ಪಟ್ಟಣದ ತಾ.ಪಂ.ಪಕ್ಕೆ ಆಯೋಜಿಸಲಾಗಿದ್ದ ಡಿ.ವೈ.ಎಫ್.ಐ (ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್) ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಭಾಷಣಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗಮಣಿ ನಿರ್ಬಂಧ ಹೇರಿದ್ದಾರೆ.
ಕಾರ್ಯಕ್ರಮದ ಆಯೋಜಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡ ಅಧಿಕಾರಿಗಳು, ಪ್ರಕಾಶ್ ರಾಜ್ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದಾಗಿ, ಸಮಾವೇಶಕ್ಕೆ ಆಗಮಿಸಿದ್ದ ನಟ ಪ್ರಕಾಶ್ ರಾಜ್ ಅವರು ಕೇವಲ ಮೆರವಣಿಗೆಗೆ ಚಾಲನೆ ನೀಡಿ, ಯಾವುದೇ ಭಾಷಣ ಮಾಡದೆ ವಾಪಸ್ ತೆರಳಿದ್ದಾರೆ.
ಇದನ್ನು ಓದಿದ್ದೀರಾ..? ಕೋಲಾರ | ಸಾಲ ಮರುಪಾವತಿಸಿ, ಸಹಕಾರಿ ವ್ಯವಸ್ಥೆ ಉಳಿಸಿ: ಕೊತ್ತೂರು ಮಂಜುನಾಥ್
ಸ್ಥಳೀಯ ಅಧಿಕಾರಿಗಳ ಈ ದಿಢೀರ್ ನಡೆಗೆ ಡಿ.ವೈ.ಎಫ್.ಐ. ಸಮಾವೇಶದಲ್ಲಿ ತೀವ್ರ ಆಕ್ರೋಶ ಹಾಗೂ ಆಕ್ಷೇಪ ವ್ಯಕ್ತವಾಗಿದೆ. ಸಾಂಸ್ಕೃತಿಕ ಹಾಗೂ ಯುವಜನ ಕಾರ್ಯಕ್ರಮದಲ್ಲಿ ನಟನ ಭಾಷಣಕ್ಕೆ ತಡೆ ಒಡ್ಡಿರುವುದನ್ನು ಆಯೋಜಕರು ಮತ್ತು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಮುಚ್ಚಳಿಕೆ ಪತ್ರ ಪಡೆದು ಭಾಷಣಕ್ಕೆ ತಡೆ ನೀಡಿದ್ದರೂ, ಸಭೆಯಲ್ಲಿ ವಾತಾವರಣ ಬಿಸಿಯೇರಲು ಇದು ಕಾರಣವಾಯಿತು.




