರೋಗ್ಯದ ಕಾರಣ ಮಾಕೋಡು ಗ್ರಾಮದ ಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯಲ್ಲಿ ಡೋಲು ಬಾರಿಸಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸವರ್ಣೀಯ ಸಮುದಾಯದ ಕುಮಾರ್‌ ಎಂಬಾತ ಜಾತಿ ಹೆಸರಿನಲ್ಲಿ ಕೆಟ್ಟದಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ” ಎಂದು ತಿಳಿಸಿದ್ದಾರೆ.

ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವಿದ್ದು, ದಶಕಗಳಿಂದ ಎಲ್ಲ ಸಮುದಾಯದವರು ಒಟ್ಟಾಗಿ ವಾರ್ಷಿಕ ಪೂಜೆಯನ್ನು ಆಚರಿಸುತ್ತಿದ್ದಾರೆ. ದಲಿತ ಸಮುದಾಯದವರು ಡೋಲು ಬಾರಿಸುತ್ತಾರೆ. ಪರಮಯ್ಯ ಡೋಲು ಬಾರಿಸಲು ನಿರಾಕರಿಸಿದಾಗ ಕುಮಾರ್ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನನ್ನ ತಂದೆ ಅಸ್ವಸ್ಥರಾಗಿದ್ದರು. ಅದಕ್ಕಾಗಿಯೇ ಅವರು ಡೋಲು ಬಾರಿಸಲು ನಿರಾಕರಿಸಿದರು. ದೇವಸ್ಥಾನದ ಸಮಿತಿಯವರಿಗೆ ನಾನು ಜವಾಬ್ದಾರಿ ವಹಿಸುತ್ತೇನೆ ಎಂದು ತಿಳಿಸಿದರೂ ಆರೋಪಿಗಳು ನನ್ನ ತಂದೆಗೆ ಡೋಲು ಬಾರಿಸುವಂತೆ ಒತ್ತಾಯಿಸಿದ್ದಾರೆ. ತಂದೆ ನಿರಾಕರಿಸಿದಾಗ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ’’ ಎಂದು ಪರಮಯ್ಯ ಅವರ ಪುತ್ರ ಬಸವರಾಜು ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭಾರತೀಯ ಮೂಲದ ಸಮೀರ್ ಶಾ ಬಿಬಿಸಿ ಅಧ್ಯಕ್ಷರಾಗಿ ನೇಮಕ

ಮಾಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಶೈಲಜಾ ಮಾತನಾಡಿ, ”ಗ್ರಾಮದ ಆರಾಧ್ಯ ದೈವ ಎನಿಸಿರುವ ಬಸವೇಶ್ವರ ದೇವಸ್ಥಾನದ ಪೂಜೆಯಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದವರು ದಶಕಗಳಿಂದ ಪಾಲ್ಗೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

ಈ ಘಟನೆಯಿಂದ ಗ್ರಾಮದ ಐಕ್ಯತೆಗೆ ಧಕ್ಕೆ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇವಸ್ಥಾನ ಸಮಿತಿ ಹಾಗೂ ಇತರರ ನಡುವಿನ ಬಿಕ್ಕಟ್ಟು ನಿವಾರಣೆಗೆ ಮುಂದಿನ ವಾರದಲ್ಲಿ ಎಲ್ಲ ಸಮುದಾಯಗಳ ಜತೆ ಸಭೆ ನಡೆಸಲಾಗುವುದು ಎಂದರು.

“ಆರೋಪಿ ಕುಮಾರ್ ದೇವಸ್ಥಾನ ಸಮಿತಿಯ ನಿರ್ದೇಶಕನಾಗಿದ್ದು, ನಾವು ಕುಮಾರ್ ವಿರುದ್ಧ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ, ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪಿರಿಯಾಪಟ್ಟಣ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಪರಮಯ್ಯ ಡಿಸ್ಚಾರ್ಜ್ ಆಗಿದ್ದಾರೆ” ಎಂದು ಇನ್‌ಸ್ಪೆಕ್ಟರ್ ಶ್ರೀಧರ್ ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪ್ತಿಯಾದ 2 ಕೋಟಿ ರೂ. ಬಿಜೆಪಿಗೆ ವಾಪಸ್‌; ಅಧಿಕಾರಿಗಳ ಮೇಲೆ ಕೃಷ್ಣ ಬೈರೇಗೌಡ ಗರಂ

"ನಾವೂ ಹೀಗೆ ಹಣದ ಮೂಲಕ ವಹಿವಾಟು ನಡೆಸಿದರೆ ನಮ್ಮ ಎಲ್ಲಾ ವಹಿವಾಟನ್ನು...

ದುಬೈನಲ್ಲಿ ಭಾರೀ ಮಳೆ; ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ

ಏಪ್ರಿಲ್ 16ರಂದು ಯುಎಇಯ ಇತಿಹಾಸದಲ್ಲೇ ಅತಿ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ...

ಬೆಂಗಳೂರು | ಬಿಜೆಪಿಗೆ ಸೇರಿದ 2 ಕೋಟಿ ಹಣವನ್ನು ವಶಪಡಿಸಿಕೊಂಡ ಚುನಾವಣಾಧಿಕಾರಿಗಳು: ಎಫ್‌ಐಆರ್

ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ...

ಬಿಜೆಪಿ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನಾ ಬರಹ: ಶಿವಸುಂದರ್‌

ಬಿಜೆಪಿಯ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನೆ. ಅವರು ಹೇಳುತ್ತಿರುವುದಕ್ಕೂ ಮತ್ತು ನಡೆದುಕೊಂಡಿರುವುದಕ್ಕೂ ಹೋಲಿಕೆ...