ಭೀತಿ ತೊರೆದು ಭಾರತ ಮಾತಾಡುತ್ತಿರುವುದು ಇದೇ ಮೊದಲೇನಲ್ಲ; ದೆಹಲಿಯ ಯುವಜನರ ಹೋರಾಟಕ್ಕೆ ಬೆಂಬಲ ಅಗತ್ಯ: ಶಿವಸುಂದರ್

Date:

ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟದ ಸಹಯೋಗದಲ್ಲಿ ಮಂಡ್ಯದ ಕರ್ನಾಟಕ ಜನಶಕ್ತಿ ಪುಸ್ತಕ ಮನೆಯಲ್ಲಿ ಆ.6ರಂದು ಆಯೋಜಿಸಿದ್ದ ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರ ಶಿವಸುಂದರ್ ಅವರು “ಭೀತಿ ತೊರೆದು ಭಾರತ ಮಾತಾಡುತ್ತಿರುವುದು ಇದೇ ಮೊದಲೇನಲ್ಲ… ಅಲ್ಲವೇ? ದೆಹಲಿಯ ಜೆನ್ ಝಿ ಯುವಜನರ ಹೋರಾಟಕ್ಕೆ ಬೆಂಬಲಿಸಬೇಕಲ್ಲವೆ?” ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

- Advertisement -

ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಭಯದ ವಾತಾವರಣ ನಿರ್ಮಿಸಿ “ಸ್ಮಶಾನ ಮೌನ” ಹೇರಲು ನಿರಂತರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಅದರ ವಿರುದ್ಧ ದೇಶದ ವಿವಿಧ ವರ್ಗಗಳ ಜನರು ಕಾಲಕಾಲಕ್ಕೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳು ಹಾಗೂ ಉದ್ಯೋಗ, ಶಿಕ್ಷಣ ಮತ್ತು ತರಬೇತಿಯಿಂದ ವಂಚಿತರಾದ ಯುವಜನರ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ಉತ್ತರ ಭಾರತದ ಹಲವು ರಾಜ್ಯಗಳಿಂದ ಆಗಮಿಸಿದ ಯುವಜನರ ಭಾಗವಹಿಸುವಿಕೆಯಿಂದ ಈ ಹೋರಾಟ ಮತ್ತಷ್ಟು ಬಲ ಪಡೆದುಕೊಂಡಿದೆ ಎಂದು ಹೇಳಿದರು.

ಕಳೆದ ಹನ್ನೆರಡು ವರ್ಷಗಳಲ್ಲಿ ವಿದ್ಯಾರ್ಥಿಗಳು, ಯುವಜನರು, ರೈತರು, ಆದಿವಾಸಿಗಳು, ಮಹಿಳೆಯರು ಹಾಗೂ ದಲಿತ ಸಮುದಾಯಗಳು ವಿವಿಧ ನೀತಿಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿವೆ ಎಂದು ತಿಳಿಸಿದ ಅವರು, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿ ರೈತ ಹೋರಾಟ, ಎಫ್‌ಟಿಐಐ ಮತ್ತು ಐಐಟಿ ವಿದ್ಯಾರ್ಥಿಗಳ ಪ್ರತಿಭಟನೆಗಳು, ರೋಹಿತ್ ವೇಮುಲ ಪ್ರಕರಣದ ಬಳಿಕ ದೇಶವ್ಯಾಪಿ ವಿದ್ಯಾರ್ಥಿ ಚಳವಳಿ, ಜೆಎನ್‌ಯು ವಿದ್ಯಾರ್ಥಿಗಳ ಹೋರಾಟ, ಬೆಂಗಳೂರಿನ ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆ, ಮಂದಸೌರ್ ರೈತರ ಹೋರಾಟ, ನಾಸಿಕ್-ಮುಂಬೈ ಆದಿವಾಸಿಗಳ ಪಾದಯಾತ್ರೆ, ಭೀಮಾ ಕೊರೆಗಾಂವ್ ಪ್ರತಿರೋಧ, ಎನ್‌ಪಿಆರ್-ಎನ್‌ಆರ್‌ಸಿ-ಸಿಎಎ ವಿರೋಧಿ ಜನಾಂದೋಲನ, ದೆಹಲಿ ರೈತ ಚಳವಳಿ, ಅಗ್ನಿವೀರ್ ಹಾಗೂ ರೈಲ್ವೆ ನೇಮಕಾತಿ ವಿಚಾರದಲ್ಲಿ ಯುವಜನರ ಪ್ರತಿಭಟನೆ ಸೇರಿದಂತೆ ಅನೇಕ ಜನಾಂದೋಲನಗಳನ್ನು ಉದಾಹರಣೆಯಾಗಿ ಪ್ರಸ್ತಾಪಿಸಿದರು.

ಈ ಎಲ್ಲಾ ಹೋರಾಟಗಳು ತಾತ್ಕಾಲಿಕ ಪ್ರತಿರೋಧಗಳಾಗದೆ, ಮೂಲಭೂತ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗೆ ದಾರಿ ಮಾಡಿಕೊಡುವ ಕ್ರಾಂತಿಗಳಾಗಿ ರೂಪುಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಈ ಎಲ್ಲಾ ಪ್ರತಿರೋಧಗಳನ್ನು ಸರ್ಕಾರ ಹೇಗೆ ಎದುರಿಸಿತು? ನೀತಿಗಳ ವಿರುದ್ಧದ ಅಸಮಾಧಾನವು ರಾಜಕೀಯ-ಸೈದ್ಧಾಂತಿಕ ಪ್ರತಿರೋಧವಾಗಿ ರೂಪುಗೊಳ್ಳದಿರುವುದು ಏಕೆ? ಹೋರಾಟಗಳು ಮೂಲಭೂತ ಬದಲಾವಣೆ ತರುವ ಕ್ರಾಂತಿಗಳಾಗದಿರುವ ಕಾರಣಗಳೇನು? ಇಂದಿನ ಯುವಜನರ ಪ್ರತಿರೋಧ ಮತ್ತೊಂದು ತಾತ್ಕಾಲಿಕ ಉತ್ಸಾಹವಾಗದಿರಲು ಏನು ಮಾಡಬೇಕು?” ಎಂಬ ಪ್ರಶ್ನೆಗಳನ್ನು ಅವರು ಮುಂದಿಟ್ಟರು.

ಯುವಜನರ ಉತ್ಸಾಹ ಮತ್ತು ಹಿರಿಯರ ಅನುಭವದ ವಿವೇಕ ಎರಡೂ ಒಂದಾಗಿ, ಸಮಗ್ರ ದೃಷ್ಟಿಕೋನದೊಂದಿಗೆ ಹೋರಾಟಗಳು ಮುಂದುವರಿದಾಗ ಮಾತ್ರ ಮೂಲಭೂತ ಬದಲಾವಣೆ ಸಾಧ್ಯವಾಗುತ್ತದೆ ಎಂದು ಶಿವಸುಂದರ್ ಹೇಳಿದರು.

ಈ ಸುದ್ದಿ ಓದಿದ್ದೀರಾ?ನವೋದ್ಯಮಿಗಳ ಆಲೋಚನೆಗಳಿಗೆ ತಂತ್ರಜ್ಞಾನ ಹಾಗೂ ಹೂಡಿಕೆ ಬೆಂಬಲ: ಡಾ. ಗಿರಿಧರ್ ಪರ್ವತಂ

ಸಂವಾದದಲ್ಲಿ ಹಿರಿಯ ವಕೀಲರಾದ ಬಿ.ಟಿ. ವಿಶ್ವನಾಥ್, ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು ಎಂ., ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ, ಸಾಮಾಜಿಕ ಹೋರಾಟಗಾರ ಡಾ. ಮ.ಪು. ಪೂರ್ಣಾನಂದ, ವಕೀಲರಾದ ಕಿಶೋರ್, ಚೇತನ್, ಕೌಸಲ್ಯ ಎಸ್. ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಯುವಜನರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ಸೆ. 21, 22ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು...

ಹಾವೇರಿ | ವಿರೋಧ ಪಕ್ಷದ ರೀತಿಯಲ್ಲಿ‌ ಕೆಲಸ ಮಾಡೋಣ : ಉಡಚಪ್ಪ ಮಾಳಗಿ ಕರೆ

ಜಿಲ್ಲೆಯಲ್ಲಿ‌ ವಿರೋಧ ಪಕ್ಷವೇ ಇಲ್ಲ. ಇಲ್ಲ ಅನೇಕ ಸಮಸ್ಯೆಗಳು ಇವೆ. ದಲಿತರ...

ಉಡುಪಿ | ಮೇಯಲು ಬಿಟ್ಟ ದನ ಟೆಂಪೋದಲ್ಲಿ ಪತ್ತೆ; 24 ಗಂಟೆಯೊಳಗೆ ನಾಲ್ವರು ಪೊಲೀಸ್ ಬಲೆಗೆ!

ಮೇಯಲು ಬಿಟ್ಟಿದ್ದ ದನವನ್ನು ಅಕ್ರಮವಾಗಿ ಟೆಂಪೋದಲ್ಲಿ ಸಾಗಿಸುತ್ತಿದ್ದರೆಂದು ಆರೋಪಿಸಿ ದಾಖಲಾಗಿದ್ದ ಪ್ರಕರಣಕ್ಕೆ...

ಕಸ್ತೂರಿರಂಗನ್ ವರದಿ ವಿರುದ್ಧ ಆಕ್ರೋಶ: ಶೃಂಗೇರಿ ಬಂದ್‌ಗೆ ರೈತ ಸಂಘಟನೆಗಳ ಬೆಂಬಲ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಇಂದು...