ವಿಜಯನಗರ | ಧಗಿಸುವ ಬಿಸಿಲು: ಮಡಕೆಗೆ ಹೆಚ್ಚಿದ ಬೇಡಿಕೆ

Date:

ಅಬ್ಬಬ್ಬಾ ಬಿಸಿಲು! ಬೆಳಗ್ಗೆ ಹತ್ತು ಗಂಟೆ ಆದರೆ ಸಾಕು ಸೆಕೆ ಸೆಕೆ.‌ ಸಂಜೆ ಐದು ಗಂಟೆ ಮುಗಿದರೂ ಧಗೆ ತಣಿಯದು. ಲೀಟರ್ ಗಟ್ಟಲೇ ನೀರು ಕುಡಿದರೂ ತೀರದ ದಾಹ. ಮ‌ನೆಯೊಳಗೆ ಇದ್ದರೂ ಝಳ, ನೆರಳಲ್ಲಿದ್ದರೂ ಸೆಕೆ. ಸುಡು ಬಿಸಿಲಿನಲ್ಲಿ ಬೆಂದ ಜೀವಕ್ಕೆ ತೊಟ್ಟು ತಣ್ಣನೆಯ ನೀರು ಬೇಡ್ವೆ.? ಬಿಸಿಲ ಧಗೆಯಿಂದ ರೋಸಿ ಹೋದ ಜನ ಜೀವ ತಂಪರಿಸಲು ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.

- Advertisement -


ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ತಾಪ ತೀವ್ರಗೊಂಡಿದೆ. ಇಂದು 40 ಡಿಗ್ರಿಯಷ್ಟು ತಾಪಮಾನ ದಾಖಲಾಗಿದ್ದು, ಜನರು ಪರದಾಡುವಂತಾಗಿದೆ. ತಂಪು ಪಾನೀಯಗಳ ಮೊರೆ ಹೋಗುವ ದೃಶ್ಯಗಳ ಸರ್ವೆ ಸಾಮಾನ್ಯವಾಗಿದೆ. ಅದರಲ್ಲೂ ಜನರು ಮಣ್ಣಿನ ಮಡಕೆಗಳ ಮೊರೆ ಹೋಗ್ತಿದ್ದಾರೆ. ಮಡಕೆಗಳಲ್ಲಿ ಸಂಗ್ರಹಿಸಿಟ್ಟ ನೀರು ಫ್ರಿಡ್ಜ್ ನಲ್ಲಿ ಇಟ್ಟ ನೀರಿನಷ್ಟೇ ತಂಪಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಮಡಿಕೆ ನೀರು ಫ್ರಿಡ್ಜ್‌ನಲ್ಲಿ ತಂಪಾಗಿಸಿದ ನೀರಿಗಿಂತ ಉತ್ತಮ. ಹಾಗಾಗಿ ಹೊಸಪೇಟೆಯಲ್ಲಿ ಮಣ್ಣಿನ ಮಡಕೆಗಳ ಖರೀದಿ ಜೋರಾಗಿದೆ. ವ್ಯಾಪಾರಸ್ಥರು ಭರಪೂರ ಆದಾಯ ಗಳಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...


ಬೇಸಿಗೆ ಶುರುವಾದಾಗಿನಿಂದ ಮಡಕೆ ವ್ಯಾಪಾರಸ್ಥರ ದಿಲ್ ಖುಷ್ ಆಗಿದೆ. ಒಂದೊಂದು ಮಡಕೆ 250 ರಿಂದ 300 ರೂಪಾಯಿವರೆಗೆ ಮಾರಾಟವಾಗುತ್ತಿದೆ. 10 ಲೀಟರ್ ಕೊಳಾಯಿ ಇರುವ ಮಡಕೆಗಳೇ ಹೆಚ್ಚಾಗಿ ಸೇಲ್ ಆಗ್ತಿದ್ದು, ದಿನಕ್ಕೆ ಸರಾಸರಿ 5 ರಿಂದ 6 ಸಾವಿರ ರೂಪಾಯಿ ವಹಿವಾಟು ಆಗುತ್ತಿದೆ. ಇದು ವ್ಯಾಪಾರಸ್ಥರಿಗೆ ಹೊಸ ಭರವಸೆ ಹುಟ್ಟಿಸಿದೆ.

ಇದನ್ನೂ ಓದಿ> ವಿಜಯನಗರ | ಬಸವಣ್ಣನ ವಚನ, ಸಂವಿಧಾನ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

“ದೂರದ ಊರುಗಳಿಂದ ಮಣ್ಣಿನ ಮಡಕೆಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಕೂಡ್ಲಿಗಿ, ಖಾನಾಹೊಸಹಳ್ಳಿ, ಇಮ್ಮಡಾಪುರ ಸೇರಿದಂತೆ ವಿವಿಧೆಡೆಯಿಂದ ಮಣ್ಣಿನ ಮಡಕೆಗಳು ಬರುತ್ತವೆ. ಹೊಸಪೇಟೆಗೆ ಬಂದು ತಲುಪುವಷ್ಟರಲ್ಲಿ ಬಾಡಿಗೆ ಇನ್ನಿತರೆ ಖರ್ಚು ಸೇರಿ 200 ರೂಪಾಯಿ ತಗುಲುತ್ತದೆ. ಇಷ್ಟು ವೆಚ್ಚ ಭರಿಸಿ ತಂದು ಮಾರಾಟ ಮಾಡಿದರೂ ಹೇಳಿಕೊಳ್ಳುವಂತಹ ಲಾಭವಿಲ್ಲ” ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


ಬೇಸಿಗೆ ಶುರುವಾದಾಗಿಂದ ಸೆಕೆ ಕಾಟವನ್ನ ಜನರಿಗೆ ತಡೆಯಲು ಆಗುತ್ತಿಲ್ಲ. ಎಷ್ಟೇ ನೀರು ಕುಡಿದರೂ, ತಂಪು ಪಾನೀಯ ಕುಡಿದರೂ ದಾಹ ತಣಿಯುತ್ತಿಲ್ಲ. ಬಿಸಿಲ ಬೇಗೆಯಿಂದ ಬೇಸತ್ತಿರುವ ಜನ ಮಳೆ ಬರುವುದನ್ನು ಕಾಯುತ್ತ ಮುಗಿಲಿನತ್ತ ಮುಖ ಮಾಡಿದ್ದಾರೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...