ಧಾರವಾಡ | ಎಸ್ಐಆರ್: ಕರಡು ಪಟ್ಟಿಯಲ್ಲಿ 2.75 ಲಕ್ಷ ಮಂದಿ ಕಣ್ಮರೆ: ಮತಪಟ್ಟಿಯಲ್ಲಿ ನಿಮ್ಮ‌ ಹೆಸರಿದೆಯೇ?

Date:

ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಬಿಟ್ಟುಹೋಗದಂತೆ ಚುನಾವಣಾ ಆಯೋಗ ಕ್ರಮವಹಿಸಬೇಕು. ಮತದಾರರ ಪಟ್ಟಿಯನ್ನು ‘ಶುದ್ಧೀಕರಿಸುವ’ ಪ್ರಕ್ರಿಯೆಯಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸುವುದು ಎಸ್‌ಐಆರ್‌ನ ಪ್ರಮುಖ ಆದ್ಯತೆಯಾಗಬೇಕೇ ಹೊರತು, ಅರ್ಹ ಮತದಾರರನ್ನೇ ಪಟ್ಟಿಯಿಂದ ಹೊರಗಿಡುವಂತಾಗಬಾರದು. ಏಕೆಂದರೆ ಮತದಾರರ ಪಟ್ಟಿಯಲ್ಲಿನ ಒಂದು ಹೆಸರು ಕೇವಲ ದಾಖಲೆಯಲ್ಲ; ಅದು ಪ್ರಜಾಪ್ರಭುತ್ವದಲ್ಲಿ ನಾಗರಿಕನ ರಾಜಕೀಯ ಹಕ್ಕಿನ ಗುರುತು.

ಧಾರವಾಡ ಜಿಲ್ಲೆಯಲ್ಲಿ ಏಳು ವಿಧಾನ ಸಭಾ ಕ್ಷೇತ್ರಗಳಿದ್ದು, ಒಟ್ಟು 16,21,961 ಮಂದಿ ಮತದಾರರಿದ್ದಾರೆ. ಎಲ್ಲ ಮತದಾರರಿಗೂ ಎಸ್ಐಆರ್ ಎನ್ಯೂಮರೇಷನ್ ಫಾರ್ಮ್ ವಿತರಿಸಲಾಗಿದೆ. ಮತದಾರರ ಪಟ್ಟಿಯಿಂದ ಹೊರಗುಳಿಯಲು ಮುಖ್ಯ ಕಾರಣ ಎಎಸ್‌ಡಿಡಿಓ ವರ್ಗೀಕರಣ ಪ್ರಮುಖವಾಗಿದೆ. ಈ ವರ್ಗದಲ್ಲಿ ಒಟ್ಟು 2,75,768 ಮಂದಿಯ ಹೆಸರುಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳು ಕರಡು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ.

- Advertisement -

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್ಒ ಗಳು ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಗಸ್ಟ್ ಏಳರ ವರೆಗೆ 2,75,768 ಮತದಾರರಲ್ಲಿ 1,29,404 ಮಂದಿ ಮತದಾರರು ಅತಿ ಹೆಚ್ಚು ಶಾಶ್ವತ ವಲಸೆ ಹೊಂದಿದವರು. ಇನ್ನೂ 52,438 ಮಂದಿ ಮತದಾರರು ಮರಣ ಹೊಂದಿದವರನ್ನು ಗುರುತಿಸಲಾಗಿದೆ. 65,816 ಮತದಾರರು ಯಾವುದೇ ಗುರುತು ಸಿಗದೆ ಗೈರು ಆಗಿರುವವರನ್ನು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ನಕಲಿ ಹಾಗೂ ಎರಡು ಕಡೆ ಮತ ಹಕ್ಕು ಹೊಂದಿರುವ 26,422 ಮಂದಿ ಮತದಾರರು ಹಾಗೂ ಇತರೆ ಕಾರಣಗಳಿಂದ 1,688 ಜನರನ್ನು ಮತದಾರರ ಕರಡು ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ. ಮರಣ ಹೊಂದಿದ ಮತದಾರರನ್ನು ಶಾಶ್ವತವಾಗಿ ಕರಡು ಪಟ್ಟಿಯಿಂದ ಹೊರಗಿಡುವುದು ಖಚಿತ.

“ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, 16,21,961 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಅಗಸ್ಟ್ 07ರವರೆಗೆ ಒಟ್ಟು 13,46,193 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. ಶೇ.83ರಷ್ಟು ಗಣಕೀಕರಣಗೊಳಿಸಲಾಗಿದೆ” ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್ ತಿಳಿಸಿದ್ದಾರೆ..

ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 1,93,440 ನಮೂನೆಗಳು ಗಣಕೀಕೃತಗೊಂಡಿವೆ. ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 1,77,546 ನಮೂನೆಗಳು ಗಣಕೀಕೃತಗೊಂಡಿವೆ. ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 1,92,466 ನಮೂನೆಗಳು ಗಣಕೀಕೃತಗೊಂಡಿವೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ 1,79,860 ನಮೂನೆಗಳು ಗಣಕೀಕೃತಗೊಂಡಿವೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 2,01,888 ನಮೂನೆಗಳು ಗಣಕೀಕೃತಗೊಂಡಿವೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 2,14,323 ನಮೂನೆಗಳು ಗಣಕೀಕೃತಗೊಂಡಿವೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲಿ 1,86,670 ನಮೂನೆಗಳು ಗಣಕೀಕೃತಗೊಂಡಿವೆ.

“ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್‍ಒ) ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿದ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು, ಮತದಾರರು ತಮ್ಮ ಅವಶ್ಯಕ ಮಾಹಿತಿಗಳನ್ನು ಭರಣಾ ಮಾಡಿದ ಏಣಿಕೆ, ಗಣತಿ ನಮೂನೆಗಳನ್ನು(Enumeration Forms) BLO ರವರಿಗೆ ನೀಡಿ ಸಹಕರಿಸಬೇಕು” ಎಂದು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ನಾಗರಿಕ ಮತ್ತು ಕಾವಲು ಸಮಿತಿಯ ಸದಸ್ಯರು ಇಸಬೆಲಾ ಝೇವಿಯರ್ ಮಾತನಾಡಿ, “ಧಾರವಾಡದಲ್ಲಿ ಅತಿಹೆಚ್ಚು ಮತಗಳು ASDDO ಲಿಸ್ಟ್‌ನಲ್ಲಿ ಸೇರಿಕೊಂಡಿವೆ‌. ಇದು ಆಘಾತಕಾರಿ ವಿಷಯ. ಸತ್ತವರನ್ನು ಶಿಫ್ಟ್‌ ಅಂತ ನೊಂದಾಯಿಸಿದ್ದಾರೆ. ಬದುಕಿದ್ದವರ ಹೆಸರನ್ನೂ ಶಿಫ್ಟ್‌ ಅಂತ ಹಾಕಿದ್ದಾರೆ. ಅದು ಉತ್ತಮ ನಡೆಯಲ್ಲ. ಇದು ದುರುದ್ದೇಶದಿಂದ ಕೂಡಿದ್ದು, ಆಘಾತಕಾರಿ ವಿಚಾರವಾಗಿದೆ. ಜನರು ತಮ್ಮ ದಾಖಲೆಗಳನ್ನು ಕೈಯಲ್ಲಿ ‌ಹಿಡಿದುಕೊಂಡು, ಒಡಾಡಲು ಸಮಯ ಕಡಿಮೆ ಇದೆ. ಚುನಾವಣಾ ಆಯೋಗದ ಎಸ್.ಐ.ಆರ್ ಎನ್ನುವ ಈ‌ ಪ್ರಕ್ರಿಯೇ ಖಂಡನೀಯ” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಉದ್ಯೋಗ ಖಾತರಿಗೆ ಕೇಂದ್ರ ಕತ್ತರಿ; ಶ್ರಮಿಕರ ಬದುಕಿಗೆ ಉರುಳಾಯಿತೇ ವಿಬಿ ಜಿ ರಾಮ್‌ ಜಿ?

ಹೀಗಾಗಿ, ಧಾರವಾಡ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯಾಗಿ ಉಳಿದಿಲ್ಲ; ಲಕ್ಷಾಂತರ ಮತದಾರರ ಹಕ್ಕಿನ ಪ್ರಶ್ನೆಯಾಗಿಯೂ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಒಟ್ಟು 16.21 ಲಕ್ಷ ಮತದಾರರ ಪೈಕಿ 2.75 ಲಕ್ಷಕ್ಕೂ ಹೆಚ್ಚು ಮಂದಿ ಎಎಸ್‌ಡಿಡಿಓ ವರ್ಗೀಕರಣಕ್ಕೆ ಒಳಪಟ್ಟಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಈ ವರ್ಗೀಕರಣವೇ ಕರಡು ಮತದಾರರ ಪಟ್ಟಿಯಿಂದ ಹೆಸರು ಕಣ್ಮರೆಯಾಗಲು ಕಾರಣವಾದರೆ, ಜಿಲ್ಲೆಯ ಗಣನೀಯ ಸಂಖ್ಯೆಯ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಂದು ಎಎಸ್‌ಡಿಡಿಓ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಪ್ರಕರಣವನ್ನೂ ಪಾರದರ್ಶಕವಾಗಿ ಮತ್ತು ನಿಖರವಾಗಿ ಪರಿಶೀಲಿಸಬೇಕು. ಸಮರ್ಪಕ ದಾಖಲೆ ಮತ್ತು ಸ್ಥಳ ಪರಿಶೀಲನೆ ಮಾಡಬೇಕು. ಸಂಪೂರ್ಣ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಬೇಕು.. ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ಬಿಟ್ಟುಹೋಗದಂತೆ ಚುನಾವಣಾ ಆಯೋಗ ಕ್ರಮವಹಿಸಬೇಕು. ಮತದಾರರ ಪಟ್ಟಿಯನ್ನು ‘ಶುದ್ಧೀಕರಿಸುವ’ ಪ್ರಕ್ರಿಯೆಯಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸುವುದು ಎಸ್‌ಐಆರ್‌ನ ಪ್ರಮುಖ ಆದ್ಯತೆಯಾಗಬೇಕೇ ಹೊರತು, ಅರ್ಹ ಮತದಾರರನ್ನೇ ಪಟ್ಟಿಯಿಂದ ಹೊರಗಿಡುವಂತಾಗಬಾರದು. ಏಕೆಂದರೆ ಮತದಾರರ ಪಟ್ಟಿಯಲ್ಲಿನ ಒಂದು ಹೆಸರು ಕೇವಲ ದಾಖಲೆಯಲ್ಲ; ಅದು ಪ್ರಜಾಪ್ರಭುತ್ವದಲ್ಲಿ ನಾಗರಿಕನ ರಾಜಕೀಯ ಹಕ್ಕಿನ ಗುರುತು.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುತ್ರ ಚುನಾವಣಾ ಆಯೋಗದ ವಕೀಲರಾಗಿದ್ದರೂ ಕಾಯ್ದೆ ವಿಚಾರಣೆ: ಸುಪ್ರೀಂ ಜಡ್ಜ್ ನಡೆಗೆ ನೈತಿಕತೆಯ ಪ್ರಶ್ನೆ

ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ–2023ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ...

ಬಸವಕಲ್ಯಾಣ | ಮಡಿವಾಳ ಮಾಚಿದೇವರ ಕುಂಡ ಅಭಿವೃದ್ಧಿಗೆ ಮನವಿ

ಬಸವಕಲ್ಯಾಣ ನಗರದ ಶರಣ ಮಡಿವಾಳ ಮಾಚಿದೇವರ ಕುಂಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಅಗತ್ಯ...

ಅರ್ನಾಬ್ ಗೋಸ್ವಾಮಿ ವಿರುದ್ಧ ₹45 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಕಾಂಗ್ರೆಸ್ ಸಂಸದ

ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಹಾಗೂ ಜವಾಹರಲಾಲ್ ನೆಹರು...

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...