ಬೀದರ್‌ | ಗ್ಯಾಸ್‌ ಸಿಲಿಂಡರ್‌ ಇ-ಕೆವೈಸಿಗೆ ಕೊನೆ ದಿನಾಂಕ ಇಲ್ಲ; ಇದು ಸುಳ್ಳು ಸುದ್ದಿ : ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

Date:

ಅಡುಗೆ ಅನಿಲ ಸಂಪರ್ಕ (ಎಲ್‌ಪಿಜಿ ಕನೆಕ್ಷನ್) ಹೊಂದಿದವರು ಡಿಸೆಂಬರ್‌ 31 ರೊಳಗೆ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಮತ್ತು ಸಿಲಿಂಡರ್ ಸರಬರಾಜು ಮಾಡಲಾಗುತ್ತದೆ, ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕು ಮತ್ತು ಇ-ಕೆವೈಸಿ ಮಾಡಿಸಿದರೆ 500 ರೂ.ಗೆ ಸಿಲಿಂಡರ್ ನೀಡುತ್ತಾರೆ ಎಂಬುದು ಕೇವಲ ವದಂತಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಷಯ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಇದು ಕೇವಲ ವದಂತಿಯಾಗಿದ್ದು, ಅಡುಗೆ ಅನಿಲ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದೂ ಸಹ ಉಚಿತ ಕಾರ್ಯವಾಗಿರುತ್ತದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರವು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಎಂದು ಹೇಳಿದ್ದಾರೆ.

“ಮೊದಲ ಆದ್ಯತೆಯಾಗಿ ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ ಪಡೆದವರು ಇ-ಕೆವೈಸಿ ನೀಡಬೇಕಾಗಿದೆ. ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿದವರು ಆಧಾರ ಸಂಖ್ಯೆ ದಾಖಲೆಯೊಂದಿಗೆ ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ನೀಡಬಹುದಾಗಿದೆ, ಎಚ್‌ಪಿಸಿ, ಐಓಸಿ ಮತ್ತು ಬಿಪಿಸಿ ಕಂಪನಿಯ ಪೋರ್ಟಲ್‌ಗಳಲ್ಲಿ ಮತ್ತು ಆ್ಯಪ್ ಗಳಲ್ಲಿಯೂ ಸಹ ಇ-ಕೆವೈಸಿಯನ್ನು ಗ್ರಾಹಕರು ಸ್ವತಃ ಮಾಡಿಸಿಕೊಳ್ಳಬಹುದಾಗಿದೆ. ಸದರಿ ಇ-ಕೆವೈಸಿ ಕಾರ್ಯಕ್ಕೆ ಯಾವುದೇ ನಿರ್ದಿಷ್ಟ ಗಡುವು ಇರುವುದಿಲ್ಲ” ಎಂದರು.

ಸಾರ್ವಜನಿಕರು ಸದರಿ ಇ-ಕೆವೈಸಿ ಕಾರ್ಯಕ್ಕೆ ಯಾವುದೇ ಸರದಿ ಸಾಲುಗಳಲ್ಲಿ ನಿಂತುಕೊಂಡು ಆತಂಕಗೊಳಗಾಗದೇ ತಮ್ಮ ಅನುಕೂಲಕರ ಸಮಯದಲ್ಲಿ ಹೋಗಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ತುರ್ತು ಚಿಕಿತ್ಸಾ ಘಟಕ ಆರಂಭಿಸಿದ ʻಯೆನೆಪೋಯ ಕೇರ್‌ʼ

ಯೆನೆಪೋಯ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಆರೋಗ್ಯ ಸೇವಾ ಉಪಕ್ರಮವಾದ ‘ಯೆನೆಪೊಯ...

ನ.15ರಂದು ತಿತಿಮತಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಜಯಂತಿ: ಜನ್‌ಜಾತಿಯ ಗೌರವ ದಿವಸ್ ಆಚರಣೆ

ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಅಂಗವಾಗಿ ನವೆಂಬರ್ 15ರಂದು...

ಬಾಗಲಕೋಟೆ | ಟನ್‌ ಕಬ್ಬಿಗೆ 3800 ರೂ. ಬೆಂಬಲ ಬೆಲೆ ಘೋಷಣೆ; ಸಂಘಟಿತ ಹೋರಾಟಕ್ಕೆ ಸಂದ ಜಯ

ಬಾಗಲಕೋಟೆ ಜಿಲ್ಲೆಯ ರನ್ನನ ನಾಡು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದಿ....