೧.೫೦ ಲಕ್ಷ ಬಹುಮಾನ ಗೆದ್ದು ಬೀಗಿದ ತಮಿಳುನಾಡು, ಲಕ್ನೋ, ಪುಣೆ ತಂಡಗಳು

Date:

ಚಿಕ್ಕಬಳ್ಳಾಪುರ : ನಾಗಾರ್ಜುನ ಕಾಲೇಜಿನಲ್ಲಿ ಸುಮಾರು ಒಂದು ವಾರದಿಂದ ಮನೆಮಾಡಿದ್ದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ – ೨೦೨೫ರ ಸಂಭ್ರಮಕ್ಕೆ ಮಂಗಳವಾರ ರಾತ್ರಿ ತೆರೆ ಬಿದ್ದಿತು.

- Advertisement -

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಕಾರ್ಯಕ್ರಮದ ಅಂಗವಾಗಿ ನಾಗಾರ್ಜುನ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ತರಹೇವಾರಿ ತಯಾರಿಗಳು ನಡೆದಿದ್ದವು. ಸರಿಸುಮಾರು ೨೦ ಕಮಿಟಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದವು. ಸೋಮವಾರ ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಚಾಲನೆ ಪಡೆದುಕೊಂಡಿತ್ತು. ದೇಶದ ೧೧ ರಾಜ್ಯಗಳಿಂದ ಸುಮಾರು ೧೮ ತಂಡಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ...

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ʼಈ ದಿನʼ ಸುದ್ದಿ ವಿಶ್ಲೇಷಣೆ | ಇಂದಿರಾ ಅವರನ್ನು...

ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಬೆಳಕಿನ ಅಧ್ಯಾಯ ದೆಹಲಿಯಲ್ಲಿ...

ಮೋದಿಗೆ ರಾಹುಲ್‌ ಬಹಿರಂಗ ಸವಾಲು; ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಟ...

ಭಾರತೀಯ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಬಿಂದು ರಾಹುಲ್ ಗಾಂಧಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಲು, ಹತ್ತಿಕ್ಕಲು ಮತ್ತು ನಾಯಕರ ವ್ಯಕ್ತಿತ್ವವನ್ನು ಹನನ...

ಒಂದೊಂದು ರಾಜ್ಯದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಸಮವಸ್ತ್ರ ಧರಿಸಿ, ಅಗತ್ಯ ಸಲಕರಣೆಗಳನ್ನೊತ್ತು ತಂದು ತಮ್ಮ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದವು. ಸೋಮವಾರ ಬೆಳಗ್ಗೆ ೯.೩೦ರಿಂದ ಆರಂಭವಾದ ೩೬ ಗಂಟೆಯ ಕಾರ್ಯಕ್ರಮದಲ್ಲಿ ಎಲ್ಲಾ ತಂಡಗಳು ಶಿಸ್ತು ಸಂಯಮದಿಂದ ಪಾಲ್ಗೊಂಡವು.

ತಂಡಗಳಿಗೆ ಅಗತ್ಯವಿರುವ ನಿರಂತರ ಇಂಟರ್‌ನೆಟ್‌ ಸೌಲಭ್ಯ, ನೀರು, ವಸತಿ, ತಿಂಡಿ ತಿನಿಸುಗಳು, ಲವಲವಿಕೆಗಾಗಿ ಒಳಾಂಗಣ ಕ್ರೀಡೆಗಳಾದ ಚೆಸ್‌, ಟೇಬಲ್‌ ಟೆನಿಸ್‌, ಕೇರಂ ಬೋರ್ಡ್, ಜುಂಬಾ ಡ್ಯಾನ್ಸ್‌ ಮತ್ತು ಯೋಗ ಸೇರಿದಂತೆ‌ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಒದಗಿಸಲಾಗಿತ್ತು.

ಮಂಗಳವಾರ ರಾತ್ರಿ ೯.೩೦ರ ಸುಮಾರಿಗೆ ಆರಂಭವಾದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ.ತಿಪ್ಪೇಸ್ವಾಮಿ ಹಾಗೂ ಇತರೆ ಪ್ರಮುಖರ ಸಮ್ಮುಖದಲ್ಲಿ ವಿಜೇತ ತಂಡಗಳ ಹೆಸರುಗಳನ್ನು ಘೋಷಿಸಲಾಯಿತು.

ವಿಜೇತ ತಂಡಗಳ ಪೈಕಿ ತಮಿಳುನಾಡಿನ ಟೆಕ್ಟ್ಸ್‌ಟೈಲ್‌ ನಗರ ಎಂದು ಖ್ಯಾತಿ ಪಡೆದಿರುವ ಎರೋಡೆ ಜಿಲ್ಲೆಯ ಬನ್ನಾರಿ ಅಮ್ಮನ್‌ ತಾಂತ್ರಿಕ ವಿದ್ಯಾಲಯದ ತಂಡ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮರಾಠ್ವಾಡ ಮಿತ್ರ ಮಂಡಳ್ಸ್‌ ಇಂಜಿನಿಯರಿಂಗ್‌ ಕಾಲೇಜು ಮತ್ತು ಜೆಎಸ್‌ಪಿಎಂ ವಿಶ್ವವಿದ್ಯಾಲಯದ ತಂಡಗಳು ಹಾಗೂ ಲಕ್ನೋ ನಗರದ ಬಿ.ಎನ್‌ ಇಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನ ತಂಡ ಸೇರಿದಂತೆ ಒಟ್ಟು ನಾಲ್ಕು ತಂಡಗಳು ತಲಾ ೧.೫ ಲಕ್ಷ ನಗದು ಬಹುಮಾನವನ್ನು ಪಡೆದು ಗೆಲುವಿನ ನಗೆ ಬೀರಿದವು.

ಇದೇ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಐಸಿಟಿಇ ನಿರ್ದೇಶಕ ಡಾ.ಎನ್.‌ಎಚ್.ಸಿದ್ದಲಿಂಗಸ್ವಾಮಿ, ಎಐಸಿಟಿಇ ನೋಡಲ್‌ ಅಧಿಕಾರಿ ರಾಜೀವ್ ಕುಮಾರ್‌, ಡಿಆರ್‌ಡಿಒ ನೋಡಲ್‌ ಅಧಿಕಾರಿ ರಾಜೇಶ್‌ ಯಾದವ್‌ ಹಾಗೂ ಇತರರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಇದನ್ನು ಓದಿದ್ದೀರಾ..? ರಾಷ್ಟ್ರೀಯ ಪಲ್ಸ್ ಪೋಲಿಯೊ ಪೂರ್ವಭಾವಿ ಸಭೆ

ಕಾರ್ಯಕ್ರಮದಲ್ಲಿ ಎನ್‌ಜಿಐ ನಿರ್ದೇಶಕ ಎಸ್‌.ಜಿ.ಗೋಪಾಲಕೃಷ್ಣ, ಎನ್‌ಸಿಇಟಿ ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ಜಿ, ಡಾ.ಯೋಗೀಶ ಎಚ್‌ಸಿ, ಶಾರದಾ ಟಿ, ಡಾ.ಗೋಪಿನಾಥ್‌, ಡಾ.ಸಂಜೀವ್‌ ಕುಮಾರ್ ಸೇರಿದಂತೆ ಎಸ್‌ಐಎಚ್‌ ಕಮಿಟಿ ಸದಸ್ಯರು, ಕಾಲೇಜು ಸಿಬ್ಬಂದಿ ವರ್ಗ ಹಾಜರಿದ್ದರು.

WhatsApp Image 2025 06 24 at 16.24.21 6207fd1d
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ನ.12ರಂದು ಜಿಲ್ಲಾಮಟ್ಟದ ಯುವಜನೋತ್ಸವ

ಯುವಜನರಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ...

ಚಿಕ್ಕಮಗಳೂರು | SIR ಪ್ರಕ್ರಿಯೆ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದಂತೆ; ಸೈಯದ್ ಹನೀಫ್

ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ SIR ಪ್ರಕ್ರಿಯೆ ಆರಂಭಿಸಿದ ನಂತರ...

ವಿಜಯಪುರ | ಜನಗಣತಿ-2027 ನಿಖರವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಮುಂದಿನ ಹತ್ತು ವರ್ಷಗಳ ಅಭಿವೃದ್ಧಿ ಯೋಜನೆ, ಬಜೆಟ್ ಹಂಚಿಕೆ, ಎಸ್‌ಸಿಪಿ-ಟಿಎಸ್‌ಪಿ ಅನುದಾನ...