ಕೆಪಿಟಿಸಿಎಲ್ ಸಂಸ್ಥೆಯಲ್ಲಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರೇ ಉಚ್ಚ ನ್ಯಾಯಾಲಯ ಹಾಗೂ ಘನ ಸರ್ಕಾರದ ಅದೇಶವನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕರ್ನಾಟಕ ವಿಧ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘದ ಸಾಮಾನ್ಯ ಸಭೆ ನಡೆಸಿರುವ ಸಂಘದ ಅಧ್ಯಕ್ಷರ ಹಾಗೂ ಅಡಳಿತ ಮಂಡಳಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ಎನ್.ಸುಕುಮಾರ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಕೆಇಬಿ ಕಾಲೋನಿಯಲ್ಲಿರುವ ಕೆಪಿಟಿಸಿಎಲ್ ನೌಕರರ ಸಂಘದ ಸಮುದಾಯ ಭವನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ಲಿಖಿತ ನೋಟಿಸ್ ನೀಡದೆ ಸೆ.25 ರಂದು 2025-26 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆsಯನ್ನು ತರಾತುರಿಯಲ್ಲಿ ಅಯೋಜಿಸಿರುವುದು ಸಹಕಾರ ಸಂಘದ ಕಾಯ್ದೆಗೆ ವಿರುದ್ದವಾಗಿದ್ದು, ಸಹಕಾರ ಸಂಘದ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸಾಮಾನ್ಯ ಸಭೆ ನಡೆಸಿರುವ ಸಂಘದ ಅಧ್ಯಕ್ಷರ ಹಾಗೂ ಅಡಳಿತ ಮಂಡಳಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಸಂಘದ ಜಿಲ್ಲಾ ನಿರ್ದೇಶಕ ಬಾಗೇಪಲ್ಲಿಯ ಎನ್.ಸುಕುಮಾರ್ ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸಿರುತ್ತಾರೆ.
ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ಎನ್.ಸುಕುಮಾರ್ ಮಾತನಾಡಿ, ಕರ್ನಾಟಕ ಸಹಕಾರ ಸಂಘಗಳ ವ್ಯಾಪ್ತಿಗೆ ಬರುವ ಯಾವುದೇ ಪತ್ತಿನ ಸಹಕಾರ ಸಂಘ ಸಾಮಾನ್ಯ ಸಭೆ ನಡೆಸಬೇಕಾದರೆ ಕರ್ನಾಟಕ ಸಹಕಾರ ಸಂಘದ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಬೇಕು, ಸಂಘದ ನಿರ್ದೇಶಕರಿಗೆ, ಸದಸ್ಯರಿಗೆ ಸಾಮಾನ್ಯ ಸಭೆ ನಡೆಸುವ ಬಗ್ಗೆ ಮುಂಚಿತವಾಗಿ ನೋಟಿಸ್ ಕಳುಹಿಸಿ, ನೋಟಿಸ್‌ನಲ್ಲಿ ಸಭೆಯ ನಡಾವಳಿ ಬಗ್ಗೆ ಮತ್ತು ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕವನ್ನು ತಿಳಿಸುವುದು ಕಡ್ಡಾಯವಾಗಿದ್ದು, ಆಕ್ಷೇಪಣೆ ಸಲ್ಲಿಸಲು ಸದಸ್ಯರಿಗೆ ಕಾಲಾವಕಾಶ ನೀಡಬೇಕಾಗಿದೆ.
ಸಹಕಾರ ಸಂಘದ ಕಾಯ್ದೆ ಪ್ರಕಾರ ಪ್ರತಿಯೊಂದು ಸಹಕಾರ ಸಂಘ ಸೆಪ್ಟಂಬರ್ 25 ರೊಳಗೆ ವರ್ಷಕ್ಕೊಮ್ಮೆ ಸರ್ವ ಸದಸ್ಯರ ಸಭೆ ನಡೆಸಿ ಸಭೆಯಲ್ಲಿ ರ್ಚಿಸಿರುವ ವಿಷಯಗಳ ಬಗ್ಗೆ ನಡಾವಳಿ ಪುಸ್ತಕದಲ್ಲಿ ಬರೆದು ಓದಿ ಸಭೆಯ ಒಪ್ಪಿಗೆ ಪಡೆದುಕೊಳ್ಳಬೇಕಾಗಿದೆ. ಆದರೇ ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯಧರ್ಶಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸಂಘದ ಸದಸ್ಯರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡದೆ ಕೇವಲ ಮೂರು ದಿನಗಳ ಹಿಂದೆಯಷ್ಟೇ ಸಾಮಾನ್ಯ ಸಭೆಯ ದಿನಾಂಕವನ್ನು ನಿಗಧಿಪಡಿಸಿ ದೂರವಾಣಿ ಸಂದೇಶದ ಮೂಲಕ ಮಾಹಿತಿ ಓದಗಿಸಿ ಬೆರಳಿಣಿಕೆಯಷ್ಟು ಸದಸ್ಯರನ್ನು ಸಭೆಗೆ ಆಹ್ವಾನಿಸಿ ಸಭೆಯಲ್ಲಿ ಚಿರ್ಚಿಸಿರುವ ವಿಷಯಗಳ ಕುರಿತು ತೆಗೆದುಕೊಂಡಿರುವ ತೀರ್ಮಾನಗಳ ಬಗ್ಗೆ ಹಾಗೂ ಚರ್ಚಿಸಬೇಕಾಗಿರುವ ವಿಷಯಗಳ ಬಗ್ಗೆ ನಡಾವಳಿ ಪುಸ್ತಕದಲ್ಲಿ ಉಲ್ಲೇಖ ಮಾಡದೆ ಪುಸ್ತಕದ ಖಾಲಿ ಪುಟಗಳಲ್ಲಿ ಸಹಿ ಮಾಡಿಸಿಕೊಂಡು ಇಷ್ಟಾನುಸಾರ ವರ್ತನೆ ಮಾಡಿ ಸಾಮಾನ್ಯ ಸಭೆಯನ್ನು ತರಾತುರಿಯಲ್ಲಿ ಮೊಟುಕುಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ..?ಚಿಂತಾಮಣಿ | ಪಿಎಲ್‌ಡಿ ಮತ್ತು ಡಿಸಿಸಿ ಬ್ಯಾಂಕ್‌ಗಳ ಪುನಶ್ಚೇತನದಿಂದ ರೈತರಿಗೆ ಹೆಚ್ಚಿನ ಅನುಕೂಲ
ನಿಯಮ ಉಲ್ಲಂಘಿಸಿ ನಡೆಸಿರುವ ಸರ್ವ ಸದಸ್ಯರ ಸಾಮಾನ್ಯ ಸಭೆಯಿಂದ ಸಂಘದ ಬಹುತೇಖ ಸದಸ್ಯರಿಗೆ ಅನ್ಯಾಯ ಆಗುವುದರ ಜತೆಗೆ ಸಂಘದಲ್ಲಿ ಈಗಾಗಲೇ ನಡೆದಿರುವ ಹಲವು ಭ್ರಷ್ಟಾಚಾರಗಳ ಬಗ್ಗೆ ಪ್ರಶ್ನಿಸಿ ಸದಸ್ಯರಿಗೆ ನ್ಯಾಯ ಓದಗಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ನಿಯಮ ಉಲ್ಲಂಘಿಸಿ ಸರ್ವಸದಸ್ಯರ ಸಾಮಾನ್ಯ ಸಭೆ ನಡೆಸಿರುವ ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದೇವೆ ಎಂದರು..




