ಚಿಂತಾಮಣಿಯಲ್ಲಿ ಮಕ್ಕಳ ಕಳ್ಳರ ಭೀತಿ:ಪೋಷಕರೇ ಎಚ್ಚರ.. ಎಚ್ಚರ!

Date:

​ಚಿಂತಾಮಣಿ ನಗರದ ಜನರೇ ಸ್ವಲ್ಪ ಇತ್ತ ಗಮನಿಸಿ. ನಗರದಲ್ಲಿ ಈಗ ಮಕ್ಕಳ ಕಳ್ಳರ ಆತಂಕ ಶುರುವಾಗಿದೆ. ಹೌದು, ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಎನ್.ಆರ್.ಬಡಾವಣೆಯಲ್ಲಿ ನಡುಹಗಲಲ್ಲೇ ಮಗುವನ್ನು ಅಪಹರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

- Advertisement -

​ಎನ್.ಆರ್.ಬಡಾವಣೆಯ ರಾಮಮಂದಿರದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಕಳ್ಳತನ ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ.ಈ ವೇಳೆ ಮಗುವಿನ ಮನೆಯವರು ಸಮಯಪ್ರಜ್ಞೆ ಮೆರೆದು ಜೋರಾಗಿ ಕಿರುಚಾಡಿದ್ದಾರೆ.ಮನೆಯವರ ಕಿರುಚಾಟ ಮತ್ತು ಅಕ್ಕಪಕ್ಕದವರು ಓಡಿಬರುವುದನ್ನು ಕಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ತಕ್ಷಣವೇ ಸಾರ್ವಜನಿಕರು 112 ಪೊಲೀಸ್ ತುರ್ತು ವಾಹನಕ್ಕೆ ಕರೆ ಮಾಡಿದ್ದು,ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಪೊಲೀಸರು ಮಗುವಿನ ಪೋಷಕರಿಗೆ “ಯಾವುದೇ ತರಹದ ಆತಂಕ ಪಡಬೇಡಿ,ನಾವು ಸದಾ ನಿಗಾದಲ್ಲಿ ಇರುತ್ತೇವೆ”ಎಂದು ಧೈರ್ಯ ತುಂಬಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

​ಈಗ ಬೇಸಿಗೆ ರಜೆ ಇರುವುದರಿಂದ ಮಕ್ಕಳು ದಿನವಿಡೀ ಮನೆಯ ಹೊರಗೆ,ರಸ್ತೆಗಳಲ್ಲಿ ಆಟವಾಡುತ್ತಿರುತ್ತಾರೆ. ಪೋಷಕರೇ,ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.ನಿಮ್ಮ ಮಗು ಎಲ್ಲಿದೆ?ಯಾರ ಜೊತೆ ಆಟವಾಡುತ್ತಿದೆ ಎಂಬ ಬಗ್ಗೆ ಸದಾ ನಿಗಾ ಇರಲಿ.ಅಪರಿಚಿತರು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ.

ಇದನ್ನು ಓದಿದ್ದೀರಾ..? ಕೋಲಾರ | ಜಿಲ್ಲಾ ಜಾಗೃತಿ ಸಮಿತಿ ರದ್ದು ಮಾಡಿ ಹೊಸದಾಗಿ ಸಮಿತಿ ನೇಮಕಕ್ಕೆ ಒತ್ತಾಯ

​ಇನ್ನು ಎನ್.ಆರ್.ಬಡಾವಣೆ ಸೇರಿದಂತೆ ನಗರದ ಹಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ಮತ್ತು ಸರಗಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇವೆ.ಇದರಿಂದಾಗಿ ಸಾರ್ವಜನಿಕರು ಭಯದ ನೆರಳಿನಲ್ಲಿ ಬದುಕುವಂತಾಗಿದೆ.ಪೊಲೀಸರು ಕೇವಲ ಬಂದು ಪರಿಶೀಲನೆ ನಡೆಸಿದರೆ ಸಾಲದು,ರಾತ್ರಿ ಹಾಗೂ ಹಗಲು ವೇಳೆ ಪೊಲೀಸ್ ಗಸ್ತನ್ನು ಚುರುಕುಗೊಳಿಸಬೇಕು,ಇಂತಹ ಕಳ್ಳರನ್ನು ಬೇಗನೇ ಪತ್ತೆಹಚ್ಚಿ ಅರೆಸ್ಟ್ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದ ಬಲವಾದ ಒತ್ತಾಯವಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಪೋಲಿಯೋ ಮುಕ್ತ ಸಮಾಜದ ಸಂಕಲ್ಪ: ಬಾಗಲಕೋಟೆಯಿಂದ ವಿಜಯಪುರದವರೆಗೆ 190 ಕಿ.ಮೀ ಜಾಗೃತಿ ರ್ಯಾಲಿ

ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ರೋಟರಿ ಕ್ಲಬ್ ಬಾಗಲಕೋಟೆ ವತಿಯಿಂದ...

ಉಡುಪಿ | ಅಗ್ರಿಗೋಲ್ಡ್ ಹಗರಣ: ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಸಂತ್ರಸ್ತರ ಪರದಾಟ

ಬಹುಕೋಟಿ ರೂ.ಗಳ ಅಗ್ರಿಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯ...

ಚಿಕ್ಕಮಗಳೂರು | ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಯೋಜನೆ

ಮಲೆನಾಡಿನಲ್ಲಿ ಮಾನವ - ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ನಿರಂತರವಾಗಿ ಕಾಡುತ್ತಿರುವ ಕಾಡುಪ್ರಾಣಿ...