ಮುಳಬಾಗಿಲು : ನಗರದ ಕೆಜಿಎಫ್ ರಸ್ತೆಯಲ್ಲಿರುವ ಪುರಾಣಪ್ರಸಿದ್ಧ ಹಜರತ್ ಬಾಬಾ ಹೈದರ್ ವಲಿ ದರ್ಗಾದ 773ನೇ ವರ್ಷದ ಉರುಸ್ ಕಾರ್ಯಕ್ರಮ ಜನವರಿ 1 ರಿಂದ ಪ್ರಾರಂಭವಾಗಿ ಜನವರಿ 3 ವರೆಗೂ ನಡೆಯಲಿದ್ದು. ದಿನಾಂಕ 30 ಮಂಗಳವಾರ ರಾತ್ರಿ 11:00ಗೆ ತಹಸಿಲ್ದಾರ್ ನೇತೃತ್ವದಲ್ಲಿ ಜೋಗಿ ನಾಶಿನ್, ಬುಧವಾರ 31 ಜನವರಿ ದರ್ಗಾ ಶರೀಫ್ ನಲ್ಲಿ ಅಭಿಷೇಕ, ದಿನಾಂಕ ಗುರುವಾರ 1 ಜನವರಿ ರಾತ್ರಿ 11 ಗಂಟೆಗೆ ಬಾಬಾ ಹೈದರ ವಲಿ ದರ್ಗಾದಿಂದ ಗಂದೋತ್ಸವ ತೆರಳಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮತ್ತೆ ಬೆಳಗ್ಗೆ 5:00ಗೆ ದರ್ಗಾ ಸೇರಿ ಫತೇಹ ಮಾಡಲಾಗುವುದು.
ಇದನ್ನು ಓದಿದ್ದೀರಾ..? ಅಪಘಾತದಲ್ಲಿ ಅಜ್ಜವಾರದ 4 ಮಂದಿ ಯುವಕರು ಸಾವು: ಮೃತರ ಸ್ವ-ಗ್ರಾಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೇಟಿ
ದಿನಾಂಕ 2 ಜನವರಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6:00 ವರ್ಗು ಶಾಂತಿ, ಸಂತೋಷದ ಕುಸ್ತಿ ಸ್ಪರ್ಧೆಗಳು ಹಾಗೂ ರಾತ್ರಿ 10 ಗಂಟೆಗೆ ಕವಾಲಿ ಕಾರ್ಯಕ್ರಮ. ಜನವರಿ 3 ಮಧ್ಯಾಹ್ನ 3:00ಯಿಂದ 6 ಗಂಟೆವರೆಗೂ
ಕುಸ್ತಿ ಪಂದ್ಯಾವಳಿ ಇರುತ್ತದೆ. ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದಿರುವ ಪೈಲ್ವಾನ್ ಗಳಿಗೆ ಉರುಸ್ ಕಮಿಟಿ ವತಿಯಿಂದ ಬಹುಮಾನ ವಿತರಣೆ ಆಗುತ್ತದೆ. ಇದೇ ದಿನ ರಾತ್ರಿ ಕವಾಲಿ ಕಾರ್ಯಕ್ರಮ ಮತ್ತು ಜೋಗಿ ನಶಿನ್ ಕಾರ್ಯಕ್ರಮ ಸಮರ್ಥಿ ಆಗುತ್ತದೆ.
ಪುರಾಣ ಪ್ರಸಿದ್ಧ ಹಜರತ್ ಬಾಬಾ ಹೈದರ್ ವಲಿ ದರ್ಗಾದ 773ನೇ ವರ್ಷದ ಉರುಸ್ ಕಾರ್ಯಕ್ರಮ
- Advertisement -
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




