ಉಡುಪಿ | ದಲಿತ ಮುಖಂಡರ ಸಭೆ ಕರೆದು ಅವಮಾನ: ಉಡುಪಿ ನಗರಸಭೆ ಪೌರಾಯುಕ್ತರ ವಿರುದ್ಧ ಜಯನ್ ಮಲ್ಪೆ ಆಕ್ರೋಶ

Date:

ಉಡುಪಿ ನಗರಸಭೆಯ ಎಸ್‌ಸಿ–ಎಸ್‌ಟಿ ಆರೋಗ್ಯ ವಿಮಾ ಯೋಜನೆಯಲ್ಲಿನ ಅವ್ಯವಸ್ಥೆ ಕುರಿತು ಚರ್ಚಿಸಲು ದಲಿತ ಮುಖಂಡರ ಸಭೆ ಕರೆದು, ಸುಮಾರು ಎರಡು ಗಂಟೆಗಳ ಕಾಲ ಕಾಯಿಸಿ ಬಳಿಕ ಸಭೆಗೆ ಬಾರದ ಮೂಲಕ ದಲಿತ ಮುಖಂಡರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರು ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕಳೆದ ತಿಂಗಳು ಜಿಲ್ಲಾಧಿಕಾರಿಗಳ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ನಗರಸಭೆಯ ದಲಿತರ ಆರೋಗ್ಯ ವಿಮಾ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ದಲಿತ ಮುಖಂಡರ ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಸೂಚಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಇದರಂತೆ ಬುಧವಾರ ಬೆಳಗ್ಗೆ ಸುಮಾರು 11 ಗಂಟೆಗೆ ಪೌರಾಯುಕ್ತರು ಸಭೆ ಕರೆದಿದ್ದರು. ಆದರೆ, ದಲಿತ ಮುಖಂಡರನ್ನು ತಮ್ಮ ಕೊಠಡಿಯಲ್ಲಿ ಕೂರಿಸಿ, ಮೇಲಾಧಿಕಾರಿಗಳು ಹಾಗೂ ಮಾಜಿ ನಗರಸಭೆ ಸದಸ್ಯರನ್ನು ಕರೆಸಿ ಚರ್ಚೆ ನಡೆಸಿರುವುದು ಖಂಡನೀಯ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.

1012164355

ದಲಿತ ಮುಖಂಡರು ಸಭೆಗೆ ಆಗಮಿಸಿದ್ದರೂ ಅವರ ಸಮಸ್ಯೆಗಳನ್ನು ಆಲಿಸದೆ, ವಿಮಾ ಕಂಪನಿಯ ಪರವಾಗಿ ಪೌರಾಯುಕ್ತರು ನಡೆದುಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ. ಅಲ್ಲದೆ, ದಲಿತರಿಗೆ ನೀಡಲಾಗಿರುವ ಆರೋಗ್ಯ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳ ಕುಂದುಕೊರತೆ ಸಭೆಯಲ್ಲಿ ಹೇಳಿರುವುದಕ್ಕೆ ವಿರೋಧವಾಗಿ ಸಭೆ ನಡೆಸುವ ಬದಲು, ಇದೇ ಕಂಪನಿಯನ್ನು ಮುಂದುವರಿಸಲು ಶಾಸಕರ ನೇತೃತ್ವದಲ್ಲಿ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ದಲಿತ ಮುಖಂಡರ ನೋವನ್ನು ವಿಚಾರಿಸದೆ, ಕೇವಲ ಅವ್ಯವಸ್ಥೆಯಲ್ಲಿರುವ ವಿಮಾ ಕಂಪನಿಯ ಪರವಾಗಿ ನಿಂತು ಪೌರಾಯುಕ್ತರ ಮೂಲಕ ದಲಿತ ಮುಖಂಡರಿಗೆ ಅವಮಾನ ಮಾಡಿಸಿರುವುದು ಖಂಡನೀಯ,” ಎಂದು ಜಯನ್ ಮಲ್ಪೆ ಹೇಳಿದ್ದಾರೆ.

ಉಡುಪಿ ನಗರಸಭೆಯಲ್ಲಿ ದಲಿತರ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಮಾ ಕಂಪನಿಯ ಕಚೇರಿ ಇಲ್ಲ. ರೋಗಿಗಳು ಚಿಕಿತ್ಸೆಯ ಬಿಲ್ ಕ್ಲೇಮ್‌ಗಾಗಿ ಸಂಪರ್ಕಿಸಿದಾಗ ವಿಮಾ ಕಂಪನಿಯ ಸಿಬ್ಬಂದಿ ಉಡಾಫೆಯಾಗಿ ಉತ್ತರಿಸುತ್ತಿದ್ದಾರೆ. ಅಲ್ಲದೆ, ನೀಡಲಾಗಿರುವ ಹೆಲ್ತ್ ಕಾರ್ಡ್‌ನಲ್ಲಿ ಮನೆ ಸಂಖ್ಯೆ, ಕುಟುಂಬ ಸದಸ್ಯರ ವಿವರ ಹಾಗೂ ವಾರ್ಡ್‌ನ ಹೆಸರಿನಂತಹ ಅಗತ್ಯ ಮಾಹಿತಿಗಳೇ ಇಲ್ಲ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.

“ನಿಮ್ಮ ಸರ್ಕಾರ ಯಾರ ಜೊತೆ ಬೇಕಾದರೂ ಚಲ್ಲಾಟವಾಡಲಿ. ಆದರೆ ದಲಿತರ ಜೊತೆ ಚಲ್ಲಾಟವಾಡಿದರೆ ಸುಮ್ಮನೆ ಬಿಡುವುದಿಲ್ಲ,” ಎಂದು ಜಯನ್ ಮಲ್ಪೆ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ದಲಿತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಗಣೇಶ್ ನೇರ್ಗಿ, ಮಾಜಿ ನಗರಸಭೆ ಅಧ್ಯಕ್ಷ ಯುವರಾಜ್ ಪುತ್ರನ್, ಮಾಜಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಹರೀಶ್ ಸಾಲ್ಯಾನ್, ಶಿವಾನಂದ ಮೂಡುಬೆಟ್ಟು, ದಲಿತ ಕಲಾಮಂಡಳಿಯ ಶಂಕರದಾಸ್, ಸುಂದರಿ ಪುತ್ರನ್, ದಿನೇಶ್ ಜವನೆರ್ಕಟ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಣಿಪಾಲದಲ್ಲಿ ಯುವಕರ ಗುಂಪು ಘರ್ಷಣೆ ; 11 ಮಂದಿ ವಿರುದ್ಧ ಪ್ರಕರಣ ದಾಖಲು

ಈಶ್ವರನಗರದ ಎಪಿಕೋಡ್ ಸೆಂಟರ್ ಎದುರು ರಾಷ್ಟ್ರೀಯ ಹೆದ್ದಾರಿ 169(A)ರ ಪಕ್ಕದಲ್ಲಿ ಗುಂಪು...

ಉಡುಪಿ | ಮಣಿಪಾಲದಲ್ಲಿ ಪೊಲೀಸರ ಮೇಲೆಯೇ ಪಟಾಕಿ ಎಸೆದು ಬೆದರಿಕೆ: ಪ್ರಕರಣ ದಾಖಲು

ತಡರಾತ್ರಿ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ...

ಕಾರವಾರ | ಕಸದಲ್ಲಿ ಸಿಕ್ಕ ಚಿನ್ನದ ಓಲೆ, ವಾರಸುದಾರರಿಗೆ ಹಿಂದಿರುಗಿಸಿದ ಪೌರಕಾರ್ಮಿಕರು

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯದಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯನ್ನು...

ಸುರತ್ಕಲ್ | ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ಆಹಾರ ಸುರಕ್ಷತಾ ತಂಡಗಳಿಂದ ದಿಢೀರ್ ದಾಳಿ

ರಾಜ್ಯ ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಸೂಚನೆಯಂತೆ ಮಂಗಳೂರಿನ ಮುಕ್ಕ...