ಧಾರವಾಡ ಜಪಟ್ಟಣದ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಇಂದು (ಸೆ.24) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಸಭೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2027 ರ ಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನೆ, ಸರ್ಕಾರಿ ಶಾಲೆಗಳಿಗೆ ವಾರ್ಷಿಕ ನಿರ್ವಹಣಾ ಅನುದಾನ ಬಿಡುಗಡೆ ಪ್ರಗತಿ,Al Based Facial Attendence- Nirantar ಆ್ಯಪ್ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಪ್ರಗತಿ, 2025-26ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ಮಂಜೂರಾದ ಮೂಲಭೂತ ಸೌಕರ್ಯ ಕಾಮಗಾರಿಗಳ ಪ್ರಗತಿ, ಶಾಲಾ ಕಟ್ಟಡಗಳ ಸದೃಢತೆ ಪರಿಶೀಲನೆ, ಮಧ್ಯಾಹ್ನ ಬಿಸಿ ಊಟ ಕಾರ್ಯಕ್ರಮದ ಪ್ರಗತಿ ಪರಿಶೀಲನೆ, ಅತಿಥಿ ಶಿಕ್ಷಕರ ಗೌರವ ಧನ ಪಾವತಿ ಪ್ರಗತಿ, ಗ್ರಾಮಾನುಭವ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯನ್ನು ಜರಗಿಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕರು ಉಮೇಶ ಬೊಮ್ಮಕ್ಕನವರ, ಬೆಂಗಳೂರು ಎಸ್‍ಎಸ್‍ಕೆ ಹಿರಿಯ ಕಾರ್ಯಕ್ರಮ ಅಧಿಕಾರಿ ಡಾ. ಶಶಿಕಲಾ, ಡಿವಾಯ್‍ಪಿಸಿ ವಿಜಯಲಕ್ಷ್ಮಿ, ಜಿಲ್ಲೆಯ ಎಲ್ಲಾ ಬಿಇಓ ಬಿಆರ್‍ಸಿ, ಜಿಲ್ಲಾಮಟ್ಟದ ಅಧಿಕಾರಿಗಳು, ಎಪಿಸಿಓ ಡಯಟಿನ ಹಿರಿಯ ಉಪನ್ಯಾಸಕರು, ವಿಷಯ ನಿರ್ವಾಹಕರು, ಬಿಸಿಯೂಟ ಸಹಾಯಕ ನಿರ್ದೇಶಕರುಗಳು ಹಾಗೂ ಬಿಆರ್‍ಪಿಸಿ ಆರ್‍ಪಿ, ಈಸಿಪಿ ಅಧಿಕಾರಿಗಳು ಇದ್ದರು.

ಈ ದಿನ ಡೆಸ್ಕ್
This video cannot be played in your browser. Open the video directly




