ಬೆಂಗಳೂರು | ದಲಿತರು ಭೂ ಒಡೆತನ ಹೊಂದಿಲ್ಲ ; ಅಸ್ಪೃಶ್ಯತೆ ಇನ್ನೂ ಜೀವಂತ : ಎಎಲ್ಎಫ್ ಅಧ್ಯಯನದಲ್ಲಿ ಬಹಿರಂಗ

Date:

ಆಲ್ಟರ್ನೇಟಿವ್ ಲಾ ಫೋರಂ, ಸಂವಿಧಾನ ಸಂರಕ್ಷಣ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಸ್ಥೆಗಳು ಮಂಗಳವಾರ  ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಸಂಶೋಧನ ಅಧ್ಯಯನ ವರದಿಯ ವಿಚಾರಗಳನ್ನು ಮಂಡಿಸಲಾಯಿತು. ಎಸ್‌ಸಿ, ಎಸ್  ಟಿ ಸಮುದಾಯಗಳು ಇನ್ನೂ ಭೂ ರಹಿತರಾಗಿರುವುದು ಮತ್ತು ಅಸ್ಪೃಶ್ಯತೆಯನ್ನು ಎದುರಿಸುತ್ತಿರುವುದನ್ನು ಅಧ್ಯಯನ ಬೆಳಕಿಗೆ ತಂದಿದೆ ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳ ನಿರ್ಲಕ್ಷ್ಯದಿಂದ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಮುಂದುವರಿಯುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಭೂರಹಿತರಿಗೆ ಭೂಹಂಚಿಕೆ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತ ಪ್ರಾಮಾಣಿಕ ಮರುಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಮಾವೇಶದ ಆಗ್ರಹ ಅಟ್ಟ್ರಾಸಿಟೀಸ್ ಕಾಯ್ದೆಯಡಿಯಲ್ಲಿ ಶಿಕ್ಷಾ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಸಲಹೆಗಳು ನೀಡಲಾಗಿದೆ.  ಎಸ್‌ಸಿ, ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸುವ ಮಾರ್ಗಗಳನ್ನು ಚರ್ಚಿಸಲಾಯಿತು. ಇದರಲ್ಲಿ ಅಟ್ಟ್ರಾಸಿಟೀಸ್ ತಡೆ ಕಾಯ್ದೆ, ಪಿಟಿಸಿಎಲ್ ಕಾಯ್ದೆ, ಭೂ ಹಕ್ಕುಗಳಿಗೆ ಸಂಬಂಧಿಸಿದ ಇತರ ಕಾನೂನುಗಳು ಹಾಗೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ” ಕುರಿತು ಚರ್ಚೆ ನಡೆಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...
IMG 20260429 WA0028

ಸ್ವತಂತ್ರ ಸಂಶೋಧಕ ಡಾ. ಸಿದ್ಧಾರ್ಥ ಜೋಶಿ  ಸಮೀಕ್ಷೆಯ ಮುಖ್ಯ ಅಂಶಗಳನ್ನು ಮಂಡಿಸಿದರು :

ಸಮೀಕ್ಷೆಗೊಂಡ ಎಸ್‌ಸಿ/ಎಸ್‌ಟಿ ಕುಟುಂಬಗಳಲ್ಲಿ ಶೇ. 36 ರಷ್ಟು ಇನ್ನೂ ಭೂರಹಿತರಾಗಿದ್ದಾರೆ . ರಾಜ್ಯ ಸರ್ಕಾರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಇಲ್ಲವೆಂದು ಹೇಳಿದರೂ, ಅದು ವ್ಯಾಪಕವಾಗಿ ಮುಂದುವರಿಯುತ್ತಿದೆ ಪಿಟಿಸಿಎಲ್ ಕಾಯ್ದೆಯ ಅನುಷ್ಠಾನವು ಎಸಿ/ಡಿಸಿ ನ್ಯಾಯಾಲಯಗಳಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಹೈಕೋರ್ಟ್ ತೀರ್ಪುಗಳಿಂದ ದುರ್ಬಲಗೊಂಡಿದೆ.  ಸರ್ಕಾರದ ವಕೀಲರೇ ಆಗಲಿ ಅಥವಾ ಕಂದಾಯ ಇಲಾಖೆಯೇ ಆಗಲಿ ಕ್ರಮ ವಹಿಸುತ್ತಿಲ್ಲ. ಬಗರ್ ಹುಕುಂ ಅರ್ಜಿಗಳಲ್ಲಿ ಶೇ. 60ರಷ್ಟು ಬಾಕಿ ಉಳಿದಿದ್ದು, ಭೂ ಕಂದಾಯ ಕಾನೂನು 94ಸಿ ಅಡಿಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ ಮನೆಗಳ ಸಕ್ರಮಗೊಳಿಸುವ ಅರ್ಜಿಗಳಲ್ಲಿ ಶೇ 85 ಬಾಕಿ ಉಳಿದಿವೆ ಎಂದು ವಿವರಿಸಿದರು

ಅಂಗನವಾಡಿ ಕಾರ್ಯಕರ್ತರ ನೇಮಕಾತಿ, ಮಧ್ಯಾಹ್ನ ಊಟದ ಅಡುಗೆಯವರ ನೇಮಕಾತಿ ಹಾಗೂ ಊರು ಜಾತ್ರೆಗಳಂತಹ ಸಾಮಾಜಿಕ ಆಚರಣೆಗಳಲ್ಲಿ ಅಸ್ಪೃಶ್ಯತೆ ಮುಂದುವರಿಯುತ್ತಿದೆ ಎಂದರು

IMG 20260429 WA0029

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ   ಶಶಿಧರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ  ರಣದೀಪ್,  ಅರುಣ್ ಚಕ್ರವರ್ತಿ, ಯುಎನ್ ವಿಶೇಷ ವರದಿಗಾರ್ತಿ  ಅಶ್ವಿನಿ ಕೆಪಿ, ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ  ಚಂದ್ರಮ್ಮ  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾತನಾಡಿ ವಕೀಲರ ಸೇವೆ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಹೇಳಿ, ಅರಿವಿನ ಕೊರತೆಯಿಂದಾಗಿ ಅನೇಕ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅದು ದೊರೆಯುತ್ತಿಲ್ಲ ಎಂದು ವಿಷಾದಿಸಿದರು. 

ನ್ಯಾಯಕ್ಕಾಗಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಸಹಾಯವನ್ನು ಪಡೆಯುವಂತೆ ಅವರು ಕರೆ ನೀಡಿದರು.

ಯುಎನ್ ವಿಶೇಷ ವರದಿಗಾರ್ತಿ ಅಶ್ವಿನಿ ಕೆಪಿ ಮಾತನಾಡಿ  ಕಾನೂನುಗಳ ಅನುಷ್ಠಾನವನ್ನು ಸ್ವತಂತ್ರ ಸಂಶೋಧಕರು ಮಾತ್ರ ಪರಿಶೀಲಿಸುತ್ತಿರುವುದು ದುಃಖಕರ ಎಂದು ಹೇಳಿ, ರಾಜ್ಯವೇ ಇದನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಬೇಕು ಎಂದು ಒತ್ತಾಯಿಸಿದರು.

IMG 20260429 WA0026

ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಚಂದ್ರಮ್ಮ ಮಾತನಾಡಿ  ನಗರಗಳ ಬಡಾವಣಿಗಳಲ್ಲೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಎಸ್‌ಸಿ/ಎಸ್‌ಟಿ ಮಹಿಳೆಯರು ಭದ್ರತೆ ಮತ್ತು ಸ್ವಾತಂತ್ರ್ಯದ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಸರ್ಕಾರವು ನಾಗರಿಕ ಸಮಾಜದ ಒತ್ತಡವಿಲ್ಲದೆ ಸ್ವಯಂಪ್ರೇರಿತವಾಗಿ ಈ ಕಾನೂನುಗಳನ್ನು ಜಾರಿಗೆ ತರಬೇಕು ಎಂದು  ಹೇಳಿದರು.

ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆ ಕುರಿತು ನಡೆದ ಪ್ಯಾನೆಲ್ ಚರ್ಚೆಯಲ್ಲಿ ಡಾ. ಕೆ.ಬಿ. ಒಬಲೇಶ್ ಅವರು 2023ರಲ್ಲಿ ಸುಪ್ರೀಂ ಕೋರ್ಟ್ ಹೊಸ ಸಮೀಕ್ಷೆಗೆ ಆದೇಶಿಸಿದ್ದರೂ, ಕರ್ನಾಟಕ ಸರ್ಕಾರ ಅರ್ಧಮನಸ್ಸಿನಿಂದ ಸಮೀಕ್ಷೆ ನಡೆಸಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಇಲ್ಲವೆಂದು ಘೋಷಿಸಿದೆ ಎಂದು ಟೀಕಿಸಿದರು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಈ ಪದ್ಧತಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. ಶ್ರೀಮತಿ ಪದ್ಮಾ ಅವರು ಪುನರ್ವಸತಿ ಕುರಿತು ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ಯಾವುದೇ ಗಂಭೀರ ಪ್ರಯತ್ನಗಳಿಲ್ಲ ಎಂದು ಹೇಳಿದರು.

ಭೂಮಿ, ಭದ್ರತೆ ಮತ್ತು ಸ್ವಾತಂತ್ರ್ಯ ಕುರಿತು ನಡೆದ ಪ್ಯಾನೆಲ್‌ನಲ್ಲಿ ಶ್ರೀ ಪಿಟಿಸಿಎಲ್ ಮಂಜುನಾಥ್ ಅವರು, ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ನೀಡಿದ ಭೂಮಿಯನ್ನು ರಕ್ಷಿಸಲು ಉದ್ದೇಶಿಸಿದ ಪಿಟಿಸಿಎಲ್ ಕಾಯ್ದೆಯ ಅನುಷ್ಠಾನವನ್ನು ಅಧಿಕಾರಿಗಳು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿದರು. ಸ್ವಯಂಪ್ರೇರಿತ ಕ್ರಮ ಕೈಗೊಳ್ಳದಿರುವುದು ಮತ್ತು ನಿಷೇಧಿತ ಭೂಮಿಯ ಮಾರಾಟಕ್ಕೆ ಅವಕಾಶ ನೀಡುತ್ತಿರುವುದು ಇದಕ್ಕೆ ಕಾರಣ ಎಂದು ಹೇಳಿದರು. ನ್ಯಾಯಾಲಯಗಳು ಕ್ರಮೇಣ ಈ ಕಾಯ್ದೆಯ ಬಲವನ್ನು ಕಡಿಮೆ ಮಾಡುತ್ತಿರುವುದನ್ನೂ ಅವರು ಉಲ್ಲೇಖಿಸಿದರು.

IMG 20260429 WA0027

ವಕೀಲ ಶಿವಮಣಿತನ್  ಮಾತನಾಡಿ  ತುಮಕೂರು ತಾಲ್ಲೂಕಿನ ಪೆದ್ದೆನಹಳ್ಳಿ ಗ್ರಾಮದಲ್ಲಿ ನಡೆದ ಜಾತಿ ಆಧಾರಿತ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿ, ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರು ಮತ್ತು ಸಾಕ್ಷಿಗಳು ಆರೋಪಿಗಳ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಹಾಗು ಸರ್ಕಾರ ಅವರಿಹೆ ರಕ್ಷಣೆ ನೀಡುತ್ತಿಲ್ಲ ಹಾಗಾಗಿ ಶಿಕ್ಷಾ ಪ್ರಮಾಣ ಕಡಿಮೆಯಾಗಲು ಇದು ಸಹ ಒಂದು ಕಾರಣ ಎಂದರು. ತನಿಖೆ ಮತ್ತು ಪಾರ್ಸಿಕ್ಯೂಶನ್ ಪ್ರಕ್ರಿಯೆಯ ವೈಫಲ್ಯವೂ ಇದಕ್ಕೆ ಕಾರಣ ಎಂದು ಹೇಳಿದರು.

ಡಾ. ಅಶ್ನಾ ಸಿಂಗ್ ಅವರು ನ್ಯಾಯಾಂಗದ ಮೇಲಿನ ಹೊಣೆಗಾರಿಕೆಯ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯಗಳು ಅಟ್ಟ್ರಾಸಿಟೀಸ್ ಕಾಯ್ದೆಯ 3(1)(r) ಕಲಂವನ್ನು ಅತಿಯಾಗಿ ತಾಂತ್ರಿಕವಾಗಿ ವ್ಯಾಖ್ಯಾನಿಸುವುದು ಪೀಡಿತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಶ್ರೀ ರಂಗಯ್ಯ ಅವರು ಎಸ್‌ಸಿ/ಎಸ್‌ಟಿ ಸಮುದಾಯಗಳಿಂದ ಕಳೆದುಹೋಗಿರುವ ಭೂಮಿಯನ್ನು ಮರಳಿ ಪಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ  ರಣದೀಪ್ ಮಾತನಾಡಿ  ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹೇಳಿ, ಈ ಸ್ವತಂತ್ರ ಅಧ್ಯಯನವನ್ನು ಸ್ವಾಗತಿಸಿದರು.

 ಕಾನೂನುಗಳ ಉತ್ತಮ ಅನುಷ್ಠಾನಕ್ಕಾಗಿ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಾಗಿದೆ ಎಂದರು.

ಸಮಾವೇಶವು ಎಸ್‌ಸಿ,ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ಪಾರದರ್ಶಕ ಮೌಲ್ಯಮಾಪನ ನಡೆಸಿ, ಶ್ವೇತಪತ್ರ ಪ್ರಕಟಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಸಂಕಲ್ಪದೊಂದಿಗೆ ಮುಕ್ತಾಯಗೊಂಡಿತು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮಧ್ಯರಾತ್ರಿ 3 ಗಂಟೆಯಾದರೂ ಪಟಾಕಿ ಸದ್ದು; ಫನ್ ವರ್ಲ್ಡ್ ವಿರುದ್ಧ ರಮ್ಯಾ ಕಿಡಿ

ಬೆಂಗಳೂರಿನಲ್ಲಿ ರಾತ್ರಿ ವೇಳೆ ಸಾರ್ವಜನಿಕರ ನಿದ್ದೆಗೆ ಭಂಗ ತರುವ ಮತ್ತು ಶಬ್ದಮಾಲಿನ್ಯ...

ಬೆಂಗಳೂರು | SIR ರದ್ದತಿಗೆ ಆಗ್ರಹ: ಚುನಾವಣಾ ಆಯೋಗ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾಕಾರರ ಬಂಧನ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...