ರಾಮನಗರ | ನಿವೃತ್ತ ಎಎಸ್‌ಐಗೆ ಮಾರಕಾಸ್ತ್ರದಿಂದ ಹಲ್ಲೆ; ಆರೋಪಿಗಳು ಪರಾರಿ

Date:

ನಿವೃತ್ತ ಎಎಸ್‌ಐ ಮೇಲೆ ಪುಂಡರ ಗುಂಪೊಂದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿಯಲ್ಲಿ ನಡೆದಿದೆ.

ಕಾಡನಕುಪ್ಪೆಯ ಕೃಷ್ಣಯ್ಯ ಎಂಬುವವರು ಹಲ್ಲೆಗೊಳಗಾದವರು. ಅವರ ಕೈಗೆ ಗಾಯವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಲಕ್ಕೋಜಹಳ್ಳಿಯ ಮಹದೇವ, ಕಿರಣ, ಚನ್ನೇನಹಳ್ಳಿಯ ಹನುಮ ಹಾಗೂ ಮತ್ತೊಬ್ಬನ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೃಷ್ಣಯ್ಯ ಅವರ ಸಹೋದರ ಈಶ್ವರ ಮತ್ತು ಪತ್ನಿ ತಮ್ಮ ಜಮೀನಿನಲ್ಲಿ ಶುಕ್ರವಾರ ಸಂಜೆ ದನ ಮೇಯಿಸುತ್ತಿದ್ದಾಗ, ಮಹದೇವ ಮತ್ತು ಆತನ ಸಹಚರರು ಕಾರಿನಲ್ಲಿ ಬಂದು ಜಮೀನಿನಲ್ಲಿ ಮದ್ಯ ಸೇವಿಸುತ್ತಿದ್ದರು. ಈ ಕುರಿತು ಪ್ರಶ್ನಿಸಿದ ಈಶ್ವರ್ ಮತ್ತು ಪತ್ನಿ ಮೇಲೆ ಪುಂಡರ ಗುಂಪು ಹಲ್ಲೆ ನಡೆಸಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಣ್ಣ ಕೃಷ್ಣಯ್ಯ ಮಹದೇವನನ್ನು ಪ್ರಶ್ನಿಸಿದ್ದಾರೆ. ಇವರ ಜೊತೆಗೂ ಜಳಗವಾಡಿದ ಗುಂಪು ಹಲ್ಲೆ ನಡೆಸಿದೆ. ಆಗ, ಕೃಷ್ಣಯ್ಯ ಅವರು ನಿಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಹೇಳಿ, ಬೈಕ್‌ನಲ್ಲಿ ರಾಮನಗರಕ್ಕೆ ಹೊರಡಲು ಮುಂದಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದಲ್ಲಿ ಮೂಲ ಸೌಕರ್ಯ ಕೊರತೆ; ವಿದ್ಯಾರ್ಥಿನಿಯರ ಅಳಲು

ಆಗ ಹಿಂಬಾಲಿಸಿಕೊಂಡು ಬಂದಿರುವ ಮಹದೇವ ಮತ್ತು ಸಹಚರರು, ಗ್ರಾಮದ ಮಧ್ಯೆ ಹೋಗುತ್ತಿದ್ದ ಕೃಷ್ಣಯ್ಯ ಅವರನ್ನು ತಡೆದು ಅವಾಚ್ಯವಾಗಿ ನಿಂದಿಸಿ, ಮಾರಕಾಸ್ತ್ರ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಕೃಷ್ಣಯ್ಯ ಅವರು ಕೈ ಅಡ್ಡ ನೀಡಿದಾಗ ಬಲವಾದ ಪೆಟ್ಟು ಬಿದ್ದಿದೆ. ನಂತರ, ಇತರರು ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣ ಕೃಷ್ಣಯ್ಯ ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಕುಟುಂಬದವರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಂ.ಉಷಾ ಅವರ‌ ‘ಬಾಳ‌ ಬಟ್ಟೆ’ ಕಾದಂಬರಿಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು 2024ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಡಾ.ಎಂ.ಉಷಾ...

ತುಮಕೂರು | ಬಿಯರ್‌ ಬಾಟಲಿ ಹಿಡಿದು ಹೊಡೆದಾಡಿದ ಕೆಪಿಟಿಸಿಎಲ್‌ ಎಂಜಿನಿಯರ್‌ಗಳು

ತುಮಕೂರು ಜಿಲ್ಲೆಯ ಪಾವಗಡದ ಕೆಪಿಟಿಸಿಎಲ್‌ನ ಇಬ್ಬರು ಜೂನಿಯರ್‌ ಎಂಜಿನಿಯರ್‌ಗಳು ಹಾಗೂ ಇಬ್ಬರು...

ಬೆಂಗಳೂರು | ‘ಜಾಹೀರಾತು ಮುಕ್ತ ಅಭಿಯಾನ’ಕ್ಕೆ ಕೈ ಜೋಡಿಸಲು ನಾಗರಿಕರಲ್ಲಿ ಮನವಿ ಮಾಡಿದ ಬಿಬಿಎಂಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ...

ಬಿಟ್ ಕಾಯಿನ್ ಹಗರಣ​ | ಸೈಬರ್ ಕ್ರೈಂ ಠಾಣೆ ಇನ್ಸ್​ಪೆಕ್ಟರ್ ಚಂದ್ರಾಧರ್​ ಬಂಧನ

ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್‌ಪೆಕ್ಟರ್ ಚಂದ್ರಾಧರ್ ಎಂಬುವವರನ್ನು ಸಿಐಡಿ ಪೊಲೀಸರು...