ಮಲ್ಲಾರು ಯುವಕ ಮಂಡಲ (ರಿ.), ಮಲ್ಲಾರು ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ಅನ್ವರ್ ಅಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದರು.
ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಸಮಾಜದಲ್ಲಿ ಹಬ್ಬಿಕೊಂಡಿರುವ ಭ್ರಷ್ಟಾಚಾರ, ಅನ್ಯಾಯ, ಅಕ್ರಮ, ಕೊಲೆ, ದರೋಡೆ, ಬಡತನ, ಸಾಮಾಜಿಕ ದ್ವೇಷ, ಅಸಂವಿಧಾನಿಕ ಕೃತ್ಯಗಳು ಹಾಗೂ ರಾಜಕೀಯದ ಅಪರಾಧಿಕರಣದ ವಿರುದ್ಧ ಯುವಕರು ಹೋರಾಡಬೇಕು. ಇದು ಯುವಕರ ಕರ್ತವ್ಯವೂ ಆಗಿದೆ. ಈ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಸಂರಕ್ಷಿಸಿಕೊಂಡು, ಭಾರತವನ್ನು ಶಾಂತಿಯ ನೆಲೆವೀಡಾಗಿಸಲು ಸಾಧ್ಯ. ಇದಕ್ಕಾಗಿ ಯುವಕರು ಸಜ್ಜಾಗಬೇಕು ಎಂದು ಕರೆ ನೀಡಿದ ಅವರು, ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕೋರಿದರು.

ಸಮಾರಂಭದಲ್ಲಿ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಕುಮಾರಿ ಸುನಿಧಿ, ಗ್ರಾಮ ಕರಣಿಕರ ಸಹಾಯಕ ಶಿವಣ್ಣ, ಯುವಕ ಮಂಡಲದ ಗೌರವಾಧ್ಯಕ್ಷ ಮುಹಮ್ಮದ್ ಸಾಧಿಕ್ ದಿನಾರ್, ಉಪಾಧ್ಯಕ್ಷ ಹಾಗೂ ಪುರಸಭಾ ಸದಸ್ಯ ಉಮೇಶ್ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ, ಕಾರ್ಯದರ್ಶಿ ಹಸನ್ ಅಬ್ದುಲ್ ಖಾದರ್, ಕೋಶಾಧಿಕಾರಿ ಮುಹಮ್ಮದ್ ಅಲಿ ಮನಿಯಾರಿ, ಕಟ್ಟಡ ಸಮಿತಿಯ ಸಂಚಾಲಕ ಶಕ್ತಿವೇಲು, ನಸೀರ್ ಅಹಮದ್, ಗೌಸಿಯಾ ಮಸೀದಿಯ ಧರ್ಮಗುರುಗಳು, ಬಡಗರ ಗುತ್ತು ವಾರ್ಡ್ ಸದಸ್ಯೆ ವಿದ್ಯಾಲತಾ, ಅಂಗನವಾಡಿ ಶಿಕ್ಷಕಿಯರಾದ ವಿದ್ಯಾ ಪ್ರಶಾಂತ್ ಹಾಗೂ ರೇಖಾ, ಯುವಕ ಮಂಡಲದ ಸದಸ್ಯರು, ಅಂಗನವಾಡಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಸನ್ ಅಬ್ದುಲ್ ಖಾದರ್ ನಿರೂಪಿಸಿ ಸ್ವಾಗತಿಸಿದರು. ನಸೀರ್ ಅಹಮದ್ ವಂದಿಸಿದರು. ಬಳಿಕ ಸಿಹಿತಿಂಡಿ ವಿತರಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.





