ತಾಲ್ಲೂಕಿನ ಕುರುಗಲ್ ಗ್ರಾಮದ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮತ್ತು ಎಲ್.ಜಿ ಫೌಂಡೇಶನ್ ಅಧ್ಯಕ್ಷ ದೊಡ್ಡವಲ್ಲಬ್ಬಿ ಲಕ್ಷ್ಮಣಗೌಡ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿಎಂಆರ್ ಶ್ರೀನಾಥ್ ನಾಡಿನ ಜನತೆಗೆ ಹಾಗೂ ಜಿಲ್ಲೆಯ ರೈತ ಬಂಧುಗಳಿಗೆ ಸಾಯಿಬಾಬರ ಆಶೀರ್ವಾದ ದೊರೆಯಲಿ. ಜನರು ತಮ್ಮೊಳಗಿನ ಸಣ್ಣಪುಟ್ಟ ವೈಮನಸ್ಸುಗಳನ್ನು ಮರೆತು ದೇವರ ಕೃಪೆಗೆ ಪಾತ್ರರಾಗಲು ಇಲ್ಲಿ ಆಗಮಿಸಿದ್ದಾರೆ. ಎಲ್ಲರಿಗೂ ಆರೋಗ್ಯ, ಆಯುಷ್ಯ ಹಾಗೂ ನೆಮ್ಮದಿಯ ಜೀವನ ಸಿಗುವಂತಾಗಲಿ ಎಂದು ಹಾರೈಸಿದರು.
ಇದೇ ವೇಳೆ ಕುರುಗಲ್ ಗ್ರಾಮಸ್ಥರು ಹೈಮಾಸ್ಟ್ ದೀಪ ಅಳವಡಿಸುವಂತೆ ಲಕ್ಷ್ಮಣಗೌಡ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅವರು ನನ್ನ ಸ್ವಂತ ಹಣದಲ್ಲಿ ಹಾಕಿಸಲಾಗುತ್ತದೆ ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರನಿಗೆ ತಕ್ಷಣವೇ ಸೂಚನೆ ನೀಡಿ, 20 ದಿನಗಳೊಳಗೆ ಹೈಮಾಸ್ಟ್ ದೀಪ ಅಳವಡಿಸಿ ಬೆಳಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು
ಕುರುಗಲ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೈಗಾರಿಕೆಗಳು ಇದ್ದರು ಮಂಡಳಿ ಪಂಚಾಯತಿಯಿಂದ, ಗ್ರಾಮ ಪಂಚಾಯತಿಯಾಗಿ ಈಗ ಪಟ್ಟಣ ಪಂಚಾಯತಿ ಆದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಶಾಸಕರು ಪರಿಷತ್ ಸದಸ್ಯರು, ಸಂಸದರು ಇದರ ಬಗ್ಗೆ ಗಮನ ಹರಿಸಿಲ್ಲ ಗ್ರಾಮಸ್ಥರು ಕೊಟ್ಟು ಮನವಿ ಪತ್ರದಲ್ಲಿ ಇರುವುದನ್ನು ಅಭಿವೃದ್ಧಿಗೆ ಸರ್ಕಾರದ ಅನುದಾನದ ಜೊತೆಗೆ ಕೈಗಾರಿಕೆಗಳ ಸಿಎಸ್‌ಆರ್ ಅನುದಾನವನ್ನು ಸಹ ಬಳಸಿಕೊಂಡು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ | ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಹಿನ್ನೆಲೆ ಸಸಿ ನೆಡುವ ಕಾರ್ಯಕ್ರಮ: ವೇಮಗಲ್ ಮುನಿಯಪ್ಪ
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಸದಸ್ಯರಾದ ಲೋಕೇಶ್ ಮರಿಯಪ್ಪ, ರಮೇಶ್, ತಾಪಂ ಮಾಜಿ ಸದಸ್ಯ ಚನ್ನಸಂದ್ರ ಲೋಕೇಶ್, ಜೆಡಿಎಸ್ ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕುರುಗಲ್ ಗಿರೀಶ್ ಮುಂತಾದವರು ಇದ್ದರು.




