ಉಡುಪಿ | ಇಂದು ಕೊಲ್ಲೂರು ದೇವಾಸ್ಥಾನಕ್ಕೆ ಸಿಎಂ ವಿಜಯ್ ಭೇಟಿ; ಮೂಕಾಂಬಿಕೆಗೂ-ತಮಿಳುನಾಡಿಗೂ ನಂಟೇನು?

Date:

ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡಿನ ನೂತನ ಮುಖ್ಯಮಂತ್ರಿ, ನಟ ಸಿ ಜೋಸೆಫ್ ವಿಜಯ್ ಶುಕ್ರವಾರ (ಜೂ.12) ಭೇಟಿ ನೀಡಲಿದ್ದಾರೆ. ತಮಿಳುನಾಡು ರಾಜಕೀಯ ರಂಗದಲ್ಲಿ ಹೊಸ ಇತಿಹಾಸ ಬರೆದಿರುವ ವಿಜಯ್ ಅವರ ಈ ಭೇಟಿಯು, ತಮಿಳುನಾಡು ರಾಜಕಾರಣಕ್ಕೂ ಮತ್ತು ಕೊಲ್ಲೂರಿಗೂ ಇರುವ ನಂಟಿನ ಕುರಿತು ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

- Advertisement -

ಕೊಲ್ಲೂರಿಗೆ ಬರಲಿರುವ ವಿಜಯ್, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೂಪರ್‌ ಸ್ಟಾರ್‌ ನಟನೂ ಆಗಿರುವ ವಿಜಯ್ ಭೇಟಿ ಹಿಲ್ಲೆಗೆ ಕೊಲ್ಲೂರಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಕೊಲ್ಲೂರು ಮೂಕಾಂಬಿಕೆ ದೇವಾಲಯವು ತಮಿಳುನಾಡಿನ ರಾಜಕೀಯ ನಾಯಕರಿಗೆ ಸದಾ ಆಕರ್ಷಣೀಯ ಕೇಂದ್ರವೆಂದೇ ಹೇಳಲಾಗಿದೆ. ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಎಂ.ಜಿ. ರಾಮಚಂದ್ರನ್ (ಎಂಜಿಆರ್‌), ಜಾನಕಿ ರಾಮಚಂದ್ರನ್ ಹಾಗೂ ಜೆ. ಜಯಲಲಿತಾ ಅವರು ಕೂಡ ತಮ್ಮ ಅಧಿಕಾರಾವಧಿಯಲ್ಲಿ ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು.

ಈ ಲೇಖನ ಓದಿದ್ದೀರಾ?: ನೆಹರೂ ದಾಖಲೆ ಮುರಿದ ಮೋದಿ: ದೇಶ ಮುನ್ನಡೆಯಿತೋ, ಹಿಂದಕ್ಕೆ ಹೋಯಿತೋ?

ವಿಶೇಷವೆಂದರೆ, ಮೂಲತಃ ಉಡುಪಿ ಜಿಲ್ಲೆಯವರೇ ಆಗಿದ್ದ ಜಾನಕಿ ರಾಮಚಂದ್ರನ್ ಅವರಿಗೆ ಕೊಲ್ಲೂರಿನ ಮೇಲೆ ಭಕ್ತಿಯೂ ಇತ್ತು. ಅವರ ಪತಿ ಎಂ.ಜಿ.ಆರ್ ಅವರು ಮೂಕಾಂಬಿಕಾ ದೇವಿಗೆ ‘ಚಿನ್ನದ ಖಡ್ಗ’ವನ್ನು ಕಾಣಿಕೆಯಾಗಿ ನೀಡಿದ್ದರು. ಕೇವಲ ದ್ರಾವಿಡ ನಾಯಕರಷ್ಟೇ ಅಲ್ಲದೆ, ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು.

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಕೊಲ್ಲೂರು ದೇವಾಲಯವು ದಕ್ಷಿಣ ಭಾರತದ ಪ್ರಭಾವಿ ನಾಯಕರ ನೆಚ್ಚಿನ ಧಾರ್ಮಿಕ ತಾಣವಾಗಿ ಮಾರ್ಪಟ್ಟಿದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹೊರರಾಜ್ಯದ ಜನರಲ್ಲಿ ಕೇರಳದವರೇ ಹೆಚ್ಚು. ನಂತರದ ಸ್ಥಾನದಲ್ಲಿ ತಮಿಳುನಾಡಿನ ಜನರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಿರಲಿ: ಅಶೋಕ್ ಕುಮಾರ್ ಕೊಡವೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು....

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...

ಕುಮಟಾ | ತದಡಿ ಬಂದರಿನಲ್ಲಿ ದುರಂತ: ಮೀನು ಸಂಗ್ರಹಣಾ ಸ್ಥಳ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಸಾವು

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ದಂಡೆಗೆ ಮರಳಿದ್ದ ಬೋಟ್‌ನ ಮೀನು ಸಂಗ್ರಹಣಾ...