ರಾಯಚೂರು | ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿ ರೈತರು; ಬ್ಯಾರೇಜ್ ಗೇಟ್ ತೆರೆಯಲು ರೈತರಿಂದ ದಿಢೀರ್ ಪ್ರತಿಭಟನೆ

Date:

ರಾಯಚೂರು ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈಗಾಗಲೇ ಭಾರೀ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ನದಿ ಪಾತ್ರದ ರೈತರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ, ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿದ್ದು, ಬ್ಯಾರೇಜ್ ಗೇಟ್ ಓಪನ್ ಮಾಡುವಂತೆ ಆಗ್ರಹಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಗೂಗಲ್-ವಡಗೇರಾ ಮಧ್ಯೆ ಶುಕ್ರವಾರ ರಾತ್ರಿ ನಡೆದಿದೆ.

- Advertisement -

ಈಗಾಗಲೇ ರಾಯಚೂರಿನ ದೇವದುರ್ಗ ತಾಲೂಕಿನ ಹೂವಿನಹಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಬಂದ್‌ ಮಾಡಲಾಗಿದೆ. ಗೂಗಲ್ ಮತ್ತು ವಡಗೇರಾ ಮಧ್ಯವಿರುವ ಬ್ರಿಡ್ಜ್  ಕಂ ಬ್ಯಾರೇಜ್ ಭರ್ತಿಯಾಗುವ ಹಂತ ತಲುಪಿದೆ. ಆದರೆ ಗೂಗಲ್ ಬ್ಯಾರೇಜ್‌ನ ಗೇಟ್‌ಗಳು ಸರಿಯಾಗಿ ತೆರೆಯದ ಕಾರಣ ರೈತರಿಗೆ ಪಂಪ್ ಸೆಟ್ ಹಾಗೂ ವಿದ್ಯುತ್ ಟಿಸಿ ಮುಳುಗುವ ಭೀತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ರೈತರು 8

ಬ್ಯಾರೇಜ್‌ನ ಅರ್ಧ ಗೇಟ್ ಓಪನ್ ಮಾಡಲಾಗಿದ್ದು, ಇನ್ನರ್ಧ ಗೇಟ್’ಗಳು ಸಮರ್ಪಕ ನಿರ್ವಹಣೆ ಇಲ್ಲದೆ ತೆರೆಯಲು ಆಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ‌. ರೈತರು ರಾತ್ರಿಯಾದರೂ ಬ್ಯಾರೇಜ್ ಮೇಲೆ ಕುಳಿತಿದ್ದು, ಕೂಡಲೇ ಗೇಟ್ ಓಪನ್ ಮಾಡಲು ಪಟ್ಟು ಹಿಡಿದಿದ್ದಾರೆ.

ಇಂದು ಕೂಡ ಭಾರೀ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಡಲಾಗಿದ್ದು, ಅಧಿಕಾರಿಗಳು ಕೂಡಲೇ ಈ ಕುರಿತು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ರೈತರ ಈ ಸಮಸ್ಯೆಯ ಕುರಿತು ಈ ದಿನ.ಕಾಮ್ ಜಂಬಣ್ಣ ಅವರನ್ನು ಸಂಪರ್ಕಿಸಿದಾಗ, “69 ಗೇಟ್ ಓಪನ್ ಮಾಡಲಾಗಿದೆ. ಮೂರು ಲಕ್ಷ ನೀರು ಬಿಡುವ ಸಾಧ್ಯತೆ ಇದೆ. ಪ್ರಸ್ತುತ ಗೂಗಲ್ ಬ್ಯಾರೇಜ್ ಗೇಟ್‌ಗೆ 2.75 ಲಕ್ಷ ನೀರು ಬಿಡುಗಡೆ ಆಗಿದ್ದು, ಆದರೆ ಗೂಗಲ್ ಬ್ಯಾರೇಜ್ ಗೇಟ್ ಓಪನ್ ಮಾಡಲು ಹೋದ ಆಪರೇಟರ್ ಅವರಿಗೆ ಸ್ಥಳೀಯರು ತೊಂದರೆ ಕೊಟ್ಟಿದ್ದಾರೆ. ಇದರಿಂದ ಸಮಸ್ಯೆ ಆಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದರು.

ಈ ದಿನ. ಕಾಮ್ ಜೊತೆಗೆ ಮಾತನಾಡಿದ ರೈತ ಸುಭಾಷ್ ಪಾಟೀಲ್, “ಆಪರೇಟರ್ ಅವರಿಗೆ ಮೀನುಗಾರರು ತೊಂದರೆ ಕೊಟ್ಟಿದ್ದಾರೆ. ಆದ ಕಾರಣ ನನಗೆ ತೊಂದರೆಯಾಗದಂತೆ ಭದ್ರತೆ ಕೊಟ್ಟರೆ ನಾನು ಗೇಟ್ ಓಪನ್ ಮಾಡುತ್ತೇನೆ, ಇಲ್ಲವಾದಲ್ಲಿ ಗೇಟ್ ಓಪನ್ ಮಾಡುವುದಿಲ್ಲ ಎಂದು ಆಪರೇಟರ್ ಪಟ್ಟು ಹಿಡಿದಿದ್ದಾರೆ” ಎಂದು ತಿಳಿಸಿದರು.

“ಎರಡು ಗಂಟೆಗಳಿಂದ ರೈತರು ಗೇಟ್ ಓಪನ್ ಮಾಡಲು ಅಧಿಕಾರಿಗಳಿಗೆ ಆಪರೇಟರ್, ಪೊಲೀಸ್ ಸಿಬ್ಬಂದಿಗಳಿಗೆ ಕರೆ ಮಾಡಿದರು ಯಾರು ಸ್ಪಂದಿಸಿಲ್ಲ. ಆತಂಕದಿಂದ ನಾವುಗಳು ಎದುರು ನೋಡುತ್ತಿರುವಾಗ ಅಧಿಕಾರಿಗಳು ಆಗಮಿಸಿದ್ದಾರೆ. ಆದರೂ, ಸಮಸ್ಯೆ ಸಂಪೂರ್ಣ ಬಗ್ಗೆ ಹರಿದಿಲ್ಲ. ಪೊಲೀಸ್ ಅಧಿಕಾರಿಗಳು ನಾವು ಸತ್ತ ಮೇಲೆ ಬರುತ್ತಾರೇನೋ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪಂಪ್‌ಸೆಟ್ ಮುಳುಗುವ ಭೀತಿಯಲ್ಲಿದೆ. ಹಾಗಾಗಿ, ಕೂಡಲೇ ಗೇಟ್ ಓಪನ್ ಮಾಡುವಂತೆ ರೈತರು ಪಟ್ಟು ಹಿಡಿದಿದ್ದಾರೆ.

WhatsApp Image 2026 05 02 at 12.01.27 e1777704270988
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ ಭೀತಿಯಲ್ಲಿ ರಾಜಕೀಯ ಪಕ್ಷಗಳು!

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ...

ಬಾಗೇಪಲ್ಲಿ | ಪರಿಷತ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಗೆಲವಿಗೆ ಶ್ರಮಿಸಿ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಪ್ರಾಮಾಣಿಕವಾಗಿ ಮತದಾರರನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ...

ಚಿಂತಾಮಣಿ | ಅಪಘಾತಕ್ಕೀಡಾದ ಸವಾರನ ಜೀವ ಉಳಿಸಿದ ಪೊಲೀಸ್‌ ಸಿಬ್ಬಂದಿಗೆ ಎಸ್‌ಪಿ ಗೌರವ

ಚಿಂತಾಮಣಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ...

ವಿಜಯಪುರ | ಗ್ರಾಮೀಣ ಪ್ರತಿಭೆಯ ಅಂತಾರಾಷ್ಟ್ರೀಯ ಸಾಧನೆಗೆ ಎಂ.ಬಿ ಪಾಟೀಲ ಮೆಚ್ಚುಗೆ

ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ...