ದಕ್ಷಿಣ ಕನ್ನಡ | ಛಾಯಾಚಿತ್ರಗಳ ಮೂಲಕ ಇತಿಹಾಸ ಕಟ್ಟಲು ಸಾಧ್ಯ: ಡಾ.ತುಕಾರಾಮ ಪೂಜಾರಿ

Date:

ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ. ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಆಶ್ರಯದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಡೆದ ‘ಛಾಯಾ ಲೋಕ’ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರ ಸಾಧನೆ ಅನನ್ಯವಾದುದು. ಹಾಗೆಯೇ ವಿಶ್ವನಾಥರ ಕೋಟೆಗಳ ದಾಖಲೀಕರಣ ಕೃತಿ ಅಪೂರ್ಣ ದಾಖಲೆಯಾಗಿದೆ” ಎಂದು ಡಾ.ತುಕಾರಾಮ ಪೂಜಾರಿ ಅಭಿಪ್ರಾಯಪಟ್ಟರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಡಾ.ತುಕರಾಮ ಪೂಜಾರಿ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಇರ್ವತ್ತೂರು ಮಾತನಾಡಿ, “ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರ ಕರ್ನಾಟಕದ ಕೋಟೆಗಳು ಹಾಗೂ ಪಕ್ಷಿಗಳ ಸಮಗ್ರ ಛಾಯಾಚಿತ್ರ ಕೃತಿ ಒಬ್ಬ ಶೃಜನಶೀಲ ಹಾಗೂ ಸೂಕ್ಷ್ಮ ಪ್ರಜ್ಞೆಯ ಪ್ರತೀಕವಾಗಿದೆ. ಇದೊಂದು ಅತ್ಯುತ್ತಮ ದಾಖಲೀಕರಣ” ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಯುವ ವಕೀಲ ನವನೀತ್ ಬಿ.ಹಿಂಗ್ಹಾಣಿ ಪೊಟೋಗ್ರಾಪಿ ಮತ್ತು ಕಾಪಿರೈಟ್ ಕಾಯಿದೆ ಬಗ್ಗೆ ಮಾತನಾಡಿದರು. ಉಪನ್ಯಾಸಕಿ ಹಾಗೂ ಪಕ್ಷಿ ವೀಕ್ಷಕಿ ವೈಭವಿ ಜಿ. ಅವರು ಕರ್ನಾಟಕದ ಪಕ್ಷಿಗಳ ಕೃತಿ ಬಗ್ಗೆ ಮಾತನಾಡಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹಾಗೂ ರೋಶನಿ ನಿಲಯದ ಕುಲಸಚಿವೆ ಪ್ರೋ.ವಿನುತಾ ರೈ ಅವರು ಶುಭಕೋರಿ ಮಾತನಾಡಿದರು. ವಿವಿಧ ಕಾಲೇಜಿನ ಇತಿಹಾಸ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರೊಂದಿಗೆ ಸಂವಾದ ನಡೆಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸಮಾಜಿಕ ಬದಲಾವಣೆಗೆ ಅಧ್ಯಯನ ವರದಿಗಳು ಅಗತ್ಯ: ಡಾ ಎಚ್ ವಿ ವಾಸು

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಹಾಗೂ ಕೋಶಾಧಿಕಾರಿ ಗಿರಿಧರ್ ಶೆಟ್ಟಿ ಸ್ವಾಗತಿಸಿದರು. ಸುಳ್ಯ ತಾಲೂಕು ಅಧ್ಯಕ್ಷ ಈಶ್ವರ್ ವಾರಾಣಾಸಿ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ ಪ್ರಗತಿಪರ ಸಂಘಟನೆಗಳ ಒತ್ತಾಯ

ಸರ್ಕಾರ, ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ...

ಕಲಬುರಗಿ | ಸಿಮೆಂಟ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು; 2 ತಿಂಗಳಲ್ಲಿ 4ನೇ ದುರಂತ

ಸಿಮೆಂಟ್‌ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ,...

ಬೀದರ್‌ | ವಿದ್ಯುತ್‌ ಸ್ಪರ್ಶ: ಸ್ಥಳದಲ್ಲೇ ವ್ಯಕ್ತಿ ಸಾವು

ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ...

ವಿಜಯಪುರ | ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆ ಅವ್ಯವಸ್ಥೆ ಸರಿಪಡಿಸುವಂತೆ ಡಿಎಸ್‌ಎಸ್‌ ಮನವಿ 

ವಿಜಯಪುರ ಜಿಲ್ಲೆಯ ಮರಗೂರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳ...