ಜನಸ್ಪಂದನ ಟ್ರಸ್ಟ್ ಮತ್ತು ಜನಪರ ಸಂಘಟನೆಗಳ ಸಹಯೋಗದಲ್ಲಿ ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದ ಬಳಿ ಇರುವ ಆಲದಮರದ ಪಾರ್ಕ್ ನ ಪ್ರೆಸ್ ಕ್ಲಬ್ ಆವರಣದಲ್ಲಿ ಜೂನ್ 11ರ ಗುರುವಾರ ಬೆಳಿಗ್ಗೆ 10.30 ಕ್ಕೆ ಎಸ್ಐಆರ್(ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಕುರಿತು ದುಂಡು ಮೇಜಿನ ಸಭೆ ಆಯೋಜನೆ ಮಾಡಲಾಗಿದೆ ಎಂದು ಜನ ಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡ ಶಶಿಧರ್ ತಿಳಿಸಿದ್ದಾರೆ
ಭಾರತ ಸಂವಿಧಾನ ನಮಗೆ ನೀಡಿದ ಅತ್ಯಮೂಲ್ಯ ಹಕ್ಕು – ಮತದಾನದ ಹಕ್ಕು. ಈ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು. ಮತದಾನದ ಹಕ್ಕು ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಹಾಗಾಗಿ ಎಸ್ ಐಆರ್ ( ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ )ಪ್ರಕ್ರಿಯೆಯ ಕುರಿತು ಜನಜಾಗೃತಿ ಮೂಡಿಸಲು ಹಾಗೂ ಮತದಾರರ ಹಕ್ಕುಗಳ ರಕ್ಷಣೆಯ ಬಗ್ಗೆ ಚರ್ಚಿಸಲು ಜನ ಸ್ಪಂದನ ಟ್ರಸ್ಟ್ ಮತ್ತು ಜನಪರ ಸಂಘಟನೆಗಳ ಸಹಯೋಗದಲ್ಲಿ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸಭೆಯಲ್ಲಿ ಕಾನೂನು ತಜ್ಞರು, ಜಿಲ್ಲೆಯ ಜನಪರ ಸಂಘನೆಗಳ ಮುಖಂಡರು, ಯುವಜನರು, ಸಂಶೋಧನಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಆಸಕ್ತರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 7899810812





