ಎಸ್‌ಐಓ ಕರ್ನಾಟಕ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಆದಿ ಅಲ್ ಹಸನ್ ಆಯ್ಕೆ

Date:

ರಾಷ್ಟ್ರಿಯ ಮಟ್ಟದ ವಿದ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿರುವ ಸ್ಟೂಡೆಂಟ್ಸ್‌ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್‌ಐಓ) ಇದರ ಕರ್ನಾಟಕ ಘಟಕಕ್ಕೆ 2025-26ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬೆಂಗಳೂರಿನ ಆದಿ ಅಲ್ ಹಸನ್ ಆಯ್ಕೆಯಾಗಿದ್ದಾರೆ.

- Advertisement -

ಉಡುಪಿ ಜಿಲ್ಲೆಯ ಹೂಡೆಯಲ್ಲಿರುವ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ‘ಎಂಎ ಇಂಟರ್‌ ನ್ಯಾಷನಲ್ ರಿಲೇಷನ್‌ಶಿಪ್‌’ನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಆದಿ ಅಲ್ ಹಸನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?

ಎಐಯಿಂದ ಬರಹಗಾರರ ಸ್ಥಾನ ಉಳಿಯುತ್ತದೆಯೇ? ಎಂಬುದಲ್ಲ. ಬದಲಾಗಿ, ಎಐಯ ನೆರವಿನ ನಡುವೆಯೂ ತನ್ನದೇ ಧ್ವನಿಯನ್ನು ಕಾಪಾಡಿಕೊಂಡು, ಸ್ವತಂತ್ರವಾಗಿ ಯೋಚಿಸಿ, ಬದುಕಿನ ನೈಜ ಅನುಭವಗಳನ್ನು ಪ್ರಾಮಾಣಿಕವಾಗಿ ದಾಖಲಿಸುವ ಬರಹಗಾರರು ಎಷ್ಟು ಮುಖ್ಯರಾಗುತ್ತಾರೆ ಎಂಬುದಾಗಿದೆ. ತಂತ್ರಜ್ಞಾನ...

ಹಿಂದೂ ಕೋಡ್ ಬಿಲ್ ಹೋರಾಟಕ್ಕೆ 75 ವರ್ಷ: ಸಮಾನತೆಯ...

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹಿಂದೂ ಕೋಡ್ ಬಿಲ್ ಕೇವಲ ಮಹಿಳಾ ಹಕ್ಕುಗಳ ಮಸೂದೆಯಾಗಿರಲಿಲ್ಲ; ಅದು ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಬಲ ಅಸ್ತ್ರವೂ ಆಗಿತ್ತು. ಜಾತಿ ವ್ಯವಸ್ಥೆಯು ಜೀವಂತವಾಗಿರುವುದೇ 'ಸಜಾತೀಯ...

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್...

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ ಅದು ಕೋಟ್ಯಂತರ ಜನರ ಬದುಕು. ಆ ಬದುಕಿನ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ನಿಜವಾದ ಜವಾಬ್ದಾರಿ. ಒಂದು...

ದೆಹಲಿಯ ಜಾಮಿಯಾ ಮಿಲ್ಲೀಯಾ ಇಸ್ಲಾಮಿಯಾ ವಿವಿಯಿಂದ ಎಂಎ ಪದವೀಧರರಾಗಿರುವ ಇವರು, ಬೆಂಗಳೂರಿನ ನಿವಾಸಿಯಾಗಿದ್ದಾರೆ. ಆದಿ ಅಲ್ ಹಸನ್ ಅವರು, ಎಸ್‌ಐಓ ರಾಷ್ಟ್ರೀಯ ಸಲಹಾ ಸಮಿತಿ ಹಾಗೂ ರಾಜ್ಯ ಸಲಹಾ ಸಮಿತಿಯ ಸದಸ್ಯರೂ ಕೂಡ ಆಗಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅಮೀನ್ ಅಲ್ ಹಸನ್ ಅವರ ಸುಪುತ್ರರಾಗಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಅವರು ಚುನಾವಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ

ಈ ಸಂದರ್ಭದಲ್ಲಿ ಎಸ್ ಐ ಓ ನೂತನ ರಾಷ್ಟ್ರೀಯ ಅಧ್ಯಕ್ಷರಾದ ತೆಲಂಗಾಣದ ಅಬ್ದುಲ್ ಹಫೀಝ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಅನೀಸ್ ರಹ್ಮಾನ್, ಎಸ್‌ಐಓ ಕರ್ನಾಟಕ ಘಟಕದ ನಿರ್ಗಮನ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರೌಂಡ್ ರಿಪೋರ್ಟ್ | ಪೊಲೀಸ್ ಸೂಚನೆ ಸುತ್ತ ವಿವಾದ: ಶಾಂತಿ ಕಾಪಾಡುವ ಕರ್ತವ್ಯಕ್ಕೆ ರಾಜಕೀಯ ಬಣ್ಣ ಬೇಡವೆಂದ ಸ್ಥಳೀಯರು

ಗೌರಿ-ಗಣೇಶ ಹಬ್ಬದ ಅಂಗವಾಗಿ ನಡೆಯುವ ಮೆರವಣಿಗೆ ಹಾಗೂ ಶೋಭಾಯಾತ್ರೆಗಳ ಸಂದರ್ಭದಲ್ಲಿ ಕಾನೂನು...

ಬೆಂಗಳೂರು | ʼನಿನ್ನನ್ನು ಪಾಕಿಸ್ತಾನಕ್ಕೆ ಕಣ್ಮರೆ ಮಾಡುವೆನುʼ: ಮಹಿಳೆಗೆ ಕಿರುಕುಳ, ಎಫ್‌ಐಆರ್

ಬೆಂಗಳೂರು ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ʼಸ್ನೇಹವನ್ನು ಮುರಿದರೆ...

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು: ರೈತರ ಸಮಸ್ಯೆಗಳಿಗೆ ಧ್ವನಿ ಯಾರು?

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ...

ತೆರಿಗೆ ವಂಚನೆ ಪ್ರಕರಣ ಮುಚ್ಚಿಹಾಕಲು ಲಂಚ: ಜಿಎಸ್‌ಟಿ ಅಧಿಕಾರಿ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಪೊಲೀಸರು, ಬೆಂಗಳೂರಿನ ಕೋರಮಂಗಲದಲ್ಲಿ ಕೇಂದ್ರ ಜಿಎಸ್‌ಟಿ ಇಲಾಖೆಯ ಸೂಪರಿಂಟೆಂಡೆಂಟ್ ಮತ್ತು...