ಬೀದರ್‌ | ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಸಿಗಲಿ: ವಿಜಯಲಕ್ಷ್ಮಿ ಬಾಳೆಕುಂದ್ರಿ

Date:

ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದರೂ, ಅವರಿಗೆ ದೊರೆಯಬೇಕಾದಷ್ಟು ಪ್ರಾತಿನಿಧ್ಯ ಮತ್ತು ಗೌರವ ಇನ್ನೂ ಸಿಕ್ಕಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಇನ್ನಷ್ಟು ಉನ್ನತ ಸ್ಥಾನಮಾನ ದೊರೆಯುವಂತಾಗಬೇಕು ಎಂದು ಹಿರಿಯ ಸಾಹಿತಿ, ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅಭಿಪ್ರಾಯಪಟ್ಟರು.

- Advertisement -

ಭಾಲ್ಕಿಯ ಕಾರಂಜಾ ರೈತ ಭವನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಬೀದರ್ ಜಿಲ್ಲಾ ಘಟಕ ಹಾಗೂ ಭಾಲ್ಕಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮೂರನೇ ಮಹಿಳಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, “ಎಲ್ಲ ಭಾಷೆಗಳಲ್ಲಿಯೂ ಕನ್ನಡ ಸುಲಲಿತ ಹಾಗೂ ಸುಂದರ ಭಾಷೆಯಾಗಿದೆ. ಸ್ವತಂತ್ರ ಲಿಪಿಯನ್ನು ಹೊಂದಿರುವ ಕನ್ನಡಕ್ಕೆ ಸುಂದರ ಲಿಪಿಯ ಕಾರಣದಿಂದಲೇ ‘ಲಿಪಿಗಳ ರಾಣಿ’ ಎಂಬ ಗೌರವ ದೊರೆತಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ;...

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ" ಎಂದು ಚಂ.ಸು ಪಾಟೀಲ್ ಸಾವಯವ ಕೃಷಿಯ ಅನುಕೂಲಗಳನ್ನು ವಿಶ್ಲೇಷಿಸುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ತೀವ್ರ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

“ಮಹಿಳೆಯರು ಮುಟ್ಟದ ಸಾಹಿತ್ಯ ಕ್ಷೇತ್ರವೇ ಇಲ್ಲ. ಆದರೆ ಇದುವರೆಗೆ ಒಬ್ಬ ಮಹಿಳೆಗೂ ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ. ನೂರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೂ ಇದುವರೆಗೆ ಒಬ್ಬ ಮಹಿಳೆ ಅಧ್ಯಕ್ಷರಾಗಿಲ್ಲ. ಈ ಕುರಿತು ಸಮಾಜ ಹಾಗೂ ಸಾಹಿತ್ಯ ವಲಯ ಗಂಭೀರವಾಗಿ ಚಿಂತಿಸಬೇಕಾಗಿದೆ. 12ನೇ ಶತಮಾನದಿಂದಲೂ ಬಸವಣ್ಣ ಹಾಗೂ ಅಲ್ಲಮಪ್ರಭುಗಳ ನಂತರ ಅತಿ ಹೆಚ್ಚು ವಚನಗಳನ್ನು ರಚಿಸಿದವರಲ್ಲಿ ಅಕ್ಕನಾಗಮ್ಮ ಪ್ರಮುಖರು. ಅಕ್ಕಮಹಾದೇವಿ ಆತ್ಮೋದ್ಧಾರಕ್ಕೆ ಒತ್ತು ನೀಡಿದರೆ, ಅಕ್ಕನಾಗಮ್ಮ ಲೋಕೋದ್ಧಾರದ ಕೆಲಸ ಮಾಡಿದರು. ಇಂದಿನ ಹೆಣ್ಣುಮಕ್ಕಳು ಅಕ್ಕನಾಗಮ್ಮ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

“ಕನ್ನಡದ ಪ್ರಥಮ ಮಹಿಳಾ ಪತ್ರಕರ್ತೆ ಚಿ.ನಾ.ಮಂಗಳಾ ಅವರು ಮಹಿಳೆಯರನ್ನು ‘ಶಕ್ತಿ ಶರಧಿ’ ಎಂದು ಕರೆದಿದ್ದಾರೆ. ಮಹಿಳೆಯರು ಸಮುದ್ರದಂತೆ ಅಪಾರ ಶಕ್ತಿಯನ್ನು ಹೊಂದಿದ್ದು, ತಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಬೇಕು. ಮಹಿಳೆಯರು ತೀಕ್ಷ್ಣವಾಗಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು” ಎಂದು ಹೇಳಿದರು.

WhatsApp Image 2026 08 11 at 8.40.03 PM

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, “ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆಗೈಯುತ್ತಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಒತ್ತಡದ ಮಧ್ಯೆ ಬದುಕು ಸಾಗಿಸುವ ಮಹಿಳೆಯರಿಗೆ ಗೌರವ ನೀಡುವ ಕಾರ್ಯವಾಗಬೇಕು. ಜನಪರ ಸಾಹಿತ್ಯ ಹೆಚ್ಚೆಚ್ಚು ಹೊರಬರಬೇಕಿದೆ” ಎಂದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, “12ನೇ ಶತಮಾನದಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಮಹಿಳೆ, ಪುರುಷರಿಗೆ ಸಮಾನ ಅವಕಾಶವಿತ್ತು. ಆದರೆ, ಇಂದು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡದೆ ಭೇದಭಾವ ಮಾಡಲಾಗುತ್ತಿದೆ. ಮಹಿಳೆಯರ ಸಾಧನೆ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದರೂ ಅವರಿಗೆ ಸಿಗಬೇಕಾದ ಸ್ಥಾನಮಾನ ದೊರೆಯುತ್ತಿಲ್ಲ. ಶತಮಾನದ ಹೊಸ್ತಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇಲ್ಲಿಯವರೆಗೆ ಒಬ್ಬ ಮಹಿಳೆಯರು ಅಧ್ಯಕ್ಷ ಸ್ಥಾನ ಹುದ್ದೆಗೇರಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯರು ರಾಜ್ಯಾಧ್ಯಕ್ಷರಾಗುವಂತಾಗಬೇಕು” ಎಂದು ಆಶಿಸಿದರು

ಸಮ್ಮೇಳನ ಸರ್ವಾಧಕ್ಷೆ ಮಲ್ಲಮ್ಮ ಆರ್.ಪಾಟೀಲ ಮಾತನಾಡಿ, “ಭಾಷೆ ನಮ್ಮ ಬದುಕಿನ ಉಸಿರು, ಅದು ನಮ್ಮ ವರ್ತಮಾನವೂ ಹೌದು, ಭವಿಷ್ಯವೂ ಹೌದು. ಭಾಷೆಯೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ನಮ್ಮ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದ್ದೇವರ ಪಾತ್ರ ಅಗಾಧವಾಗಿದೆ” ಎಂದು ತಿಳಿಸಿದರು.

“ಭಾಷೆ ತನ್ನಷ್ಟಕ್ಕೆ ತಾನೇ ಬೆಳೆಯುವುದಿಲ್ಲ. ಭಾಷಾ ವಿನಿಮಯ ಅದರ ಬೆಳವಣಿಗೆಗೆ ಪ್ರಮುಖ ಸಾಧನ. ಕನ್ನಡ ಸಾಹಿತ್ಯ ಪರಿಷತ್ತು ಅಂತರರಾಜ್ಯ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮುಖಾಂತರ ಭಾಷಾ ಸೌಹಾರ್ದತೆ ಬೆಳವಣಿಗೆಗೆ ನೆರವಾಗಬೇಕು. ಪುಸ್ತಕಗಳು ಜ್ಞಾನ ಭಂಡಾರ ಇದ್ಹಂತೆ, ಪ್ರತಿಯೊಬ್ಬರೂ ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸ ಮೈಗೂಡಿಸಿಕೊಳ್ಳುವುದರ ಜೊತೆಗೆ ಲೇಖಕರಿಗೆ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ ಅವರು ‘ಧನ್ಯಜೀವನ’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಹುಲಸೂರಿನ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಸ್ವಾಗತ ಸಮಿತಿ ಅಧ್ಯಕ್ಷೆ ಗೀತಾ ಈಶ್ವರ ಖಂಡ್ರೆ ಸೇರಿದಂತೆ ಚಂದ್ರಕಾಂತ ಗಂಗಶೆಟ್ಟಿ, ಗುರುನಾಥ ಕೊಳ್ಳೂರ್‌, ಸೋಮಶೇಖರ ಬಿರಾದಾರ ಚಿದ್ರಿ, ಶಕುಂತಲಾ ಬೆಲ್ದಾಳೆ, ಗೌರಮ್ಮ ಸಿದ್ದಾರೆಡ್ಡಿ, ವಿಜಯಕುಮಾರ ಪಾಟೀಲ, ಓಂಪ್ರಕಾಶ ಧಡ್ಡೆ, ಶಿವಕುಮಾರ ಕೋಸಂ, ಪ್ರಭು ಎಸ್., ಶಿವಶಂಕರ ಬಾಮಂಡಿ, ಬಸವರಾಜ ಧನ್ನೂರ, ವಿದ್ಯಾವತಿ ಬಲ್ಲೂರ, ಸುನಿತಾ ದಾಡಗೆ, ಮಂಗಲಾ ಪಾಟೀಲ, ರಮೇಶ ಚಿದ್ರಿ, ಕಾಶಿನಾಥ ಲದ್ದೆ, ಅಶೋಕ ಬಾವುಗೆ, ಮಲ್ಲಿಕಾರ್ಜುನ ಕುಂಚಗೆ, ಸಂತೋಷ ಪಾಟೀಲ, ಮಲ್ಲಿಕಾರ್ಜುನ ಹಲಮಂಡಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Image 2026 08 11 at 8.40.03 PM 1

ಮಧುಪ್ರಿಯಾ ಅರಳಿ ತಂಡದವರು ಜಾನಪದ ಗೀತೆ ಹಾಗೂ ನಾಡಗೀತೆ ಪ್ರಸ್ತುತಪಡಿಸಿದರು. ಸದ್ಗುರು ವಿದ್ಯಾಲಯದ ವಿದ್ಯಾರ್ಥಿಗಳು ವಚನ ನೃತ್ಯ ಪ್ರದರ್ಶಿಸಿದರು. ದೀಪಕ ಥಮಕೆ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.

ವೈಭವದ ಮೆರವಣಿಗೆ :

ಭುವನೇಶ್ವರಿ ಮಾತೆಯ ಭಾವಚಿತ್ರ ಹಾಗು ಸಮ್ಮೇಳನದ ಸರ್ವಾಧ್ಯಕ್ಷೆ ಮಲ್ಲಮ್ಮಾ.ಆರ್.ಪಾಟೀಲರ ವೈಭವದ ಮೆರವಣಿಗೆ ನಡೆಯಿತು. ಸಿವಿಲ್ ನ್ಯಾಯಾಧೀಶೆ ಸುನೀತಾ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮೆರವಣಿಗೆಯ ಸಾನಿಧ್ಯ ವಹಿಸಿದ್ದರು. ಕಸಾಪ ಮಹಿಳಾ ನಗರ ಘಟಕದ ಅಧ್ಯಕ್ಷೆ ಸುನಿತಾ ಮಮ್ಮಾ ಅಧ್ಯಕ್ಷೆತೆ ವಹಿಸಿದ್ದರು.

ಇದನ್ನೂ ಓದಿ : ಬೀದರ್‌ | ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧ : ಸಚಿವ ಈಶ್ವರ ಖಂಡ್ರೆ

ಮೆರವಣಿಗೆಯು ಚನ್ನಬಸವಾಶ್ರಮದಿಂದ ಪ್ರಾರಂಭವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಕಾರಂಜಾ ರೈತ ಭವನದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಲಂಬಾಣಿ ನೃತ್ಯ, ಜಾನಪದ ನೃತ್ಯ, ಕೋಲಾಟ ತಂಡ ನಡೆದ ಕಲಾ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಶಾಲಾಕಾಲೇಜಿನ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಮಡಿವಾಳ ಮಾಚಿದೇವರ ಕಾಯಕ ನಿಷ್ಠೆ ಸಮಾಜಕ್ಕೆ ಆದರ್ಶ: ಮಹಾಲಿಂಗ ಸ್ವಾಮೀಜಿ

ಕಾಯಕ ಹಾಗೂ ವಿಶಿಷ್ಟ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ...

ಬೀದರ್‌ನಲ್ಲಿ ಸೆ.28ರಂದು ಉದ್ಯೋಗ ಮೇಳ

ಬೀದರ್ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್ 28ರಂದು ಬೆಳಿಗ್ಗೆ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...